ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯೇಸು ಕೋವಿಡ್‌ ತೊಡೆದು ಹಾಕಿದ್ದಾರೆ, ಕ್ರಿಶ್ಚಿಯಾನಿಟಿಯಿಂದ ಮಾತ್ರ ಭಾರತೀಯರು ಬದುಕುಳಿದಿದ್ದಾರೆ

|
Google Oneindia Kannada News

ಹೈದರಾಬಾದ್‌, ಡಿಸೆಂಬರ್‌ 21: ಜೀಸಸ್‌ ಕೋವಿಡ್‌ ಅನ್ನು ತೊಡೆದು ಹಾಕಿದ್ದಾರೆ. ಅಲ್ಲದೆ ಕ್ರಿಶ್ಚಿಯನಿಟಿ ಇರುವುದರಿಂದಲೇ ಭಾರತೀಯರು ಬದುಕುಳಿದಿದ್ದಾರೆ ಎಂದು ತೆಲಂಗಾಣದ ಆರೋಗ್ಯ ನಿರ್ದೇಶಕ ಜಿ. ಶ್ರೀನಿವಾಸ್‌ ರಾವ್‌ ಅವರು ಹೇಳಿದ್ದಾರೆ.

ಪ್ರಪಂಚದಾದ್ಯಂತದ ಅನೇಕ ದೇಶಗಳಲ್ಲಿ ಮತ್ತೆ ಕೋವಿಡ್ 19 ಪ್ರಕರಣಗಳಲ್ಲಿ ಹಠಾತ್ ಏರಿಕೆಯಾಗುತ್ತಿದ್ದು, ಜಾಗತಿಕ ಸಾಂಕ್ರಮಿಕದ ಉಲ್ಬಣವು ದೇಶಕ್ಕೆ ದೊಡ್ಡ ಅಲೆಯನ್ನು ತರದಂತೆ ನೋಡಿಕೊಳ್ಳಲು ಭಾರತವೂ ಸಜ್ಜಾಗಿದೆ. ಈ ಎಲ್ಲದರ ನಡುವೆ, ತೆಲಂಗಾಣ ಆರೋಗ್ಯ ನಿರ್ದೇಶಕ ಜಿ ಶ್ರೀನಿವಾಸ್ ರಾವ್ ಅವರು ಕೊರೊನಾ ವೈರಸ್ ಪರಿಸ್ಥಿತಿ ಸಂಬಂಧ ತಮ್ಮ ಹೇಳಿಕೆಯ ಮೂಲಕ ವಿವಾದದಲ್ಲಿ ಸಿಲುಕಿದ್ದಾರೆ.

ಮಾಸ್ಕ್ ಹಾಕಿ, ಬೂಸ್ಟರ್ ಡೋಸ್ ತೆಗೆದುಕೊಳ್ಳಿ: ಮತ್ತೆ ಹೆಚ್ಚುತ್ತಿರುವ ಕೋವಿಡ್‌ ಬಗ್ಗೆ ಎಚ್ಚರಿಸಿದ ನೀತಿ ಆಯೋಗಮಾಸ್ಕ್ ಹಾಕಿ, ಬೂಸ್ಟರ್ ಡೋಸ್ ತೆಗೆದುಕೊಳ್ಳಿ: ಮತ್ತೆ ಹೆಚ್ಚುತ್ತಿರುವ ಕೋವಿಡ್‌ ಬಗ್ಗೆ ಎಚ್ಚರಿಸಿದ ನೀತಿ ಆಯೋಗ

ಕೋವಿಡ್ -19 ಯೇಸುವಿನ ಕಾರಣದಿಂದಾಗಿ ಕಡಿಮೆಯಾಯಿತು. ಕ್ರಿಶ್ಚಿಯನ್ ಧರ್ಮದ ಕಾರಣದಿಂದ ಭಾರತೀಯರು ಬದುಕುಳಿದರು. ವೈದ್ಯರು ಒದಗಿಸಿದ ಚಿಕಿತ್ಸೆಯಿಂದ ಪರಿಸ್ಥಿತಿಯನ್ನು ನಿಭಾಯಿಸಲಾಗಿಲ್ಲ. ಆದರೆ ಯೇಸುವಿನ ದಯೆಯಿಂದಾಗಿ ಕೋವಿಡ್‌ ನಿಯಂತ್ರಣವಾಯಿತು. ಭಾರತದ ಅಭಿವೃದ್ಧಿಗೆ ಕ್ರಿಶ್ಚಿಯನ್ನರು ಕಾರಣ ಎಂದು ಕ್ರಿಸ್‌ಮಸ್ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಅವರು ಈ ಹೇಳಿಕೆ ನೀಡಿದ್ದಾರೆ.

Indians survived only because of Christianity

ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕ ಕೃಷ್ಣ ಸಾಗರ್ ರಾವ್, ಅವರು ಇಂತಹ ಹೇಳಿಕೆ ನೀಡಬಾರದಿತ್ತು. ಇದು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ ಮತ್ತು ಅವರು ತೆಲಂಗಾಣದಲ್ಲಿ ಆರೋಗ್ಯ ನಿರ್ದೇಶಕರಾಗಿ ತಮ್ಮ ವೃತ್ತಿಪರ ಗುರುತಿನ ಮೇಲೆ ಧಾರ್ಮಿಕ ಗುರುತನ್ನು ತೋರಿಸುತ್ತಾರೆ ಎಂದು ತಿಳಿಸಿದ್ದಾರೆ.

ಭಾರತವು ಇಂದು ಏನಾಗಿದೆ. ಕ್ರಿಶ್ಚಿಯನ್ ಧರ್ಮದ ಕಾರಣದಿಂದಾಗಿ ಅಭಿವೃದ್ಧಿಯಾಗುತ್ತಿದೆ. ಕೋವಿಡ್ 19 ಮತ್ತು ನಂತರದ ವ್ಯವಹಾರ ಕುಸಿತವನ್ನು ಯೇಸು ರಕ್ಷಿಸಿದರು. ಅವರು ಯೇಸುವಿನ ನಂಬಿಕೆಯನ್ನು ಹೊಂದಬಹುದು. ಆದರೆ ಅವರು ಈ ರೀತಿಯ ಸಾರ್ವಜನಿಕ ಹೇಳಿಕೆ ನೀಡಲು ಸಾಧ್ಯವಿಲ್ಲ. ಅವರೇಕೆ ಹೆಲ್ತ್ ಡೈರೆಕ್ಟರ್? ರಾಜೀನಾಮೆ ಕೊಟ್ಟು ಹೋಗಬೇಕು. ದೇವರೇ ಕಾಪಾಡಲಿ ಕೃಷ್ಣ ಸಾಗರ್ ರಾವ್ ಹೇಳಿದರು.

ಏತನ್ಮಧ್ಯೆ, ಕೋವಿಡ್-19 ಇನ್ನೂ ಮುಗಿದಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವ ಡಾ ಮನ್ಸುಖ್ ಮಾಂಡವಿಯಾ ಬುಧವಾರ ಹೇಳಿದ್ದಾರೆ. ಅಲ್ಲದೆ ಎಲ್ಲರೂ ಆದಷ್ಟು ಬೇಗ ಲಸಿಕೆ ಹಾಕಿಸಿಕೊಳ್ಳಬೇಕು. ಸಂಬಂಧಪಟ್ಟ ಎಲ್ಲರಿಗೂ ಎಚ್ಚರಿಕೆ ವಹಿಸಲು ಮತ್ತು ಕಣ್ಗಾವಲು ಬಲಪಡಿಸಲು ಸೂಚಿಸಿದ್ದಾರೆ ಎಂದು ಹೇಳಿದರು.

ಹೊಸ ರೂಪಾಂತರಗಳನ್ನು ಪತ್ತೆಹಚ್ಚಲು ಅನುಕೂಲವಾಗುವಂತೆ ಎಲ್ಲಾ ಕೋವಿಡ್‌ 19 ಧನಾತ್ಮಕ ಪ್ರಕರಣಗಳ ಮಾದರಿಗಳನ್ನು INSACOG ಲ್ಯಾಬ್‌ಗಳಿಗೆ ಕಳುಹಿಸಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಲಹೆ ನೀಡಲಾಗಿದೆ ಎಂದು ಸರ್ಕಾರ ಮಾಹಿತಿ ನೀಡಿದೆ.

English summary
Jesus got rid of covid. Also, Telangana Health Director G. said that Indians have survived only because of Christianity. Srinivas Rao said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X