"ತೆರಿಗೆ ಪಾವತಿಗಳಲ್ಲಿ ಅಕ್ರಮಗಳು": BBC ವಿರುದ್ಧ ಆದಾಯ ತೆರಿಗೆ ಇಲಾಖೆ ಆರೋಪ!
ಮೂರು ದಿನಗಳ ಸಮೀಕ್ಷೆಯ ನಂತರ ಬ್ರಿಟಿಷ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್ (ಬಿಬಿಸಿ) ಲೆಕ್ಕಪತ್ರ ಪುಸ್ತಕಗಳಲ್ಲಿ ಅಕ್ರಮಗಳನ್ನು ಬಹಿರಂಗಪಡಿಸಲಾಗಿದೆ ಎಂದು ಭಾರತದ ಆದಾಯ ತೆರಿಗೆ ಇಲಾಖೆ ಹೇಳಿದೆ.
ಹೊಸದಿಲ್ಲಿ ಫೆಬ್ರವರಿ 17: ಪ್ರಧಾನಿ ನರೇಂದ್ರ ಮೋದಿ ಅವರ ಕುರಿತಾದ ಸಾಕ್ಷ್ಯಚಿತ್ರ ಪ್ರಸಾರಕ್ಕೆ ಪ್ರತೀಕಾರವಾಗಿ ನಡೆದಿದೆ ಎನ್ನಲಾದ ಬಿಬಿಸಿ ಕಚೇರಿ ಮೇಲಿನ ದಾಳಿ ಬಗ್ಗೆ ಆದಾಯ ತೆರಿಗೆ ಇಲಾಖೆ ಮಹತ್ವದ ಹೇಳಿಕೆಯನ್ನು ನೀಡಿದೆ. ಮೂರು ದಿನಗಳ ಸಮೀಕ್ಷೆಯ ನಂತರ ಬ್ರಿಟಿಷ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್ (ಬಿಬಿಸಿ) ಲೆಕ್ಕಪತ್ರ ಪುಸ್ತಕಗಳಲ್ಲಿ ಅಕ್ರಮಗಳನ್ನು ಬಹಿರಂಗಪಡಿಸಲಾಗಿದೆ ಎಂದು ಭಾರತದ ಆದಾಯ ತೆರಿಗೆ ಇಲಾಖೆ ಹೇಳಿದೆ.
ಪಿಎಂ ಮೋದಿ ಮತ್ತು 2002 ರ ಗುಜರಾತ್ ಗಲಭೆಗಳ ಕುರಿತು ಬಿಬಿಸಿ ಸಾಕ್ಷ್ಯಚಿತ್ರವನ್ನು ಪ್ರಸಾರ ಮಾಡಿದ ವಾರಗಳ ನಂತರ ಐಟಿ ದಾಳಿ ನಡೆದಿದೆ. ದಾಳಿ ಬಳಿಕ ಆದಾಯ ತೆರಿಗೆ ಇಲಾಖೆಯು BBC ಯ ವಿವಿಧ ಘಟಕಗಳು ಬಹಿರಂಗಪಡಿಸಿದ ಆದಾಯ ಮತ್ತು ಲಾಭಗಳು "ಭಾರತದಲ್ಲಿನ ಕಾರ್ಯಾಚರಣೆಗಳ ಪ್ರಮಾಣಕ್ಕೆ ಅನುಗುಣವಾಗಿಲ್ಲ" ಎಂದು ಆರೋಪಿಸಿದೆ.

ಆದಾಯ ತೆರಿಗೆ ಇಲಾಖೆ ಇದಕ್ಕೆ ಸಂಬಂಧಿಸಿದಂತೆ "ಹಲವಾರು ಪುರಾವೆಗಳನ್ನು (sic)" ಸಂಗ್ರಹಿಸಿದೆ. ಉದ್ಯೋಗಿಗಳ ಹೇಳಿಕೆಗಳು, ಡಿಜಿಟಲ್ ಫೈಲ್‌ಗಳು ಮತ್ತು ದಾಖಲೆಗಳನ್ನು ಪರಿಶೀಲಿಸುವ ಪ್ರಕ್ರಿಯೆಯಲ್ಲಿದೆ ಎಂದು ಹೇಳಿದೆ. ಭಾರತದಲ್ಲಿ ಆದಾಯವೆಂದು ಬಹಿರಂಗಪಡಿಸದ ಕೆಲವು ರವಾನೆಗಳ ಮೇಲೆ ತೆರಿಗೆಯನ್ನು ಪಾವತಿಸಲಾಗಿಲ್ಲ ಎಂದು ಸೂಚಿಸುತ್ತದೆ ಎಂದು ತೆರಿಗೆ ಇಲಾಖೆ ಹೇಳಿಕೊಂಡಿದೆ.
ಇಲಾಖೆಯು BBC ಸಿಬ್ಬಂದಿಗಳು ತನಿಖೆಯನ್ನು ವಿಳಂಬಗೊಳಿಸುವ ಪ್ರಯತ್ನಗಳನ್ನು ಮಾಡಿದ್ದಾರೆ ಎಂದು ಆರೋಪಿಸಿದೆ.

"ಗುಂಪಿನ ಇಂತಹ ನಿಲುವಿನ ಹೊರತಾಗಿಯೂ, ನಿರಂತರ ಮಾಧ್ಯಮ/ಚಾನೆಲ್ ಚಟುವಟಿಕೆಗೆ ಅನುಕೂಲವಾಗುವಂತೆ ಸಮೀಕ್ಷೆ ಕಾರ್ಯಾಚರಣೆಯನ್ನು ನಡೆಸಲಾಯಿತು" ಎಂದು ತೆರಿಗೆ ಇಲಾಖೆ ಹೇಳಿಕೆಯಲ್ಲಿ ತಿಳಿಸಿದೆ. ಆರೋಪಗಳಿಗೆ ಬಿಬಿಸಿ ಇನ್ನೂ ಪ್ರತಿಕ್ರಿಯಿಸಿಲ್ಲ.












Click it and Unblock the Notifications