J and K Assembly Election Results 2024: ಉಗ್ರರಿಂದ ಹತ್ಯೆಯಾಗಿದ್ದ ಅಜಿತ್ ಪುತ್ರಿ ಈಗ ಈ ಕ್ಷೇತ್ರದ ಎಂಎಲ್‌ಎ
Jammu and Kashmir Assembly Election Results 2024: ಜಮ್ಮು & ಕಾಶ್ಮೀರದ 90 ವಿಧಾನಸಭೆ ಕ್ಷೇತ್ರಗಳಿಗೆ ಸೆಪ್ಟೆಂಬರ್ 15, 18 ಹಾಗೂ ಅಕ್ಟೋಬರ್ 1ರಂದು ಮೂರು ಹಂತದಲ್ಲಿ ಮತದಾನ ನಡೆದಿತ್ತು. ಇನ್ನು ಇಂದು (ಅಕ್ಟೋಬರ್ 08) ಫಲಿತಾಂಶ ಹೊರಬಿದ್ದಿದ್ದು, ಈ ವಿಧಾನಸಭಾ ಕ್ಷೇತ್ರದಲ್ಲಿ ಭಯೋತ್ಪಾದಕರ ದಾಳಿಯಲ್ಲಿ ಹತ್ಯೆಗೀಡಾಗಿದ್ದ ಪುತ್ರಿಯೊಬ್ಬರು ಭರ್ಜರಿ ಗೆಲುವು ಸಾಧಿಸಿದ್ದಾರೆ.
2018ರಲ್ಲಿ ಭಯೋತ್ಪಾದಕರ ದಾಳಿಯಲ್ಲಿ ಹತ್ಯೆಗೀಡಾಗಿದ್ದ ಅಜಿತ್ ಪರಿಹಾರ್ ಎಂಬುವವರ ಮಗಳು ಶಗುನ್ ಪರಿಹಾರ್ ಅವರು ಬಿಜೆಪಿಯಿಂದ ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್‌ನಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದು, 521 ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ.

ಮುಸ್ಲಿಂ ಪ್ರಾಬಲ್ಯ ಇರುವ ಕ್ಷೇತ್ರದಲ್ಲಿ ಶಗುನ್ ಪರಿಹಾರ್ 29,053 ಮತಗಳನ್ನು ಪಡೆದರೆ, ನ್ಯಾಷನಲ್ ಕಾನ್ಫರೆನ್ಸ್‌ನಿಂದ ಎರಡು ಬಾರಿ ಶಾಸಕರಾದ ಸಜ್ಜದ್ ಅಹ್ಮದ್ ಕಿಚ್ಲೂ ಅವರು 28,532 ಮತಗಳನ್ನು ಗಳಿಸಿದರು. ಈ ಮೂಲಕ ಶಗುನ್ ಪರಿಹಾರ್ 521 ಮತಗಳ ಅಲ್ಪ ಮತಗಳ ಅಂತರದಿಂದ ಜಯಭೇರಿ ಬಾರಿಸಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 14ರಂದು ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ತಮ್ಮ ಮೊದಲ ಪ್ರಚಾರರದ ವೇಳೆ ಕೇಂದ್ರಾಡಳಿತ ಪ್ರದೇಶದಲ್ಲಿ ಭಯೋತ್ಪಾದನೆ ಕೊನೆಗೊಳಿಸಲು ಬಿಜೆಪಿಯ ಸಂಕಲ್ಪಕ್ಕೆ ಜೀವಂತ ಉದಾಹರಣೆ ಎಂದು ಶಗುನ್ ಪರಿಹಾರ್ ಅವರನ್ನು ಪರಿಚಯಿಸಿದ್ದರು. ಬಿಜೆಪಿಯ ಶಗುನ್ ಪರಿಹಾರ್ ಅವರ ತಂದೆ ಅಜಿತ್ ಪರಿಹಾರ್ ಮತ್ತು ಜಿಲ್ಲಾ ಬಿಜೆಪಿ ನಾಯಕರಾಗಿದ್ದ ಅವರ ಚಿಕ್ಕಪ್ಪ ಅನಿಲ್ ಪರಿಹಾರ್ ಅವರನ್ನು ನವೆಂಬರ್ 2018ರಲ್ಲಿ ಭಯೋತ್ಪಾದಕರು ಹತ್ಯೆಗೈದಿದ್ದರು.
ಇನ್ಕನು ಕಣಿವೆ ರಾಜ್ಯದಲ್ಲಿ ಮೈತ್ರಿಯಡಿ 39 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದ್ದ ಕಾಂಗ್ರೆಸ್ 6 ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸಿದೆ. ಹಿಂದೂ ಬಾಹುಳ್ಯದ ಜಮ್ಮು ಭಾಗದಲ್ಲಿ ಕೇವಲ ಒಂದು ಸ್ಥಾನ ಮಾತ್ರ ಗೆದ್ದಿದೆ. ಕಾಂಗ್ರೆಸ್ 2014ರಲ್ಲಿ 12 ಸ್ಥಾನ ಗೆದ್ದಿತ್ತು, ಈ ಬಾರಿ ಆರು ಸ್ಥಾನಕ್ಕೆ ಕುಸಿದಿದೆ. ಮತ ಪ್ರಮಾಣವೂ ಶೇಕಡ 18ರಿಂದ ಶೇಕಡ 12ಕ್ಕೆ ಇಳಿಕೆಯಾಗಿದೆ. ಮತ್ತೊಂದೆಡೆ 56 ಕ್ಷೇತ್ರಗಳಿಗೆ ಸ್ಪರ್ಧಿಸಿದ್ದ ಎನ್‌ಸಿ ಶೇಕಡ 23.43 ಮತ ಪಡೆದು 42 ಸ್ಥಾನ ಗೆಲ್ಲುವ ಮೂಲಕ ಪ್ರಾಬಲ್ಯ ಮೆರೆದಿದೆ.
ಮಾಜಿ ಸಿಎಂ ಮೆಹಬೂಬಾ ಮುಫ್ತಿ ಅವರ ಪಿಡಿಪಿ ನೆಲಕಚ್ಚಿದೆ. ಮುಫ್ತಿ ಪುತ್ರಿ ಇಲ್ತಿಜಾ ಮುಫ್ತಿ ಕೂಡ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿದ್ದಾರೆ. ಅತಂತ್ರ ವಿಧಾನಸಭೆ ನಿರ್ಮಾಣವಾದಲ್ಲಿ ಕಿಂಗ್‌ಮೇಕರ್ ಆಗುವ ಕನಸು ಕಂಡಿದ್ದ ಮುಫ್ತಿಗೆ ಮುಖಭಂಗವಾಗಿದೆ. 2014ರಲ್ಲಿ 28 ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದ ಪಿಡಿಪಿ 2024ರಲ್ಲಿ ಮೂರು ಸ್ಥಾನ ಗಳಿಸಿದೆ. ಗೆದ್ದ
ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆಯಲ್ಲಿ ಎಎಪಿ ಅಚ್ಚರಿ ಎಂಬಂತೆ ಒಂದು ಕ್ಷೇತ್ರದಲ್ಲಿ ಜಯ ಸಾಧಿಸಿದೆ. ದೋಡಾ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದ ಆಪ್ ಅಭ್ಯರ್ಥಿ ಮೆಹರಾಜ್ ಮಲಿಕ್ ಅವರು ಬಿಜೆಪಿ ಅಭ್ಯರ್ಥಿಯನ್ನು 4,500 ಮತಗಳ ಅಂತರದಿಂದ ಸೋಲುಣಿಸಿದ್ದಾರೆ.












Click it and Unblock the Notifications