Get Updates
Get notified of breaking news, exclusive insights, and must-see stories!

ಗಂಗಾ ನದಿಯಲ್ಲಿ ಒಲಂಪಿಕ್ಸ್‌ ಪದಕ ಮುಳುಗಿಸಲು ಬಂದ ಕುಸ್ತಿಪಟುಗಳು: ಭಾರತದ ಇತಿಹಾಸದಲ್ಲೇ ಅತ್ಯಂತ ಕರಾಳ ದಿನವೆಂದ ನೆಟ್ಟಿಗರು

ಹರಿದ್ವಾರ, ಮೇ 30: ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧದ ಪ್ರತಿಭಟನೆಯ ಸಂಕೇತವಾಗಿ ಹರಿದ್ವಾರದಲ್ಲಿ ಕುಸ್ತಿಪಟುಗಳು ತಮ್ಮ ಪದಕಗಳನ್ನು ಗಂಗಾ ನದಿಯಲ್ಲಿ ಮುಳುಗಿಸಲು ಬಂದಿದ್ದಾರೆ. ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ತಮ್ಮ ಮೇಲೆ ನಿರಂತರವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಹಲವು ದಿನಗಳಿಂದ ಕುಸ್ತಿಪಟುಗಳು ಪ್ರತಿಭಟನೆ ನಡೆಸುತ್ತಿದ್ದಾರೆ.

ಭಾನುವಾರ ಪ್ರತಿಭಟನಾ ಸ್ಥಳಗಳನ್ನು ಪೊಲೀಸರು ತೆರವುಗೊಳಿಸಿದ ಭಾರತೀಯ ಕುಸ್ತಿಪಟುಗಳು ಈಗ ತಮ್ಮ ಪದಕಗಳನ್ನು ಗಂಗಾ ನದಿಯಲ್ಲಿ ಮುಳುಗಿಸಲು ಬಂದಿದ್ದಾರೆ. ಡಬ್ಲ್ಯುಎಫ್‌ಐ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ತಮ್ಮ ಮೇಲೆ ನಿರಂತರ ಲೈಂಗಿಕ ಶೋಷಣೆ ಮಾಡಿದ್ದಾರೆ ಎಂಬುದು ಕುಸ್ತಿಪಟುಗಳ ಆರೋಪವಾಗಿದೆ. ಬಿಜೆಪಿಯ ಸಂಸದರೂ ಆಗಿರುವ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಬಂಧಿಸುವಂತೆ ಅವರು ಒತ್ತಾಯಿಸುತ್ತಿದ್ದಾರೆ.

Indian Wrestlers immerse medals in river Ganga

ನಿನ್ನೆ ರಿಯೊ ಒಲಿಂಪಿಕ್ ಕಂಚಿನ ಪದಕ ವಿಜೇತೆ ಸಾಕ್ಷಿ ಮಲ್ಲಿಕ್‌ ಅವರು ತಮ್ಮ ಟ್ವಿಟ್ಟರ್ ಹ್ಯಾಂಡಲ್‌ನಿಂದ ವೀಡಿಯೊವನ್ನು ಪೋಸ್ಟ್ ಮಾಡಿದ್ದು, ತಾವು ಈ ಹೋರಾಟವನ್ನು ಬಿಟ್ಟುಕೊಟ್ಟಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಆದರೆ ಜಂತರ್ ಮಂತರ್‌ನಲ್ಲಿ ಕುಸ್ತಿಪಟುಗಳಿಗೆ ಮತ್ತೆ ಪ್ರತಿಭಟನೆ ನಡೆಸಲು ಅವಕಾಶ ನೀಡುವುದಿಲ್ಲ ಎಂದು ದೆಹಲಿ ಪೊಲೀಸರು ಖಡಾಖಂಡಿತವಾಗಿ ಹೇಳಿದ್ದಾರೆ.

ಭಾನುವಾರ, ದೆಹಲಿ ಪೊಲೀಸರು ವಿನೇಶ್ ಫೋಗಟ್, ಬಜರಂಗ್ ಪುನಿಯಾ ಮತ್ತು ಸಾಕ್ಷಿ ಮಲಿಕ್ ಸೇರಿದಂತೆ ಹಲವು ಒಲಿಂಪಿಯನ್‌ಗಳನ್ನು ಬಂಧಿಸಿದ್ದರು. ಕ್ರೀಡಾಪಟುಗಳು ಕಾನೂನು ಮತ್ತು ಸುವ್ಯವಸ್ಥೆಯನ್ನು ಉಲ್ಲಂಘಿಸಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದಾರೆ.

Indian Wrestlers immerse medals in river Ganga

ಕುಸ್ತಿಪಟುಗಳ ಮೇಲೆ ದೆಹಲಿ ಪೊಲೀಸರ ಕ್ರಮವು ದೇಶದಾದ್ಯಂತ ತೀವ್ರ ಆಕ್ರೋಶಕ್ಕೆ ಗುರಿಯಾಗಿದೆ. ಜಾವೆಲಿನ್ ಚಾಂಪಿಯನ್ ನೀರಜ್ ಚೋಪ್ರಾ ಮತ್ತು ಮಾಜಿ ಶೂಟರ್ ಅಭಿನವ್ ಬಿಂದ್ರಾ ಸೇರಿದಂತೆ ಕ್ರೀಡಾ ವಲಯದ ಕೆಲವು ಪ್ರಮುಖರು ಟೀಕೆಗಳ ಸುರಿಮಳೆ ಗೈದಿದ್ದಾರೆ. ಅಲ್ಲದೆ, ಕೈಸರ್‌ಗಂಜ್‌ನ ಬಿಜೆಪಿ ಸಂಸದರೂ ಆಗಿರುವ ಭೂಷಣ್ ವಿರುದ್ಧ ಕ್ರಮ ಕೈಗೊಳ್ಳದ ಕೇಂದ್ರವನ್ನು ವಿರೋಧ ಪಕ್ಷಗಳು ಕೂಡ ತರಾಟೆಗೆ ತೆಗೆದುಕೊಂಡಿವೆ.

ಒಲಂಪಿಕ್ ಪದಕ ವಿಜೇತರು ತಮ್ಮ ಪದಕಗಳನ್ನು ಹಿಡಿದುಕೊಂಡು ಹರಿದ್ವಾರದ ಗಂಗಾ ನದಿಯ ಮುಂದೆ ಅಳುತ್ತ ನಿಂತಿರುವ ವಿಡಿಯೊವನ್ನು ಎಎನ್‌ಐ ಸುದ್ದಿಸಂಸ್ಥೆ ಹಂಚಿಕೊಂಡಿದೆ.

ಪ್ರತಿಭಟನಾ ನಿರತ ಕುಸ್ತಿಪಟುಗಳು ತಮ್ಮ ಪದಕಗಳನ್ನು ಗಂಗಾದಲ್ಲಿ ಮುಳುಗಿಸಲು ಇಂದು ಸಂಜೆ ಹರಿದ್ವಾರವನ್ನು ತಲುಪಿದ್ದಾರೆ. ಮೇ 28 ರಂದು ತಮ್ಮ ಮೇಲೆ ದೌರ್ಜನ್ಯ ಎಸಗಲಾಗಿದೆ. ಪೊಲೀಸರ ದೌರ್ಜನ್ಯದ ವಿರುದ್ಧ ಈ ಪ್ರತಿಭಟನೆಯನ್ನು ಕೈಗೊಂಡಿರುವುದಾಗಿ ಅವರು ಹೇಳಿದ್ದಾರೆ.

Indian Wrestlers immerse medals in river Ganga

ಪ್ರತಿಭಟನಾನಿರತ ಕುಸ್ತಿಪಟುಗಳು ಡಬ್ಲ್ಯುಎಫ್‌ಐ ಮುಖ್ಯಸ್ಥ ಮತ್ತು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಅವರನ್ನು ಬಂಧಿಸುವಂತೆ ಮತ್ತೆ ಒತ್ತಾಯಿಸಿದ್ದಾರೆ. ಅಪ್ರಾಪ್ತ ವಯಸ್ಕ ಸೇರಿದಂತೆ ಹಲವಾರು ಮಹಿಳಾ ಕ್ರೀಡಾಪಟುಗಳನ್ನು ಬ್ರಿಜ್‌ ಭೂಷನ್‌ ಲೈಂಗಿಕವಾಗಿ ಶೋಷಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ನಮಗೆ ಈ ಪದಕಗಳು ಈಗ ಬೇಡ. ಏಕೆಂದರೆ ನಮಗೆ ಅವುಗಳನ್ನು ಧರಿಸುವಂತೆ ಹೇಳುವ ಮೂಲಕ ಈ ವ್ಯವಸ್ಥೆಯು ನಮ್ಮನ್ನು ಶೋಷಿಸುತ್ತಲೇ ಇದೆ. ಸರ್ಕಾರವು ಅದನ್ನು ತನ್ನ ಪ್ರಚಾರಕ್ಕಾಗಿ ಮುಖವಾಡವಾಗಿ ಬಳಸುತ್ತಿದೆ. ಈ ಶೋಷಣೆಯ ವಿರುದ್ಧ ಮಾತನಾಡಿದರೆ ನಮ್ಮನ್ನು ಜೈಲಿಗೆ ಕಳುಹಿಸಲು ಸಿದ್ಧವಾಗುತ್ತದೆ ಎಂದು ಕುಸ್ತಿಪಟುಗಳು ಗಂಭೀರ ಆರೋಪ ಮಾಡಿದ್ದಾರೆ.

ಒಲಿಂಪಿಕ್ ಮತ್ತು ವಿಶ್ವ ಚಾಂಪಿಯನ್‌ಶಿಪ್‌ಗಳಲ್ಲಿ ಪದಕಗಳನ್ನು ಗೆದ್ದ ಕ್ಷಣವನ್ನು ನಾವು ನೆನಪಿಸಿಕೊಳ್ಳುತ್ತೇವೆ. ಈಗ ನಾವು ಅವುಗಳನ್ನು ಏಕೆ ಗೆದ್ದಿದ್ದೇವೆ ಎಂದು ನಮಗೆ ಅನಿಸುತ್ತಿದೆ. ವ್ಯವಸ್ಥೆಯು ನಮ್ಮೊಂದಿಗೆ ತುಂಬಾ ಅಗ್ಗವಾಗಿ ವರ್ತಿಸಲು ನಾವು ಅವುಗಳನ್ನು ಗೆದ್ದಿದ್ದೇವೆಯೇ? ಅವರು ನಮ್ಮನ್ನು ಎಳೆದೊಯ್ದು ನಂತರ ನಮ್ಮನ್ನು ಅಪರಾಧಿಗಳನ್ನಾಗಿ ಮಾಡಿದ್ದಾರೆ ಎಂದೂ ಪೊಲೀಸರು ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+