ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾನವ ಸಹಿತ ಬಾಹ್ಯಾಕಾಶ ಯಾನಕ್ಕೆ ಇಸ್ರೋ ತಯಾರಿ

ಮುಂದಿನ ದಿನಗಳಲ್ಲಿ ಮಾನವ ಸಹಿತ ಬಾಹ್ಯಾಕಾಶ ಯಾನಕ್ಕೆ ಪ್ರಯತ್ನ ಮಾಡಲಿರುವ ಇಸ್ರೋ. ಕೇಂದ್ರ ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಕೆ. ಸರ್ಕಾರದ ಒಪ್ಪಿಗೆ ದೊರೆತರೆ ಈ ನಿಟ್ಟಿನಲ್ಲಿ ಕಾರ್ಯೋನ್ಮುಖ.

|
Google Oneindia Kannada News

ನವದೆಹಲಿ, ಜೂನ್ 10: ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಒಂದರ ನಂತರ ಮತ್ತೊಂದು ದಾಪುಗಾಲಿಡುತ್ತಾ ಸಾಗಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮುಂದಿನ ವರ್ಷಗಳಲ್ಲಿ ಮಾನವನನ್ನು ಅಂತರಿಕ್ಷಕ್ಕೆ ಕಳುಹಿಸುವ ವಿಶೇಷ ಯೋಜನೆಗೆ ಕೈ ಹಾಕುವ ಭರವಸೆಯನ್ನು ನೀಡಿದೆ.

ಇಸ್ರೋದಿಂದ 'ಜಿಎಸ್‌ಎಲ್‌ವಿ ಮಾರ್ಕ್-3' ಯಶಸ್ವೀ ಉಡಾವಣೆ ಇಸ್ರೋದಿಂದ 'ಜಿಎಸ್‌ಎಲ್‌ವಿ ಮಾರ್ಕ್-3' ಯಶಸ್ವೀ ಉಡಾವಣೆ

ಕಳೆದ ವಾರ ಉಡಾವಣೆಗೊಂಡ ಜಿಎಸ್ಎಲ್ ವಿ 3 ಎಂಬ 640 ಟನ್ ತೂಕದ ರಾಕೆಟ್ ಅನ್ನು ಸಂಪೂರ್ಣವಾಗಿ ಸ್ವದೇಶಿ ತಂತ್ರಜ್ಞಾನದಲ್ಲೇ ನಿರ್ಮಿಸಿ, ಅದನ್ನು ಯಶಸ್ವಿಯಾಗಿ ಉಡಾವಣೆಗೊಳಿಸಿ ತನ್ನ ಕೀರ್ತಿ ಯ ತುರಾಯಿಗೆ ಮತ್ತೊಂದು ಗರಿ ತಂದುಕೊಂಡ ಇಸ್ರೋ, ಸದ್ಯದಲ್ಲೇ ಮಾನವ ಸಹಿತ ಬಾಹ್ಯಾಕಾಶ ಯಾನದ ಯೋಜನೆಯನ್ನು ಕೈಗೆತ್ತಿಕೊಳ್ಳಲಿದೆಯಂತೆ.

ISRO readying GSLV-Mk III to take humans to space

ಇದಕ್ಕಾಗಿ ಈಗಾಗಲೇ ರೂಪುರೇಷೆಗಳು ಸಿದ್ಧವಾಗಿದ್ದು, ಅಂದಾಜು ಖರ್ಚು ಮುಂತಾದ ಹಲವಾರು ಅಂಕಿ-ಅಂಶಗಳುಳ್ಳ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ರವಾನಿಸಲಾಗಿದೆ.

ಇಸ್ರೋ 'ಜಿಎಸ್‌ಎಲ್‌ವಿ' ಉಡಾವಣೆಯ ಅತ್ಯಾಕರ್ಷಕ ವಿಡಿಯೋ, ಚಿತ್ರಗಳು ಇಸ್ರೋ 'ಜಿಎಸ್‌ಎಲ್‌ವಿ' ಉಡಾವಣೆಯ ಅತ್ಯಾಕರ್ಷಕ ವಿಡಿಯೋ, ಚಿತ್ರಗಳು

ಕೇಂದ್ರ ಸರ್ಕಾರದಿಂದ ಒಪ್ಪಿಗೆ ದೊರತ ಕೂಡಲೇ ಯೋಜನೆಯ ಅನುಷ್ಠಾನದ ನಿಟ್ಟಿನಲ್ಲಿ ಇಸ್ರೋ ಹೆಜ್ಜೆ ಇಡಲಿದೆ ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ.

English summary
ISRO is in the process of further improving the capability of its GSLV-Mk III so that it can use this heaviest rocket for human space flight mission once government approval comes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X