ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪರಿಸ್ಥಿತಿಯ ಪ್ರಭು ರಾಹುಲ್ ರಿಂದ ಮಾಸ್ಟರ್ ಸ್ಟ್ರೋಕ್ : ಶತ್ರುಘ್ನ ಬಣ್ಣನೆ

|
Google Oneindia Kannada News

ನವದೆಹಲಿ, ಮಾರ್ಚ್ 26 : ಲೋಕಸಭೆಗೆ ಟಿಕೆಟ್ ಸಿಗದೆ ಅವಗಣನೆಗೆ ಒಳಗಾಗಿರುವ ಬಿಜೆಪಿಯ ಆಂತರಿಕ ಟೀಕಾಕಾರ ಶತ್ರುಘ್ನ ಸಿನ್ಹಾ ಅವರು, ಬಡವರಿಗೆ ವರ್ಷಕ್ಕೆ 72 ಸಾವಿರ ರು. ಕೊಡುತ್ತೇನೆನ್ನುವ ರಾಹುಲ್ ಗಾಂಧಿ ಘೋಷಣೆಯನ್ನು 'ಮಾಸ್ಟರ್ ಸ್ಟ್ರೋಕ್' ಎಂದು ಬಣ್ಣಿಸಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದ ಜನಸಂಖ್ಯೆಯ ಶೇ.20ರಷ್ಟಿರುವ ಬಡ ಜನತೆಗೆ ವರ್ಷಕ್ಕೆ 72 ಸಾವಿರ ರುಪಾಯಿ ಆದಾಯ ದೊರಕಿಸಿಕೊಡುವ ಯೋಜನೆಯನ್ನು ಹಾಡಿ ಹೊಗಳಿರುವ ಶತ್ರುಘ್ನ ಸಿನ್ಹಾ ಅವರು, ರಾಹುಲ್ ಅವರನ್ನು 'ಪರಿಸ್ಥಿತಿಯ ಪ್ರಭುವಿನ ಮಾಸ್ಟರ್ ಸ್ಟ್ರೋಕ್' ಎಂದು ಕರೆದಿದ್ದಾರೆ.

ಬಿಹಾರ: ಎಲ್ಲ 40 ಸೀಟುಗಳಿಗೆ ಎನ್‌ಡಿಎ ಪಟ್ಟಿ ಬಿಡುಗಡೆ, ಶತ್ರುಘ್ನಗೆ ಟಿಕೆಟ್ ಇಲ್ಲಬಿಹಾರ: ಎಲ್ಲ 40 ಸೀಟುಗಳಿಗೆ ಎನ್‌ಡಿಎ ಪಟ್ಟಿ ಬಿಡುಗಡೆ, ಶತ್ರುಘ್ನಗೆ ಟಿಕೆಟ್ ಇಲ್ಲ

ರಾಹುಲ್ ಗಾಂಧಿ ಅವರ ಈ ನಡೆ ಯಾವ ರೀತಿ ಅಲ್ಲೋಲಕಲ್ಲೋ ಎಬ್ಬಿಸಿದೆಯೆಂದರೆ, ಕೆಲ ಪ್ರಮುಖ ನಾಯಕರು ಪತ್ರಿಕಾಗೋಷ್ಠಿ ಕರೆದು, ಇಡೀ ಘೋಷಣೆಯನ್ನು 'ಕಪಟ ನಡೆ' ಎಂದು ಜರಿಯುವಂತಾಗಿದೆ ಎಂದು ಪಟ್ನಾ ಸಾಹಿಬ್ ಕ್ಷೇತ್ರದಿಂದ ಟಿಕೆಟ್ ಬಯಸಿದ್ದ ಶತ್ರುಘ್ನ ಸಿನ್ಹಾ ಅವರು ರಾಹುಲ್ ಅವರನ್ನು ಹಾಡಿ ಹೊಗಳಿದ್ದಾರೆ.

ನರೇಂದ್ರ ಮೋದಿಯವರ ಸರಕಾರವನ್ನು ಟೀಕಿಸಲು ಯಾವುದೇ ಅವಕಾಶವನ್ನು ಬಿಟ್ಟುಕೊಡದ ಮಾಜಿ ಬಾಲಿವುಡ್ ನಟ ಸಿನ್ಹಾ ಅವರು, ಕೇಂದ್ರದ ಮಧ್ಯಂತರ ಬಜೆಟ್ ನಲ್ಲಿ ದೇಶದ 12 ಕೋಟಿ ರೈತರಿಗೆ ವರ್ಷಕ್ಕೆ 6 ಸಾವಿರ ರುಪಾಯಿ ನೀಡುವ ಯೋಜನೆಯನ್ನು ಶ್ಲಾಘಿಸಿರಲಿಲ್ಲ.

ಬಡವರ ಬ್ಯಾಂಕ್ ಖಾತೆಗೆ ತಿಂಗಳಿಗೆ 6000 ರೂ.: ರಾಹುಲ್ ಭರವಸೆಬಡವರ ಬ್ಯಾಂಕ್ ಖಾತೆಗೆ ತಿಂಗಳಿಗೆ 6000 ರೂ.: ರಾಹುಲ್ ಭರವಸೆ

Its a masterstroke by the master of situation : Shatrughan Sinha

ನೀವು ದೇಶದ ಜನತೆಗೆ 15 ಲಕ್ಷ ಕೊಡುವುದಾಗಿ, ರೈತರ ಸಾಲ ಮನ್ನಾ ಮಾಡುವುದಾಗಿ, ಸಬ್ಸಿಡಿಯನ್ನು ನೀಡುವುದಾಗಿ, 2 ಕೋಟಿಗೂ ಹೆಚ್ಚು ನಿರುದ್ಯೋಗಿ ಯುವಜನತೆಗೆ ಉದ್ಯೋಗ ದೊರಕಿಸಿಕೊಡುವುದಾಗಿ ಘೋಷಿಸಿದ್ದು ಸರಿಯಾ ಎಂದು ಪ್ರಶ್ನಿಸಿದ್ದಾರೆ.

3 ಲಕ್ಷ 60 ಸಾವಿರ ಕೋಟಿ ರುಪಾಯಿಯನ್ನು ರಾಹುಲ್ ಎಲ್ಲಿಂದ ತರುತ್ತಾರೆ? 3 ಲಕ್ಷ 60 ಸಾವಿರ ಕೋಟಿ ರುಪಾಯಿಯನ್ನು ರಾಹುಲ್ ಎಲ್ಲಿಂದ ತರುತ್ತಾರೆ?

ನೀವು ಮಾಡಿದರೆ ಮಾತ್ರ ರಾಸಲೀಲಾ, ಬೇರೆಯವರು ಮಾಡಿದರೆ ಕ್ಯಾರೆಕ್ಟರ್ ಢೀಲಾ? ಪೀಟರ್ ನಿಗೆ ಯಾವುದು ಸರಿಯಾಗಿರುತ್ತದೋ ಅದು ಪೌಲ್ ಗೂ ಸರಿಯಾಗಿರಲೇಬೇಕು. ರಾಹುಲ್ ಅವರ ಘೋಷಣೆಯನ್ನು ದೇಶದ ಜನರು ಸ್ವಾಗತಿಸಿದ್ದಾರೆ ಮತ್ತು ಸಂಭ್ರಮಿಸುತ್ತಿದ್ದಾರೆ. ಮೂರು ರಾಜ್ಯಗಳಲ್ಲಿ ರೈತರ ಸಾಲವನ್ನು ಮನ್ನಾ ಮಾಡಿ ನುಡಿದಂತೆ ನಡೆದಿದ್ದಾರೆ ಎಂದು ಪರೋಕ್ಷವಾಗಿ ಭಾರತೀಯ ಜನತಾ ಪಕ್ಷಕ್ಕೆ ಶತ್ರುಘ್ನ ಸಿನ್ಹಾ ಅವರು ಟಾಂಗ್ ನೀಡಿದ್ದಾರೆ.

English summary
It's a masterstroke by the master of situation : Shatrughan Sinha praised Rahul Gandhi's announcement of Rs.72,000 to poor family every year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X