Get Updates
Get notified of breaking news, exclusive insights, and must-see stories!

ಐಎಸ್ಐಎಸ್ ಗೆ ಭಾರತೀಯರೆಂದರೆ ಲೈಂಗಿಕ ಗುಲಾಮರಂತೆ!

ನವದೆಹಲಿ, ಮೇ 21: ಭಾರತೀಯರನ್ನು ಜೀಹಾದಿಗಳು ಯಾವ ರೀತಿ ನೋಡುತ್ತಾರೆ ಎಂಬುದಕ್ಕೆ ಉತ್ತರ ಸಿಕ್ಕಿದೆ. ಇಸಿಸ್ ಉಗ್ರ ಸಂಘಟನೆ ಸೇರಿ ಸಂಕಷ್ಟಕ್ಕೆ ಸಿಲುಕಿ ಹಿಂದಿರುಗಿದ ಮಜೀದ್ ಪೊಲೀಸರ ಬಳಿ ಹೇಳಿರುವ ಸಂಗತಿಗಳು ನಿಜಕ್ಕೂ ಆತಂಕಕಾರಿಯಾಗಿದೆ.

ಉಗ್ರರು ಹೆಣ್ಣನ್ನು ಅತ್ಯಂತ ನಿಕೃಷ್ಟವಾಗಿ ಕಾಣುತ್ತಾರೆ. ಅದರಲ್ಲೂ ಭಾರತೀಯ ಸ್ತ್ರೀಯರೆಂದರೆಲೈಂಗಿಕ ಗುಲಾಮರು ಎಂದೇ ಭಾವನೆ ಹೊಂದಿದ್ದಾರೆ ಎಂದು ಮಜೀದ್ ಹೇಳಿದ್ದಾನೆ.[ಯುಎಇಯಿಂದ ಭಾರತಕ್ಕೆ 'ಅಮಿತಾಬ್ ಬಚ್ಚನ್' ಹಸ್ತಾಂತರ]

terrorism

ಗುಪ್ತಚರದಳದ ವಶದಲ್ಲಿರುವ ಮಜೀದ್ ನ ಮೇಲೆ ಸುಮಾರು 8 ಸಾವಿರ ಪುಟಗಳ ಗಾತ್ರದ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿದೆ. ಅದರಲ್ಲಿ ಆತ ಹಲವಾರು ವಿಚಾರಗಳನ್ನು ತಿಳಿಸಿದ್ದಾನೆ.

ಭಾರತೀಯರಿಗೆ 2ನೇ ದರ್ಜೆ
ಸಂಘಟನೆಗಳಲ್ಲಿ ಭಾರತೀಯರನ್ನು ಅತ್ಯಂತ ಹೀನಾಯವಾಗಿ ನಡೆಸಿಕೊಳ್ಳಲಾಗಿತ್ತದೆ. ಭಾರತೀಯರು ಎಂದು ಗೊತ್ತಾದರೆ ಮಾನಸಿಕ ಹಿಂಸೆಯನ್ನು ನೀಡಲಾಗುತ್ತದೆ ಎಂದು ಮಜೀದ್ ತಿಳಿಸಿದ್ದಾನೆ.

ಯಾವುದೇ ಗುಂಪಿನ ಮುಂದಾಳತ್ವವನ್ನು ನಮಗೆ ನೀಡುವುದಿಲ್ಲ. ಅವರ ಲೆಕ್ಕದಲ್ಲಿ ಭಾರತೀಯ ಪುರುಷ ಮತ್ತು ಮಹಿಳೆ ಇಬ್ಬರು ಲೈಂಗಿಕ ಗುಮಾಮರೇ. ತೊಂದರೆ ಕೊಡುವ ಹಿನ್ನೆಲೆ ಇಟ್ಟುಕೊಂಡೆ ಬೇಡದ ಕೆಲಸ ವಹಿಸಲಾಗುತ್ತದೆ ಎಂದು ಮಜೀದ್ ನ ಹೇಳಿಕೆ ಸ್ಪಷ್ಟವಾಗಿ ಹೇಳಿದೆ.[ಐಎಸ್ಐಎಸ್ ಸೇರಲು ಮುಂದಾಗಿದ್ದ 21 ಯುವಕರಿಗೆ ತಡೆ]

ಮಜೀದ್ ಇಸೀಸ್ ಸೇರಿದ್ದು ಹೇಗೆ?
ಅದಿಲ್ ದೊಲಾರಿಸ್ ಎಂಬ ವ್ಯಕ್ತಿ ಮಜೀದ್ ನನ್ನು ಉಗ್ರ ಸಂಘಟನೆ ಸಂಪರ್ಕಕ್ಕೆ ತೆಗೆದುಕೊಂಡು ಬಂದ. ಅಪಘಾನಿಸ್ತಾನದ ರೆಹಮಾನ್ ಎಂಬುವನ ಮೂಲಕ ಮಜೀದ್ ಸಂಘಟನೆ ಸೇರಿದ. ಮಜೀದ್ ಹೇಳುವಂತೆ ರತೀಬ್ ಹುಸೇನ್ ಎಂಬ ಉಗ್ರನ ಕಾಣಿಸಿಕೊಂಡಿದ್ದ.

ನನ್ನ ಕೆಲಸವನ್ನು ನಿಲ್ಲಿಸಲಾಯಿತು
ಮೊದಲು ನನ್ನನ್ನು ತಿರಸ್ಕಾರ ಮಾಡುತ್ತಿದ್ದಾರೆ ಎಂದು ಅಂದಿಕೊಂಡಿದ್ದೆ. ನಡೆದ ಘಟನಾವಳಿಗಳು ಅದಕ್ಕೆ ಪೂರಕವಾಗಿದ್ದವು. ವಿರೋಧಿಗಳ ಕ್ಯಾಂಪ್ ನೊಳಕ್ಕೆ ಸ್ಫೋಟಕ ತುಂಬಿದ ವಾಹನವನ್ನು ಚಲಾಯಿಸಬೇಕು ಎಂಬ ಕೆಲಸ ನೀಡಲಾಯಿತು. ನನಗೆ ತಕ್ಕುದಾದ ಕೆಲಸ ಕೊಟ್ಟರು ಎಂಬ ಸಂತಸವೂ ಒಂದೆಡೆ ಆಗಿತ್ತು.

ಆದರೆ ಇದ್ದಕ್ಕಿದ್ದಂತೆ ಈ ಕೆಲಸವನ್ನು ನನಗೆ ಮಾಡದಂತೆ ಸೂಚಿಸಲಾಯಿತು. ಕೆಲ ದಿನದ ನಂತರ ಘಟನೆಯೊಂದರಲ್ಲಿ ನನಗೆ ತೀವ್ರ ಪೆಟ್ಟಾಯಿತು. ಆದರೆ ವೈದ್ಯಕೀಯ ಸೇವೆ ಮಾತ್ರ ಸಿಗದೆ ಪರಿತಪಿಸಬೇಕಾಯಿತು ಎಂಬುದು ಮಜೀದ್ ಹೇಳಿಕೆಯಲ್ಲಿರುವ ಪ್ರಮುಖ ಅಂಶ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+