ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಮಾಯಣ ಎಕ್ಸ್‌ಪ್ರೆಸ್‌ ಸಿಬ್ಬಂದಿಯ ಕೇಸರಿ ಉಡುಪು ಬದಲಾವಣೆ

|
Google Oneindia Kannada News

ಭೋಪಾಲ್, ನವೆಂಬರ್ 23: ರಾಮಾಯಣ ಎಕ್ಸ್‌ಪ್ರೆಸ್‌ನಲ್ಲಿ ವೇಟರ್‌ಗಳಿಗೆ ಕೇಸರಿ ಉಡುಪನ್ನು ಸಮವಸ್ತ್ರವಾಗಿ ನೀಡಿರುವ ಬಗ್ಗೆ ಉಜ್ಜಯಿನಿಯ ದಾರ್ಶನಿಕರು ಆಕ್ಷೇಪ ವ್ಯಕ್ತಪಡಿಸಿದ ಕೆಲವೇ ಗಂಟೆಗಳಲ್ಲಿ ಭಾರತೀಯ ರೈಲ್ವೇ ಸೋಮವಾರ ತಮ್ಮ ಸಿಬ್ಬಂದಿಯ ಸಮವಸ್ತ್ರವನ್ನು ಬದಲಾಯಿಸಿದೆ.

"ಸೇವಾ ಸಿಬ್ಬಂದಿಗೆ ವೃತ್ತಿಪರ ಉಡುಪನ್ನು ನೀಡಲಾಗಿದ್ದು, ಸಿಬ್ಬಂದಿಯ ಉಡುಗೆಯನ್ನು ಸಂಪೂರ್ಣವಾಗಿ ಬದಲಾಯಿಸಲಾಗಿದೆ ಎಂದು ತಿಳಿಸುತ್ತಿದ್ದೇವೆ. ಸಾರ್ವಜನಿಕರಿಗೆ ಉಂಟಾದ ಅನನುಕೂಲತೆಗಾಗಿ ನಾವು ವಿಷಾದಿಸುತ್ತೇವೆ," ಎಂದು ಭಾರತೀಯ ರೈಲ್ವೆ ಹೇಳಿಕೆಯಲ್ಲಿ ತಿಳಿಸಿದೆ.

ವಿವಾದ ಎಬ್ಬಿಸಿದ ರಾಮಾಯಣ ಎಕ್ಸ್‌ಪ್ರೆಸ್ ವೈಟರ್‌ಗಳ ಧಿರಿಸು! ವಿವಾದ ಎಬ್ಬಿಸಿದ ರಾಮಾಯಣ ಎಕ್ಸ್‌ಪ್ರೆಸ್ ವೈಟರ್‌ಗಳ ಧಿರಿಸು!

ರಾಮಾಯಣ ಎಕ್ಸ್ ಪ್ರೆಸ್ ರೈಲಿನಲ್ಲಿ ಸೇವಾ ಸಿಬ್ಬಂದಿಗೆ ಕೇಸರಿ ಉಡುಪನ್ನು ನೀಡಿರುವ ಬಗ್ಗೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದರು. ಇದು ಹಿಂದೂ ಧರ್ಮಕ್ಕೆ ಮಾಡಿದ ಅವಮಾನ ಎಂದು ಆಕ್ಷೇಪಿಸಿದ ಬೆನ್ನಲ್ಲೇ ಈ ಡ್ರೆಸ್ ಕೋಡ್ ಹಿಂಪಡೆಯದಿದ್ದರೆ ಡಿಸೆಂಬರ್ 12ರಂದು ದೆಹಲಿಯಲ್ಲಿ ರೈಲನ್ನು ತಡೆದು ನಿಲ್ಲಿಸುವುದಾಗಿ ಬೆದರಿಕೆ ಹಾಕಿದ್ದರು.

ಎರಡು ದಿನಗಳ ಹಿಂದೆ ರೈಲ್ವೆ ಸಚಿವರಿಗೆ ಪತ್ರ

ಎರಡು ದಿನಗಳ ಹಿಂದೆ ರೈಲ್ವೆ ಸಚಿವರಿಗೆ ಪತ್ರ

"ರಾಮಾಯಣ ಎಕ್ಸ್‌ಪ್ರೆಸ್‌ನಲ್ಲಿ ವೇಟರ್‌ಗಳು ಉಪಾಹಾರ ಮತ್ತು ಆಹಾರವನ್ನು ನೀಡುತ್ತಿರುವ ಸಿಬ್ಬಂದಿಗೆ ಕೇಸರಿ ಬಟ್ಟೆಯನ್ನು ಸಮವಸ್ತ್ರವಾಗಿ ನೀಡಿರುವುದರ ವಿರುದ್ಧ ಪ್ರತಿಭಟನೆ ನಡೆಸುವ ಬಗ್ಗೆ ಎಚ್ಚರಿಸಲಾಗಿತ್ತು. ಈ ಬಗ್ಗೆ ಎರಡು ದಿನಗಳ ಹಿಂದೆ ಕೇಂದ್ರ ರೈಲ್ವೆ ಸಚಿವರಿಗೆ ಪತ್ರ ಬರೆದಿದ್ದೇವೆ," ಎಂದು ಉಜ್ಜಯಿನಿ ಅಖಾಡ ಪರಿಷತ್ತಿನ ಮಾಜಿ ಪ್ರಧಾನ ಕಾರ್ಯದರ್ಶಿ ಅವದೇಶಪುರಿ ಹೇಳಿದ್ದಾರೆ.

ರುದ್ರಾಕ್ಷಿ ಮಾಲೆ ಧರಿಸುವ ಮೂಲಕ ಅವಮಾನ

ರುದ್ರಾಕ್ಷಿ ಮಾಲೆ ಧರಿಸುವ ಮೂಲಕ ಅವಮಾನ

"ರಾಮಾಯಣ ಎಕ್ಸ್‌ಪ್ರೆಸ್‌ನಲ್ಲಿ ಇಲಾಖೆಯ ಸಿಬ್ಬಂದಿಯು ಸಾಧುವಿನಂತಹ ಶಿರಸ್ತ್ರಾಣದೊಂದಿಗೆ ಕೇಸರಿ ಉಡುಪನ್ನು ಧರಿಸುವುದು. 'ರುದ್ರಾಕ್ಷ' (ಪವಿತ್ರ ಬೀಜಗಳು) 'ಮಾಲೆ' (ಹಾರ) ಧರಿಸುವುದು ಹಿಂದೂ ಧರ್ಮ ಮತ್ತು ಅದರ ದಾರ್ಶನಿಕರಿಗೆ ಮಾಡಿದ ಅವಮಾನ ಆಗಿರುತ್ತದೆ," ಎಂದು ಉಜ್ಜಯಿನಿ ಅಖಾಡ ಪರಿಷತ್ತಿನ ಮಾಜಿ ಪ್ರಧಾನ ಕಾರ್ಯದರ್ಶಿ ಅವದೇಶಪುರಿ ಆರೋಪಿಸಿದ್ದಾರೆ. ವೇಟರ್‌ಗಳ ಕೇಸರಿ ಡ್ರೆಸ್ ಕೋಡ್ ಅನ್ನು ಬದಲಾಯಿಸದಿದ್ದರೆ ದೆಹಲಿಯ ಸಫ್ದರ್‌ಜಂಗ್ ರೈಲು ನಿಲ್ದಾಣದಲ್ಲಿ ರೈಲನ್ನು ನಿಲ್ಲಿಸುವುದಾಗಿ ಅವರು ಹೇಳಿದರು. ಹಿಂದೂ ಧರ್ಮದ ರಕ್ಷಣೆಗೆ ಇದು ಅಗತ್ಯ ಎಂದು ತಿಳಿಸಿದ್ದರು.

ಸಿಬ್ಬಂದಿ ಉಡುಪು ಬದಲಿಸಿದ ಕುರಿತು ರೈಲ್ವೆ ಇಲಾಖೆ ಸ್ಪಷ್ಟನೆ

ಸಿಬ್ಬಂದಿ ಉಡುಪು ಬದಲಿಸಿದ ಕುರಿತು ರೈಲ್ವೆ ಇಲಾಖೆ ಸ್ಪಷ್ಟನೆ

ಭಾರತೀಯ ರೈಲ್ವೇ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ (IRCTC), ಈ ಏಜೆನ್ಸಿ ವರದಿಯನ್ನು ನಡೆಸಿದ ಮಾಧ್ಯಮದ ಔಟ್‌ಲೆಟ್‌ಗೆ ಮರುಟ್ವೀಟ್ ಮಾಡಿದೆ. "ರೈಲಿನ ಸೇವಾ ಸಿಬ್ಬಂದಿಗೆ ವೃತ್ತಿಪರ ಉಡುಪನ್ನು ನೀಡಲಾಗಿದ್ದು, ಸೇವಾ ಸಿಬ್ಬಂದಿಯ ಉಡುಗೆಯನ್ನು ಸಂಪೂರ್ಣವಾಗಿ ಬದಲಾಯಿಸಲಾಗಿದೆ, ಎಂದು ತಿಳಿಸಿದೆ. ಉಡುಗೆ ಬದಲಾವಣೆಯ IRCTC ಪ್ರಕಟಣೆಯ ಕುರಿತು ಅವದೇಶಪುರಿ ಸಂತಸ ವ್ಯಕ್ತಪಡಿಸಿದ್ದಾರೆ. "ಇದು (ಹಿಂದೂ) ಧರ್ಮ ಮತ್ತು 'ಸಂಸ್ಕೃತಿ' (ಸಂಸ್ಕೃತಿಯ) ವಿಜಯವಾಗಿದೆ." ಹಿಂದೂ ಧರ್ಮದ ವಿಷಯ ಬಂದಾಗ ಸಮಸ್ಯೆಯನ್ನು ಎತ್ತಿ ತೋರುವುದು ತಮ್ಮ ಕರ್ತವ್ಯ ಎಂದು ಅವರು ಹೇಳಿದ್ದಾರೆ.

7,500 ಕಿ.ಮೀ ಸಂಚರಿಸುವ ರಾಮಾಯಣ ಎಕ್ಸ್‌ಪ್ರೆಸ್‌ ರೈಲು

7,500 ಕಿ.ಮೀ ಸಂಚರಿಸುವ ರಾಮಾಯಣ ಎಕ್ಸ್‌ಪ್ರೆಸ್‌ ರೈಲು

ಶಿವನ ಪ್ರಸಿದ್ಧ ಶ್ರೀ ಮಹಾಕಾಳೇಶ್ವರ ದೇವಾಲಯವಿರುವ ಉಜ್ಜಯಿನಿ ನಗರವು ಪ್ರತಿ 12 ವರ್ಷಗಳಿಗೊಮ್ಮೆ ಸಿಂಹಸ್ಥ ಕುಂಭಮೇಳವನ್ನು ಆಯೋಜಿಸುತ್ತದೆ. ಇದೇ ಮಾರ್ಗದಲ್ಲಿ ದೇಶದ ಮೊದಲ ರಾಮಾಯಣ ಸರ್ಕ್ಯೂಟ್ ರೈಲು ನವೆಂಬರ್ 7ರಂದು ಸಫ್ದರ್‌ಜಂಗ್ ರೈಲು ನಿಲ್ದಾಣದಿಂದ 17 ದಿನಗಳ ಪ್ರಯಾಣವನ್ನು ಪ್ರಾರಂಭಿವಾಗಿದೆ. ಶ್ರೀರಾಮನ ಜೀವನಕ್ಕೆ ಸಂಬಂಧಿಸಿದ 15 ಸ್ಥಳಗಳ ಮಾರ್ಗದಲ್ಲಿ ಈ ರೈಲು ಸಂಚರಿಸಲಿದೆ. 7,500 ಕಿ.ಮೀ.ಗೂ ಹೆಚ್ಚು ದೂರವನ್ನು ಕ್ರಮಿಸುವ ಈ ರೈಲು ಯಾತ್ರಾರ್ಥಿಗಳನ್ನು ಅಯೋಧ್ಯೆ, ಪ್ರಯಾಗ್‌ರಾಜ್, ನಂದಿಗ್ರಾಮ, ಜನಕಪುರ, ಚಿತ್ರಕೂಟ, ಸೀತಾಮರ್ಹಿ, ನಾಸಿಕ್, ಹಂಪಿ ಮತ್ತು ರಾಮೇಶ್ವರಂ ಮುಂತಾದ ಸ್ಥಳಗಳ ದರ್ಶನ ಮಾಡಿಸುತ್ತದೆ.

Recommended Video

ಕಡೇ ಓವರ್ನಲ್ಲಿ Deepak chahar ಸಿಡಿಸಿದ್ದು ಎಷ್ಟು ಗೊತ್ತಾ | Oneindia Kannada

English summary
Indian Railways Withdraws Dress Code For Ramayan Express Staff. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X