ಅತ್ಯಾಚಾರ ಆರೋಪ: 3 ಸಿಆರ್ ಪಿಎಫ್ ಸಿಬ್ಬಂದಿ ಅಮಾನತು
ಜಮ್ಮು, ಏಪ್ರಿಲ್ 30: ಅತ್ಯಾಚಾರದ ಆರೋಪ ಎದುರಿಸುತ್ತಿದ್ದ ತನ್ನ ಮೂವರು ಸಿಬ್ಬಂದಿಯನ್ನು ಸಿಆರ್ ಪಿಎಫ್(ಕೇಂದ್ರ ಮೀಸಲು ಪೊಲೀಸ್ ಪಡೆ) ಇಂದು (ಏ.30) ಅಮಾನತುಗೊಳಿಸಿದೆ.
ಜಮ್ಮು-ಕಾಶ್ಮೀರದ 24 ವರ್ಷ ವಯಸ್ಸಿನ ಮಹಿಳೆಯೊಬ್ಬರು ನೀಡಿದ ದೂರಿನನ್ವಯ ಅವರನ್ನು ಅಮಾನತುಗೊಳಿಸಲಾಗಿದೆ.
ಸೇನೆಯ ಶಿಬಿರವೊಂದರಲ್ಲಿ ತನ್ನನ್ನು ಕೂಡಿಹಾಕಿ ಸಿಬ್ಬಂದಿಯೊಬ್ಬ ಅತ್ಯಾಚಾರ ಎಸಗಿದ್ದು, ಇನ್ನಿಬ್ಬರು ಈ ದೃಶ್ಯವನ್ನು ಚಿತ್ರೀಕರಣಗೊಳಿಸುತ್ತಿದ್ದರು ಎಂದು ದೂರಿನಲ್ಲಿ ಮಹಿಳೆ ಹೇಳಿದ್ದಾರೆ.

ಜಮ್ಮುವಿನಲ್ಲಿ ಸಂಬಂಧಿಕರೊಬ್ಬರ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಮಹಿಳೆ ದಾರಿ ತಪ್ಪಿಸಿಕೊಡಿದ್ದರು. ಈ ಸಂದರ್ಭದಲ್ಲಿ ಆಕೆಗೆ ನೆರವು ನೀಡುವುದಾಗಿ ಹೇಳಿದ ಸಿಬ್ಬಂದಿ, ಆಕೆಯನ್ನು ಕ್ಯಾಂಪಿಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾಗಿ ಮಹಿಳೆ ಆರೋಪಿಸಿದ್ದರು. ಪ್ರಕರಣ ದಾಖಲಿಸಿಕೊಂಡಿರುವ ಸ್ಥಳೀಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.












Click it and Unblock the Notifications