19 ವರ್ಷದ ಯುವಕರ ಐಫೋನ್‌ ಆಸೆಗೆ ಹುಡುಗನೂ ಸೇರಿ ಒಂದೇ ಕುಟುಂಬದ ಮೂವರು ದಾರುಣ ಅಂತ್ಯ!

ಹದಿಹರೆಯದ ಯುವಕನ ಮೊಬೈಲ್ ಆಸೆಗೆ ಇಡೀ ಕುಟಂಬವೇ ದಾರುಣ ಅಂತ್ಯಕಂಡಿದೆ. ಮೊಬೈಲ್‌ಗಾಗಿ ಮಕ್ಕಳು ಹಠ ಮಾಡುವುದು - ಪೋಷಕರು ಮೊಬೈಲ್ ಬಳಕೆ ಮಾಡಬೇಡ ಎಂದು ಹೇಳುವುದು ಸಾಮಾನ್ಯ. ಕೆಲವು ಮಕ್ಕಳಲ್ಲಿ ಮೊಬೈಲ್ ಬಳಕೆ ವಿಪರೀತವಾಗಿ ಆರೋಗ್ಯ ಸಮಸ್ಯೆಗಳು ಎದುರಾಗುತ್ತಿರುವುದು ಸಹ ಇದೆ. ಆದರೆ ಒಂದು ಮೊಬೈಲ್ ಫೋನ್‌ಗೋಸ್ಕರ ಇಡೀ ಕುಟಂಬವೇ ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದ ಖವಾಡ್ಯಾ ಬೆಟ್ಟದಲ್ಲಿ 19 ವರ್ಷದ ಯುವಕ, ಆತನ ತಂದೆ ಮುರಳೀಧರ್ ಚಂದಗುಡೆ ಹಾಗೂ ತಾಯಿ ಸಂಗೀತಾ ಚಂದಗುಡೆ ಎನ್ನುವವರು ಮೃತಪಟ್ಟಿದ್ದಾರೆ. ಇಷ್ಟಕ್ಕೂ ಆಗಿದ್ದೇನು ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

ಯುವಕನ ಐಪೋನ್ ಆಸೆಗೆ ಒಂದಿಡೀ ಕುಟುಂಬವೇ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಇಲಿನ ಛತ್ರಪತಿ ಸಂಭಾಜಿನಗರದ ಖವಾದ್ಯ ಬೆಟ್ಟದಲ್ಲಿ ಮೊಬೈಲ್ ಫೋನ್ ವಿಚಾರಕ್ಕೆ ನಡೆದ ಜಗಳವು ಒಂದೇ ಮನೆಯ ಮೂವರನ್ನು ಬಲಿ ಪಡೆದಿದೆ. 19 ವರ್ಷದ ಹದಿಹರೆಯದ ಯುವಕ, ಅವನ ತಂದೆ ಮುರಳೀಧರ್ ಚಂದಗುಡೆ ಮತ್ತು ತಾಯಿ ಸಂಗೀತಾ ಚಂದಗುಡೆ ಮೃತಪಟ್ಟವರು. ಆಗಸ್ಟ್‌ 21ರ ಶುಕ್ರವಾರ ಮಧ್ಯಾಹ್ನ ಖವಾದ್ಯ ಬೆಟ್ಟದಿಂದ 19 ವರ್ಷದ ಯುವಕನೊಬ್ಬ ಹಾರಿ ಸಾವನ್ನಪ್ಪಿದ್ದಾನೆ. ಆತನನ್ನು ಬೆಟ್ಟದ ತುದಿಯಿಂದ ರಕ್ಷಿಸಿ /ಹಿಂದಕ್ಕೆ ಕರೆದುಕೊಂಡು ಬರಲು ಹೋದ ಆತನ 48 ವರ್ಷದ ತಂದೆ ಮುರಳೀಧರ್ ಚಂದಗುಡೆ ಅವರು ಸಹ ಬೆಟ್ಟದಿಂದ ಬಿದ್ದಿದ್ದಾರೆ.

iPhone

ಮಗ ಮತ್ತು ಗಂಡ ಬೀಳುವುದನ್ನು ನೋಡಿದ ಅವರ ತಾಯಿ ಸಂಗೀತಾ ಚಂದಗುಡೆ ತಕ್ಷಣವೇ ಬೆಟ್ಟದಿಂದ ಜಿಗಿದು ಮೃತಪಟ್ಟಿದ್ದಾರೆ. ಛತ್ರಪತಿ ಸಂಭಾಜಿನಗರದ ವಾಲುಜ್ MIDC ಪೊಲೀಸ್ ಠಾಣೆ ವ್ಯಾಪ್ತಿಯ ಟಿಸ್ಗಾಂವ್ ಪ್ರದೇಶದಲ್ಲಿ ಈ ದುರಂತ ಸಂಭವಿಸಿದೆ. ಕೌಟುಂಬಿಕ ಕಲಹದ ನಂತರ ಹದಿಹರೆಯದ ಯುವಕ ಬೆಳಿಗ್ಗೆ 10 ಗಂಟೆ ಸುಮಾರಿಗೆ ಬೆಟ್ಟಕ್ಕೆ ಬಂದಿದ್ದ, ಈ ವಿಷಯ ತಿಳಿದು ಅವರ ಪೋಷಕರು ಸಹ ಈ ಸ್ಥಳಕ್ಕೆ ಓಡೋಡಿ ಬಂದಿದ್ದರು.

ಮೂರು ಗಂಟೆಗಳ ಬೆಟ್ಟದ ತುದಿಯಲ್ಲಿ ನಿಂತಿದ್ದ ಯುವಕ!

19 ವರ್ಷದ ಯುವಕ ಬೆಳಿಗ್ಗೆ 10 ಗಂಟೆ ಸುಮಾರಿಗೆ ಬೆಟ್ಟಕ್ಕೆ ಹೋಗಿದ್ದಾರೆ. ನಂತರ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಗ್ರಾಮಸ್ಥರು ರಕ್ಷಣೆಗೆ ಧಾವಿಸಿದರು. ರಕ್ಷಣಾ ತಂಡಗಳು ಬೆಟ್ಟದ ಕೆಳಗೆ ಸುರಕ್ಷತಾ ಜಾಲವನ್ನು ಸಿದ್ಧಪಡಿಸಲು ಪ್ರಯತ್ನಿಸಿದವು. ಆದಾಗ್ಯೂ, ಹದಿಹರೆಯದ ಯುವಕ ಪದೇ ಪದೇ ಬೆಟ್ಟದ ತುದಿಯಲ್ಲಿ ಜಾಗ ಬದಲಾಯಿಸಿದ್ದ, ಅವನು ಜಿಗಿಯುವುದನ್ನು ತಡೆಯುವ ಪ್ರಯತ್ನಗಳನ್ನು ಸಾಧ್ಯವಾಗದಂತೆ ಮಾಡಿದ. ಅವನು ಉದ್ದೇಶಪೂರ್ವಕವಾಗಿ ಬೆಟ್ಟದ ಜಿಗಿಯುವಂತೆ ಹೆಜ್ಜೆ ಇಡಲು ಪ್ರಯತ್ನಿಸುತ್ತಿದ್ದ.

ಇದೇ ರೀತಿ ಪರಿಸ್ಥಿತಿ ಸುಮಾರು ಮೂರು ಗಂಟೆಗಳ ಕಾಲ ಮುಂದುವರೆಯಿತು. ಮಧ್ಯಾಹ್ನ 1 ಗಂಟೆಯ ನಂತರ, ಅವನ ತಂದೆ ನಿಧಾನವಾಗಿ ಅವನ ಬಳಿಗೆ ಬಂದು ಬೆಟ್ಟದ ಅಂಚಿನಿಂದ ದೂರ ಸರಿಯುವಂತೆ ಬೇಡಿಕೊಂಡರು. ಹದಿಹರೆಯದವನು ಇದ್ದಕ್ಕಿದ್ದಂತೆ ಹಾರಿದ ಮತ್ತು ಅವನ ತಂದೆಯೂ ಅವನನ್ನು ಹಿಡಿದು ರಕ್ಷಿಸಲು ಪ್ರಯತ್ನಿಸುವಾಗ ಬಿದ್ದರು. ಇದರ ಬೆನ್ನಲ್ಲೇ ಮಹಿಳೆಯೂ ಸಹ ಬೆಟ್ಟದಿಂದ ಜಿಗಿದಿದ್ದಾರೆ ಎಂದು ಮಹಾರಾಷ್ಟ್ರದ ಇನ್ಸ್‌ಪೆಕ್ಟರ್ ರಾಮೇಶ್ವರ್ ಗಡೇ ಎನ್ನುವವರು ಹೇಳಿದ್ದಾರೆ.

ಪ್ರಾಥಮಿಕ ಮರಣೋತ್ತರ ಪರೀಕ್ಷೆಯ ಫಲಿತಾಂಶಗಳು ಮೂವರೂ ತೀವ್ರವಾದ ಪಾಲಿಟ್ರಾಮಾ, ತೀವ್ರ ಮೂಳೆ ಮುರಿತಗಳು ಮತ್ತು ಆಂತರಿಕ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಿದೆ.

ಇನ್ನು ಚಂದಗುಡೆ ಕುಟುಂಬದವರು ಛತ್ರಪತಿ ಸಂಭಾಜಿನಗರದ ಜಲ್ಟಾ ಫಾಟಾ ಪ್ರದೇಶದಲ್ಲಿ ವಾಸಿಸುತ್ತಿದ್ದರು. ಇವರು ಮೂಲತಃ ಮಹಾರಾಷ್ಟ್ರದ ಜಲ್ನಾ ಜಿಲ್ಲೆಯ ಧಂಗರ್ ಪಿಂಪಾಲ್‌ಗಾಂವ್ ಗ್ರಾಮದವರು. ಹದಿಹರೆಯದ ಯುವಕ ಒಂದು ವರ್ಷದ ಹಿಂದೆ ಅದೇ ಬೆಟ್ಟವನ್ನು ಹತ್ತಿದ್ದರು, ಆದರೆ ಪೊಲೀಸರು ಅವರನ್ನು ಕೆಳಗೆ ಬರುವಂತೆ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದರು ಎಂದೂ ಹೇಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+