Dolo-650: ಭಾರತೀಯರು ಜೆಮ್ಸ್‌ನಂತೆ ಡೋಲೋ-650 ತಿನ್ನುವರು!
ಬೆಂಗಳೂರು, ಏಪ್ರಿಲ್ 17: ಕೋವಿಡ್ ಸಂಕ್ರಾಮಿಕದ ಕಾಲದಲ್ಲಿ ಭಾರೀ ಸದ್ದು, ಸುದ್ದಿ ಮಾಡಿದ್ದು ಡೋಲೋ 650 ಮಾತ್ರೆ. ಮೆಡಿಕಲ್ ಶಾಪ್‌ಗಳಲ್ಲಿ ಸುಲಭವಾಗಿ ಸಿಗುವ, ಎಲ್ಲರ ಮನೆಯಲ್ಲೂ ಸದಾ ಇರುವ ಮಾತ್ರೆ ಇದು. ಜ್ವರ, ತಲೆನೋವು ಬಂದರೆ ವೈದ್ಯರ ಬಳಿ ಹೋಗದೇ ಡೋಲೋ 650 ನುಂಗಿ ನೀರು ಕುಡಿಯುವ ಬಹಳಷ್ಟು ಜನರಿದ್ದಾರೆ. ಭಾರತೀಯರು ಅತಿಯಾಗಿ ಡೋಲೋ 650 ಬಳಕೆ ಮಾಡುತ್ತಾರೆ ಎಂದು ವೈದ್ಯರೊಬ್ಬರು ಹಾಕಿರುವ ಪೋಸ್ಟ್ ಈಗ ವೈರಲ್ ಆಗಿದೆ.
ಭಾರತದಲ್ಲಿ ಜನರು ಡೋಲೋ 650 ಮಾತ್ರೆಯನ್ನು ಜೆಮ್ಸ್ ಪೇಪರ್‌ಮೆಂಟ್ ರೀತಿ ತಿನ್ನುತ್ತಾರೆ ಎಂದು ವೈದ್ಯರೊಬ್ಬರು ಪೋಸ್ಟ್ ಹಾಕಿದ್ದಾರೆ. ಈ ಪೋಸ್ಟ್‌ಗೆ ಹಲವಾರು ಜನರು ಕಮೆಂಟ್‌ಗಳನ್ನು ಮಾಡಿ ಪ್ರತಿಕ್ರಿಯೆಯನ್ನು ಸಹ ನೀಡಿದ್ದಾರೆ. ಡೋಲೋ 650 ಭಾರತದಲ್ಲಿ ಮನೆಮಾತಾದ ಔಷಧಿಯಾಗಿ ಬದಲಾಗಿದೆ. ವಿಶೇಷವಾಗಿ ಕೋವಿಡ್-19 ಮಹಾಮಾರಿಯ ನಂತರ ಇದರ ಬಳಕೆ ಹೆಚ್ಚಾಗಿದೆ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

ಸುಲಭವಾಗಿ ಸಿಗುತ್ತದೆ: ದೇಶದಲ್ಲಿ ಸುಲಭವಾಗಿ ಪ್ಯಾರಾಸಿಟಮಾಲ್ ಲಭ್ಯವಿದೆ. ಜ್ವರದ ಚಿಕ್ಕ ಲಕ್ಷಣ ಕಂಡರೂ ಹಲವಾರು ಜನರು ಇದನ್ನು ತೆಗೆದುಕೊಳ್ಳುತ್ತಾರೆ. ವಿವಿಧ ಬ್ರಾಂಡ್‌ಗಳಲ್ಲಿ ಲಭ್ಯವಿರುವ ಡೋಲೋ 650 ಇತ್ತೀಚಿನ ವರ್ಷಗಳಲ್ಲಿ ಅತ್ಯಂತ ಜನಪ್ರಿಯವಾಗಿದೆ ಮತ್ತು ಇದರ ಬಳಕೆಯೂ ಗಣನೀಯವಾಗಿ ಹೆಚ್ಚಾಗಿದೆ ಎಂಬುದು ವೈದ್ಯರ ಅಭಿಪ್ರಾಯ.
ಗ್ಯಾಸ್ಟ್ರೋಎಂಟರಾಲಜಿಸ್ಟ್/ ಆರೋಗ್ಯ ಶಿಕ್ಷಣ ತಜ್ಞರಾಗಿರುವ ಪಳನಿಯಪ್ಪನ್ ಮಣಿಕಂ ಸಾಮಾಜಿಕ ಜಾಲತಾಣದಲ್ಲಿ "ಭಾರತೀಯರು ಡೋಲೋ 650 ಅನ್ನು ಕ್ಯಾಡ್ಬರಿ ಜೆಮ್ಸ್‌ಗಳಂತೆ ತೆಗೆದುಕೊಳ್ಳುತ್ತಾರೆ" ಎಂದು ಪೋಸ್ಟ್ ಹಾಕಿದ್ದಾರೆ. ಇದು ದೇಶದಲ್ಲಿ ಈ ಮಾತ್ರೆಯ ಬಳಕೆ ಹೆಚ್ಚಾಗುತ್ತಿರುವುದನ್ನು ಬಹಿರಂಗ ಮಾಡಿದೆ.
ಡೋಲೋ 650ಯನ್ನು ಭಾರತದಲ್ಲಿ ವೈದ್ಯರು ಸಾಮಾನ್ಯವಾಗಿ ಜ್ವರ, ತಲೆನೋವು, ದೇಹದ ನೋವುಗಳು ಮತ್ತು ಸಣ್ಣ ನೋವಿಗಾಗಿ ಬರೆದುಕೊಡುತ್ತಾರೆ. ಇದು ಪರಿಣಾಮಕಾರಿ ಮತ್ತು ವೈದ್ಯರು ಸೂಚಿಸಿದಂತೆ ತೆಗೆದುಕೊಂಡಾಗ ಸಾಮಾನ್ಯವಾಗಿ ಸುರಕ್ಷಿತವಾಗಿದೆ. ಆದರೆ, ಯಾವುದೇ ಔಷಧಿ ಅತಿಯಾದ ಬಳಕೆಯೂ ಹಾನಿಕಾರಕವಾಗಬಹುದು ಎಂದು ವರದಿ ಹೇಳಿದೆ.
ವಿಶೇಷವಾಗಿ ಯಕೃತ್ತಿಗೆ ಇದು ಹಾನಿಯನ್ನು ಉಂಟು ಮಾಡಬಹುದು. ಆದ್ದರಿಂದ ವೈದ್ಯಕೀಯ ಸಲಹೆ ಮತ್ತು ಶಿಫಾರಸು ಮಾಡಿದ ಪ್ರಮಾಣದಲ್ಲಿ ಮಾತ್ರ ತೆಗೆದುಕೊಳ್ಳಬೇಕು. ಕೋವಿಡ್ ಪರಿಸ್ಥಿತಿ ಸಮಯದಲ್ಲಿ ಡೋಲೋ 650 ಜನಪ್ರಿಯತೆಯನ್ನು ಗಳಿಸಿತು, ವಿಶೇಷವಾಗಿ ಲಸಿಕೆ ಪಡೆದ ನಂತರ ಪಾರಾಸಿಟಮಾಲ್ ತೆಗೆದುಕೊಳ್ಳಲು ಜನರಿಗೆ ಸಲಹೆ ನೀಡಿದಾಗ ಇದರ ಬಳಕೆ ಹೆಚ್ಚಾಯಿತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಡೋಲೋ 650 ಮಾತ್ರೆಯನ್ನು ಡೋಲೋಪಾರ್ ಟ್ಯಾಬ್ಲೆಟ್‌ನ ಉತ್ತರಾಧಿಕಾರಿ ಎಂದು ಬಣ್ಣಿಸಲಾಗುತ್ತಿದೆ. ಪಾರಾಸಿಟಮಾಲ್ ಅನ್ನು ಹೊಂದಿರುವ ಇದು ನೋವು, ಉರಿಯೂತ ಮತ್ತು ಜ್ವರವನ್ನು ಉಂಟುಮಾಡುವ ಪ್ರೊಸ್ಟಾಗ್ಲಾಂಡಿನ್ ಬಿಡುಗಡೆಯನ್ನು ತಡೆಯುತ್ತದೆ. ಜ್ವರದ ಸಂದರ್ಭಗಳಲ್ಲಿ ದೇಹದ ತಾಪಮಾನವನ್ನು ಕೂಡ ಕಡಿಮೆ ಮಾಡುತ್ತದೆ ಎಂದು ವೈದ್ಯರು ಹೇಳಿದ್ದಾರೆ.
ಫೋರ್ಬ್ಸ್ ವರದಿಯ ಮೈಕ್ರೋ ಲಾಬ್ಸ್ 2020ರ ಕೋವಿಡ್-19 ಪರಿಸ್ಥಿತಿ ಬಳಿಕ 350 ಕೋಟಿ ಡೋಲೊ 650 ಮಾತ್ರೆಗಳನ್ನು ಮಾರಾಟ ಮಾಡಿದೆ. ಇದರಿಂದ ವರ್ಷಕ್ಕೆ 400 ಕೋಟಿ ರೂ. ಆದಾಯ ಗಳಿಸಿದೆ. ಮಾರುಕಟ್ಟೆಯ ಅಂಕಿ ಅಂಶಗಳ ಮಾಹಿತಿಯಂತೆ ಕೋವಿಡ್ ಆರಂಭಕ್ಕೂ ಮೊದಲು ವಾರ್ಷಿಕವಾಗಿ ಸುಮಾರು 7.5 ಕೋಟಿ ಡೋಲೊ 650 ಮಾರಾಟ ಮಾಡುತ್ತಿತ್ತು.
ವೈದ್ಯರು ಶಿಫಾರಸು ಮಾಡದಿದ್ದರೂ ಮೆಡಿಕಲ್ ಶಾಪ್‌ಗಳಲ್ಲಿ ಡೋಲೋ 650 ಸುಲಭವಾಗಿ ಸಿಗುತ್ತದೆ. ಜ್ವರ, ತಲೆನೋವು, ಸ್ನಾಯು ನೋವು, ಬೆನ್ನು ನೋವು, ಕೀಲು ನೋವು ಸೇರಿದಂತೆ ವಿವಿಧ ಕಾರಣಕ್ಕೆ ಜನರು ಡೋಲೋ 650 ಸೇವನೆ ಮಾಡುತ್ತಾರೆ.
ಸಾಮಾನ್ಯವಾಗಿ ಈ ಮಾತ್ರೆಯಿಂದ ಹೆಚ್ಚಿನ ಅಡ್ಡಪರಿಣಾಮಗಳಿಲ್ಲ. ಹೆಚ್ಚಿನ ನಿದ್ರೆ ಬರುತ್ತದೆ ಎಂದು ಜನರು ಹೇಳುತ್ತಾರೆ. ಆದರೆ ಡೋಲೋ 650 ಸೇವನೆ ಬಳಿಕ ಕೆಲವರು ಹೊಟ್ಟೆ ನೋವು, ವಾಕರಿಕೆ ಮತ್ತು ವಾಂತಿಯಂತಹ ತಾತ್ಕಾಲಿಕ ಅಡ್ಡ ಪರಿಣಾಮಗಳನ್ನು ಎದುರಿಸುತ್ತಾರೆ.
-
ಮನೆ ಕಟ್ಟುವಾಗ ವಾಸ್ತು ಪಾಲಿಸದಿದ್ದರೆ ಏನಾಗುತ್ತದೆ? ಇಲ್ಲಿವೆ 5 ಪ್ರಮುಖ ನಿಯಮಗಳು -
ದುಬಾರಿ ಆ್ಯಂಟಿ ಏಜಿಂಗ್ ಕ್ರೀಮ್ಗಿಂತ ಈ ತರಕಾರಿಯೇ ಪರಿಣಾಮಕಾರಿಯಂತೆ: ಚಿರಯೌವನ ತ್ವಚೆಗೆ ನೈಸರ್ಗಿಕ ಉಪಾಯ -
Summer Heat Alert: ಮಕ್ಕಳ ಆರೋಗ್ಯ ಕಾಪಾಡಲು ಪೋಷಕರಿಗೆ 7 ಮುಖ್ಯ ಸಲಹೆಗಳು -
ಬೇಸಿಗೆಯಲ್ಲಿ ಸೌತೆಕಾಯಿ ತಿನ್ನಲು ಟಾಪ್ 5 ಕಾರಣಗಳು: ಆರೋಗ್ಯಕ್ಕೆ ಅದ್ಭುತ ಲಾಭಗಳು -
ನಿಮ್ಮ ಮನೆ ದಿಕ್ಕು ಸರಿಯೇ? ರಾಶಿ ಪ್ರಕಾರ ವಾಸ್ತು ಸೂಚನೆಗಳು ಇಲ್ಲಿವೆ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು












Click it and Unblock the Notifications