Specail Trains: ಗಣೇಶಕ್ಕೆ ಹಬ್ಬಕ್ಕೆ ದೇಶಾದ್ಯಂತ 380 ರೈಲು ಟ್ರಿಪ್ ಸಂಚಾರ! ಮಾರ್ಗಗಳು, ವೇಳಾಪಟ್ಟಿ
Indian Railways: ಪ್ರಸ್ತ ವರ್ಷದ ಗೌರಿ-ಗಣೇಶ ಹಬ್ಬದ ಸಂಬಂಧ ಊರುಗಳಿಗೆ ತೆರಳುವವರಿಗೆ ಅನುಕೂಲವಾಗಲೆಂದು ಭಾರತ ದೇಶಾದ್ಯಂತ ರೈಲ್ವೆ ಇಲಾಖೆಯು ವಿಶೇಷ ರೈಲು ಕಾರ್ಯಾಚರಣೆ ಆರಂಭಿಸಿದೆ. ಈ ರೈಲುಗಳು ನಿಗದಿತ ಪ್ರಯಾಣ (ಟ್ರಿಪ್) ಸೇವೆಗಳನ್ನು ಒದಗಿಸುತ್ತಿವೆ. ಪ್ರಯಾಣ ಸುಲಭವಾಗಿಸಲು, ಸಂಚಾರ ಕಿರಿಕಿರಿ ತಡೆಯಲು ರೈಲ್ವೆ ಇಲಾಖೆ ಯೋಜಿಸಿದೆ.
ಮಹಾರಾಷ್ಟ್ರದಿಂದ ಕೊಂಕಣ ಪ್ರದೇಶ ಮತ್ತು ಅದರಾಚೆಗೂ ಸುಗಮ ರೈಲು ಸೇವೆ ಲಭ್ಯವಾಗುತ್ತಿದೆ ಎಂದು ರೈಲ್ವೆ ಸಚಿವಾಲಯ ಅಧಿಕೃತ ಮಾಹಿತಿ ನೀಡಿದೆ.
ಈ ವರ್ಷದ ಹಬ್ಬಕ್ಎಕ ಭಾರತೀಯ ರೈಲ್ವೆ ದಾಖಲೆಯ 380 ವಿಶೇಷ ರೈಲು ಪ್ರಯಾಣಗಳನ್ನು (ಟ್ರಿಪ್) ಸಂಚಾರ ಸೇವೆ ಘೋಷಿಸಿದೆ. ದೇಶಾದ್ಯಂತ ಅನೇಕ ಮಾರ್ಗಗಲ್ಲಿ ಈ ಸೇವೆ ಸಿಗಲಿದೆ. ಇಲ್ಲಿರುವ ರೈಲು ನಿಲ್ದಾಣಗಳು, ಮಾರ್ಗ, ನಿಲುಗಡೆ ನೋಡಿಕೊಂಡು ನಿಮ್ಮ ಪ್ರಯಾಣದ ದಿನಾಂಕ ಗೊತ್ತು ಮಾಡಿಕೊಳ್ಳಬಹುದು. ಮುಂಗಡ ಟಿಕೆಟ್ ಬುಕ್ ಸಹ ಮಾಡಿಕೊಳ್ಳಬಹುದು.

ಈ ಹಿಂದಿನ ಮೂರು ವರ್ಷಗಳಲ್ಲಿ ನೋಡಿದರೆ ರೈಲ್ವೆ ಇಲಾಖೆಯು 2023 ರಲ್ಲಿ ಗಣೇಶ ಹಬ್ಬಕ್ಕೆಂದು 305 ರೈಲು ಟ್ರಿಪ್ ಕಾರ್ಯಾಚರಣೆ, 2024 ರಲ್ಲಿ 358 ಇದೀಗ ದಾಖಲೆಯ 380 ಟ್ರಿಪ್ ಪ್ರಯಾಣ ಸೇವೆ ಒದಗಿಸಲು ನಿರ್ಧರಿಸಿದೆ. ಈಗಾಗಲೇ ಮಾರ್ಗವಾರು ರೈಲುಗಳು ಆಗಸ್ಟ್ 27 ರಿಂದ ಸೆಪ್ಟೆಂಬರ್ 6 ರವರೆಗೆ ಸಂಚರಿಸಲಿವೆ. ಕೆಲವೆಡೆ ಇದಕ್ಕು ಮುನ್ನವೇ ಸಂಚಾರ ಆರಂಭವಾಗಿದೆ. ಆಗಸ್ಟ್ 11ರಿಂದಲೇ ಈ ವಿಶೇಷ ರೈಲು ಸೇವೆ ಶುರುವಾಗಿದೆ. ಹಾಗಾದರೆ ಯಾವೆಲ್ಲ ರಾಜ್ಯಗಳು, ಮಾರ್ಗಗಳಲ್ಲಿ ವಿಶೇಷ ರೈಲು ಸಂಚರಿಸುತ್ತವೆ ಎಂಬ ಮಾಹಿತಿ ಇಲ್ಲಿದೆ.
ಕೊಂಕಣ ಪ್ರದೇಶದ ರೈಲು ಮಾರ್ಗದ ಮೂಲಕ ಪ್ರಮುಖ ಪಟ್ಟಣಗಳಲ್ಲಿ ಹಾಸು ಹೋಗುವ ರೈಲು ಕೋಲಾಡ್, ಇಂದಾಪುರ, ಮಂಗಾಂವ್, ಗೋರೆಗಾಂವ್ ರಸ್ತೆ, ವೀರ್, ಸೇಪ್ ವಾಮ್ನೆರ್, ಕಾರಂಜಾಡಿ, ವಿನ್ಹೆರೆ, ದಿವಾಂಖಾವತಿ, ಕಲಂಬನಿ ಬುದ್ರುಕ್, ಖೇಡ್, ಅಂಜನಿ, ಚಿಪ್ಲುನ್, ಕಮಠೆ, ಸವರ್ದ, ರಾಜಪುರ ಅಡಾವಳಿ ರಸ್ತೆ, ಸಂಗಮೇಶ್ವರ್ ಅಡಾವಳಿ ರಸ್ತೆ, ಸಂಗಮೇಶ್ವರ್ ಆರಾವಲಿ ರಸ್ತೆಯಲ್ಲಿ ನಿಲುಗಡೆ ನೀಡುತ್ತಿದೆ.
ವೈಭವವಾಡಿ ರಸ್ತೆ, ನಂದಗಾಂವ ರಸ್ತೆ, ಕಂಕಾವಲಿ, ಸಿಂಧುದುರ್ಗ, ಕುಡಾಲ್, ಝರಪ್, ಸಾವಂತವಾಡಿ ರಸ್ತೆ, ಮಧುರೆ, ತಿವಿಂ, ಕರ್ಮಾಲಿ, ಮಡಗಾಂವ್ ಜೆಎನ್, ಕಾರವಾರ, ಗೋಕಾಮ ರಸ್ತೆ, ಕುಮಟಾ, ಮುರಡೇಶ್ವರ, ಮೂಕಾಂಬಿಕಾ ರಸ್ತೆ, ಕುಂದಾಪುರ, ಉಡುಪಿ, ಮೂಲ್ಕಿ ಮತ್ತು ಸುರತ್ಕಲ್ ಗಳಲ್ಲಿ ಸಹ ನಿಲುಗಡೆ ನೀಡಲಿದೆ.
ಇದರೊಂದಿ ಬೆಂಗಳೂರು, ಕರ್ನಾಟಕ, ಗೋವಾರ, ಮಹಾರಾಷ್ಟ್ರ ಸೇರಿದಂತೆ ವಿವಿಧ ಮಾರ್ಗಗಳಲ್ಲಿ ವಿಶೇಷ ರೈಲುಗಳು ಸೇವೆ ನೀಡುತ್ತಿವೆ. ಪ್ರಯಾಣಿಕರು IRCTC ವೆಬ್‌ಸೈಟ್, ರೈಲ್‌ಒನ್ ಅಪ್ಲಿಕೇಶನ್ ಮತ್ತು ನಿಗದಿತ ಕೌಂಟರ್‌ಗಳಲ್ಲಿ ಟಿಕೆಟ್ ಬುಕ್ಕಿಂಗ್ ಮಾಡಬಹುದು. ಗಣೇಶ್ ಹಬ್ಬ ಹಾಗೂ ದಸರಾ, ದೀಪಾವಳಿವರೆಗೂ ಕೆಲವು ಮಾರ್ಗಗಳಲ್ಲಿ ದೈನಂದಿನ, ಸಾಪ್ತಾಹಿಕ ರೈಲುಗಳ ಕಾರ್ಯಾಚರಣೆ ಮಾಡಲಾಗುತ್ತಿದೆ. ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್‌ಗೆ ಭೇಟಿ ನೀಡಬೇಕು.
ಗಣಪತಿ ವಿಶೇಷ ರೈಲು 380 ಟ್ರಿಪ್, 2025ರ ಪಟ್ಟಿ
*LTT- ಸಾವಂತವಾಡಿ ರಸ್ತೆ -LTT ದೈನಂದಿನ ವಿಶೇಷ (36 ಸೇವೆಗಳು)
*LTT- ಮಡ್ಗಾಂವ್- LTT ಸಾಪ್ತಾಹಿಕ ವಿಶೇಷ (4 ಸೇವೆಗಳು)
*LTT- ಸಾವಂತವಾಡಿ ರಸ್ತೆ -LTT ಸಾಪ್ತಾಹಿಕ ವಿಶೇಷ (6 ಸೇವೆಗಳು)
*CSMT- ಸಾವಂತವಾಡಿ ರಸ್ತೆ -CSMT ದೈನಂದಿನ ವಿಶೇಷ (36 ಸೇವೆಗಳು)
*CSMT- ಸಾವಂತವಾಡಿ ರಸ್ತೆ -CSMT ದೈನಂದಿನ ವಿಶೇಷ (40 ಸೇವೆಗಳು)
*CSMT- ರತ್ನಗಿರಿ -CSMT ದೈನಂದಿನ ವಿಶೇಷ (36 ಸೇವೆಗಳು)
*ದಿವಾ - ಚಿಪ್ಲುನ್-ದಿವಾ MEMU ದೈನಂದಿನ ಕಾಯ್ದಿರಿಸದ ವಿಶೇಷ (38 ಸೇವೆಗಳು)
*LTT- ಸಾವಂತವಾಡಿ ರಸ್ತೆ -LTT ದ್ವೈವಾರಿಕ ವಿಶೇಷ (8 ಸೇವೆಗಳು)
*LTT- ಸಾವಂತವಾಡಿ ರಸ್ತೆ -LTT ದ್ವೈವಾರಿಕ ವಿಶೇಷ (8 ಸೇವೆಗಳು)
*LTT- ಮಡ್ಗಾಂವ್- LTT AC ಸಾಪ್ತಾಹಿಕ ವಿಶೇಷ (6 ಸೇವೆಗಳು)
*ಪುಣೆ-ರತ್ನಗಿರಿ ಸಾಪ್ತಾಹಿಕ ವಿಶೇಷ (6 ಸೇವೆಗಳು)
* ಪುಣೆ-ರತ್ನಗಿರಿ AC ಸಾಪ್ತಾಹಿಕ ವಿಶೇಷ (6 ಸೇವೆಗಳು)
ಪಶ್ಚಿಮ ರೈಲ್ವೆ ಗಣಪತಿ ವಿಶೇಷ ರೈಲು 2025, ಪಟ್ಟಿ
* ಉದ್ನಾ-ರತ್ನಗಿರಿ ಸಾಪ್ತಾಹಿಕ ವಿಶೇಷ ರೈಲು -09022/09021 (6 ಪ್ರವಾಸಗಳು)
* ವಿಶ್ವಮಿತ್ರಿ-ರತ್ನಗಿರಿ ಸಾಪ್ತಾಹಿಕ ವಿಶೇಷ ರೈಲು ಸಂಖ್ಯೆ-09120/09119 (6 ಟ್ರಿಪ್‌ಗಳು)
ಗಣಪತಿ ವಿಶೇಷ ರೈಲುಗಳು 2025 ಕೊಂಕಣ ರೈಲ್ವೆ
* ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು-ಮಡ್ಗಾಂವ್-ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ವಿಶೇಷ ರೈಲು -06569/06570
* ಚಿಪ್ಲುನ್-ಪನ್ವೆಲ್-ಚಿಪ್ಲುನ್ MEMU ಕಾಯ್ದಿರಿಸದ ವಿಶೇಷ ರೈಲು ರೈಲು ಸಂಖ್ಯೆ 01160/01159












Click it and Unblock the Notifications