ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂದರ್ಶನ : ಪಠಾಣ್ ಕೋಟ್ ದಾಳಿ ಬಗ್ಗೆ ದೂರುವುದು ಬಿಡಿ

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಜನವರಿ 07 : ಪ್ರತಿ ಬಾರಿ ಭಯೋತ್ಪಾದಕ ದಾಳಿ ನಡೆದಾಗಲೂ ಸೇನೆ, ಸರ್ಕಾರದ ಮೇಲೆ ಆರೋಪ ಮಾಡಲಾಗುತ್ತದೆ. ಪಠಾಣ್ ಕೋಟ್ ವಾಯುನೆಲೆ ಮೇಲೆ ದಾಳಿ ನಡೆದ ನಂತರವೂ ಇದೇ ಆಗಿದೆ. ಎನ್‌ಐಎ ದಾಳಿಯ ತನಿಖೆ ನಡೆಸುತ್ತಿದೆ. ವರದಿ ಬರುವ ತನಕ ದಾಳಿಯ ಕುರಿತು ಆರೋಪ ಮಾಡುವುದು ಸರಿಯಲ್ಲ.

ಭಾರತ ಸರ್ಕಾರದ ಮಾಜಿ ವಿಶೇಷ ಕಾರ್ಯದರ್ಶಿ ವಿ.ಬಾಲಚಂದರ್ ಅವರು ಒನ್ ಇಂಡಿಯಾ ಸಂದರ್ಶನದಲ್ಲಿ 'ಪಠಾಣ್‌ ಕೋಟ್‌ ದಾಳಿಯ ವಿಚಾರದಲ್ಲಿ ಬಿಎಸ್ಎಫ್‌ ಯೋಧರನ್ನು ದೂರುವುದು ಮತ್ತು ಪಂಜಾಬ್ ಪೊಲೀಸರಿಗೆ ಕ್ಲಿನ್ ಚಿಟ್ ನೀಡುವುದು ಸರಿಯಲ್ಲ' ಎಂದು ಹೇಳಿದ್ದಾರೆ. ಸಂದರ್ಶನದ ವಿವರಗಳು ಇಲ್ಲಿವೆ...... [ಪಠಾಣ್ ಕೋಟ್ ವಾಯುನೆಲೆಯ ವಿಶೇಷತೆಗಳೇನು?]

ದಾಳಿ ಬಗ್ಗೆ ನಡೆಯುತ್ತಿರುವ ಆರೋಪಗಳ ಬಗ್ಗೆ ಏನು ಹೇಳುವಿರಿ?
ದಾಳಿಯ ಬಗ್ಗೆ ಮಾಡುತ್ತಿರುವ ಆರೋಪಗಳನ್ನು ಮೊದಲು ನಿಲ್ಲಿಸಬೇಕು. ಬಿಎಸ್‌ಎಫ್‌ ಪಡೆಯ ಮೇಲೆ ಆರೋಪ ಹೊರಿಸಿ ಪಂಜಾಬ್ ಪೊಲೀಸರಿಗೆ ಕ್ಲಿನ್ ಚಿಟ್ ನೀಡುವುದು ಸರಿಯಲ್ಲ. ಬಿಎಸ್‌ಎಫ್ ಪಡೆ ಸಹ ಗಡಿಭಾಗದಲ್ಲಿ ಶಾಂತಿಯುತ ವಾತಾವರಣವಿರುವಂತೆ ನೋಡಿಕೊಳ್ಳಬೇಕು.

pathankot

ಪಠಾಣ್‌ ಕೋಟ್‌ಗೆ ನುಗ್ಗಿದ ಉಗ್ರರು ಸುಲಭವಾಗಿ ಹೇಗೆ ಗಡಿ ದಾಟಿದರು?
ನನ್ನ ಅನುಭವದ ಪ್ರಕಾರ ಮಾದಕ ವಸ್ತುಗಳನ್ನು ಕಳ್ಳಸಾಗಣೆ ಮಾಡುವವರ ಜೊತೆ ಕೈ ಜೋಡಿಸಿರುವ ಉಗ್ರರು ಗಡಿ ದಾಟಿ ಬಂದಿದ್ದಾರೆ. ಪಂಜಾಬಿನ ಭಾರತ-ಪಾಕ್ ಗಡಿಭಾಗದಲ್ಲಿ ಮಾದಕ ವಸ್ತುಗಳ ಕಳ್ಳಸಾಗಣೆ ನಡೆಯುತ್ತದೆ. ಕಳ್ಳಸಾಗಣೆ ಮಾಡುವವರಿಗೆ ಲಂಚವನ್ನು ನೀಡಿ ಉಗ್ರರು ಗಡಿದಾಟಿ ಬಂದಿದ್ದಾರೆ. [ಪಠಾಣ್ ಕೋಟ್ ಉಗ್ರರ ದಾಳಿ : ಟೈಮ್ ಲೈನ್]

ಈ ದಾಳಿ ಬಗ್ಗೆ ನೀವು ಗಮನಿಸಿದ ಅಂಶಗಳೇನು?
ಮುಂಬೈ ದಾಳಿ ಮತ್ತು ಪಠಾಣ್ ಕೋಠ್ ದಾಳಿಯನ್ನು ಹೋಲಿಕೆ ಮಾಡಿದಾಗ ನಾವು ಪಠಾಣ್ ಕೋಟ್‌ಗೆ ತುರ್ತಾಗಿ ಎನ್‌ಎಸ್‌ಜಿ ಪಡೆಯನ್ನು ಕಾರ್ಯಾಚರಣೆಗಾಗಿ ಕಳುಹಿಸಿದ್ದೇವೆ. ಎನ್‌ಎಸ್‌ಜಿ ವಾಯುನೆಲೆಯ ಕಾರ್ಯಾಚರಣೆಯಲ್ಲಿ ಮಹತ್ವದ ಪಾತ್ರ ವಹಿಸಿತು ಎಂಬುದರಲ್ಲಿ ಎರಡು ಮಾತಿಲ್ಲ. [ಎಸ್ಪಿ ಸಲ್ವಿಂದರ್ ಸಿಂಗ್ ಉತ್ತರಿಸಬೇಕಾದ ಮೂರು ಪ್ರಶ್ನೆಗಳು]

ಎಸ್ಪಿ ಸಲ್ವಿಂದರ್ ಸಿಂಗ್ ಹೇಳಿಕೆ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಗುರುದಾಸ್‌ಪುರ ಎಸ್ಪಿ ಸಲ್ವಿಂದರ್ ಸಿಂಗ್ ಹೇಳಿಕೆ ಬಗ್ಗೆ ನಂಬಿಕೆ ಬರುತ್ತಿಲ್ಲ. ಉಗ್ರರು ಅವರನ್ನು ಅಹಹರಿಸಿ ಅವರ ಕೈ ಮತ್ತು ಕಣ್ಣು ಕಟ್ಟಿದ್ದರು. ಕಾಡಿನಲ್ಲಿ ಬಿಟ್ಟು ಕಾರಿನೊಂದಿಗೆ ಪರಾರಿಯಾದರು ಎಂದು ಸಿಂಗ್ ಹೇಳಿದ್ದಾರೆ. ಪಾಕಿಸ್ತಾನದಲ್ಲಿ ತರಬೇತಿ ಪಡೆದ ಉಗ್ರರು ಕೈಗೆ ಸಿಕ್ಕವರನ್ನು ಸುಲಭವಾಗಿ ಬಿಡುತ್ತಾರೆಯೇ?. ನನಗೆ ತಿಳಿದಿರುವ ಪ್ರಕಾರ ಎಲ್ಲಾ ರಾಜ್ಯಗಳಲ್ಲಿ ಸರ್ಕಾರಿ ಅಧಿಕಾರಿಗಳ ವಾಹನಗಳಿಗೆ ಚಾಲಕರು ಇರುತ್ತಾರೆ. ಆದರೆ, ಈ ಪ್ರಕರಣದಲ್ಲಿ ಕಾರನ್ನು ಸಿಂಗ್ ಸ್ನೇಹಿತರು ಓಡಿಸುತ್ತಿದ್ದರು. ಭಯೋತ್ಪಾದಕ ದಾಳಿ ನಡೆಯುವ ಎಚ್ಚರಿಕೆ ನೀಡಿದ್ದರೂ, ಗಡಿಯ ಸಮೀಪ ಅವರು ಏನು ಮಾಡುತ್ತಿದ್ದರು ಎಂಬುದು ತಿಳಿಯುತ್ತಿಲ್ಲ.

ಮುಂದಿನ ದಾಳಿಯನ್ನು ಹೇಗೆ ತಡೆಯಬಹುದು?
26/11ರ ಮುಂಬೈ ದಾಳಿಯ ನಂತರ ಕೇಂದ್ರ ಸರ್ಕಾರ ಪ್ರತಿ ರಾಜ್ಯದಲ್ಲಿ ಎನ್‌ಎಸ್‌ಜಿ ಘಟಕ ಸ್ಥಾಪನೆಗೆ ಮುಂದಾಗಿದೆ. ರಾಜ್ಯ ಸರ್ಕಾರಗಳಿಗೆ The special weapons and tactics (SWAT) ತಂಡಗಳನ್ನು ರಚನೆ ಮಾಡುವಂತೆ ಸಲಹೆ ನೀಡಲಾಗಿದೆ. ಇಂತಹ ಪ್ರಯತ್ನಗಳಿಂದಾಗಿ ಮುಂದೆ ನಡೆಯುವ ದಾಳಿಗಳನ್ನು ತಡೆಯಬಹುದಾಗಿದೆ.

English summary
The aftermath of every terrorist strike witnesses a blame game. The case of the Pathankot attack is no different. In this interview with OneIndia former Special Secretary, Cabinet Secretariat V.Balachandran said, Pathankot incident must civil and defense security stronger and the time now is to re-strategise.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X