ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download
LIVE

Vice President Election 2022 Result Live: ಉಪರಾಷ್ಟ್ರಪತಿಯಾಗಿ ಜಗದೀಪ್ ಧನಕರ್ ಆಯ್ಕೆ

|
Google Oneindia Kannada News

ಭಾರತದ 14ನೇ ಉಪರಾಷ್ಟ್ರಪತಿಯಾಗಿ ಎನ್‌ಡಿಎ ಬೆಂಬಲಿತ ಅಭ್ಯರ್ಥಿ ಜಗದೀಪ್‌ ಧನಕರ್ ಆಯ್ಕೆಯಾಗಿದ್ದಾರೆ.

ಜಗದೀಪ್ ಧನಕರ್ 528 ಮತಗಳನ್ನು ಪಡೆದರೆ, ವಿರೋಧ ಪಕ್ಷದ ಅಭ್ಯರ್ಥಿ ಮಾರ್ಗರೆಟ್ ಆಳ್ವ 182 ಮತಗಳನ್ನು ಪಡೆದರು. ಮತದಾನದಲ್ಲಿ 15 ಮತಗಳು ಅಸಿಂಧುಗೊಂಡಿವೆ.

ರಾಜಸ್ಥಾನ ರಾಜ್ಯದ ಕಿತನಾ ಎಂಬ ಗ್ರಾಮದಲ್ಲಿ ಜನಿಸಿದ್ದ ಜಗದೀಪ್‌ ಧನಕರ್ ಅವರು ಉಪರಾಷ್ಟ್ರಪತಿ ಚುನಾವಣೆಗೆ ನಾಮಪತ್ರ ಸಲ್ಲಿಸುವ ಮೊದಲು ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿದ್ದವರು. ಪ್ರಸ್ತುತ ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರ ಅವಧಿ ಆಗಸ್ಟ್ 10 ರಂದು ಕೊನೆಗೊಳ್ಳಲಿದ್ದು, ನೂತನ ರಾಷ್ಟ್ರಪತಿ ಆಗಸ್ಟ್‌ 11ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಜಗದೀಪ್ ಧನಕರ್ ಆಯ್ಕೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ಪರಾಜಿತ ಅಭ್ಯರ್ಥಿ ಮಾರ್ಗರೇಟ್ ಆಳ್ವ ಸಹಿತ ಎಲ್ಲ ಮುಖಂಡರು ಅಭಿನಂದನೆ ಸಲ್ಲಿಸಿದ್ದಾರೆ.

Vice Presidential Elections 2022 Voting & Result Live Updates, News in Kannada, Margaret Alva vs Jagdeep Dhankhar

Newest FirstOldest First
9:11 PM, 6 Aug

ಧನಕರ್ ಒಬ್ಬ ರೈತನ ಮಗ:

ಅವರು ಅದ್ಭುತ ರಾಜ್ಯಸಭಾ ಅಧ್ಯಕ್ಷರು, ಅತ್ಯುತ್ತಮ ಉಪರಾಷ್ಟ್ರಪತಿಯಾಗುತ್ತಾರೆ. ಒಬ್ಬ ರೈತನ ಮಗ ಮತ್ತು ಒಬ್ಬ ಪ್ರಖ್ಯಾತ ನ್ಯಾಯಶಾಸ್ತ್ರಜ್ಞನನ್ನು ಭಾರತದ ಉಪರಾಷ್ಟ್ರಪತಿಯಾಗಿ ಹೊಂದಲು ರಾಷ್ಟ್ರವು ಆಶೀರ್ವದಿಸಲ್ಪಟ್ಟಿದೆ. ಅವರ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು ನಮ್ಮ ಅದೃಷ್ಟ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಹೇಳಿಕೆ ನೀಡಿದ್ದಾರೆ.
9:08 PM, 6 Aug

ಪ್ರಲ್ಹಾದ್ ಜೋಶಿ ಅಭಿನಂದನೆ:

ನನಗೆ ತುಂಬಾ ಸಂತೋಷವಾಗಿದೆ, ಜಗದೀಪ್‌ ಅವರಿಗೆ ಅಭಿನಂದನೆಗಳು. ಇದು ನಿರ್ಣಾಯಕ ಮತ್ತು ಪ್ರಭಾವಶಾಲಿ ಗೆಲುವು. ಅವರು ಖ್ಯಾತ ವಕೀಲರು ಮತ್ತು ಕೃಷಿಕರು, ಇದು ಅಪರೂಪದ ಸಂಯೋಜನೆಯಾಗಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಅವರು ಜಗದೀಪ್ ಧನಕರ್ ಅವರನ್ನು ಅಭಿನಂದಿಸಿದ್ದಾರೆ.
9:05 PM, 6 Aug

ಉಭಯ ಸದನಗಳಲ್ಲಿ ರಾಜಸ್ಥಾನ ಮೂಲದ ಅಧ್ಯಕ್ಷರು:

ಭೈರೋನ್ ಸಿಂಗ್ ಶೇಖಾವತ್ ನಂತರ ಭಾರತದ ಉಪರಾಷ್ಟ್ರಪತಿಯಾಗಿ ಆಯ್ಕೆಯಾದ ರಾಜಸ್ಥಾನದ ಎರಡನೇ ನಾಯಕ ಜಗದೀಪ್ ಧನಕರ್. ಜುಂಜುನು ಜಿಲ್ಲೆಗೆ ಸೇರಿದ ಜಾಟ್ ನಾಯಕ ಧನಕರ್ ಅವರ ಆಯ್ಕೆಯೊಂದಿಗೆ, ಈಗ ಸಂಸತ್ತಿನ ಕೆಳ ಮತ್ತು ಮೇಲ್ಮನೆಗಳೆರಡೂ ರಾಜಸ್ಥಾನದ ನಾಯಕರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಕೂಡ ರಾಜಸ್ಥಾನದವರು. ಅವರು ರಾಜ್ಯದ ಕೋಟಾ-ಬಂಡಿ ಸಂಸದೀಯ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ.
9:00 PM, 6 Aug

"ಭಾರತದ ಉಪರಾಷ್ಟ್ರಪತಿಯಾಗಿ ಆಯ್ಕೆಯಾದ ಜಗದೀಪ್ ಧನಕರ್ ಅವರಿಗೆ ಅಭಿನಂದನೆಗಳು. ನಿಮ್ಮ ದೀರ್ಘ ಮತ್ತು ಶ್ರೀಮಂತ ಸಾರ್ವಜನಿಕ ಜೀವನದ ಅನುಭವದಿಂದ ರಾಷ್ಟ್ರವು ಪ್ರಯೋಜನ ಪಡೆಯುತ್ತದೆ. ಉತ್ಪಾದಕ ಮತ್ತು ಯಶಸ್ವಿ ಅಧಿಕಾರಾವಧಿಗೆ ನನ್ನ ಶುಭಾಶಯಗಳು," ಎಂದು ನೂತನ ರಾಷ್ಟ್ರಪತಿಯಾಗಿ ಇತ್ತೀಚೆಗಷ್ಟೇ ಆಯ್ಕೆಯಾಗಿರುವ ದ್ರೌಪದಿ ಮುರ್ಮು ಅವರು ಟ್ವೀಟ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.
9:00 PM, 6 Aug

ರೈತ ಕುಟುಂಬದಿಂದ ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರ ಪ್ರಯಾಣವು ಪ್ರಜಾಪ್ರಭುತ್ವದಲ್ಲಿ ಜನರ ನಂಬಿಕೆಯನ್ನು ಬಲಪಡಿಸುತ್ತದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
9:00 PM, 6 Aug

ಭಾರತದ 14ನೇ ಉಪರಾಷ್ಟ್ರಪತಿಯಾಗಿ ಆಯ್ಕೆಯಾದ ಜಗದೀಪ್ ಧನಕರ್ ಅವರನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅಭಿನಂದಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ವಿರೋಧ ಪಕ್ಷಗಳ ಅಭ್ಯರ್ಥಿಯಾಗಿದ್ದ ಮಾರ್ಗರೇಟ್ ಆಳ್ವಾ ಅವರಿಗೂ ಧನ್ಯವಾದ ಹೇಳಿ ಟ್ವೀಟ್ ಮಾಡಿದ್ದಾರೆ.
8:48 PM, 6 Aug

ಭಾರತ ಗಣರಾಜ್ಯದ ಉಪಾಧ್ಯಕ್ಷರಾಗಿ ಆಯ್ಕೆಯಾದ ಶ್ರೀ ಜಗದೀಪ್ ಧನಕರ್ ಜಿ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ನಿಮ್ಮ ಶ್ರೀಮಂತ ಶಾಸಕಾಂಗ ಮತ್ತು ರಾಜ್ಯಪಾಲರ ಅನುಭವವು ದೇಶದ ಪ್ರಜಾಪ್ರಭುತ್ವದ ಮನೋಭಾವಕ್ಕೆ ದೊಡ್ಡ ವರದಾನವಾಗಿದೆ ಎಂದು ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿನಂದಿಸಿದ್ದಾರೆ.
Advertisement
8:32 PM, 6 Aug

ರಾಜಸ್ಥಾನ ಮೂಲದ ಜಗದೀಪ್ ಧನಕರ್ ಅಯ್ಕೆಯಾಗಿರುವುದಕ್ಕೆ ರಾಜಸ್ಥಾನದಲ್ಲಿ ಸಂಭ್ರಮ ಮುಗಿಲು ಮುಟ್ಟಿದೆ.

"ಭಾರತದ ಉಪರಾಷ್ಟ್ರಪತಿಯಾಗಿ ಆಯ್ಕೆಯಾದ ಶ್ರೀ ಜಗದೀಪ್ ಧನಕರ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭಾಶಯಗಳು. ಭೈರೋನ್ ಸಿಂಗ್ ಶೇಖಾವತ್ ಜಿ ನಂತರ ರಾಜಸ್ಥಾನದಿಂದ ಶ್ರೀ ಧಂಖರ್ ಅವರು ಎರಡನೇ ಉಪರಾಷ್ಟ್ರಪತಿಯಾಗಿರುವುದು ರಾಜಸ್ಥಾನದ ಜನರಿಗೆ ಸಂತೋಷವಾಗಿದೆ," ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.
8:29 PM, 6 Aug

"ಭಾರತದ ಹದಿನಾಲ್ಕನೇ ಉಪರಾಷ್ಟ್ರಪತಿಯಾಗಿ ಆಯ್ಕೆಯಾದ ಶ್ರೀ ಜಗದೀಪ್ ಧನಕರ್ ಜಿ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ನಿಮ್ಮ ಅಪಾರ ಅನುಭವ ಮತ್ತು ಕಾನೂನು ಪರಿಣತಿಯಿಂದ ರಾಷ್ಟ್ರವು ಹೆಚ್ಚು ಪ್ರಯೋಜನ ಪಡೆಯುತ್ತದೆ. ಯಶಸ್ವಿ ಮತ್ತು ಫಲಪ್ರದ ಅಧಿಕಾರಾವಧಿಗೆ ನನ್ನ ಶುಭಾಶಯಗಳು" ಎಂದು ನಿರ್ಗಮಿತ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಟ್ವೀಟ್ ಮಾಡಿದ್ದಾರೆ.
8:20 PM, 6 Aug

ನೂತನ ಉಪರಾಷ್ಟ್ರಪತಿಯಾಗಿ ಆಯ್ಕೆಯಾಗಿರುವ ಜಗದೀಪ್ ಧನಕರ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯ ಅಕ್ಬರ್ ರಸ್ತೆಯ ನಿವಾಸದಲ್ಲಿ ಭೇಟಿಯಾಗಿ ಅಭಿನಂದನೆ ಸಲ್ಲಿಸಿದರು.
8:20 PM, 6 Aug

ನೂತನ ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರನ್ನು ಅಭಿನಂದಿಸಿದ ಪ್ರತಿಸ್ಪರ್ಧಿ ಮಾರ್ಗರೇಟ್ ಆಳ್ವ. ಎಲ್ಲ ವಿರೋಧ ಪಕ್ಷಗಳ ನಾಯಕರಿಗೂ ಧನ್ಯವಾದ
8:07 PM, 6 Aug

ಜಗದೀಪ್‌ ದಂಖರ್‌ ಉಪರಾಷ್ಟ್ರಪತಿಯಾಗಿ ಆಯ್ಕೆ

ಜಗದೀಪ್‌ ದಂಖರ್‌ ಉಪರಾಷ್ಟ್ರಪತಿಯಾಗಿ ಆಯ್ಕೆ
ಭಾರತದ 14ನೇ ಉಪರಾಷ್ಟ್ರಪತಿಯಾಗಿ ಎನ್‌ಡಿಎ ಅಭ್ಯರ್ಥಿ ಜಗದೀಪ್‌ ದಂಖರ್‌ ಅವರು ಆಯ್ಕೆಯಾಗಿದ್ದಾರೆ.
Advertisement
7:48 PM, 6 Aug

ಸಂಭ್ರಮಾಚರಣೆ

ಭಾರತದ ಉಪರಾಷ್ಟ್ರಪತಿ ಚುನಾವಣೆ ಫಲಿತಾಂಶ ಹೊರಬೀಳುವ ಮುನ್ನವೇ ರಾಜಸ್ಥಾನದ ಜುಂಜುವಿನಲ್ಲಿ ಜಗದೀಪ್‌ ದಂಖರ್‌ ಅವರ ಬೆಂಬಲಿಗರು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ.
6:50 PM, 6 Aug

ಪ್ರಲ್ಹಾದ್ ಜೋಶಿ ಅವರ ನಿವಾಸಕ್ಕೆ ಬಂದ ಜಗದೀಪ್ ಧಂಖರ್

ಪ್ರಲ್ಹಾದ್ ಜೋಶಿ ಅವರ ನಿವಾಸಕ್ಕೆ ಬಂದ ಜಗದೀಪ್ ಧಂಖರ್
ಉಪರಾಷ್ಟ್ರಪತಿ ಚುನಾವಣೆಯ ಫಲಿತಾಂಶ ಪ್ರಕಟವಾಗುವ ಮುನ್ನ 11 ಅಕ್ಬರ್ ರಸ್ತೆಯಲ್ಲಿರುವ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಅವರ ನಿವಾಸಕ್ಕೆ ಆಗಮಿಸಿದ ಎನ್‌ಡಿಎ ಉಪಾಧ್ಯಕ್ಷ ಅಭ್ಯರ್ಥಿ ಜಗದೀಪ್ ಧಂಖರ್.
6:17 PM, 6 Aug

93% ಮತದಾನ

ಉಪರಾಷ್ಟ್ರಪತಿ ಚುನಾವಣೆಯಲ್ಲಿ ಸುಮಾರು ಶೇ. 93% ಸಂಸದರು ಮತ ಚಲಾಯಿಸಿದ್ದಾರೆ.
5:31 PM, 6 Aug

7 ಗಂಟೆ ಹೊತ್ತಿಗೆ ಫಲಿತಾಂಶ

ಉಪರಾಷ್ಟ್ರಪತಿ ಚುನಾವಣೆಗೆ ಮತದಾನ ಮುಗಿದಿದ್ದು, ಶೀಘ್ರದಲ್ಲೇ ಮತ ಎಣಿಕೆಯೂ ಆರಂಭವಾಗಲಿದೆ. ಸುಮಾರು 7 ಗಂಟೆಗೆ ಫಲಿತಾಂಶ ಹೊರ ಬೀಳುವ ಸಾಧ್ಯತೆ ಹೆಚ್ಚಿದೆ.
5:26 PM, 6 Aug

725 ಮಂದಿ ಸಂಸದರಿಂದ ಮತ ಚಲಾವಣೆ

ಭಾರತದ ಎರಡನೇ ಅತ್ಯುನ್ನತ ಪ್ರಜೆ ಉಪರಾಷ್ಟ್ರಪತಿ ಚುನಾವಣೆಯಲ್ಲಿ 780 ಸಂಸದರಲ್ಲಿ 725 ಮಂದಿ ಮತ ಚಲಾಯಿಸಿದ್ದಾರೆ.
5:02 PM, 6 Aug

ಮತದಾನ ಮುಕ್ತಾಯ

ಭಾರತದ ಉಪರಾಷ್ಟ್ರಪತಿ ಚುನಾವಣೆಗೆ ಮತದಾನ 5 ಗಂಟೆಗೆ ಮುಕ್ತಾಯಗೊಂಡಿದ್ದು, ಶೀಘ್ರವೇ ಮತ ಎಣಿಕೆ ಆರಂಭಗೊಳ್ಳಲಿದೆ.
4:04 PM, 6 Aug

ಈಗ ಮತದಾನ ಮುಗಿಯಲು ಒಂದು ಗಂಟೆ ಬಾಕಿ ಉಳಿದಿದ್ದು, ಬಳಿಕ ಮತ ಎಣಿಕೆ ನಡೆಯಲಿದೆ.
3:29 PM, 6 Aug

ಉಪರಾಷ್ಟ್ರಪತಿ ಚುನಾವಣೆ ಮುಗಿಯಲು ಒಂದುವರೆ ಗಂಟೆ ಬಾಕಿ ಇದೆ. ಸಂಜೆ 5ರವರೆಗೆ ಮತದಾನ ನಡೆಯಲಿದೆ.
3:28 PM, 6 Aug

'ನಾನು ವಿವರಗಳಿಗೆ ಹೋಗಲು ಬಯಸುವುದಿಲ್ಲ, ನಮ್ಮ ಅಭ್ಯರ್ಥಿ (ಉಪಾಧ್ಯಕ್ಷ) ಜಗದೀಪ್ ಧನಕರ್ ಅವರು ದಾಖಲೆಯ ಅಂತರದಿಂದ ಗೆಲ್ಲುತ್ತಾರೆ' ಎಂದು ಮಾತ್ರ ಹೇಳಬಲ್ಲೆ ಎಂದು ಕೇಂದ್ರ ಸಂಸದೀಯ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.
3:24 PM, 6 Aug

ಮಧ್ಯಾಹ್ನ 2 ಗಂಟೆಯವರೆಗೆ 85%ಕ್ಕಿಂತ ಹೆಚ್ಚು ಮತದಾನ

ಉಪರಾಷ್ಟ್ರಪತಿ ಚುನಾವಣೆಯಲ್ಲಿ ಮಧ್ಯಾಹ್ನ 2 ಗಂಟೆಯವರೆಗೆ ಶೇಕಡಾ 85 ಕ್ಕೂ ಹೆಚ್ಚು ಮತಗಳು ಚಲಾವಣೆಯಾಗಿವೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಹಿಂದಿನ ಮನಮೋಹನ್ ಸಿಂಗ್ ಅವರು ದಿನದ ಆರಂಭದಲ್ಲಿ ಮತದಾನ ಮಾಡಿದರು ಎಂದು ಅಧಿಕಾರಿಗಳು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ. ಉಭಯ ಸದನಗಳಲ್ಲಿರುವ 780 ಸಂಸದರ ಪೈಕಿ ಎಂಟು ರಾಜ್ಯಸಭಾ ಸ್ಥಾನಗಳು ಖಾಲಿ ಇವೆ. ಅವರಲ್ಲಿ ಸುಮಾರು 670 ಮಂದಿ ಇದುವರೆಗೆ ಮತ ಚಲಾಯಿಸಿದ್ದಾರೆ ಎಂದು ಅವರು ಹೇಳಿದರು.
3:21 PM, 6 Aug

ಉಪರಾಷ್ಟ್ರಪತಿ ಚುನಾವಣೆಗೆ ಮತ ಚಲಾಯಿಸಿದ ಕಿರಣ್ ರಿಜಿಜು

"ನನ್ನ ಸಂಪೂರ್ಣ ಸವಲತ್ತು ಮತ್ತು ಸಾಂವಿಧಾನಿಕ ಜವಾಬ್ದಾರಿಯನ್ನು ನಿರ್ವಹಿಸಿದ್ದೇನೆ. ಉಪರಾಷ್ಟ್ರಪತಿ ಚುನಾವಣೆಯಲ್ಲಿ ಸಂಸತ್ ಭವನದಲ್ಲಿ ಮತ ಚಲಾಯಿಸಿದ್ದೇನೆ" ಎಂದು ಕಾನೂನು ಸಚಿವ ಕಿರಣ್ ರಿಜಿಜು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
2:23 PM, 6 Aug

ಭಾರತದ ಮುಂದಿನ ಉಪರಾಷ್ಟ್ರಪತಿಯನ್ನು ಆಯ್ಕೆ ಮಾಡುವ ಮತದಾನದಲ್ಲಿ ತಮ್ಮ ಪಕ್ಷ ಎನ್‌ಡಿಎ ನಾಮನಿರ್ದೇಶಿತ ಜಗದೀಪ್ ಧನಕರ್ ಅವರನ್ನು ಬೆಂಬಲಿಸಿದೆ ಎಂದು ಶಿರೋಮಣಿ ಅಕಾಲಿದಳದ ಮುಖ್ಯಸ್ಥ ಸುಖಬೀರ್ ಸಿಂಗ್ ಬಾದಲ್ ಶನಿವಾರ ಹೇಳಿದ್ದಾರೆ.
2:22 PM, 6 Aug

ಉಪರಾಷ್ಟ್ರಪತಿ ಚುನಾವಣೆಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ ಸಂಸತ್ ಭವನದಲ್ಲಿ ಮತ ಚಲಾಯಿಸಿದರು. ಜೊತೆಗೆ ಬಿಜೆಪಿ ಸಂಸದೆ ಪೂನಂ ಮಹಾಜನ್ ನವದೆಹಲಿಯ ಸಂಸತ್ ಭವನದಲ್ಲಿ ಉಪರಾಷ್ಟ್ರಪತಿ ಆಯ್ಕೆಗೆ ಮತ ಚಲಾಯಿಸಿದರು.
2:12 PM, 6 Aug

ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ವಿ-ಪಿ ಚುನಾವಣೆಗೆ ಮತ ಚಲಾಯಿಸಿದರು.
2:11 PM, 6 Aug

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಮತ ಚಲಾಯಿಸಿದರು.
2:10 PM, 6 Aug

ಕಾಂಗ್ರೆಸ್ ಸಂಸದರಾದ ಶಶಿ ತರೂರ್, ಜೈರಾಮ್ ರಮೇಶ್, ಮಲ್ಲಿಕಾರ್ಜುನ ಖರ್ಗೆ, ಅಧೀರ್ ರಂಜನ್ ಚೌಧರಿ ಮತ್ತು ಕೆ ಸುರೇಶ್ ಮತ ಚಲಾಯಿಸಿದರು.
1:19 PM, 6 Aug

ಉಪರಾಷ್ಟ್ರಪತಿ ಚುನಾವಣೆ: ಮತ ಚಲಾಯಿಸಿದ ಎಎಪಿ ಸಂಸದರು

ಎಎಪಿ ಸಂಸದರಾದ ಹರ್ಭಜನ್ ಸಿಂಗ್ ಮತ್ತು ಸಂಜಯ್ ಸಿಂಗ್, ಡಿಎಂಕೆ ಸಂಸದ ಕನಿಮೋಳಿ ಮತ್ತು ಬಿಜೆಪಿ ಸಂಸದ ರವಿ ಕಿಶನ್ ಉಪರಾಷ್ಟ್ರಪತಿ ಚುನಾವಣೆಗೆ ಮತ ಚಲಾಯಿಸಿದರು.
1:15 PM, 6 Aug

ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಮತ್ತು ಸಂಸದೆ ಸೋನಿಯಾ ಗಾಂಧಿ ಅವರು ದೆಹಲಿಯ ಸಂಸತ್ತಿನಲ್ಲಿ ಉಪ ರಾಷ್ಟ್ರಪತಿ ಚುನಾವಣೆಗೆ ಮತ ಚಲಾಯಿಸಿದರು.
READ MORE

English summary
Indian Vice President Election 2022 Voting and Result LIVE Updates in kannada: Get all the updates on competition between NDA's Jagdeep Dhankhar vs Opposition's Margaret Alva.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X