24 ಗಂಟೆಯಲ್ಲಿ 93,249 ಹೊಸ ಕೋವಿಡ್ ಪ್ರಕರಣ ದಾಖಲು
ನವದೆಹಲಿ, ಏಪ್ರಿಲ್ 4; ವಿವಿಧ ರಾಜ್ಯಗಳಲ್ಲಿ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಭಾರತದಲ್ಲಿ 24 ಗಂಟೆಯಲ್ಲಿ 93,249 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. 513 ಜನರು ಮೃತಪಟ್ಟಿದ್ದಾರೆ.
ಕೇಂದ್ರ ಆರೋಗ್ಯ ಸಚಿವಾಲಯ ಹೆಲ್ತ್ ಬುಲೆಟಿನ್‌ನಲ್ಲಿ ಈ ಕುರಿತು ಮಾಹಿತಿ ನೀಡಿದೆ. ದೇಶದಲ್ಲಿನ ಒಟ್ಟು ಪ್ರಕರಣಗಳ ಸಂಖ್ಯೆ 1,24,85,509ಕ್ಕೆ ಏರಿಕೆಯಾಗಿದೆ. ದೇಶದಲ್ಲಿನ ಸಕ್ರಿಯ ಪ್ರಕರಣಗಳ ಸಂಖ್ಯೆ 6,91,597.

ಕಳೆದ 24 ಗಂಟೆಯಲ್ಲಿ 513 ಜನರು ಮೃತಪಟ್ಟಿದ್ದು, ಇದುವರೆಗೂ ಒಟ್ಟು ಮೃತಪಟ್ಟವರು 1,64,623. 24 ಗಂಟೆಯಲ್ಲಿ 60,048 ಜನರು ಗುಣಮುಖರಾಗಿದ್ದಾರೆ. ಒಟ್ಟು ಗುಣಮುಖಗೊಂಡವರ ಸಂಖ್ಯೆ 1,16,29,289.
ಭಾರತದಲ್ಲಿ ಏಪ್ರಿಲ್ 3ರ ತನಕ 24,81,25,908 ಮಾದರಿಗಳ ಪರೀಕ್ಷೆಗಳನ್ನು ಮಾಡಲಾಗಿದೆ. ಏಪ್ರಿಲ್ 3ರ ಶನಿವಾರ 11,66,716 ಮಾದರಿಗಳ ಪರೀಕ್ಷೆಗಳನ್ನು ಮಾಡಲಾಗಿದೆ ಎಂದು ಐಸಿಎಂಆರ್ ಹೇಳಿದೆ.
ಯಾವ ರಾಜ್ಯದಲ್ಲಿ ಎಷ್ಟು?; ಶನಿವಾರ ಮಹಾರಾಷ್ಟ್ರದಲ್ಲಿ 49,447, ಕೇರಳದಲ್ಲಿ 2,541, ಕರ್ನಾಟಕದಲ್ಲಿ 4,373, ಆಂಧ್ರ ಪ್ರದೇಶದಲ್ಲಿ1,398 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ.
ಮಹಾರಾಷ್ಟ್ರದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 29,53,523, ಸಕ್ರಿಯ ಪ್ರಕರಣಗಳು 4,01,172. ಕೇರಳದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 11,32,432, ಸಕ್ರಿಯ ಪ್ರಕರಣಗಳು 27,272.












Click it and Unblock the Notifications