Indigo: ನಿಲ್ಲದ ಇಂಡಿಗೋ ಎಡವಟ್ಟು: ಮತ್ತೊಮ್ಮೆ ಕ್ಷಮೆಯಾಚನೆ, ಈ ಬಾರಿ ಏನಾಯ್ತು ?
ಇಂಡಿಗೋ ವಿಮಾನಗಳ ಸಂಚಾರದಲ್ಲಿನ ವ್ಯತ್ಯಾಸ ಹಾಗೂ ಎಡವಟ್ಟು ಇನ್ನೂ ಪೂರ್ಣ ಪ್ರಮಾಣದಲ್ಲಿ ಪರಿಹಾರವಾಗಿಲ್ಲ. ಈ ರೀತಿ ಇರುವಾಗಲೇ ಇನ್ನಷ್ಟು ಎಡವಟ್ಟುಗಳು ವರದಿಯಾಗುತ್ತಿದ್ದು, ಇಂಡಿಗೋ ಇದೀಗ ಮತ್ತೊಮ್ಮೆ ದೇಶದ ಜನರ ಕ್ಷಮೆಯಾಚನೆ ಮಾಡಿದೆ. ಅದರ ವಿವರ ಇಲ್ಲಿದೆ.
ಈಚೆಗೆ ಸೋಷಿಯಲ್ ಮೀಡಿಯಾ ಎಕ್ಸ್‌ನ ಇಂಡಿಗೋ ಖಾತೆಯಿಂದ ಟ್ವೀಟ್ ಮಾಡಿರುವ ಇಂಡಿಗೋ (ಶನಿವಾರ ತಡರಾತ್ರಿ) ನಮ್ಮ ನೆಟ್‌ವರ್ಕ್‌ನಲ್ಲಿನ ಇತ್ತೀಚಿನ ಅಡಚಣೆಗಳನ್ನು ಪರಿಹರಿಸಲು, ನಾವು ನಿನ್ನೆ 113 ಸ್ಥಳಗಳಿಗೆ ಸಂಪರ್ಕಿಸುವ ಹೆಚ್ಚಿನ ಸಂಖ್ಯೆಯ ವಿಮಾನಗಳನ್ನು ರದ್ದುಗೊಳಿಸಿದ್ದೇವೆ. ಅಲ್ಲದೇ 700 ಕ್ಕೂ ಹೆಚ್ಚು ವಿಮಾನಗಳನ್ನು ನಿರ್ವಹಿಸಿದ್ದೇವೆ.

ನೆಟ್‌ವರ್ಕ್, ವ್ಯವಸ್ಥೆಗಳು ಮತ್ತು ರೋಸ್ಟರ್‌ಗಳನ್ನು ರೀಬೂಟ್ ಮಾಡುವುದು ಮುಖ್ಯ ಉದ್ದೇಶವಾಗಿತ್ತು, ಇದರಿಂದಾಗಿ ನಾವು ಇಂದು ಹೆಚ್ಚಿನ ಸಂಖ್ಯೆಯ ವಿಮಾನಗಳು, ಸುಧಾರಿತ ಸ್ಥಿರತೆಯೊಂದಿಗೆ ಹೊಸದಾಗಿ ಪ್ರಾರಂಭಿಸಬಹುದು ಮತ್ತು ಸುಧಾರಣೆ ತರಲು ಸಾಧ್ಯವಾಗುತ್ತಿದೆ ಎಂದು ಇಂಡಿಗೋ ಹೇಳಿದೆ.
ಇಂದು ನಾವು ದಿನದ ಅಂತ್ಯದ ವೇಳೆಗೆ 1500 ಕ್ಕೂ ಹೆಚ್ಚು ವಿಮಾನಗಳನ್ನು ನಿರ್ವಹಿಸುವ ನಿಟ್ಟಿನಲ್ಲಿ ಸಿದ್ಧತೆ ಮಾಡಿಕೊಂಡಿದ್ದೇವೆ. ವಿಮಾನಗಳ ಸಂಚಾರಕ್ಕೆ ಸಂಬಂಧಿಸಿದಂತೆ ಕಾರ್ಯಾಚರಣೆಯಲ್ಲಿರುವ 138 ಸ್ಥಳಗಳಲ್ಲಿ 135 ಸ್ಥಳಗಳಿಗೆ ನಾವು ಕಾರ್ಯನಿರ್ವಹಿಸಲು ಸಾಧ್ಯವಾಗುವುದರಿಂದ 95% ಕ್ಕಿಂತ ಹೆಚ್ಚು ನೆಟ್‌ವರ್ಕ್ ಸಂಪರ್ಕವನ್ನು ಈಗಾಗಲೇ ಪುನಃಸ್ಥಾಪಿಸಲಾಗಿದೆ.
ನಾವು ಬಹಳಷ್ಟು ಕೆಲಸ (ಸಿದ್ಧತೆ) ಮಾಡಿಕೊಳ್ಳಬೇಕಿದೆ ಎಂದು ನಾವು ಅರ್ಥಮಾಡಿಕೊಂಡಿದ್ದರೂ, ನಮ್ಮ ಗ್ರಾಹಕರ ವಿಶ್ವಾಸವನ್ನು ಮರಳಿ ಪಡೆಯುವ ನಿಟ್ಟಿನಲ್ಲಿ ನಾವು ಬದ್ಧರಾಗಿದ್ದೇವೆ. ನಮ್ಮ ಎಲ್ಲಾ ಪಾಲುದಾರರು ಮತ್ತು ಸರ್ಕಾರಿ ಸಂಸ್ಥೆಗಳ ನಿರಂತರ ಬೆಂಬಲ ಮತ್ತು ಮಾರ್ಗದರ್ಶನಕ್ಕಾಗಿ ನಾವು ಧನ್ಯವಾದಗಳನ್ನು ಅರ್ಪಿಸುತ್ತೇವೆ.
ಎಲ್ಲಕ್ಕಿಂತ ಹೆಚ್ಚಾಗಿ ಈ ಕಠಿಣ ಸಮಯದಲ್ಲಿ ನಮ್ಮ ಗ್ರಾಹಕರು ಮತ್ತು ಸಿಬ್ಬಂದಿಯ ತಾಳ್ಮೆ ಮತ್ತು ಸಹಕಾರಕ್ಕಾಗಿ ನಮ್ಮ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸಲು ನಾವು ಬಯಸುತ್ತೇವೆ. ಮತ್ತೊಮ್ಮೆ ಕ್ಷಮೆಯಾಚಿಸುತ್ತೇವೆ ಎಂದು ಇಂಡಿಗೋ ಸಂಸ್ಥೆ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿದೆ.












Click it and Unblock the Notifications