Inspiration: ₹10 ಲಕ್ಷದ ಉದ್ಯೋಗ ಬಿಟ್ಟು UPSCಯಲ್ಲಿ ಅತ್ಯದ್ಭುತ ಸಾಧನೆ ಮಾಡಿದ ಲಾರಿ ಚಾಲಕನ ಮಗಳು

Inspirational Story: ಆರ್ಥಿಕ ಕಷ್ಟಗಳು ಎಂದಿಗೂ ಕನಸುಗಳಿಗೆ ತಡೆಯಾಗಲಾರವು ಎಂಬುದನ್ನು ಯುವತಿಯೊಬ್ಬರು ಸಾಬೀತುಪಡಿಸಿದ್ದಾರೆ. ತಂದೆ ಲಾರಿ ಚಾಲಕರಾಗಿದ್ದರೂ, ಬಡತನದ ಸವಾಲುಗಳನ್ನು ಮೆಟ್ಟಿ ನಿಂತಿದ್ದಷ್ಟೇ ಅಲ್ಲದೆ, ಲಕ್ಷ.. ಲಕ್ಷ ವೇತನದ ಉದ್ಯೋಗವನ್ನು ತೊರೆದು ಯುಪಿಎಸ್‌ಸಿ ಪರೀಕ್ಷೆಯಲ್ಲಿ ಅತ್ಯದ್ಭುತ ಸಾಧನೆ ಮಾಡಿ ಗಮನ ಸೆಳೆದಿದ್ದಾರೆ. ಇವರ ಪ್ರೇರಣಾದಾಯಕ ಪ್ರಯಾಣದ ಸಂಪೂರ್ಭ ಸ್ಟೋರಿ ಇಲ್ಲಿದೆ ನೋಡಿ.

ಆಂಧ್ರಪ್ರದೇಶದ ತಿರುಪತಿಯ ಸಿಂಗಲಗುಂಟಾದ ಬಡ ಕುಟುಂಬದಲ್ಲಿ ಬೆಳೆದ ದಾಸರಿ ಇಂದುಮತಿ, ತಮ್ಮ ಕಠಿಣ ಪರಿಶ್ರಮ ಮತ್ತು ಪೋಷಕರ ನಂಬಿಕೆಯಿಂದ ಯುಪಿಎಸ್‌ಸಿ ನಡೆಸುವ ಇಂಡಿಯನ್ ಇಂಜಿನಿಯರಿಂಗ್ ಸರ್ವಿಸಸ್ ಪರೀಕ್ಷೆಯಲ್ಲಿ ಮೊದಲ ಯತ್ನದಲ್ಲೇ ಅಖಿಲ ಭಾರತ ಮಟ್ಟದಲ್ಲಿ 75ನೇ ರ‍್ಯಾಂಕ್ ಗಳಿಸಿ ಅತ್ಯದ್ಭುತ ಸಾಧನೆ ಮಾಡಿದ್ದಾರೆ. ಸಾಮಾನ್ಯ ಲಾರಿ ಚಾಲಕನ ಮಗಳೊಬ್ಬಳು ಬಡತನವನ್ನು ಮೆಟ್ಟಿ ನಿಂತು ಸಾಧಿಸಿದ ಈ ಗೆಲುವು ಇಂದು ದೇಶಾದ್ಯಂತ ಯುವಜನತೆಗೆ ದಾರಿದೀಪವಾಗಿದೆ.

Inspiration Lorry Driver s Daughter Quits 10 Lakh Job Secures AIR 75 in UPSC Engineering Services

ಮಗಳ ಕನಸಿಗೆ ರೆಕ್ಕೆಯಾದ ಕುಟುಂಬ

ಇಂದುಮತಿ ಅವರ ತಂದೆ ಲಾರಿ ಚಾಲಕರಾಗಿ ಕೆಲಸ ಮಾಡುತ್ತಿದ್ದು, ಕುಟುಂಬದಲ್ಲಿ ಆರ್ಥಿಕ ಕಷ್ಟಗಳು ದೈನಂದಿನ ಭಾಗವಾಗಿದ್ದವು. ಆದರೂ 'ನೀನು ಪ್ರಾಮಾಣಿಕವಾಗಿ ವ್ಯಾಸಂಗ ಮಾಡು, ನಿನ್ನ ಬೆನ್ನಿಗೆ ನಾವು ನಿಲ್ಲುತ್ತೇವೆ,' ಎಂಬ ಒಂದೇ ಮಾತಿನಿಂದ ಪೋಷಕರು ಆಕೆಗೆ ನಿರಂತರ ಪ್ರೋತ್ಸಾಹ ನೀಡಿದರು. 10ನೇ ತರಗತಿಯ ನಂತರ ಶಿಕ್ಷಕರ ಸಲಹೆಯಂತೆ ಸರ್ಕಾರಿ ಪಾಲಿಟೆಕ್ನಿಕ್ ಡಿಪ್ಲೊಮಾ ಕೋರ್ಸ್‌ಗೆ ಸೇರುವ ಮೂಲಕ ಆರ್ಥಿಕ ಹೊರೆಯಾಗದ ಪ್ರಾಯೋಗಿಕ ವಿಭಾಗವನ್ನು ಆಯ್ದುಕೊಂಡರು.

ಡಿಪ್ಲೊಮಾದಿಂದ ಗೋಲ್ಡ್ ಮೆಡಲ್‌ವರೆಗೆ ಮತ್ತು ₹10 ಲಕ್ಷದ ಉದ್ಯೋಗ

ತಮ್ಮ ಅಧ್ಯಯನದಲ್ಲಿ ಸಾಧನೆ ಮಾಡಿದ ಇಂದುಮತಿ, ಇಂಜಿನಿಯರಿಂಗ್ ವಿಭಾಗದಲ್ಲಿ ಚಿನ್ನದ ಪದಕ ಪಡೆದರು. ಶಿಕ್ಷಣ ಪೂರ್ಣಗೊಂಡ ನಂತರ ಬೋಸ್ಟನ್ ಮೂಲದ ಪ್ರಸಿದ್ಧ ಸಾಫ್ಟ್‌ವೇರ್ ಕಂಪನಿಯೊಂದರಲ್ಲಿ ವರ್ಷಕ್ಕೆ ₹10 ಲಕ್ಷ ವೇತನದ ಕೆಲಸ ಲಭಿಸಿತು. ಇದು ಅವರ ಕುಟುಂಬಕ್ಕೆ ದೊಡ್ಡ ಆರ್ಥಿಕ ನೆಮ್ಮದಿ ಮತ್ತು ಹೆಮ್ಮೆಯನ್ನು ತಂದುಕೊಟ್ಟಿತು.

ದೊಡ್ಡ ಕನಸಿಗಾಗಿ ಲಕ್ಷ.. ಲಕ್ಷ ಬರುವ ಸಂಬಳದ ಉದ್ಯೋಗಕ್ಕೆ ಗುಡ್ ಬೈ

ಕೇವಲ ಸಾಫ್ಟ್‌ವೇರ್ ಕೆಲಸಕ್ಕೆ ತೃಪ್ತರಾಗದ ಇಂದುಮತಿ, ದೇಶಸೇವೆಯ ದೊಡ್ಡ ಕನಸಿನೊಂದಿಗೆ ಲಕ್ಷಾಂತರ ರೂಪಾಯಿ ಸಂಬಳದ ಕೆಲಸವನ್ನು ತೊರೆದರು. ಯುಪಿಎಸ್‌ಸಿ ಪರೀಕ್ಷೆಯ ಸಿದ್ಧತೆಗಾಗಿ ದೆಹಲಿಗೆ ತೆರಳಿದರು. ಈ ಹಂತದಲ್ಲಿ ದುಬಾರಿ ಕೋಚಿಂಗ್ ಮತ್ತು ವಸತಿ ವೆಚ್ಚವನ್ನು ಭರಿಸಲು ಸಾಧ್ಯವಾಗದಿದ್ದಾಗ, ಅವರ ಪ್ರತಿಭೆಯನ್ನು ಗುರುತಿಸಿದ ಶಿಕ್ಷಕರು ಮತ್ತು ಧರ್ಮದರ್ಶಿಗಳು ನೆರವಿಗೆ ಧಾವಿಸಿದರು.

ಗುರುಗಳಿಗೆ ಕೃತಜ್ಞತೆ ಸಲ್ಲಿಸಿದ ಇಂದುಮತಿ

ರ‍್ಯಾಂಕ್ ಬಂದ ನಂತರ ಇಂದುಮತಿ ತಮ್ಮ ಹಳೆಯ ಶಾಲೆಗೆ ತೆರಳಿ, ತಮಗೆ ದಾರಿ ತೋರಿಸಿದ ಶಿಕ್ಷಕರ ಪಾದಗಳಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು. 'ನನ್ನ ಈ ಸಾಧನೆಯು ನನ್ನ ಪರಿಶ್ರಮಕ್ಕಿಂತ ಹೆಚ್ಚಾಗಿ ನನ್ನನ್ನು ನಂಬಿದ ಹೆತ್ತವರು, ದಾರಿ ತೋರಿಸಿದ ಗುರುಗಳು ಮತ್ತು ಕಷ್ಟದ ಸಮಯದಲ್ಲಿ ನೆರವಾದ ಉದಾರ ಮನಸ್ಸುಗಳಿಗೆ ಸಲ್ಲಬೇಕು,' ಎಂದು ಅವರು ಕೃತಜ್ಞತೆ ಸಲ್ಲಿಸಿದ್ದಾರೆ.

ಒಟ್ಟಿನಲ್ಲಿ ನಿಮ್ಮ ಹಿನ್ನೆಲೆ ಅಥವಾ ಆರ್ಥಿಕ ಪರಿಸ್ಥಿತಿ ಎಂದಿಗೂ ನಿಮ್ಮ ಭವಿಷ್ಯವನ್ನು ನಿರ್ಧರಿಸುವುದಿಲ್ಲ. ಸತತ ಪರಿಶ್ರಮ, ಧೃಡ ನಿರ್ಧಾರ ಹಾಗೂ ಬೆನ್ನಿಗಿರುವವರ ಬಗ್ಗೆ ಕೃತಜ್ಞತೆ ಇದ್ದರೆ ಎಂತಹ ಬಡತನವನ್ನಾದರೂ ಮೆಟ್ಟಿ ನಿಂತು ಸಾಧನೆಯ ಶಿಖರಕ್ಕೇರಬಹುದು ಎಂಬುದಕ್ಕೆ ಇಂದುಮತಿ ಅವರ ಜೀವನವೇ ಸೂಕ್ತ ಉದಾಹರಣೆಯಾಗಿದೆ. ಇವರ ನಡೆದುಬಂದ ಮುಳಿನಂತಹ ಕಷ್ಟದ ಹಾದಿ ಮಾತ್ರ ಕಣ್ಣೀರು ತರಿಸುತ್ತದೆ. ಆದರೆ ಸಾಧನೆ ನೆನೆಪಿಸಿಕೊಂಡರೆ ಛಲ ಇದ್ದರೆ ಇವರಂತೆ ಇರಬೇಕು ಅನ್ನಿಸುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+