'ಇಂಡಿಗೋ' ಚೇರ್ ಮನ್ ಸ್ಥಾನಕ್ಕೆ ಆದಿತ್ಯ ಘೋಷ್ ರಾಜೀನಾಮೆ
ನವದೆಹಲಿ, ಏಪ್ರಿಲ್ 28: ಇಂಡಿಗೋ ವಿಮಾನಯಾನ ಸಂಸ್ಥೆಗೆ 10 ವರ್ಷಗಳಿಂದ ಚೇರ್ ಮನ್ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದ ಆದಿತ್ಯ ಘೋಷ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಸಂಸ್ಥೆ ನಿನ್ನೆ(ಏ.27) ಹೊರಡಿಸಿದ ಅಧಿಕೃತ ಪ್ರಕಟಣೆಯಲ್ಲಿ ಘೋಷ್ ರಾಜೀನಾಮೆಯ ಕುರಿತು ತಿಳಿಸಿದೆ. ಸಂಸ್ಥೆಯ ಹಂಗಾಮಿ ಮುಖ್ಯಕಾರ್ಯನಿರ್ವಹಣಾಧಿಕಾರಿ(ಸಿಇಒ) ಮತ್ತು ನಿರ್ದೇಶಕರಾಗಿ ರಾಹುಲ್ ಭಾಟಿಯಾ ಅಧಿಕಾರ ಸ್ವೀಕರಿಸಲಿದ್ದಾರೆ.

ಘೋಷ್ ಅವರ ರಾಜೀನಾಮೆ ಜುಲೈ 31 ರಿಂದ ಅನ್ವಯವಾಗಲಿದೆ.
"ಇನ್ನೊಂದು ಸಾಹಸಕ್ಕೆ ಕೈಹಾಕುತ್ತಿದ್ದೇನೆ. ಆದ್ದರಿಂದ ಇಂಡಿಗೋಗೆ ರಾಜೀನಾಮೆ ನೀಡಿದ್ದೇನೆ. ಮುಂದಿನ ದಿನಗಳಲ್ಲಿ ಸಂಸ್ಥೆ ಮತ್ತಷ್ಟು ಯಶಸ್ಸು ಪಡೆಯಲಿ ಎಂದು ಹಾರೈಸುತ್ತೇನೆ" ಎಂದು ಘೋಷ್ ಹೇಳಿದ್ದಾರೆ.












Click it and Unblock the Notifications