ಭಾರತದಲ್ಲಿ ಹಲವೆಡೆ Instagram ಸ್ಥಗಿತ: ಕಿರಿಕಿರಿ ಅನುಭವಿಸಿದ ಬಳಕೆದಾರರು

ನವದೆಹಲಿ, ಮೇ 25: ಮೆಟಾ-ಮಾಲೀಕತ್ವದ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ Instagram ಇಂದು ಮುಂಜಾನೆ ಸ್ಥಗಿತಗೊಂಡಿರುವ ದೂರು ಕೇಳಿ ಬಂದಿವೆ. ಇದರಿಂದಾಗಿ ಅನೇಕ ಬಳಕೆದಾರರು ಲಾಗಿನ್ ಆಗುವುದಕ್ಕೆ ಮತ್ತು ಪ್ಲಾಟ್‌ಫಾರ್ಮ್ ಅನ್ನು ಬಳಸುವುದಕ್ಕೆ ಕೊಂಚ ಕಿರಿಕಿರಿಯನ್ನು ಅನುಭವಿಸಿದ್ದಾರೆ.

ಜೊತೆಗೆ Instagram ತಮಗಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಹಲವಾರು ಬಳಕೆದಾರರು Twitter ನಲ್ಲಿ ದೃಢಪಡಿಸಿದ್ದಾರೆ. ಕೆಲವು ಬಳಕೆದಾರರು ತಮ್ಮ ಫೀಡ್‌ಗಳು ರಿಫ್ರೆಶ್ ಆಗುತ್ತಿಲ್ಲ ಎಂದು ವರದಿ ಮಾಡಿದರೆ, ಇತರರು ಅಪ್ಲಿಕೇಶನ್‌ಗೆ ಲಾಗ್ ಇನ್ ಮಾಡಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.

ಬಳಕೆದಾರರು ಮಂಗಳವಾರ ಬೆಳಗ್ಗೆ 9:45 ರ ಸುಮಾರಿಗೆ ಇನ್‌ಸ್ಟಾಗ್ರಾಮ್ ಸ್ಥಗಿತಗೊಂಡಿರುವ ಸಮಸ್ಯೆಗಳನ್ನು ಎದುರಿಸಿದ್ದಾರೆ. ಜೊತೆಗೆ ಇದು ಸುಮಾರು 12:45 ರವರೆಗೆ ಮುಂದುವರೆದಿದೆ. ದೆಹಲಿ, ಜೈಪುರ, ಲಕ್ನೋ, ಮುಂಬೈ, ಬೆಂಗಳೂರು ಮತ್ತು ಇನ್ನೂ ಅನೇಕ ನಗರಗಳಿಂದ ಈ ದೂರುಗಳು ಕೇಳಿ ಬಂದಿವೆ.

Instagram breakdown in many places in India annoying use

ಆದಾಗ್ಯೂ ಹಿಂದಿನ ಸ್ಥಗಿತಗಳಂತೆ ಎಲ್ಲಾ Instagram ಬಳಕೆದಾರರಿಗೆ ಅಪ್ಲಿಕೇಶನ್ ಲಭ್ಯವಿರಲಿಲ್ಲ. ಕೆಲವು ಬಳಕೆದಾರರು ಸ್ಥಗಿತದ ಸಮಯದಲ್ಲಿ ಪ್ಲಾಟ್‌ಫಾರ್ಮ್ ಅನ್ನು ಬಳಸಲು ಸಾಧ್ಯವಾಯಿತು ಎಂದು ಹೇಳಿಕೊಂಡಿದ್ದಾರೆ. ಅವರು ತಮ್ಮ ಖಾತೆಗಳನ್ನು ಪ್ರವೇಶಿಸಬಹುದು ಮತ್ತು ತಮ್ಮ ಫೀಡ್‌ಗಳನ್ನು ರಿಫ್ರೆಶ್ ಮಾಡುವುದು ಮತ್ತು ಹೊಸ ಪ್ರೊಫೈಲ್‌ಗಳನ್ನು ತೆರೆಯುವುದು ಸೇರಿದಂತೆ ಪ್ಲಾಟ್‌ಫಾರ್ಮ್‌ನ ಎಲ್ಲಾ ಅಂಶಗಳನ್ನು ಬಳಸಬಹುದಾಗಿತ್ತು ಎಂದಿದ್ದಾರೆ.

Instagram breakdown in many places in India annoying use

ಆದರೆ Instagram ಇನ್ನೂ ಸಮಸ್ಯೆಯನ್ನು ಒಪ್ಪಿಕೊಂಡಿಲ್ಲ ಮತ್ತು ಯಾವುದೇ ಅಧಿಕೃತ ಹೇಳಿಕೆಯನ್ನು ಈವರೆಗೂ ನೀಡಲಾಗಿಲ್ಲ. ಕಳೆದ ತಿಂಗಳು ಏಪ್ರಿಲ್ 19 ರ ರಾತ್ರಿ ಸೇರಿದಂತೆ ಇತ್ತೀಚಿನ ತಿಂಗಳುಗಳಲ್ಲಿ ಪ್ಲಾಟ್‌ಫಾರ್ಮ್ ಹಲವಾರು ಭಾರಿ ಇದೇ ರೀತಿ ಸ್ಥಗಿತಗೊಂಡಿದೆ.

(ಒನ್ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+