ಇಸ್ರೋ ಸಂಪರ್ಕ ಕಳೆದುಕೊಂಡ ಜಿಎಸ್‌ಎಟಿ-6ಎ ಉಪಗ್ರಹ
ಹಾಸನ, ಏಪ್ರಿಲ್ 01: ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕ್ಷೇತ್ರದಿಂದ ಯಶಸ್ವಿಯಾಗಿ ಕಕ್ಷೆಗೆ ಸೇರಿದ್ದ ಜಿಎಸ್‌ಎಟಿ-6ಎ ಉಪಗ್ರಹದ ಸಂಪರ್ಕ ಕಳೆದುಕೊಂಡಿರುವುದಾಗಿ ಇಲ್ಲಿನ ಮಾಸ್ಟರ್ ಕಂಟ್ರೋಲ್ ಕೇಂದ್ರದಿಂದ ಮಾಹಿತಿ ಬಂದಿದೆ.
ಭಾನುವಾರದಂದು ಉಪಗ್ರಹ ತನ್ನ ಅಂತಿಮ ಹಂತ ತಲುಪುವ ನಿರೀಕ್ಷೆಯಿತ್ತು. ಆದರೆ, ಸಂಪರ್ಕ ಕಳೆದುಕೊಂಡಿದ್ದು, ಮತ್ತೆ ಸಂಪರ್ಕ ಸಾಧಿಸಲು ಪ್ರಯತ್ನ ಮುಂದುವರಿದಿದೆ ಎಂದು ಇಸ್ರೋ ಪ್ರಕಟಣೆ ತಿಳಿಸಿದೆ.
ಜಿಎಸ್‌ಎಲ್‌ವಿ-ಎಫ್08 ರಾಕೆಟ್ ಮೂಲಕ ಜಿಎಸ್‌ಎಟಿ-6ಎ ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಗಿತ್ತು. ಮಾರ್ಚ್ 29ರಂದು ಉಡಾವಣೆ ಯಶಸ್ವಿಯಾದ ಬಳಿಕ ಉಪಗ್ರಹವನ್ನು ಕಕ್ಷೆಗೆ ಮುಟ್ಟಿಸುವ ಕೊನೆ ಹಂತದ ಪ್ರಕ್ರಿಯೆಗೂ ಈ ಘಟನೆ ನಡೆದಿದೆ.

ಜಿಸ್ಯಾಟ್-6ಎ 2,140 ಕೆಜಿಯ ಉಪಗ್ರಹವಾಗಿದ್ದು, ಈ ಉಪಗ್ರಹ ಉಡಾವಣೆಯಿಂದ ಭಾರತೀಯ ಸೇನೆಗೆ ಇದರಿಂದ ಲಾಭವಾಗಲಿದೆ. ಸೇನೆಗೆ ಬೇಕಾದ ಸಂವಹನ ತಂತ್ರಜ್ಞಾನಗಳು ಮತ್ತಷ್ಟು ಸರಳವಾಗಲಿವೆ. ಇಸ್ರೋ ಕೈಗೊಳ್ಳಲಿರುವ ಚಂದ್ರಯಾನ-2 ಯೋಜನೆಗೆ ಸಂಬಂಧಿಸಿದ ಕೆಲವು ಪ್ರಯೋಗಗಳನ್ನೂ ಇಸ್ರೋ ಈ ಉಡಾವಣೆ ಜೊತೆ ನಡೆಸುತ್ತಿದೆ.
After successful long duration firings, when satellite was on course to normal operating configuration for third and final firing, scheduled for April 1, 2018, communication from the satellite was lost. Efforts underway to establish link with satellite: ISRO on #GSAT6A
— ANI (@ANI) April 1, 2018












Click it and Unblock the Notifications