ಐಎಸ್‌ಐಎಸ್ ಬೆಂಬಲಿಸಿದ ಇಬ್ಬರು ಭಾರತೀಯರ ಗಡಿಪಾರು
ಬೆಂಗಳೂರು, ಸೆ.15 : ಐಎಸ್ಐಎಸ್ ಉಗ್ರ ಸಂಘಟನೆಗೆ ಬೆಂಬಲ ನೀಡುತ್ತಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಇಬ್ಬರು ಭಾರತೀಯರನ್ನು ಯುಎಇ ಗಡಿಪಾರು ಮಾಡಿದೆ. ಕೇರಳದ ತಿರುವನಂತಪುರ ವಿಮಾನ ನಿಲ್ದಾಣದಲ್ಲಿ ಇಬ್ಬರನ್ನು ವಶಕ್ಕೆ ಪಡೆಯಲಾಗಿದ್ದು ವಿಚಾರಣೆ ನಡೆಸಲಾಗುತ್ತಿದೆ.
ಇಬ್ಬರು ಯುವಕರನ್ನು ಕಳೆದ ಕೆಲವು ದಿನಗಳ ಹಿಂದೆ ಯುಎಇನಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿತ್ತು. ಈ ಸಂದರ್ಭದಲ್ಲಿ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಅಂಡ್ ಸಿರಿಯಾ (ಐಎಸ್‌ಐಎಸ್) ಪರವಾದ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತಾ, ಉಗ್ರರ ಪರವಾಗಿ ಪ್ರಚಾರ ಮಾಡುತ್ತಾರೆ ಎಂಬುದು ತಿಳಿದುಬಂದಿತ್ತು. ಆದ್ದರಿಂದ ಅವರನ್ನು ಗಡಿಪಾರು ಮಾಡಲಾಗಿದೆ.

ಐಎಸ್‌ಐಎಸ್ ಬೆಂಬಲಿಗರು ಎಂದು ಭಾರತೀಯರನ್ನು ಗಡಿಪಾರು ಮಾಡುತ್ತಿರುವ ಎರಡನೇ ಪ್ರಕರಣವಿದಾಗಿದೆ. ಎರಡು ವಾರದ ಹಿಂದೆ ಇಬ್ಬರು ಯುವಕರನ್ನು ಗಡಿಪಾರು ಮಾಡಿದ್ದ ಯುಎಇ ಕೇರಳಕ್ಕೆ ಕಳುಹಿಸಿಕೊಟ್ಟಿತ್ತು. ಐಎಸ್‌ಐಎಸ್ ಸೇರಲು ಪ್ರಚೋದಿಸುತ್ತಿದ್ದ ಮಹಿಳೆಯನ್ನು ಗಡಿಪಾರು ಮಾಡಲಾಗಿತ್ತು.[ISIS ಸೇರಿದ ಕೇರಳ ಪತ್ರಕರ್ತ]
ಉಗ್ರರ ವಿರುದ್ಧ ಜಂಟಿ ಹೋರಾಟ : ಭಾರತ ಐಎಸ್‌ಐಎಸ್ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ ಎಂಬ ಆರೋಪವಿರುವ 11 ಜನರ ಪಟ್ಟಿಯನ್ನು ಯುಎಇಗೆ ಕಳುಹಿಸಿದೆ. ಭಾರತ ಮತ್ತು ಯುಎಇ ಜಂಟಿಯಾಗಿ ಐಎಸ್‌ಐಎಸ್ ವಿರುದ್ಧ ಹೋರಾಡಲು ನಿರ್ಧರಿಸಿವೆ. [ಇರಾಕಿ ಉಗ್ರರಿಂದ 'ಏಡ್ಸ್ ಬಾಂಬ್' ಬೀಳಲಿದೆ ಎಚ್ಚರ!]
ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಕೆಲವು ದಿನಗಳ ಹಿಂದೆ ಯುಎಇಗೆ ಭೇಟಿ ನೀಡಿದಾಗ ಈ ಕುರಿತು ಮಾತುಕತೆ ನಡೆಸಿದ್ದಾರೆ. ಭಾರತ ಸರ್ಕಾರದ ನೀಡಿದ ಪಟ್ಟಿಯಲ್ಲಿರುವ ವ್ಯಕ್ತಿಗಳ ವಿಚಾರಣೆಯನ್ನು ಯುಎಇ ನಡೆಸುತ್ತಿದೆ.
ಕೊಚ್ಚಿ ಮೂಲದವರು : ಎರಡು ವಾರಗಳ ಹಿಂದೆ ಯುಎಇಯಿಂದ ಗಡಿಪಾರಾದ ಇಬ್ಬರು ಯುವಕರು ಕೊಚ್ಚಿ ಮೂಲದವರು. ಈ ಇಬ್ಬರು ಯುವಕರು ಐಎಸ್‌ಐಎಸ್ ಪರವಾಗಿ ಪ್ರಚಾರ ಮಾಡುತ್ತಿದ್ದರು ಎಂದು ಭಾರತೀಯ ಗುಪ್ತಚರ ಇಲಾಖೆಯೂ ಮಾಹಿತಿ ಸಂಗ್ರಹಿತ್ತು.
ಕೊಚ್ಚಿ ಮೂಲದ 8 ಯುವಕರು ಸಾಮಾಜಿಕ ಜಾಲತಾಣಗಳಲ್ಲಿ ಐಎಸ್‌ಐಎಸ್ ಉಗ್ರರ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ ಎಂದು ತಿಳಿದುಬಂದಿತ್ತು. ಯಎಇನಲ್ಲಿರುವ ಕೆಲವು ಯುವಕರು ಈ ಬಗ್ಗೆ ಪ್ರಚಾರ ಮಾಡುತ್ತಿರುವ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ ಸಂಗ್ರಹಣೆ ಮಾಡಿದೆ. ಯುವಕರ ಫೇಸ್‌ಬುಕ್ ಖಾತೆಯಲ್ಲಿ ಪ್ರಚಾರದ ಚಿತ್ರಗಳು ಪತ್ತೆಯಾಗಿವೆ.












Click it and Unblock the Notifications