₹3,000 ಬಂಡವಾಳ, ರಾತ್ರೋರಾತ್ರಿ ಸಾವಿರಾರು ಆರ್ಡರ್: ಬ್ರ್ಯಾಂಡೆಡ್ ಶೋರೂಮ್‌ಗಳಿಗೆ ಸೆಡ್ಡು ಹೊಡೆದ 16ರ ಪೋರ!
ಯಾವುದೇ ಹೊಸ ಬಿಸಿನೆಸ್ ಅಥವಾ ವ್ಯಾಪಾರ ಶುರು ಮಾಡಲು ಲಕ್ಷಾಂತರ ರೂಪಾಯಿಗಳ ಬಂಡವಾಳ ಹಾಗೂ ದೊಡ್ಡ ದೊಡ್ಡ ಶೋರೂಮ್‌ಗಳೇ ಬೇಕು ಎಂದು ಯೋಚಿಸುವವರೇ ಹೆಚ್ಚು. ಆದರೆ, ನಮ್ಮಲ್ಲಿ ಸ್ವಲ್ಪ ವಿಭಿನ್ನವಾದ ಆಲೋಚನೆ ಮತ್ತು ಕಠಿಣ ಪರಿಶ್ರಮವಿದ್ದರೆ ಸಾಧನೆಗೆ ವಯಸ್ಸು ಹಾಗೂ ಹಣ ಎಂದಿಗೂ ಅಡ್ಡಿಯಾಗುವುದಿಲ್ಲ ಎಂಬುದಕ್ಕೆ ಮಧ್ಯಪ್ರದೇಶದ ಜಬಲ್‌ಪುರದ 16 ವರ್ಷದ ಬಾಲಕನೊಬ್ಬ ಉದಾಹರಣೆ.
ಎಲ್ಲಿ ದೊಡ್ಡ ದೊಡ್ಡ ಬ್ರ್ಯಾಂಡ್‌ಗಳು ತಮ್ಮದೇ ಆದ ಬೃಹತ್ ಮಳಿಗೆಗಳನ್ನ ಹೊಂದಿ, ಗ್ರಾಹಕರನ್ನ ಸೆಳೆಯಲು ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿವೆಯೋ, ಅದೇ ಜಬಲ್‌ಪುರದ ಬೀದಿಗಳಲ್ಲಿ, ಈ ಯುವಕ ತನ್ನದೇ ಆದ ಸ್ವಂತ ಶರ್ಟ್ ಬ್ರ್ಯಾಂಡ್ ಕಟ್ಟಿ ಅದನ್ನಾ ಒಂದು ಸೈಕಲ್ ಮೇಲೆ ಮಾರಾಟ ಮಾಡುತ್ತಿರುವುದು ಎಲ್ಲರ ಗಮನ ಸೆಳೆಯುತ್ತಿದೆ. ಈತನ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದ್ದು, ರಾತ್ರೋರಾತ್ರಿ ಸಾವಿರಾರು ಆರ್ಡರ್‌ಗಳು ಈತನನ್ನ ಹುಡುಕಿಕೊಂಡು ಬರುತ್ತಿವೆ.

ಕೇವಲ 3 ಸಾವಿರ ಬಂಡವಾಳ: ಸೈಕಲ್ ಮೇಲೆ ಬಟ್ಟೆ ವ್ಯಾಪಾರ
ಸಾಮಾನ್ಯವಾಗಿ 16 ವರ್ಷದ ಮಕ್ಕಳು ಶಾಲೆ, ಕಾಲೇಜು, ಆಟೋಟಗಳು ಮತ್ತು ಮೊಬೈಲ್ ಗೇಮ್‌ಗಳಲ್ಲಿ ತಮ್ಮ ಸಮಯವನ್ನು ಕಳೆಯುತ್ತಾರೆ. ಆದರೆ, ಜಬಲ್‌ಪುರದ ಈ ಬಾಲಕ ಕೇವಲ 3 ಸಾವಿರ ರೂಪಾಯಿಗಳ ಅತಿ ಸಣ್ಣ ಹೂಡಿಕೆಯೊಂದಿಗೆ ತನ್ನದೇ ಆದ ಶರ್ಟ್ ಬ್ರ್ಯಾಂಡ್ ಅನ್ನು ಕಟ್ಟುವ ಸಾಹಸಕ್ಕೆ ಕೈಹಾಕಿದ್ದಾನೆ. ತನ್ನ ಕಠಿಣ ಪರಿಶ್ರಮ, ಆಸಕ್ತಿ ಮತ್ತು ಕೌಶಲ್ಯದಿಂದ ವಿನ್ಯಾಸಗೊಳಿಸಿದ ಶರ್ಟ್‌ಗಳನ್ನ ಆತ ಯಾವುದೇ ದೊಡ್ಡ ಅಂಗಡಿಗಳಿಲ್ಲದೆ, ತನ್ನ ಹಳೆಯ ಸೈಕಲ್ ಮೇಲೆ ತೆಗೆದುಕೊಂಡು ಹೋಗಿ ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡುತ್ತಿದ್ದಾನೆ.
ಆತನ ಬಳಿ ಹೆಸರಾಂತ ಬ್ರ್ಯಾಂಡಿಂಗ್, ಮಾರ್ಕೆಟಿಂಗ್ ತಂತ್ರಗಳು ಅಥವಾ ಒಳ್ಳೆ ಪ್ಯಾಕೇಜಿಂಗ್ ಇಲ್ಲದಿರಬಹುದು, ಆದರೆ ಆತನ ಆಲೋಚನೆ ಮಾತ್ರ ತುಂಬ ದೊಡ್ಡದಾಗಿದೆ. ತಾನು ಸ್ವತಃ ತಯಾರಿಸಿದ ಶರ್ಟ್‌ನ ಗುಣಮಟ್ಟದ ಬಗ್ಗೆ ಆತನಿಗಿರುವ ವಿಶ್ವಾಸ ಎಷ್ಟರಮಟ್ಟಿಗಿದೆ ಎಂದರೆ, ಆ ಶರ್ಟ್ ಅನ್ನು ಸುಮಾರು 8 ಸಾವಿರ ರೂಪಾಯಿಗಳ ಮೌಲ್ಯಕ್ಕೆ ಮಾರಾಟ ಮಾಡುವ ಬಗ್ಗೆ ಆತ ಅತ್ಯಂತ ಆತ್ಮವಿಶ್ವಾಸದಿಂದ ಕ್ಯಾಮೆರಾ ಮುಂದೆ ಮಾತನಾಡುತ್ತಾನೆ. ಈ ಎಳೆಯ ವಯಸ್ಸಿಗೆ ಆತನಲ್ಲಿರುವ ಈ ನಂಬಿಕೆಯೇ ಇಂದು ಆತನ ನಿಜವಾದ ಬಂಡವಾಳವಾಗಿದೆ.
ರಾತ್ರೋರಾತ್ರಿ ಸಾವಿರಾರು ಆರ್ಡರ್‌ಗಳು
ರಸ್ತೆಯಲ್ಲಿ ಸೈಕಲ್ ಮೇಲೆ ಶರ್ಟ್ ಮಾರಾಟ ಮಾಡುತ್ತಿದ್ದ ಈ ಬಾಲಕ, ತನ್ನ ಉತ್ಪನ್ನದ ಬಗ್ಗೆ ಗ್ರಾಹಕರಿಗೆ ಗತ್ತಿನಿಂದ ವಿವರಿಸುತ್ತಿದ್ದ. ಈ ದೃಶ್ಯವನ್ನ ಗಮನಿಸಿದ ಯಾರೋ ಒಬ್ಬರು ಅದನ್ನು ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ನೋಡನೋಡುತ್ತಿದ್ದಂತೆ ಈ ವಿಡಿಯೋ ಫುಲ್ ವೈರಲ್ ಆಗಿದೆ.
ಆತನ ಪ್ರಾಮಾಣಿಕತೆ, ಕಷ್ಟಪಡುವ ಗುಣ, ಮುಖದಲ್ಲಿನ ನಗು ಮತ್ತು ತನ್ನದೇ ಬ್ರ್ಯಾಂಡ್‌ನ ಮೇಲಿನ ಅಚಲವಾದ ಆತ್ಮವಿಶ್ವಾಸ ನೆಟ್ಟಿಗರ ಮನಗೆದ್ದಿದೆ. ವಿಡಿಯೋ ವೈರಲ್ ಆದ ಕೆಲವೇ ಗಂಟೆಗಳಲ್ಲಿ ಆತನ ಜೀವನಕ್ಕೆ ಅನಿರೀಕ್ಷಿತ ತಿರುವು ಸಿಕ್ಕಿದ್ದು, ರಾತ್ರೋರಾತ್ರಿ ಸಾವಿರಾರು ಜನರು ಆತನ ಶರ್ಟ್‌ಗಳನ್ನ ಖರೀದಿಸಲು ಆನ್‌ಲೈನ್ ಮೂಲಕ ಆರ್ಡರ್ ಮಾಡಿದ್ದಾರೆ.
ಕೇವಲ ಒಂದು ಸೈಕಲ್ ಮೇಲೆ 3 ಸಾವಿರ ರೂಪಾಯಿಗಳಿಂದ ಶುರುವಾದ ಸಣ್ಣ ವ್ಯಾಪಾರ, ಇಂದು ದೇಶದ ಮೂಲೆ ಮೂಲೆಗಳಿಂದ ಗ್ರಾಹಕರನ್ನ ಸೆಳೆಯುವ ಮೂಲಕ ದೊಡ್ಡ ಬ್ರ್ಯಾಂಡ್‌ಗಳಿಗೇ ಪೈಪೋಟಿ ನೀಡುತ್ತಿದೆ.
In Jabalpur, where big brands are sold, here a 16-year-old kid has taken his own brand out on a bicycle to sell.
— Bharat Mata ke Sewak (@CountryGulshan) August 22, 2026
With an investment of around 3 thousand, he made a shirt with his own hard work,
which he talks about selling for around 8 thousand.
The confidence with which… pic.twitter.com/Nr8abe3MtH
ಈ 16 ವರ್ಷದ ಬಾಲಕನ ಸ್ಪೂರ್ತಿದಾಯಕ ಕಥೆ ಇಂದಿನ ಯುವಜನತೆಗೆ ಹಾಗೂ ಉದ್ಯಮಿಯಾಗಲು ಬಯಸುವವರಿಗೆ ಒಂದು ದೊಡ್ಡ ಪಾಠ. ಜೀವನದಲ್ಲಿ ಏನಾದರೂ ಸಾಧಿಸಲು ದೊಡ್ಡ ಮಟ್ಟದ ಬಂಡವಾಳವೇ ಬೇಕೆಂದಿಲ್ಲ, ನಮ್ಮಲ್ಲಿರುವ ಕೌಶಲ್ಯವನ್ನು ನಂಬಿ, ವಿಭಿನ್ನವಾಗಿ ಯೋಚಿಸಿದರೆ ಯಶಸ್ಸು ಖಂಡಿತ ಒಲಿಯುತ್ತದೆ. ಬ್ರ್ಯಾಂಡಿಂಗ್ ಎಂದರೆ ಕೇವಲ ಆಕರ್ಷಕ ಲೋಗೋ ಅಥವಾ ಜಾಹೀರಾತು ಅಲ್ಲ, ಅದು ನಾವು ನಮ್ಮ ಉತ್ಪನ್ನದ ಬಗ್ಗೆ ಹೊಂದಿರುವ ವಿಶ್ವಾಸ ಹಾಗೂ ಗ್ರಾಹಕರಿಗೆ ನೀಡುವ ಮೌಲ್ಯ ಎಂಬುದನ್ನು ಈ ಬಾಲಕ ನಿರೂಪಿಸಿದ್ದಾನೆ.
"ಎ ಡಿಫರೆಂಟ್ ಮೈಂಡ್‌ಸೆಟ್ ಡೆಫಿನೆಟ್ಲಿ ಬ್ರಿಂಗ್ಸ್ ಯು ಸಕ್ಸಸ್" ಎಂಬ ಮಾತಿಗೆ ಈ ಜಬಲ್‌ಪುರ ಬಾಲಕನೇ ಉದಾಹರಣೆ.


Click it and Unblock the Notifications
