ಬೆಂಗಳೂರು ಸೇರಿ 6,117 ರೈಲು ನಿಲ್ದಾಣಗಳಲ್ಲಿ ಉಚಿತ ವೈಫೈ: ಭದ್ರತೆಗಾಗಿ 11,953 ಬೋಗಿಗಳಲ್ಲಿ ಸಿಸಿಟಿವಿ
ನವದೆಹಲಿ: ಭಾರತೀಯ ರೈಲ್ವೆಯು ತನ್ನ ವ್ಯಾಪ್ತಿಯಲ್ಲಿ ರೈಲುಗಳ ಮೂಲಸೌಕರ್ಯ ಅಭಿವೃದ್ಧಿ ಮಾಡುತ್ತಲೇ ಬಂದಿದೆ. ಕರ್ನಾಟಕ ಸೇರಿದಂತೆ ದೇಶದ ಹೊಸ ಮಾರ್ಗಗಳಲ್ಲಿ ರೈಲು ಸೇವೆ ಆರಂಭಿಸಿದೆ. ಹೊಸ ಮಾರ್ಗಗಳನ್ನು ಸ್ಥಾಪಿಸುವ ಕಾರ್ಯದಲ್ಲಿ ಇಲಾಖೆ ನಿರತವಾಗಿದೆ. ಇದೀಗ ರೈಲುಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರ ಸುರಕ್ಷತೆಗೆ ಒತ್ತು ನೀಡಿದೆ. ಡಿಜಿಟಲ್ ಹಣಕಾಸು ಸೇವೆಗೆ, ಇತರ ಉಪಯೋಗಕ್ಕೆ ರೈಲು ಬೋಗಿಗಳಲ್ಲಿ ವೈಫೈ ಸೇವೆ ಒದಗಿಸಿದೆ. ಸಾವಿರಾರು ಬೋಗಿಗಳಲ್ಲಿ ಸಿಸಿಟಿವಿ ಅಳವಡಿಕೆ ಮಾಡಲಾಗಿದೆ.
ಚಳಿಗಾಲದ ಸಂಸತ್ ಅಧಿವೇಶನದಲ್ಲಿ ಕೇಳಲಾದ ಪ್ರಶ್ನೆಗಳಿಗೆ ನ ಕೇಂದ್ರ ರೈಲ್ವೆ, ವಾರ್ತಾ ಮತ್ತು ಪ್ರಸಾರ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರು ಲಿಖಿತವಾಗಿ ಉತ್ತರಿಸಿದರು. ಭಾರತೀಯ ರೈಲ್ವೆಯು ದೇಶದಾದ್ಯಂತ 6,117 ರೈಲು ನಿಲ್ದಾಣಗಳಲ್ಲಿ ಉಚಿತ ವೈ-ಫೈ ಸೇವೆಗಳನ್ನು ಒದಗಿಸಿದೆ. ರೈಲ್ವೆ ನಿಲ್ದಾಣಗಳಲ್ಲಿ ಈ ವೈ-ಫೈ ಸೇವೆಗಳಿಗೆ ರೈಲ್ವೆ ಸಚಿವಾಲಯವು ಯಾವುದೇ ಪ್ರತ್ಯೇಕ ಹೆಚ್ಚುವರಿ ಹಣವನ್ನು ಮಂಜೂರು ಮಾಡಿಲ್ಲ ಎಂದು ತಿಳಿಸಿದರು.

ನಿಲ್ದಾಣಗಳಲ್ಲಿ ಪ್ರಯಾಣಿಕರ ಗೌಪ್ಯತೆ ರಕ್ಷಣೆ
ಒಟಿಪಿ ವ್ಯವಸ್ಥೆಗಾಗಿ ಬಳಸುವ ಮೊಬೈಲ್ ಸಂಖ್ಯೆಯನ್ನು ಹೊರತುಪಡಿಸಿ ರೈಲ್ವೆ ನಿಲ್ದಾಣಗಳಲ್ಲಿ ಲಭ್ಯಿರುವ ವೇಗದ ವೈ-ಫೈ ಸೇವೆಯನ್ನು ಜನರು ಪ್ರವೇಶಿಸಲು ಯಾವುದೇ ವೈಯಕ್ತಿಕ ಮಾಹಿತಿಯನ್ನು ಕೇಳಲಾಗುತ್ತಿಲ್ಲ. ಒಟಪಿ ಹಾಕಿ ಯಾರು ಬೇಕಾದರೂ ಇಲ್ಲಿನ ವೈಫೈ ಸೇವೆ ಬಳಸಲು ಅನುಕೂಲವಾಗುವಂತೆ ವ್ಯವಸ್ಥೆ ತರಲಾಗಿದೆ. ಇದರಿಂದ ಪ್ರಯಾಣಿಕ ಇತರ ದಾಖಲೆಗಳು, ಹೆಚ್ಚಿನ ವಿವರ ಪಡೆಯುತ್ತಿಲ್ಲ. ಪ್ರಯಾಣಿಕರ ಗೌಪ್ಯತೆಗೆ ಧಕ್ಕೆ ಆಗದಂತಹ ವ್ಯವಸ್ಥೆ ಇದೆ.
ರೈಲು ನಿಲ್ದಾಣಗಳಲ್ಲಿ ವೈ-ಫೈ ಸೌಲಭ್ಯದ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆಗಳು ಉಂಟಾದಾಗಲೆಲ್ಲಾ ರೈಲ್ವೆ ಆಡಳಿತವು ಸೂಕ್ತ ಕ್ರಮವನ್ನು ತಕ್ಷಣ ತೆಗೆದುಕೊಳ್ಳುತ್ತದೆ. ಏನೆ ಸಮಸ್ಯೆಗಳಾಗಲಿ ತ್ವರಿತವಾಗಿ ಪರಿಹಾರ ಮಾಡಿ ಪ್ರಯಾಣಿಕರಿಗೆ ಅನುಕೂಲ ಒದಗಿಸುತ್ತದೆ.
11,953 ಬೋಗಿಗಳಲ್ಲಿ ಸಿಸಿಟಿವಿ ಕಣ್ಗಾವಲು ವ್ಯವಸ್ಥೆ
ರೈಲು ನಿಲ್ದಾಣಗಳು ಮತ್ತು ಕೋಚ್ ಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಇಲ್ಲಿಯವರೆಗೆ, ರೈಲ್ವೆ ಪ್ರಯಾಣಿಕರಿಗೆ ಸುರಕ್ಷಿತ ಮತ್ತು ಸುಭದ್ರ ಪ್ರಯಾಣವನ್ನು ಖಚಿತಪಡಿಸಿಕೊಳ್ಳಲು 1731 ನಿಲ್ದಾಣಗಳು ಮತ್ತು 11,953 ಬೋಗಿಗಳಲ್ಲಿ ಸಿಸಿಟಿವಿ ಕಣ್ಗಾವಲು ವ್ಯವಸ್ಥೆ ಮಾಡಲಾಗಿದೆ. ಬಂಡವಾಳ ವೆಚ್ಚದ ಅಡಿಯಲ್ಲಿ ಶುಲ್ಕ ವಿಧಿಸುವ ಲೆಕ್ಕಾಚಾರದಲ್ಲಿ ವೆಚ್ಚ ಮಾಡಿ ಸಿಸಿಟಿವಿ ಕಣ್ಗಾವಲು ವ್ಯವಸ್ಥೆ ಜಾರಿಗೊಳಿಸಲಾಗಿದೆ.
ಇನ್ನೂ ರೈಲು ನಿಲ್ದಾಣದಲ್ಲಿ, ಹೊರಾಂಗಣ ಪ್ರದೇಶಗಳಾದ ಪ್ರವೇಶ ಅಥವಾ ನಿರ್ಗಮನ ಪಾಯಿಂಟ್, ಪಾದಚಾರಿ ಮೇಲು ಸೇತುವೆಗಳು, ಪ್ಲಾಟ್ ಫಾರ್ಮ್ ಗಳು ಇತ್ಯಾದಿಗಳನ್ನು ಮತ್ತು ಒಳಾಂಗಣ ಪ್ರದೇಶಗಳಾದ ಕಾಯುವ ಸಭಾಂಗಣಗಳು, ಟಿಕೆಟ್ ಕೌಂಟರ್ ಗಳು ಇತ್ಯಾದಿಗಳನ್ನು ಒಳಗೊಳ್ಳಲು ನವದೆಹಲಿ ರೈಲು ನಿಲ್ದಾಣದಲ್ಲಿ ಈಗಾಗಲೇ ಎಲ್ಲೆಡೆ ಸಿಸಿಟಿವಿಗಳನ್ನು ಅಳವಡಿಸಲಾಗಿದೆ. ಪ್ರಯಾಣಿಕರ ಸುರಕ್ಷತೆ, ಭದ್ರತೆಗೆ ರೈಲ್ವೆ ಇಲಾಖೆ ಒತ್ತು ನೀಡಿದೆ.
Indian Railways strengthens passenger safety through CCTV-enabled stations and coaches, with surveillance coverage across 1,731 stations and 11,953 coaches.
— Ministry of Railways (@RailMinIndia) December 19, 2025
Read More: https://t.co/49nrmKxTzu pic.twitter.com/iet4i3JGgD
ದೆಹಲಿ ರೈಲು ನಿಲ್ದಾಣಕ್ಕೆ ಹೆಚ್ಚಿನ ಗಮನ
ಇದೇ ವರ್ಷ 2025 ಫೆಬ್ರವರಿ 15 ನಂತರ ನವದೆಹಲಿ ನಿಲ್ದಾಣದ ಆವರಣದಲ್ಲಿ ಕೆಲವು ಹೊಸ ಪ್ರದೇಶಗಳನ್ನು ಕೂಡ ಅಭಿವೃದ್ಧಿಪಡಿಸಲಾಯಿತು. ಅದಕ್ಕೆ ಅನುಗುಣವಾಗಿ ಈ ಪ್ರದೇಶಗಳನ್ನು ಒಳಗೊಳ್ಳಲು ಹೆಚ್ಚುವರಿ ಸಿಸಿಟಿವಿಗಳನ್ನು ಕೂಡ ಒದಗಿಸಲಾಗಿದೆ. ಪ್ರಸ್ತುತ, ನವದೆಹಲಿ ರೈಲು ನಿಲ್ದಾಣದಲ್ಲಿ ಒಟ್ಟು 250 ಸಿಸಿಟಿವಿಗಳನ್ನು ಅಳವಡಿಸಲಾಗಿದೆ. ರೈಲುಗಳಲ್ಲಿ, ನಿಲ್ದಾಣಗಳಲ್ಲಿ ಪ್ರಯಾಣಿಕರ ಸುರಕ್ಷತೆಗೆ ನಮ್ಮ ಆದ್ಯತೆ ಯಾಗಿದೆ ಎಂದು ರೈಲ್ವೆ ಸಚಿವರು ತಿಳಿಸಿದ್ದಾರೆ.
-
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ












Click it and Unblock the Notifications