Get Updates
Get notified of breaking news, exclusive insights, and must-see stories!

Indian Railways: ಗಣೇಶ ಚೌತಿಗೆ 312 ವಿಶೇಷ ರೈಲು- ಮಾಹಿತಿ, ವಿವರ ಪಡೆಯಿರಿ

ಬೆಂಗಳೂರು, ಆಗಸ್ಟ್‌ 25: ಗಣಪತಿ ಹಬ್ಬದ ಮುನ್ನಾದಿನದಂದು ದಟ್ಟಣೆಯನ್ನು ಕಡಿಮೆ ಮಾಡಲು ವಿಶೇಷ ರೈಲುಗಳನ್ನು ಓಡಿಸುವುದಾಗಿ ಭಾರತೀಯ ರೈಲ್ವೇ ಮಾಹಿತಿ ನೀಡಿದೆ. ಈ ಸಂಬಂಧ ಸೆಂಟ್ರಲ್ ರೈಲ್ವೆ ಮತ್ತು ಪಶ್ಚಿಮ ರೈಲ್ವೆ ಜಂಟಿಯಾಗಿ ಗಣಪತಿ ಹಬ್ಬಕ್ಕೆ ಮುನ್ನ 312 ಗಣಪತಿ ವಿಶೇಷ ರೈಲುಗಳನ್ನು ಓಡಿಸುವುದಾಗಿ ತಿಳಿಸಿದೆ.

ಸೆಂಟ್ರಲ್ ರೈಲ್ವೆ 257 ರೈಲುಗಳನ್ನು ನಿರ್ವಹಿಸಿದರೆ, ಪಶ್ಚಿಮ ರೈಲ್ವೆ 55 ಗಣಪತಿ ವಿಶೇಷ ರೈಲುಗಳನ್ನು ಓಡಿಸಲಿದೆ. ಗಮನಾರ್ಹವಾಗಿ, ಈ ರೈಲುಗಳನ್ನು ಮುಂಬೈ ಮತ್ತು ಮಹಾರಾಷ್ಟ್ರದ ಇತರ ನಗರಗಳಿಂದ ಬೇರೆ ರಾಜ್ಯದ ಊರುಗಳಿಗೆ ಓಡಿಸಲಾಗುತ್ತದೆ.

Indian Railways To Run 312 Ganapati Special Trains For Festive Season, Check Details

ಈ ವರ್ಷ ಭಕ್ತಾದಿಗಳ ಪ್ರಯಾಣಕ್ಕೆ ಮೀಸಲಾಗಿರುವ ಒಟ್ಟು 312 ಗಣಪತಿ ವಿಶೇಷ ರೈಲು ಸೇವೆಗಳನ್ನು ನಿರ್ವಹಿಸಲು ರೈಲ್ವೆ ನಿರ್ಧರಿಸಿದೆ. 2022 ರಲ್ಲಿ 294 ವಿಶೇಷ ರೈಲುಗಳನ್ನು ಕೇಂದ್ರ ರೈಲ್ವೆ ಹಾಗೂ 18 ವಿಶೇಷ ರೈಲುಗಳು ಪಶ್ಚಿಮ ರೈಲ್ವೆಯಿಂದ ಓಡಿಸಲಾಗಿತ್ತು ಎಂದು ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.

'ಈ ವರ್ಷ 257 ಗಣಪತಿ ವಿಶೇಷ ರೈಲು ಸೇವೆಗಳನ್ನು ನಿಗದಿಪಡಿಸಲಾಗಿದೆ. ಈ ಉಪಕ್ರಮದಲ್ಲಿ ಕೇಂದ್ರ ರೈಲ್ವೇ ಪ್ರಮುಖ ಪಾತ್ರವನ್ನು ವಹಿಸಲಿದೆ. ಈ ಸಂಖ್ಯೆಯು ಹಿಂದಿನ ವರ್ಷಕ್ಕೆ ಹೋಲಿಸಿದರೆ 18 ರೈಲುಗಳ ಹೆಚ್ಚಳವನ್ನು ಹೊಂದಿದೆ. ಮತ್ತೊಂದೆಡೆ, ಪಶ್ಚಿಮ ರೈಲ್ವೇಯು ಹೆಚ್ಚುವರಿ 55 ರೈಲುಗಳ ಕೊಡುಗೆ ನೀಡುತ್ತಿದೆ. 2023 ರಲ್ಲಿ ಗಣಪತಿ ವಿಶೇಷ ರೈಲುಗಳ ಒಟ್ಟು ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ' ಎಂದು ರೈಲ್ವೆ ಹೇಳಿದೆ.

ಸಾಮಾನ್ಯವಾಗಿ, ಸೆಂಟ್ರಲ್ ರೈಲ್ವೇ ಮತ್ತು ಪಶ್ಚಿಮ ರೈಲ್ವೇ ಗಣಪತಿ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ದಟ್ಟಣೆಯ ಹೆಚ್ಚಳಕ್ಕೆ ಸಾಕ್ಷಿಯಾಗುತ್ತದೆ. ವಿಶೇಷವಾಗಿ ಮುಂಬೈನಿಂದ ದೇಶದ ಇತರ ಭಾಗಗಳಿಗೆ ಸಂಪರ್ಕ ಕಲ್ಪಿಸುವ ರೈಲುಗಳಲ್ಲಿ ದಟ್ಟಣೆ ಹೆಚ್ಚಿರುತ್ತದೆ.

Indian Railways To Run 312 Ganapati Special Trains For Festive Season, Check Details

ಕಳೆದ ವರ್ಷಕ್ಕೆ ಹೋಲಿಸಿದರೆ, ಹಬ್ಬದ ಋತುವಿನಲ್ಲಿ 18 ಹೆಚ್ಚುವರಿ ಗಣಪತಿ ವಿಶೇಷ ರೈಲುಗಳನ್ನು ಓಡಿಸಲಾಗುವುದು ಎಂದು ಕೇಂದ್ರ ರೈಲ್ವೆ ತಿಳಿಸಿದೆ. 2022 ರಲ್ಲಿ ಗಣಪತಿ ಹಬ್ಬದ ಋತುವಿನಲ್ಲಿ ಒಟ್ಟು 294 ವಿಶೇಷ ರೈಲುಗಳನ್ನು ಓಡಿಸಲಾಗಿತ್ತು ಎಂದು ಕೇಂದ್ರ ರೈಲ್ವೆ ಹೇಳಿದೆ.

ಈ ವರ್ಷ ಸುಮಾರು 1.04 ಲಕ್ಷ ಪ್ರಯಾಣಿಕರು ಕಾಯ್ದಿರಿಸಿದ ರೈಲುಗಳಲ್ಲಿ ಪ್ರಯಾಣಿಸಬಹುದು ಎಂದು ಕೇಂದ್ರ ರೈಲ್ವೆ ಅಂದಾಜು ಮಾಡಿದೆ. ಇದರಿಂದ 5.13 ಕೋಟಿ ರೂಪಾಯಿ ಆದಾಯವನ್ನು ಗಳಿಸಬಹುದು ಎಂದು ಹೇಳಿದೆ. ಇದಲ್ಲದೇ, ಕಾಯ್ದಿರಿಸದ ರೈಲು ಸೇವೆಗಳಿಂದ ಸುಮಾರು 1.50 ಲಕ್ಷ ಪ್ರಯಾಣಿಕರು ಪ್ರಯೋಜನ ಪಡೆಯುತ್ತಾರೆ ಎಂದು ಅಂದಾಜಿಸಿದೆ.

ಮುಂಬೈ ಮತ್ತು ದೇಶದ ಇತರ ನಗರಗಳಲ್ಲಿ 10 ದಿನಗಳ ಗಣಪತಿ ಹಬ್ಬದ ಋತು ಇರುತ್ತದೆ. ಈ ವರ್ಷ ಸೆಪ್ಟೆಂಬರ್ 19 ರಂದು ಗಣೇಶ ಚತುರ್ಥಿ ಹಬ್ಬವನ್ನು ಆಚರಿಸಲಾಗುವುದು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+