2021ರಿಂದ 2022ರ ಅವಧಿಯಲ್ಲಿ ರೈಲಿನಲ್ಲಿ ಟಿಕೆಟ್ ಇಲ್ಲದೆ ಪ್ರಯಾಣಿಸಿದವರೆಷ್ಟು?

ನವದೆಹಲಿ, ಫೆಬ್ರವರಿ 21: ಕಳೆದ ಒಂದು ವರ್ಷದಲ್ಲಿ ರೈಲಿನಲ್ಲಿ ಟಿಕೆಟ್ ಇಲ್ಲದೆ 1.7 8 ಕೋಟಿಗೂ ಅಧಿಕ ಮಂದಿ ಪ್ರಯಾಣಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಏಪ್ರಿಲ್ 2020 ಮತ್ತು ಮಾರ್ಚ್ 2021 ರ ನಡುವೆ ಅಂದರೆ 2020-21 ರ ಹಣಕಾಸು ವರ್ಷದಲ್ಲಿ, 27.57 ಲಕ್ಷ ಜನರು ಟಿಕೆಟ್ ರಹಿತವಾಗಿ ಪ್ರಯಾಣಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ ಮತ್ತು 143.82 ಕೋಟಿ ರೂ.ಗಳನ್ನು ದಂಡವಾಗಿ ಪಾವತಿಸಲಾಗಿದೆ.

ರೈಲ್ವೆಯ ಅಂಕಿ ಅಂಶಗಳ ಪ್ರಕಾರ, 2019-2020 ರಿಂದ 2021-22 ರವರೆಗೆ ರೈಲು ಸೇವೆಗಳನ್ನು ಪಡೆಯುವ ಪ್ರಯಾಣಿಕರ ಸಂಖ್ಯೆಯಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ. ಅಕ್ಟೋಬರ್ 2019 ರಲ್ಲಿ ನಿಯಮಿತ ರೈಲು ಸೇವೆಗಳು ಕಾರ್ಯನಿರ್ವಹಿಸುತ್ತಿದ್ದಾಗ, ರೈಲುಗಳಲ್ಲಿ ಪ್ರಯಾಣಿಸಿದ ಪ್ರಯಾಣಿಕರ ಸಂಖ್ಯೆ 4.40 ಕೋಟಿ ಇತ್ತು. ಸೆಪ್ಟೆಂಬರ್ 2021 ರಲ್ಲಿ, COVID-19 ಪರಿಸ್ಥಿತಿಯಲ್ಲಿ ಸುಮಾರು ಏಳು ಕೋಟಿಗೆ ಏರಿತು ಎಂದು ಇಲಾಖೆ ಮಾಹಿತಿ ನೀಡಿದೆ.

Train

ಕೊರೊನಾ ಶುರುವಾಗದ ಸಮಯ ಅಂದರೆ 2019-2020ರ ವೇಳೆಗೆ ಹೋಲಿಕೆ ಮಾಡಿದರೆ ಸುಮಾರು 79 ಪ್ರತಿಶತದಷ್ಟು ಈ ಅಪರಾಧ ಪ್ರಕರಣ ಹೆಚ್ಚಳವಾಗಿದೆ ಎಂದು ತಿಳಿದುಬಂದಿದೆ.

2020-21 ರ ಕೊರೊನಾ ನಿರ್ಬಂಧದ ವೇಳೆ ಇಂಥಹ ಪ್ರಯಾಣಿಕರ ಸಂಖ್ಯೆ 27 ಲಕ್ಷದಷ್ಟಿತ್ತು. ಮಧ್ಯಪ್ರದೇಶ ಮೂಲದ ಕಾರ್ಯಕರ್ತ ಚಂದ್ರಶೇಖರ್ ಗೌರ್ ಅವರು ಸಲ್ಲಿಸಿದ ಆರ್‌ಟಿಐ ಪ್ರಶ್ನೆಗೆ ರೈಲ್ವೆ ಮಂಡಳಿಯು ಈ ಮಾಹಿತಿಯನ್ನು ನೀಡಿದೆ. ಹಾಗೆಯೇ ಈ ಡಾಟಾದಲ್ಲಿ ಏಪ್ರಿಲ್-ಡಿಸೆಂಬರ್ 2021 ರ ಅವಧಿಯಲ್ಲಿ 1.78 ಕೋಟಿಗೂ ಹೆಚ್ಚು ಪ್ರಯಾಣಿಕರು ಟಿಕೆಟ್ ಇಲ್ಲದೆ/ಅಸಮರ್ಪಕ ಟಿಕೆಟ್ ಮತ್ತು ಕಾಯ್ದಿರಿಸದ ಲಗೇಜ್‌ನೊಂದಿಗೆ ಪ್ರಯಾಣಿಸಿದ ಮಾಹಿತಿಯನ್ನೂ ನೀಡಲಾಗಿದೆ.

2019-2020 ರ ಆರ್ಥಿಕ ವರ್ಷದಲ್ಲಿ ನಡೆದ ಘಟನೆಗಳು ಕೊರೊನಾಗೆ ಸಂಬಂಧಿಸಿದ್ದಲ್ಲ. ಅದರಲ್ಲಿ ಒಟ್ಟಾರೆ 1.10 ಕೋಟಿ ಜನರು ಟಿಕೆಟ್ ರಹಿತ ಪ್ರಯಾಣದಲ್ಲಿ ಸಿಕ್ಕಿಬಿದ್ದಿದ್ದಾರೆ ಮತ್ತು ಅವರಿಂದ ಒಟ್ಟು 561.73 ಕೋಟಿ ರೂ.ಹಣ ಸಂಗ್ರಹಣೆ ಮಾಡಲಾಗಿದೆ ಎಂದು ಉಲ್ಲೇಖಿಸಲಾಗಿದೆ.

ಇಂಥಹ ಪ್ರಯಾಣಿಕರಿದ ರೈಲ್ವೆ ಇಲಾಖೆಯು 1,017.48 ಕೋಟಿ ರೂಪಾಯಿ ದಂಡ ವಸೂಲಿ ಮಾಡಿದೆಯಂತೆ. ಈ ಅಪರಾಧಕ್ಕೆ ಹೆಚ್ಚಿನ ಕೋವಿಡ್ ನಿರ್ಬಂಧದ ವೇಳೆ ಅನೇಕ ಎಕ್ಸ್‌ಪ್ರೆಸ್ ಮತ್ತು ಸೂಪರ್‌ಫಾಸ್ಟ್ ರೈಲುಗಳು ಆನ್‌ಲೈನ್ ಬುಕಿಂಗ್ ಮತ್ತು ಸೀಮಿತ ಸೇವೆಗಳನ್ನು ಮಾತ್ರ ಹೊಂದಿದ್ದೇ ಪ್ರಮುಖ ಕಾರಣ ಎಂದು ಮೂಲಗಳು ತಿಳಿಸಿವೆ.

ದೇಶಾದ್ಯಂತ 30 ರೈಲು ನಿಲ್ದಾಣಗಳನ್ನು ವಿಕಲಚೇತನರು ಸರಳವಾಗಿ ಪ್ರವೇಶಿಸುವಂತೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಈ ಕೆಲಸದಲ್ಲಿ ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್ ಅನುಪ್ರಯಾಸ್ ಮತ್ತು ಸಮರ್ಥನಂ ಟ್ರಸ್ಟ್ ಜೊತೆ ಪಾಲುದಾರಿಕೆ ಹೊಂದಿದೆ. ಬ್ಯಾಂಕ ‌ನ ಸೀಯಿಂಗ್ ಈಸ್ ಬಿಲೀವಿಂಗ್ ಯೋಜನೆ ಅಡಿಯಲ್ಲಿ ಇದನ್ನು ಮಾಡಲಾಗಿದೆ. ಇದರಿಂದ ರೈಲ್ವೇ ನಿಲ್ದಾಣಗಳಲ್ಲಿ ಅಂಧರು ಎದುರಿಸುತ್ತಿದ್ದ ಸಮಸ್ಯೆಗಳು ದೂರ ಆಗಲಿವೆ.
ದೃಷ್ಟಿದೋಷವುಳ್ಳವರು, ಗಾಲಿಕುರ್ಚಿ ಬಳಸುವವರು ಮತ್ತು ಶ್ರವಣದೋಷವುಳ್ಳವರು ಪ್ರಯಾಣದ ಸಮಯದಲ್ಲಿ ಇತರರ ಮೇಲೆ ಅವಲಂಬನೆಯನ್ನು ಕಡಿಮೆ ಮಾಡವುದು ಈ ಯೋಜನೆಯ ಉದ್ದೇಶವಾಗಿದೆ.

ಈ ಸೌಲಭ್ಯಗಳು ಸಿಗಲಿವೆ

1.ಪ್ಲಾಟ್‌ ಫಾರ್ಮ್ ಸಂಖ್ಯೆಗಳು ಮತ್ತು ಸೌಲಭ್ಯಗಳನ್ನು ಗುರುತಿಸಲು ಪ್ಲಾಟ್‌ ಫಾರ್ಮ್‌ ಮತ್ತು ರೇಲಿಂಗ್‌ಗಳ ಮೇಲೆ ಬ್ರೈಲ್ ಚಿಹ್ನೆಗಳನ್ನು ಮಾರ್ಗದರ್ಶನ ಮಾಡುವುದು.

2.ಪುರುಷ, ಸ್ತ್ರೀ ಶೌಚಾಲಯದಂತಹ ಸೌಲಭ್ಯಗಳಿಗಾಗಿ ಬ್ರೈಲ್ ಸಾಮಾನ್ಯ ಚಿಹ್ನೆ.

3.ಕಡಿಮೆ ದೃಷ್ಟಿ ಹೊಂದಿರುವ ಜನರಿಗೆ ಮೆಟ್ಟಿಲುಗಳ ಮೇಲೆ ಪ್ರತಿಫಲಕ ಪಟ್ಟಿಗಳು

4.ನಿಲ್ದಾಣದ ಬ್ರೈಲ್ ನಕ್ಷೆ

5.ವಿಚಾರಣೆ ಕೌಂಟರ್ ಗಳಲ್ಲಿ ಬ್ರೈಲ್ ಮಾಹಿತಿ ಕಿರುಪುಸ್ತಕಗಳು

6.ನಿಲ್ದಾಣದ ಬಗ್ಗೆ ಸಂಕೇತ ಭಾಷೆಯಲ್ಲಿ ವೀಡಿಯೊ ವೀಕ್ಷಿಸಲು QR ಕೋಡ್

7.ದಿವ್ಯಾಂಗರು ಹತ್ತಲು ಪೋರ್ಟಬಲ್ ಇಳಿಜಾರುಗಳು ಮತ್ತು ಗಾಲಿಕುರ್ಚಿಗಳು.

ಥಾಣೆ ನಿಲ್ದಾಣದಲ್ಲಿ ಮೊದಲ ಬಾರಿಗೆ ವ್ಯವಸ್ಥೆ

ಈ ಎಲ್ಲ ಸೌಲಭ್ಯಗಳನ್ನು ಒಳಗೊಂಡಿರುವ ಮೊದಲ ರೈಲ್ವೇ ನಿಲ್ದಾಣ ಥಾಣೆಯಲ್ಲಿ ಸಿದ್ಧವಾಗುತ್ತಿದೆ. ಏಪ್ರಿಲ್ 1, 2022 ರ ವೇಳೆಗೆ 30 ರೈಲು ನಿಲ್ದಾಣಗಳಲ್ಲಿ ಎಲ್ಲಾ ಸೌಲಭ್ಯಗಳು ಲಭ್ಯವಾಗಲಿವೆ. ಎಗ್ಮೋರ್, ಚೆನ್ನೈ, ಬಾಂದ್ರಾ, ಅಹಮದಾಬಾದ್, ಭೋಪಾಲ್, ಮಥುರಾ, ಆಗ್ರಾ, ಸಿಕಂದರಾಬಾದ್ ಮತ್ತು ಜೈಪುರ್ ಈ ಯೋಜನೆಯಡಿಯಲ್ಲಿ ಸೌಲಭ್ಯಗಳನ್ನು ಒದಗಿಸುವ ಕೆಲವು ಪ್ರಮುಖ ರೈಲು ನಿಲ್ದಾಣಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+