Chandrayaan-3: ಚಂದ್ರನ ಅಂಗಳದ ಚಿತ್ರಗಳನ್ನು ಹಂಚಿಕೊಂಡ ಇಸ್ರೋ: ವಿಕ್ರಮ್ ಲ್ಯಾಂಡರ್ ಇಳಿಯಲು 2 ದಿನ ಬಾಕಿ...
ಚಂದ್ರಯಾನ-3 ಇಳಿಯುವ 2 ದಿನಗಳ ಮೊದಲು ಸೋಮವಾರ (ಆಗಸ್ಟ್ 21) ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಚಂದ್ರನ ವಿಶೇಷ ಚಿತ್ರಗಳನ್ನು ಹಂಚಿಕೊಂಡಿದೆ. ವಿಕ್ರಮ್ ಲ್ಯಾಂಡರ್ ಚಂದ್ರನ ದೂರದ ಭಾಗದ ಚಿತ್ರಗಳನ್ನು ತೆಗೆದುಕೊಂಡಿದೆ ಎಂದು ಇಸ್ರೋ ತಿಳಿಸಿದೆ. ಚಂದ್ರಯಾನ-3 ಆಗಸ್ಟ್ 23 ರಂದು ಸಂಜೆ 6.04 ಕ್ಕೆ ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಮಾಡಲಿದೆ.
ಚಂದ್ರಯಾನ-3 ಮಿಷನ್ ಕುರಿತು ನವೀಕರಣವನ್ನು ನೀಡುತ್ತಾ ಇಸ್ರೋ ಚಂದ್ರನ ಮೇಲ್ಮೈ ಭಾಗದ ಚಿತ್ರಗಳನ್ನು ಟ್ವೀಟ್ ಮೂಲಕ ಹಂಚಿಕೊಂಡಿದೆ. ವಿಕ್ರಮ್ ಲ್ಯಾಂಡರ್ ಹಜಾರ್ಡ್ ಡಿಟೆಕ್ಷನ್ ಮತ್ತು ಅವಾಯಿಡೆನ್ಸ್ ಕ್ಯಾಮೆರಾದಿಂದ ಚಂದ್ರನ ದೂರದ ಭಾಗದ ಚಿತ್ರಗಳನ್ನು ಸೆರೆಹಿಡಿದಿದೆ ಎಂದು ಇಸ್ರೋ ಹೇಳಿದೆ.

ಇಸ್ರೋ ಟ್ವಿಟ್ಟರ್‌ನಲ್ಲಿ ನಾಲ್ಕು ಫೋಟೋಗಳನ್ನು ಹಂಚಿಕೊಂಡಿದೆ. ಹೀಗೆ ಬರೆದಿದೆ, "ಇವು ಲ್ಯಾಂಡರ್ ಹಜಾರ್ಡ್ ಡಿಟೆಕ್ಷನ್ ಮತ್ತು ಅವಾಯಿಡೆನ್ಸ್ ಕ್ಯಾಮೆರಾ (ಎಲ್‌ಎಚ್‌ಡಿಎಸಿ) ತೆಗೆದ ಚಂದ್ರನ ಚಿತ್ರಗಳಾಗಿವೆ. ಬಂಡೆಗಳು ಅಥವಾ ಆಳವಾದ ಕಂದಕಗಳಿಲ್ಲದೆ ಸುರಕ್ಷಿತ ಲ್ಯಾಂಡಿಂಗ್ ಪ್ರದೇಶವನ್ನು ಪತ್ತೆಹಚ್ಚಲು ಈ ಕ್ಯಾಮೆರಾ ಸಹಾಯ ಮಾಡುತ್ತದೆ'' ಎಂದು ಇಸ್ರೋ ಹೇಳಿದೆ.
Chandrayaan-3 Mission:
— ISRO (@isro) August 21, 2023
Here are the images of
Lunar far side area
captured by the
Lander Hazard Detection and Avoidance Camera (LHDAC).
This camera that assists in locating a safe landing area -- without boulders or deep trenches -- during the descent is developed by ISRO… pic.twitter.com/rwWhrNFhHB
ಚಂದ್ರಯಾನ-3 ತನ್ನ ಗುರಿಗೆ ಬಹಳ ಹತ್ತಿರದಲ್ಲಿದೆ, ಇಸ್ರೋ ವಿಕ್ರಮ್ ಲ್ಯಾಂಡರ್ ಮೇಲೆ ತೀವ್ರ ನಿಗಾ ಇರಿಸಿದೆ. ಇಸ್ರೋ ಪ್ರಕಾರ, ಭಾರತದ ಚಂದ್ರಯಾನ-3 ತನ್ನ ಗೊತ್ತುಪಡಿಸಿದ ಹಾದಿಯಲ್ಲಿ ವೇಗವಾಗಿ ಚಲಿಸುತ್ತಿದೆ. ಇದನ್ನು ಆಗಸ್ಟ್ 23 ರಂದು ಇಳಿಯಲು ನಿರ್ಧರಿಸಲಾಗಿದೆ.
ಇಸ್ರೋ ವಿಕ್ರಮ್ ಲ್ಯಾಂಡರ್ ಮೇಲೆ ತೀವ್ರ ನಿಗಾ ಇರಿಸಿದೆ. ವಿಕ್ರಮ್ ಲ್ಯಾಂಡರ್ ಪ್ರಸ್ತುತ ಚಂದ್ರನ ಮೇಲ್ಮೈಯಿಂದ 25 ಕಿಲೋಮೀಟರ್ ದೂರದಲ್ಲಿದೆ. ಈ 25 ಕಿಮೀ ಅತ್ಯಂತ ಸವಾಲಿನದ್ದಾಗಿರಲಿದೆ ಎಂದು ಇಸ್ರೋ ಹೇಳಿದೆ. ವಿಕ್ರಮ್ ಲ್ಯಾಂಡರ್ ಎರಡು ಬಾರಿ ಡಿಬೂಸ್ಟ್ ಆಗಿದೆ. ಆದರೆ ಇಸ್ರೋ ಪ್ರಕಾರ, ಇಲ್ಲಿಯವರೆಗೆ ಚಂದ್ರಯಾನ ಮಿಷನ್‌ನಲ್ಲಿ ಎಲ್ಲವೂ ಯೋಜಿಸಿದಂತೆ ನಡೆಯುತ್ತಿದೆ.
ಈ ಬಾರಿ ಚಂದ್ರಯಾನ-3 ಮಿಷನ್ ಯಶಸ್ವಿಯಾಗಲು ಇಸ್ರೋ ತನ್ನ ಎಲ್ಲಾ ಶಕ್ತಿಯನ್ನು ಹಾಕಿದೆ. 2019ರ ವೈಫಲ್ಯದಿಂದ ಇಸ್ರೋ ಸಾಕಷ್ಟು ಕಲಿತಿದೆ.
ಚಂದ್ರನ ಮೇಲೆ ಗಗನ ನೌಕೆ ಸುರಕ್ಷಿತವಾಗಿ ಇಳಿಯೋದೇ ದೊಡ್ಡ ಸಾಹಸ. ಅದರಲ್ಲೂ ಚಂದ್ರನ ದಕ್ಷಿಣ ಧ್ರುವದಲ್ಲಿ ನೌಕೆ ಇಳಿಸೋದು ಸವಾಲು. ಚಂದ್ರನ ಮೇಲೆ ಇಳಿಯುವ ಲ್ಯಾಂಡರ್‌ನ ಹೆಸರು ವಿಕ್ರಂ. ಈತನ ಒಡಲಲ್ಲಿ ಪ್ರಗ್ಯಾನ್ ಎಂಬ ರೋವರ್ ಕೂಡಾ ಇರುತ್ತೆ. ಚಂದ್ರನ ಮೇಲೆ ವಿಕ್ರಂ ಲ್ಯಾಂಡರ್ ಸುರಕ್ಷಿತವಾಗಿ ಲ್ಯಾಂಡ್ ಆಗಬೇಕು. ಕಳೆದ ಬಾರಿ ಸರಿಯಾಗಿ ಲ್ಯಾಂಡ್ ಆಗದ ಪರಿಣಾಮ, ಇಡೀ ಯೋಜನೆಯೇ ವಿಫಲವಾಗಿತ್ತು.
ಈ ಬಾರಿ ವಿಕ್ರಂ ಲ್ಯಾಂಡರ್ ಚಂದ್ರನ ಮೇಲೆ ಸುರಕ್ಷಿತವಾಗಿ ಲ್ಯಾಂಡ್ ಆದ ಬಳಿಕ ಆತನ ಒಳಗಿರುವ ಪ್ರಗ್ಯಾನ್ ರೋವರ್ ಹೊರಗೆ ಬರಲಿದೆ. ಬಳಿಕ ವಿಕ್ರಂ ಲ್ಯಾಂಡರ್ ತನ್ನ ಇನ್ನಿತರ ಕೆಲಸ ಕಾರ್ಯಗಳನ್ನ ಆರಂಭ ಮಾಡಲಿದೆ. ವಿಕ್ರಂ ಲ್ಯಾಂಡರ್ ಒಳಗೆ ಚಂದ್ರನ ಮೇಲೆ ಇರುವ ಉಷ್ಣಾಂಶವನ್ನು ಅಳೆಯುವ ಮಾಪನ ಯಂತ್ರ ಇರುತ್ತದೆ. ಜೊತೆಯಲ್ಲೇ ಚಂದ್ರನ ನೆಲದ ಮೇಲೆ ಭೂಕಂಪವಾದರೆ ಅದನ್ನು ಕಂಡು ಹಿಡಿಯುವ ಯಂತ್ರ ಇರುತ್ತದೆ. ಚಂದ್ರನ ಮೇಲಿರುವ ಪ್ಲಾಸ್ಮಾ ಪ್ರಮಾಣವನ್ನು ಅಳತೆ ಮಾಡಲಿದೆ. ಬಳಿಕ ಈ ಎಲ್ಲಾ ಮಾಹಿತಿಗಳನ್ನೂ ಭೂಮಿಗೆ ರವಾನೆ ಮಾಡಲಿದೆ.












Click it and Unblock the Notifications