• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಚ್ಚಾ ತೈಲ ಬೆಲೆ ಏರಿದರೂ ಹಣದುಬ್ಬರ ಹತೋಟಿಯಲ್ಲಿ, ಗ್ರಾಹಕರು ನಿರಾಳ

|

ನವದೆಹಲಿ, ಅಕ್ಟೋಬರ್ 17: ಕಚ್ಚಾ ತೈಲ ಬೆಲೆಯಲ್ಲಿ ನಿರಂತರ ಏರಿಕೆ, ಡಾಲರ್ ವಿರುದ್ಧ ರುಪಾಯಿ ಮೌಲ್ಯದಲ್ಲಿನ ಕುಸಿತ ಇವೆರಡರಿಂದ ಉಂಟಾಗಬಹುದಾದ ಹಣದುಬ್ಬರವನ್ನು ನಿಯಂತ್ರಣದಲ್ಲಿ ಇಡಲು ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರಕಾರ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದೆ.

ಈ ಸನ್ನಿವೇಶದಲ್ಲಿ ಉತ್ತಮ ಬೆಳೆ ಹಾಗೂ ಕೃಷಿ ಇಳುವರಿಯಲ್ಲಿನ ಹೆಚ್ಚಳದ ಕಾರಣಕ್ಕೆ ಆಹಾರ ಧಾನ್ಯಗಳ ಬೆಲೆ ಕಡಿಮೆ ಇದೆ. ಭಾರತದ ಹೋಲ್ ಸೇಲ್ ಪ್ರೈಸ್ ಇಂಡೆಕ್ಸ್ (WPI) ಅಂದರೆ ಸಗಡು ಮಾರಾಟ ದರ ಸೂಚ್ಯಂಕವು ಈ ವರ್ಷ ಸೆಪ್ಟೆಂಬರ್ ನಲ್ಲಿ 5.13% ತಲುಪಿತ್ತು. ಇದೇ ವರ್ಷದ ಆಗಸ್ಟ್ ನಲ್ಲಿ ಆ ಪ್ರಮಾಣ 4.53% ಇತ್ತು.

ಕುಸಿದ ಗ್ರಾಹಕರ ವಿಶ್ವಾಸ, ಆರ್ಥಿಕತೆ ಬಗ್ಗೆ ಏನೆಂದುಕೊಳ್ತಾರೆ ಗೊತ್ತಾ?

ಕಳೆದ ವರ್ಷದ ಸೆಪ್ಟೆಂಬರ್ ತ್ರೈ ಮಾಸಿಕಕ್ಕೆ ಹೋಲಿಸಿದರೆ ವಾರ್ಷಿಕ 4.98% ನಷ್ಟು ಏರಿಕೆ ಕಂಡಿದೆ. ಗ್ರಾಹಕ ದರ ಸೂಚ್ಯಂಕವು ಇದೇ ಅವಧಿಯಲ್ಲಿ 3.88% ಏರಿದೆ. ಕಳೆದ ಮೂರು ಅವಧಿಯಲ್ಲಿ 4%ಗಿಂತ ಹೆಚ್ಚು ಏರಿಕೆ ಆಗಿತ್ತು. ಹಣದುಬ್ಬರ ಏರಿಕೆ ಆಗಿದ್ದು ಹೌದಾದರೂ ಅದು ಅಪಾಯಕಾರಿ ಮಟ್ಟವೇನೂ ತಲುಪಿಲ್ಲ.

ಕಚ್ಚಾ ತೈಲ ಬೆಲೆ ಏರಿಕೆ ಹಾಗೂ ಡಾಲರ್ ವಿರುದ್ಧ ಕುಸಿಯುತ್ತಿರುವ ರುಪಾಯಿ ಮೌಲ್ಯದ ಇಂದಿನ ಸನ್ನಿವೇಶದಲ್ಲಿ ಇಂಥ ಬೆಳವಣಿಗೆಯನ್ನು ಸಕಾರಾತ್ಮಕ ಎಂದೇ ಪರಿಗಣಿಸಬಹುದು. ಹಣದುಬ್ಬರ ಅಂದರೇನು ಅನ್ನೋದನ್ನು ಬಹಳ ಸರಳವಾಗಿ ವಿವರಿಸಬೇಕು ಅಂದರೆ, ಮಾರುಕಟ್ಟೆಗೆ ಹೋಗಿ ನಾವು ವಸ್ತುಗಳನ್ನು ಖರೀದಿಸುತ್ತಿವಲ್ಲಾ ಅವುಗಳ ಬೆಲೆ.

ಬದಲಾಗದ ರೆಪೋ, ರಿವರ್ಸ್ ರೆಪೋ ದರ; ಡಾಲರ್ ವಿರುದ್ಧ ರುಪಾಯಿ 74ಕ್ಕೆ

ಹಣದುಬ್ಬರ ಸರಿಯಾದ ಸ್ಥಿತಿಯಲ್ಲಿದೆ ಅಂದರೆ, ಬೆಲೆ ಏರಿಕೆ ಮೇಲೆ ಸರಕಾರದ ನಿಯಂತ್ರಣ ಇದೆ ಅಂತಲೇ ಅರ್ಥ. ಗ್ರಾಹಕರಿಗೆ ಇದು ಶುಭ ಸುದ್ದಿ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಖರ್ಚು ಮಾಡುವ ವಿಚಾರದಲ್ಲಿ ಸರಕಾರಕ್ಕೆ ಸಮಸ್ಯೆ ಆಗುತ್ತದೆ. ಯಾವಾಗ ಆಹಾರ ಪದಾರ್ಥಗಳ ಬೆಲೆ ಕಡಿಮೆ ಇರುತ್ತದೋ ಆಗ ರೈತರ ನೆರವಿಗೆ ಸರಕಾರ ಬಂದು, ಕೆಲವು ಬೆಳೆಗಳಿಗೆ ಬೆಂಬಲ ಬೆಲೆ ನೀಡಬೇಕಾಗುತ್ತದೆ.

ಕನಿಷ್ಠ ಬೆಂಬಲ ಬೆಲೆ ನೀತಿಗೆ ಈಗಿನ ಮೋದಿ ಸರಕಾರ ಜಾರಿಗೆ ಬದ್ಧವಾಗಿದ್ದು, ಇನ್ನು ನಾಲ್ಕು ವರ್ಷದಲ್ಲಿ ಕೃಷಿ ಆದಾಯವನ್ನು ದ್ವಿಗುಣಗೊಳಿಸುವ ಭರವಸೆ ಗುರಿ ಹಾಕಿಕೊಂಡಿದೆ. ಬಜೆಟ್ ನ ವಿಚಾರ ಪಕ್ಕಕ್ಕಿಟ್ಟು ಹೇಳಬೇಕು ಅಂದರೆ ಹಣದುಬ್ಬರ ನಿಯಂತ್ರಣದಲ್ಲಿದೆ. ಇದರಿಂದ ಗ್ರಾಹಕರಿಗೆ ಒಳ್ಳೆಯದು.

ರುಪಾಯಿಯಲ್ಲಿ ಹಣ ಪಾವತಿ ಸ್ವೀಕರಿಸಲು ತೈಲ ಕಂಪನಿಗಳಿಗೆ ಮೋದಿ ಮನವಿ

ಭತ್ತ, ಹಾಲು, ಎಣ್ಣೆಕಾಳುಗಳ ಬೆಲೆಯಲ್ಲಿ ಏರಿಕೆಯಾಗಿದೆ. ಬೇಳೆ ಕಾಳುಗಳು, ಗೋಧಿ ಮತ್ತು ಆಲೂಗಡ್ಡೆಯ ಬೆಲೆಯಲ್ಲಿ ಕ್ರಮವಾಗಿ 5.54%, 8.87% ಹಾಗೂ 80% ಏರಿಕೆ ಆಗಿದೆ. ಇದಕ್ಕೆ ಸಂಬಂಧಪಟ್ಟ ಮಾಹಿತಿಯನ್ನು ಕಳೆದ ವಾರ ಬಿಡುಗಡೆ ಮಾಡಲಾಗಿದೆ. ಈರುಳ್ಳಿ, ಮೊಟ್ಟೆ ಹಾಗೂ ಮಾಂಸದ ಬೆಲೆ ಏರಿಕೆ ಪ್ರಮಾಣದಲ್ಲಿ ಇಳಿಕೆ ಆಗಿದೆ.

ಯಾವಾಗ ಕಚ್ಚಾ ತೈಲ ಬೆಲೆ ಏರುತ್ತಲೇ ಹೋಯಿತೋ ಹಣದುಬ್ಬರ ಹೆಚ್ಚಬಹುದು ಎಂದೇ ಹಲವರು ಅಂದಾಜು ಮಾಡಿದ್ದರು. ತೈಲ ಬೆಲೆ ಮೇಲಕ್ಕೋ ಅಥವಾ ಕೆಳಕ್ಕೋ ಯಾವ ದಿಕ್ಕಿನಲ್ಲಿ ಸಾಗುತ್ತದೋ ಹಣದುಬ್ಬರ ದರ ಅದನ್ನೇ ಅನುಸರಿಸುತ್ತದೆ. ತೈಲ ಬೆಲೆ ಏರಿಕೆಯಿಂದ ವಿತ್ತೀಯ ಕೊರತೆ ಮೇಲೆ ಪರಿಣಾಮ ಆಗುತ್ತದೆ. ಹಣಕಾಸು ನೀತಿ ಸೇರಿ ಒಟ್ಟಾರೆ ಆರ್ಥಿಕ ನೀತಿ ಮೇಲೂ ಪರಿಣಾಮ ಆಗುತ್ತದೆ.

ಮೋದಿ ನಿಜಕ್ಕೂ ಅಚ್ಛೇ ದಿನ್ ನೀಡುತ್ತಿದ್ದಾರೆ ಎಂದ ಸೌದಿ ಅರೇಬಿಯಾ

ಹಣದುಬ್ಬರ ದರ ವೇಗವಾಗಿ ಏರಿಕೆ ಆಗುತ್ತಿತ್ತು. ಗ್ರಾಹಕ ದರ ಸೂಚ್ಯಂಕ ಎರಡಂಕಿಯಲ್ಲಿ ಏರುತ್ತಿತ್ತು. ಅದು ಕಳೆದ ಲೋಕಸಭೆ ಚುನಾವಣೆ ಮುನ್ನ. ಆಹಾರ ಪದಾರ್ಥಗಳ ಬೆಲೆಯಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆ ಕಾಣುತ್ತಲೇ ಹೋಗಿತ್ತು. ಈ ಹಿಂದೆ ಸಗಟು ದೂರ ಸೂಚ್ಯಂಕ ಹಣದುಬ್ಬರವನ್ನು ಹಣಕಾಸು ನೀತಿಗೆ ಆರ್ ಬಿಐ ಮಾರ್ಗದರ್ಶಿಯಾಗಿ ಬಳಸುತ್ತಿತ್ತು. ಈಗ ಗ್ರಾಹಕ ದರ ಸೂಚ್ಯಂಕವನ್ನು ತೆಗೆದುಕೊಳ್ಳುತ್ತಿದೆ. ಅಂದರೆ ಗ್ರಾಹಕರಿಗೆ ಗ್ರಾಹಕ ದರ ಸೂಚ್ಯಂಕವು ನಿಯಂತ್ರಣದಲ್ಲಿರುವುದು ಬಹಳ ಮುಖ್ಯ.

English summary
Considering sharp rise in crude prices and falling value of the Rupee, the Narendra Modi-led NDA government has done a decent job to keep the inflation under check so far. What has helped the government is that good harvest and increased farm output has brought the food prices down.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more