ಪಾಕಿಸ್ತಾನಕ್ಕೆ ಕ್ಷಿಪಣಿ ರಹಸ್ಯ ಮಾರಾಟ, ಡಿಆರ್ ಡಿಒ ಸಿಬ್ಬಂದಿ ಬಂಧನ
ನಾಗ್ಪುರ್, ಅಕ್ಟೋಬರ್ 08: ಮಹಾರಾಷ್ಟ್ರದ ನಾಗ್ಪುರದ ಡಿಆರ್ ಡಿಒ ಘಟಕದಲ್ಲಿ ಸಿಬ್ಬಂದಿಯಾಗಿದ್ದ ವ್ಯಕ್ತಿಯೊಬ್ಬ ಪಾಕಿಸ್ತಾನ ಮೂಲದ ಐಎಸ್ ಐ ಏಜೆಂಟ್ ಎಂಬ ಸ್ಫೋಟಕ ಮಾಹಿತಿ ಹೊರ ಬಂದಿದೆ.
ಭಾರತದ ಪ್ರಮುಖ ಕ್ಷಿಪಣಿ "ಬ್ರಹ್ಮೋಸ್ " ಕುರಿತ ತಾಂತ್ರಿಕ ಮಾಹಿತಿಗಳನ್ನು ಐಎಸ್ಐ ಉಗ್ರರಿಗೆ ಮತ್ತು ಅಮೆರಿಕದ ಗುಪ್ತಚರ ಏಜೆನ್ಸಿಗಳಿಗೆ ನೀಡುತ್ತಿದ್ದ ಎಂದು ಮಾಹಿತಿ ಮೇರೆಗೆ ಬಲೆ ಬೀಸಿ ನಿಶಾಂತ್ ಅಗರವಾಲ್ ಎಂಬಾತನನ್ನು ಬಂಧಿಸಿ, ವಿಚಾರಣೆಗೊಳಪಡಿಸಲಾಗಿದೆ.
ಉತ್ತರ ಪ್ರದೇಶ ಎಟಿಎಸ್ ಮತ್ತು ಮಿಲಿಟರಿ ಗುಪ್ತಚರ ಅಧಿಕಾರಿಗಳು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಆರೋಪಿ ನಿಶಾಂತ್ ಅಗರವಾಲ್ಸಿಕ್ಕಿಬಿದ್ದಿದ್ದಾನೆ. ನಾಗ್ಪುರದ ಬ್ರಹ್ಮೋಸ್ ಏರೋಸ್ಪೇಸ್ ಘಟಕದಲ್ಲಿ ಕಳೆದ ನಾಲ್ಕು ವರ್ಷಗಳಿಂದ ನಿಶಾಂತ್ ಕಾರ್ಯನಿರ್ವಹಿಸುತ್ತಿದ್ದ.
ಪಾಕಿಸ್ತಾನ ಮತ್ತು ಅಮೆರಿಕ ಏಜೆನ್ಸಿಗಳಿಗೆ ಅಕ್ರಮವಾಗಿ ಬ್ರಹ್ಮೋಸ್ ಕ್ಷಿಪಣಿ ಕುರಿತು ಪ್ರಮುಖ ರಹಸ್ಯಗಳನ್ನು ನೀಡುತ್ತಿದ್ದ ಎಂದು ತಿಳಿದು ಬಂದಿದೆ. ಉತ್ತರಪ್ರದೇಶದ ಉಗ್ರ ನಿಗ್ರಹ ದಳ, ಮಿಲಿಟರಿ ತನಿಖಾ ದಳದವರು ನಿರಂತರವಾಗಿ ನಿಶಾಂತ್ ನನ್ನು ವಿಚಾರಣೆಗೊಳಪಡಿಸುತ್ತಿದ್ದಾರೆ.

ಉತ್ತರಾಖಂಡ್ ಮೂಲದ ನಿಶಾಂತ್
ಉತ್ತರಾಖಂಡ್ ಮೂಲದ ನಿಶಾಂತ್ ಅಗರವಾಲ್ ಎಲ್ಲರಂತೆ ಪರೀಕ್ಷೆ ಬರೆದು ಡಿಆರ್ ಡಿಒ ಸಂಸ್ಥೆ ಸೇರಿದ್ದ. ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಚಿನ್ನದ ಪದಕ ಪಡೆದಿದ್ದ ನಿಶಾಂತ್ ಗೆ ಕಳೆದ ವರ್ಷ ಯುವ ವಿಜ್ಞಾನಿ ಪ್ರಶಸ್ತಿಯನ್ನು ನೀಡಲಾಗಿತ್ತು. ಇತ್ತೀಚೆಗೆ ಮದುವೆ ಕೂಡಾ ಆಗಿದ್ದ.
ರಕ್ಷಣಾ ಇಲಾಖೆ ಅಧೀನದ ಈ ಸಂಸ್ಥೆಯಲ್ಲಿ ದೇಶದ ಕ್ಷಿಪಣಿ, ರಾಕೆಟ್ ನಿರ್ಮಾಣದ ಬಗ್ಗೆ ಕಾರ್ಯ ನಿರ್ವಹಿಸುವ ಘಟಕದಲ್ಲಿ ಸಿಸ್ಟಮ್ ಇಂಜಿನಿಯರ್ ಆಗಿ ನಿಶಾಂತ್ ಕಳೆದ ನಾಲ್ಕು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದ.

ಅಮೆರಿಕದ ಏಜೆನ್ಸಿಗಳಿಗೂ ಮಾಹಿತಿ ಮಾರಾಟ?
ನಿಶಾಂತ್ ಬಂಧಿಸಿರುವ ಉತ್ತರಪ್ರದೇಶ ಪೊಲೀಸರು, ನಿರಂತರವಾಗಿ ವಿಚಾರಣೆ ನಡೆಸಿದ್ದಾರೆ. ಬ್ರಹ್ಮೋಸ್ ಕ್ಷಿಪಣಿ ಕಾರ್ಯ ನಿರ್ವಹಣೆ ಬಗ್ಗೆ ಪ್ರಮುಖ ತಾಂತ್ರಿಕ ಅಂಶಗಳನ್ನು ಐಎಸ್ಐಗೆ ನೀಡಿರುವುದು ಖಾತ್ರಿಯಾಗಿದೆ. ಪಾಕಿಸ್ತಾನದ ಗೂಢಚಾರ ಸಂಸ್ಥೆಗಷ್ಟೇ ಅಲ್ಲದೆ, ಅಮೆರಿಕದ ಏಜೆನ್ಸಿಗಳಿಗೂ ಮಾಹಿತಿ ಮಾರಾಟ ಮಾಡಿರುವ ಶಂಕೆ ವ್ಯಕ್ತವಾಗಿದೆ. ಈ ನಿಟ್ಟಿನಲ್ಲಿ ವಿಚಾರಣೆಯನ್ನು ತೀವ್ರಗೊಳಿಸಲಾಗಿದೆ.

ಕ್ಷಿಪಣಿ ರಹಸ್ಯ ಮಾರಾಟ, ಡಿಆರ್ ಡಿಒ ಸಿಬ್ಬಂದಿ ಬಂಧನ
ನಾಗ್ಪುರ್ ನಲ್ಲಿರುವ ಬ್ರಹ್ಮೋಸ್ ಏರೋ ಸ್ಪೇಸ್ ರಿಸರ್ಚ್ ಸೆಂಟರ್ (ಬಿಎಂ ಆರ್ ಸಿ) ಭಾರತ ಹಾಗೂ ರಷ್ಯಾದ ಜಂಟಿ ಯೋಜನೆಯಾಗಿದೆ. ಅತ್ಯಾಧುನಿಕ ಆಯುಧ ವ್ಯವಸ್ಥೆ ಬಗ್ಗೆ ಸದ್ಯ ಸಂಶೋಧನೆ ನಡೆಸಲಾಗುತ್ತಿದೆ.
ಮಾಹಿತಿಯನ್ನು ಸಂಗ್ರಹಿಸಿ ಐಎಸ್ಐಗೆ ಹಣಕ್ಕಾಗಿ ಮಾರಾಟ ಮಾಡಿರುವ ಶಂಕೆ ಇದೆ. ಸದ್ಯ ಉತ್ತರಪ್ರದೇಶದ ಪೊಲೀಸರು, ಮಿಲಿಟರಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಅಗತ್ಯ ಬಿದ್ದರೆ, ಸಿಬಿಐ ಕೂಡಾ ಕೈ ಜೋಡಿಸಲಿದ್ದು, ನಿಶಾಂತ್ ಯಾವೆಲ್ಲ ಏಜೆನ್ಸಿ ಜತೆ ಸಂಪರ್ಕದಲ್ಲಿದ್ದ ಎಂಬುದರ ಮಾಹಿತಿ ಕಲೆ ಹಾಕಲಾಗುತ್ತಿದೆ.

ಫೇಸ್ ಬುಕ್ ಹನಿ ಟ್ರ್ಯಾಪ್
ನಿಶಾಂತ್ ನನ್ನು ಬಲೆಗೆ ಬೀಳಿಸಿಕೊಳ್ಳಲು ಫೇಸ್ಬುಕ್ ಚಾಟ್ ಮೂಲಕ ಹನಿ ಟ್ರ್ಯಾಪ್ ಮಾಡಿರುವ ಶಂಕೆ ವ್ಯಕ್ತವಾಗಿದೆ. ಪಾಕಿಸ್ತಾನ ಮೂಲದ ಐಡಿಯಿಂದ ಮಹಿಳೆ ಹೆಸರಿನಲ್ಲಿ ಚಾಟ್ ಮಾಡಿ ನಿಶಾಂತ್ ನನ್ನು ಬಲೆಗೆ ಬೀಳಿಸಿಕೊಂಡು ಈ ಕೆಲಸ ನೀಡಿರುವ ಸಾಧ್ಯತೆ ಕಂಡು ಬಂದಿದೆ.
ಆತನ ಲ್ಯಾಪ್ ಟಾಪ್ ನಲ್ಲಿ ಬ್ರಹ್ಮೋಸ್ ಗೆ ಸಂಬಂಧಪಟ್ಟ ಅನೇಕ ರಹಸ್ಯ ಮಾಹಿತಿಗಳಿವೆ. ಇದು ಡಿಆರ್ ಡಿಒ ಘಟಕದಲ್ಲಿ ಮಾತ್ರ ಬಳಸಬಹುದಾದ ನಿರ್ಬಂಧಿತ ಮಾಹಿತಿಯಾಗಿದೆ. ಮನೆ ಹಾಗೂ ಕಚೇರಿಯ ಕಂಪ್ಯೂಟರ್ ಪರಿಶೀಲಿಸಲಾಗುತ್ತಿದೆ ಎಂದು ಉತ್ತರಪ್ರದೇಶ ಉಗ್ರ ನಿಗ್ರಹ ದಳದ ಮುಖ್ಯಸ್ಥ ಆಸೀಮ್ ಅರುಣ್ ಹೇಳಿದರು.

ಬ್ರಹ್ಮೋಸ್ ಜಗತ್ತಿನ ಅತಿ ವೇಗದ ಕ್ಷಿಪಣಿ
2.5 ಟನ್ ತೂಕದ ಬ್ರಹ್ಮೋಸ್ ಕ್ಷಿಪಣಿ ಪ್ರತಿ ಗಂಟೆಗೆ 3,400 -3,700 ಕಿ.ಮೀ. ವೇಗದಲ್ಲಿ ಸಾಗುವ ಸಾಮರ್ಥ್ಯ ಹೊಂದಿದೆ. ಬ್ರಹ್ಮೋಸ್ ಜಗತ್ತಿನ ಅತಿ ವೇಗದ ಕ್ಷಿಪಣಿ ಎಂದೇ ಹೆಸರಾಗಿದೆ.ಬ್ರಹ್ಮೋಸ್ ಭಾರತದ ಡಿಆರ್ ಡೊ ಮತ್ತು ರಷ್ಯಾದ ಎನ್‍ಪಿಓಎಂನ ಜಂಟಿ ಯೋಜನೆಯಾಗಿದೆ. ಜಲ, ವಾಯು, ಭೂಮಿಯಲ್ಲಿ ಬಹ್ಮೋಸ್ ಕ್ಷಿಪಣಿ ಪ್ರಾಯೋಗಿಕ ಪರೀಕ್ಷೆ ಯಶಸ್ವಿಯಾಗಿದೆ. ಸರ್ಜಿಕಲ್ ಸ್ಟ್ರೈಕ್ ಗೆ ಇದನ್ನು ಅಳವಡಿಸಲು ರಕ್ಷಣಾ ಇಲಾಖೆ ಚಿಂತನೆ ನಡೆಸಿದೆ.
-
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ












Click it and Unblock the Notifications