ಇಂಡಿಗೋ ವಿಮಾನ ಪ್ರಯಾಣದಲ್ಲಿ ವೈದ್ಯರು, ನರ್ಸ್‌ಗಳಿಗೆ ಶೇ.25ರಷ್ಟು ರಿಯಾಯಿತಿ

ನವದೆಹಲಿ, ಜುಲೈ 2: ಇಂಡಿಗೋ ವಿಮಾನ ಪ್ರಯಾಣ ದರದಲ್ಲಿ ವೈದ್ಯರು ಹಾಗೂ ನರ್ಸ್‌ಗಳಿಗೆ ಶೇ.25ರಷ್ಟು ರಿಯಾಯಿತಿ ದೊರೆಯಲಿದೆ.

Recommended Video

      Facebook brings a new Update to reduce sharing of Fake news | Oneindia Kannada

      2020 ಅಂತ್ದವರೆಗೂ ಈ ರಿಯಾಯಿತಿ ಇರಲಿದೆ. ಕೊರೊನಾ ವೈರಸ್ ವಿರುದ್ಧ ಹೋರಾಟ ನಡೆಸಿ ರೋಗಿಗಳ ಜೀವ ಉಳಿಸುತ್ತಿರುವ ಕೊರೊನಾ ವಾರಿಯರ್ಸ್‌ಗಾಗಿ ಈ ರೀತಿಯ ಸೇವೆ ನೀಡಲು ಇಂಡಿಗೋ ಮುಂದಾಗಿದೆ.

      ವಿಮಾನ ನಿಲ್ದಾಣದೊಳಗೆ ಬಂದು ಚೆಕ್‌ ಇನ್ ಆಗುವ ಸಂದರ್ಭದಲ್ಲಿ ಅವರ ಗುರುತಿನ ಚೀಟಿಯನ್ನು ತೋರಿಸಬೇಕು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

      IndiGo To Give 25 Percent Discount On Airfare To Doctors Nurses

      ಜುಲೈ 1 ರಿಂದಲೇ ಇದು ಜಾರಿಯಲ್ಲಿದೆ, ಡಿಸೆಂಬರ್ 31ರವರೆಗೂ ರಿಯಾಯಿತಿ ದೊರೆಯಲಿದೆ. ಇಂಡಿಗೋ ವೆಬ್‌ಸೈಟ್ ಮೂಲಕವೂ ಟಿಕೆಟ್ ಖರೀದಿಸಬಹುದಾಗಿದೆ.

      ಜುಲೈ 1 ರಂದು 71,471 ಮಂದಿ ಪ್ರಯಾಣಿಕರು, 785 ವಿಮಾನಗಳಲ್ಲಿ ಹಾರಾಟ ನಡೆಸಿದ್ದಾರೆ. ಪ್ರತಿ ವಿಮಾನದಲ್ಲಿ ಸುಮಾರು 91 ಮಂದಿ ಪ್ರಯಾಣಿಕರಿದ್ದರು.

      ಸಾಮಾನ್ಯವಾಗಿ ಎ320 ವಿಮಾನವನ್ನು ಬಳಕೆ ಮಾಡಲಾಗುತ್ತದೆ.ಅದರಲ್ಲಿ ಸುಮಾರು 180 ಆಸನಗಳಿರುತ್ತವೆ. ಇದನ್ನು ಗಮನಿಸಿದರೆ ಜುಲೈ 1 ರಂದು ಶೇ.50ರಷ್ಟು ಮಂದಿ ಮಾತ್ರ ಪ್ರಯಾಣ ನಡೆಸಿದ್ದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+