Vande Bharat Sleeper: 2026ಕ್ಕೆ ಬರಲಿರುವ ವಂದೇ ಭಾರತ್ ಸ್ಲೀಪರ್, ಅಮೃತ್ ಭಾರತ್ ರೈಲುಗಳ ಅಪ್ಡೇಟ್ಸ್ ಇಲ್ಲಿದೆ
Vande Bharat Sleeper Train: ಭಾರತದಲ್ಲಿ 2026ರಿಂದ ರೈಲು ಪ್ರಯಾಣ ಮತ್ತಷ್ಟು ಅಹ್ಲಾದಕರ ಮತ್ತು ಸಾಹಸಮಯ ಅನುಭವ ನೀಡಲಿದೆ. ದೇಶದಲ್ಲಿ ನಿತ್ಯ ಲಕ್ಷಾಂತರ ಜನರು ರೈಲು ಸಾರಿಗೆ ಅವಲಂಬಿಸಿದ್ದಾರೆ. ಪ್ರಯಾಣಿಕರಿಗಾಗಿ ಹೊಸ ಹೊಸ ಯೋಜನೆ, ಉಪಕ್ರಮ ತರುವ ಭಾರತೀಯ ರೈಲ್ವೆ (Indian Railways) ಇದೀಗ ವಿಶೇಷ ಹಾಗೂ ಐಶಾರಾಮಿ ಅನುಭವ ನೀಡುವ ಹಲವು ರೈಲುಗಳನ್ನು ಪರಿಚಯಿಸಲಿದೆ. ಯಾವೆಲ್ಲ ವಿಧದ ರೈಲುಗಳು ಪ್ರಯಾಣಿಕರಿಗೆ ಲಭ್ಯವಾಗಲಿವೆ, ಅವುಗಳ ವಿಶೇಷತೆ ಏನು? ಎಂಬೆಲ್ಲ ಮಾಹಿತಿ ಇಲ್ಲಿವೆ.
ದೇಶದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ (Vande Bharat Express Train) ಸಂಚಾರ ಆರಂಭಿಸುವ ಮೂಲಕ ಕ್ರಾಂತಿ ಮೂಡಿಸಿದ ಸರ್ಕಾರ ಈಗಾಗಲೇ ಘೋಷಿಸಿದಂತೆ ವಂದೇ ಭಾರತ್ ಸ್ಲೀಪರ್ ರೈಲು (Vande Bharat Express Sleeper Train), ಅಮೃತ್ ಭಾರತ್ ಎಕ್ಸ್‌ಪ್ರೆಸ್ ಎಸಿ ಸಹಿತ ರೈಲುಗಳು (Amrit Bharat Express AC Trains), ಅಮೃತ್ ಭಾರತ್ ಎಕ್ಸ್‌ಪ್ರೆಸ್ ಮತ್ತು ನಮೋ ಭಾರತ್ ರೈಲುಗಳು (Namo Bharat Express Trains) ದೈನಂದಿನ ಪ್ರಯಾಣಿಕರಿಗೆ ಒದಗಿಸುವ ದೊಡ್ಡ ಚಿಂತನೆಯಲ್ಲಿ ಭಾರತೀಯ ರೈಲ್ವೆ ಇಲಾಖೆ ಇದೆ.

2026 ವರ್ಷ ಭಾರತೀಯ ರೈಲ್ವೆ ಇಲಾಖೆ ಮಟ್ಟಿಗೆ ಹೊಸ ಹೊಸ ರೈಲುಗಳ ಮೂಲಕ ಹೊಸ ಯುಗ ಆರಂಭವಾಗುತ್ತದೆ. ನಿತ್ಯ ಲಕ್ಷಾಂತರ ಪ್ರಯಾಣಿಕರು ಇದರ ಪ್ರಯೋಜನೆ ಪಡೆಯಲಿದ್ದಾರೆ. ಚೇರ್ ಕಾರ್ ರೈಲಾಗಿರುವ ವಂದೇ ಭಾರತ್‌ನಂತೆ ಭಾರತೀಯ ರೈಲ್ವೆ ಇದೀಗ "ವಂದೇ ಭಾರತ್‌ನ ಸ್ಲೀಪರ್ ಆವೃತ್ತಿ' ಹೊರತರಲಿದೆ. ಇದೇ ವರ್ಷ ಶುರುವಾಗಬೇಕಿದ್ದ ಈ ರೈಲಿನ ಸೇವೆ ತಡವಾಗಿದೆ. ಮುಂದಿನ ವರ್ಷ ಹಳಿಗೆ ಇಳಿಯುವುದ ಖಚಿತ ಎಂದು ಹೇಳಲಾಗಿದೆ.
ಇದರೊಂದಿಗೆ ಎಸಿ ಸೌಲಭ್ಯ ಹೊಂದಿರುವ ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಸೇವೆಗೆ ನಿಯೋಜನೆಗೊಳ್ಳಲಿವೆ. ಅಮೃತ್ ಭಾರತ್ ಎಕ್ಸ್‌ಪ್ರೆಸ್ ಮತ್ತು ನಮೋ ಭಾರತ್ ರೈಲುಗಳು ದೈನಂದಿನ ಪ್ರಯಾಣಿಕರಿಗೆ ಆರಾಮದಾಯಕ ಸೇವೆ ನೀಡಲಿವೆ. ದೂರದ ಊರಗಳಿಗೆ ತೆರಳುವವರು ಈ ರೈಲುಗಳ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪ್ರಯಾಣವನ್ನು ಇಷ್ಟಪಡುತ್ತಿದ್ದಾರೆ. ಭಾರತ ಮುಂದಿನ ವರ್ಷ ನಿರ್ದಿಷ್ಟ ಮಾರ್ಗದಲ್ಲಿ ಬುಲೆಟ್ ರೈಲು ಸೇವೆ ಆರಂಭಿಸಿದರೂ ಅಚ್ಚರಿ ಇಲ್ಲ.
ವಂದೇ ಭಾರತ್ ಸ್ಲೀಪರ್ ರೈಲುಗಳು
ರಾತ್ರಿಯ ಧೀರ್ಘ ಪ್ರಯಾಣ ಮಾಡುವವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಭಾರತೀಯ ರೈಲ್ವೆ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಸ್ಲೀಪರ್ ಆವೃತ್ತಿ ಆರಂಭಿಸಲಿದೆ. ವಿಶೇಷ ರೀತಿ, ವಿನ್ಯಾಸದಲ್ಲಿರುವ ಈ ರೈಲುಗಳು ಪ್ರಯಾಣಿಕರಿಗೆ ವಿಶೇಷ ಅನುಭವ ನೀಡಲಿವೆ. ವೇಗದ ರೈಲಿಗೆ ಪ್ರಸಿದ್ಧವಾಗ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಮುಂದಿನ ಆವೃತ್ತಿ ಈ ಸ್ಲೀಪರ್ ರೈಲಾಗಿದೆ. ತಾಂತ್ರಿಕವಾಗಿಯು, ವಿಶೇಷ ಸೌಕರ್ಯಗಳನ್ನು ಒಳಗೊಂಡ ರೈಲು ಇದಾಗಿದೆ. ಒಟ್ಟಾರೆ ಪ್ರಯಾಣಿಕರ ಸ್ನೇಹಿ ರೈಲು ಎನ್ನಬಹುದು.
ವಂದೇ ಭಾರತ್ ಸ್ಲೀಪರ್ ರೈಲಿನ ವಿಶೇಷತೆಗಳು
* ವಿಬಿ ಸ್ಲೀಪರ್ ರೈಲು ಪ್ರೀಮಿಯಂ ಪ್ರಥಮ ದರ್ಜೆ ಕ್ಯಾಬಿನ್ ಹೊಂದಿದೆ.
* ಕಾರ್ಯಾಚರಣಾ ವೇಗ ಪ್ರತಿ ಗಂಟೆಗೆ 160 ಕಿಲೋ ಮೀಟರ್
* ಗರಿಷ್ಠ ವೇಗ ಪ್ರತಿ ಗಂಟೆಗೆ 180 ಕಿಲೋ ಮೀಟರ್
* ಪ್ರಯಾಣಿಕರ ಸಾಮರ್ಥ್ಯ: ಸುಮಾರು 1,128
* ಆರಾಮದಾಯಕ ಆಸನಗಳು ಮತ್ತು ಸ್ಲೀಪರ್ ಬರ್ತ್‌ಗಳು
* ನೀರಿನ ಬಾಟಲ್ ಹೋಲ್ಡರ್
* ಓದುವ ದೀಪಗಳು ಮತ್ತು ಚಾರ್ಜಿಂಗ್ ಪಾಯಿಂಟ್‌ಗಳು
* ಸ್ವಯಂಚಾಲಿತ ಬಾಗಿಲುಗಳು ಮತ್ತು ವಿಮಾನ ಶೈಲಿಯ ಒಳಾಂಗಣವಿದೆ.
* ಭದ್ರತೆ ವಿಚಾರದಲ್ಲಿ ರೈಲು ಕ್ರ್ಯಾಶ್ ಬಫರ್‌ಗಳು ಮತ್ತು ಡಿಫಾರ್ಮೇಷನ್ ಟ್ಯೂಬ್ ಒಳಗೊಂಡಿದೆ.
* ಕೋಚ್‌ಗಳ ನಡುವೆ ಬೆಂಕಿ-ನಿರೋಧಕ ಗೋಡೆಗಳಂತಹ ವ್ಯವಸ್ಥೆ ಇದೆ
*ಪ್ರಯಾಣಿಕರಿಗಾಗಿ ವೈ-ಫೈ, ಆಧುನಿಕ ಸ್ಲೀಪರ್ ಬರ್ತ್‌ಗಳು ಮತ್ತು ಏರ್‌ಲೈನ್ ಶೈಲಿಯ ಒಳಾಂಗಣ ಇದೆ.
* ಈ ರೈಲಿನಲ್ಲಿ ಒಟ್ಟು 16 ಬೋಗಿಗಳು ಇರುತ್ತವೆ.
ಅಮೃತ್ ಭಾರತ್ ರೈಲುಗಳು ಕಾರ್ಯಚರಣೆ
ಮುಂದಿನ ವರ್ಷ ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ಎಸಿ ಕೋಚ್ ಸಹಿತ ರೈಲುಗಳ ಪ್ರವೇಶವಾಗುತ್ತದೆ. ರೈಲಿನ ಮೂರನೇ ಆವೃತ್ತಿಯು ಇದಾಗಿದ.ಎ ಚೆನ್ನೈ ಇಂಟಿಗ್ರೇಟೆಡ್ ರೈಲ್ ಕೋಚ್ ಫ್ಯಾಕ್ಟರಿಯಲ್ಲಿ ಮೊದಲ, ಎರಡನೇ ಮತ್ತು ಮೂರನೇ ದರ್ಜೆಯ ಹವಾನಿಯಂತ್ರಿತ (ಎಸಿ) ಕೋಚ್ ಉತ್ಪಾದಿಸುತ್ತಿದೆ. ಹೊಸ ಅಮೃತ್ ಭಾರತ್ ಎಕ್ಸ್‌ಪ್ರೆಸ್ 3.0 ಗಾಗಿ ಕೋಚ್ ಸಂಯೋಜನೆಗೆ ರೈಲ್ವೆ ಮಂಡಳಿ ಅನುಮೋದನೆ ನೀಡಿದೆ.
ಈ ರೈಲು ಬರೋಬ್ಬರಿ 22 ಬೋಗಿ ಹೊಂದಿರಲಿದೆ. ಆರು ಎರಡನೇ ದರ್ಜೆಯ ಸ್ಲೀಪರ್ ಕೋಚ್‌ಗಳು ಮತ್ತು ಆರು ಸಾಮಾನ್ಯ ಬೋಗಿಗಳು ಇರಲಿವೆ. ಒಂದು ಪ್ರಥಮ-ಎಸಿ, ಎರಡು ಎರಡನೇ-ಎಸಿ ಮತ್ತು ಆರು ಮೂರನೇ-ಎಸಿ ಕೋಚ್‌ಗಳು ಮತ್ತು ಹವಾನಿಯಂತ್ರಿತ ಪ್ಯಾಂಟ್ರಿ ಸಹ ಇರಲಿದೆ.
2023 ರಲ್ಲಿ ಬಿಡುಗಡೆಯಾದ ಅಮೃತ್ ಭಾರತ್ ರೈಲುಗಳು ಮಧ್ಯಮ ವರ್ಗದವರನ್ನು ಗಮನದಲ್ಲಿಟ್ಟುಕೊಂಡು ಪರಿಚಯಿಸಲಾದ ರೈಲುಗಳಾಗಿವೆ. ಗುಣಮಟ್ಟದ ಸೇವೆ ಒದಗಿಸುವ ಗುರಿ ಹೊಂದಿದೆ. ಶೀಘ್ರವೇ ಎಸಿ ಸಹಿತ ರೈಲುಗಳು ಸೇವೆಗೆ ಬರಲಿವೆ.
-
ಹಿರಿಯ ನಾಗರಿಕರಿಗೆ ರೈಲ್ವೇ ನಿಯಮಗಳು 2026: ರಿಯಾಯಿತಿ ಇಲ್ಲದಿದ್ದರೂ ಸೌಲಭ್ಯಗಳು ಮುಂದುವರಿಕೆ -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
ಬೆಂಗಳೂರಿನ ಪಾನಿಪುರಿ ವ್ಯಾಪಾರಿಯ ತಿಂಗಳ ಸಂಪಾದನೆ ಫುಲ್ Viral: ದಿನಕ್ಕೆ 3 ಸಾವಿರ ರೂ. ಗಳಿಕೆ -
Viral Video: 11 ವರ್ಷದ ಬಾಲಕನಿಂದ ಯಶಸ್ವಿ ವಿಮಾನ ಲ್ಯಾಂಡಿಂಗ್; ನೆಟ್ಟಿಗರ ಮನಗೆದ್ದ ಈ ಪುಟ್ಟ ಪೋರ -
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ












Click it and Unblock the Notifications