Panipuri Business: ಲಂಡನ್‌ನಲ್ಲಿ ಪಾನಿಪುರಿ ಮಾರಿ ತಿಂಗಳಿಗೆ ಕೋಟಿ.. ಕೋಟಿ ಸಂಪಾದಿಸುತ್ತಿರುವ ಬೆಂಗಳೂರು ಟೆಕ್ಕಿ ದಂಪತಿ
Panipuri Business: ಭಾರತದ ಬಹುತೇಕ ನಗರಗಳಲ್ಲಿ ಪಾನಿಪುರಿ ಪ್ರಸಿದ್ಧ ಚಾಟ್ಸ್‌ನಲ್ಲಿ ಒಂದಾಗಿದೆ. ಇದಕ್ಕೆ ವಿದೇಶಗಳಲ್ಲೂ ಕೂಡ ಹೆಚ್ಚಿನ ಬೇಡಿಗೆ ಇದೆ. ಇದನ್ನು ಗಮನಿಸಿಯೇ ಕರ್ನಾಟಕದ ಬೆಂಗಳೂರು ಟೆಕ್ಕಿ ದಂಪತಿಯೊಂದು ಲಂಡನ್‌ನಲ್ಲಿ ಪಾನಿಪುರಿ ಮಾರಾಟಕ್ಕೆ ಇಳಿದು ತಿಂಗಳಿಗೆ ಕೋಟಿ.. ಕೋಟಿ.. ರೂಪಾಯಿ ಹಣ ಸಂಪಾದನೆ ಮಾಡುತ್ತಿದೆ. ಹಾಗಾದ್ರೆ ಅಲ್ಲಿ ಒಂದು ಪ್ಲೇಟ್‌ಗೆ ಎಷ್ಟು ದರ ಇದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಸಾಮಾನ್ಯವಾಗಿ ಭಾರತದ ನಗರಗಳಲ್ಲಿ ಒಂದು ಪ್ಲೇಟ್ ಪಾನಿಪುರಿಗೆ 30-60 ರೂಪಾಯಿವರೆಗೂ ಪಡೆಯುತ್ತಾರೆ. ಆದರೆ, ಲಂಡನ್‌ನಲ್ಲಿ ಮಾತ್ರ 1,000 ರೂಪಾಯಿಗೂ ಅಧಿಕ ಹಣ ಪಡೆಯಲಾಗುತ್ತದೆ. ಇದನ್ನು ಗಮನಿಸಿಯೇ ಕರ್ನಾಟಕದ ಬೆಂಗಳೂರಿನಲ್ಲಿ ದಂಪತಿಯೊಂದು ಇಂಜಿನಿಯರಿಂಗ್ ಉದ್ಯೋಗ ತ್ಯಜಿಸಿ ಲಂಡನ್‌ಲ್ಲಿ ಪಾನಿಪುರಿ ಮಾರಾಟ ಉದ್ಯಮಕ್ಕೆ ಇಳಿದಿದೆ. ಈ ಮೂಲಕ ತಿಂಗಳಿಗೆ ಕೋಟಿ ಲೆಕ್ಕದಲ್ಲಿ ಕೈತುಂಬಾ ಹಣ ಸಂಪಾದನೆ ಮಾಡುತ್ತಿದ್ದಾರೆ ಎನ್ನುವ ಅಚ್ಚರಿ ಮಾಹಿತಿಯೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.

ಯಶಸ್ಸಿನ ದಾರಿ ಹಿಡಿದ ಟೆಕ್ಕಿ ದಂಪತಿ: ಭಾರತದಲ್ಲಿ ಅಷ್ಟೇ ಅಲ್ಲದೆ ವಿದೇಶಗಳಲ್ಲೂ ಪಾನಿಪುರಿಗೆ ಭಾರೀ ಬೇಡಿಕೆ ಇದೆ. ಇದನ್ನು ಸರಿಯಾಗಿ ಬಳಸಿಕೊಂಡು ಲಂಡನ್‌ನಲ್ಲಿ ನೆಲೆಸಿರುವ ಭಾರತೀಯ ಮೂಲದ ಟೆಕ್ಕಿ ದಂಪತಿ ಹೊಸ ಉದ್ಯಮ ಆರಂಭಿಸಿ ಯಶಸ್ಸಿನ ದಾರಿಯಲ್ಲಿ ಸಾಗುತ್ತಿದ್ದಾರೆ. ಇದೇ ವಿಚಾರ ಇದೀಗ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಗದ್ದಲ ಮಾಡುತ್ತಿದೆ.
ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದ ಅಂಕಿತಾ ಅವರು ಉತ್ತರ ಪ್ರದೇಶ ಮೂಲದ ಅಮನ್ ಕೃಷ್ಣ ಅವರನ್ನು ವಿವಾಹವಾಗಿದ್ದರು. ಕೆಲ ವರ್ಷಗಳ ಹಿಂದೆ ಅಮನ್ ಅವರಿಗೆ ಲಂಡನ್‌ನಿಂದ ಡೇಟಾ ಸೈಂಟಿಸ್ಟ್ ಉದ್ಯೋಗ ಆಫರ್ ಬಂದ ಹಿನ್ನೆಲೆ ದಂಪತಿ ಲಂಡನ್‌ಗೆ ಪ್ರಯಾಣ ಬೆಳೆಸಿದರು. ಅಂಕಿತಾ ಸಹ ಬೆಂಗಳೂರಿನಲ್ಲಿನ ತಮ್ಮ ಉದ್ಯೋಗವನ್ನು ತ್ಯಜಿಸಿ ಪತಿಯ ಜೊತೆಗೆ ಹೊಸ ಜೀವನ ಆರಂಭಿಸಿದರು.
ಪತ್ನಿ ಸ್ವಂತ ಉದ್ಯಮದ ಬೆಂಬಲಕ್ಕೆ ನಿಂತ ಪತಿ: ಲಂಡನ್‌ನಲ್ಲಿ ಹೊಸ ಉದ್ಯೋಗ ಹುಡುಕುವ ಅವಕಾಶ ಇದ್ದರೂ, ಅಂಕಿತಾಗೆ ಸ್ವಂತವಾಗಿ ಏನಾದರೂ ಮಾಡಬೇಕು ಎಂಬ ಹಠ ಹೆಚ್ಚಾಯಿತು. ಭಾರತದಲ್ಲಿ ಇದ್ದಾಗಲೇ ಪಾನಿಪೂರಿ ಹಾಗೂ ಚಾಟ್ಸ್ ತಯಾರಿಸುವುದರಲ್ಲಿ ಆಸಕ್ತಿ ಹೊಂದಿದ್ದ ಅಂಕಿತಾ, ಅದನ್ನೇ ಉದ್ಯಮವಾಗಿ ರೂಪಿಸೋಣ ಎಂಬ ನಿರ್ಧಾರ ಕೈಗೊಂಡರು. ಆರಂಭದಲ್ಲಿ ಪತಿ ಅಮನ್ ಅವರಿಗೆ ಈ ಆಲೋಚನೆ ಅಚ್ಚರಿಯಾಗಿದ್ದರೂ, ಬಳಿಕ ಪತ್ನಿಯ ನಿರ್ಧಾರಕ್ಕೆ ಬೆಂಬಲವಾಗಿ ನಿಂತರು.
ಮೊದಲು ಲಂಡನ್‌ನಲ್ಲಿರುವ ತಮ್ಮ ಸ್ನೇಹಿತರು ಹಾಗೂ ಪರಿಚಿತರಿಗೆ ಪಾನಿಪುರಿ, ದಹಿ ಪೂರಿ, ಡೋಲಿ ಕಡಿ ಸೇರಿದಂತೆ ಹಲವು ಭಾರತೀಯ ಚಾಟ್ಸ್ ತಯಾರಿಸಿ ಪೂರೈಕೆ ಮಾಡಲಾರಂಭಿಸಿದರು. ಅಂಕಿತಾ ತಯಾರಿಸಿದ ಚಾಟ್ಸ್ ರುಚಿಗೆ ಉತ್ತಮ ಪ್ರತಿಕ್ರಿಯೆ ದೊರೆಯಿತು. ಬೇಡಿಕೆ ಹೆಚ್ಚಾಗುತ್ತಿದ್ದಂತೆ ದಂಪತಿ ಲಂಡನ್‌ನ ಪ್ರತಿಷ್ಠಿತ ಪ್ರದೇಶದಲ್ಲಿ "ದಿ ಬೌಜಿ ಕ್ಲಬ್" ಎಂಬ ಹೆಸರಿನ ರೆಸ್ಟೋರೆಂಟ್ ಅನ್ನು ಆರಂಭಿಸಿದರು.
ಈ ರೆಸ್ಟೋರೆಂಟ್‌ನಲ್ಲಿ ಪಾನಿಪುರಿ ಸೇರಿದಂತೆ 7 ಬಗೆಯ ಚಾಟ್ಸ್ ಪ್ಲೇಟರ್‌ಗೆ ಸುಮಾರು 6,000 ರೂಪಾಯಿ ಬೆಲೆ ಇದೆ. ಆದರೂ ಲಂಡನ್‌ನಲ್ಲಿ ಭಾರತೀಯ ರುಚಿಯ ಚಾಟ್ಸ್ ಅಪರೂಪ ಆಗಿರುವುದರಿಂದ, ಭಾರತೀಯ ಸಮುದಾಯದವರಲ್ಲಿ ಈ ರೆಸ್ಟೋರೆಂಟ್‌ಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕೆಲವೇ ತಿಂಗಳಲ್ಲಿ ಈ ರೆಸ್ಟೋರೆಂಟ್‌ಗೆ ಉತ್ತಮ ಆದಾಯ ಹರಿದುಬರಲು ಆರಂಭವಾಯಿತು. ಆಗಿನಿಂದಲೂ ಇವರ ಈ ಉದ್ಯಮ ದೊಟ್ಟ ಮಟ್ಟದಲ್ಲಿ ಬೆಳಯುತ್ತಲಿದೆ. ಈ ಉದ್ಯಮ ಕ್ಷೇತ್ರಕ್ಕೆ ಹೆಜ್ಜೆ ಇಟ್ಟ ದಂಪತಿಯ ಯಶೋಗಾಥೆ ಅನೇಕರಿಗೆ ಪ್ರೇರಣೆಯಾಗಿದೆ ಎನ್ನಲಾಗುತ್ತಿದೆ.












Click it and Unblock the Notifications