Indian Railways: ಅಕ್ಟೋಬರ್‌ನಲ್ಲಿ 12 ಎಕ್ಸ್‌ಪ್ರೆಸ್ ರೈಲುಗಳು ರದ್ದು- ಕರ್ನಾಟಕದ ಯಾವ ಮಾರ್ಗದಲ್ಲಿ ತಿಳಿಯಿರಿ

ದಕ್ಷಿಣ ಮಧ್ಯ ರೈಲ್ವೆಯ ವಿಜಯವಾಡ ವಿಭಾಗದ ಬಾಪಟ್ಲಾ ನಿಲ್ದಾಣದಲ್ಲಿ ಮೂರನೇ ಮಾರ್ಗವು ಕಾರ್ಯರಂಭವಾಗಲಿದೆ. ಇದಕ್ಕೆ ಇಂಟರ್‌ಲಾಕ್ ಮಾಡುವ ಪ್ರಕ್ರಿಯೆಯನ್ನು ರೈಲ್ವೆ ಇಲಾಖೆ ಆರಂಭಿಸಲಿದೆ. ಈ ಹಿನ್ನೆಲೆಯಲ್ಲಿ ಕನಿಷ್ಠ 12 ಎಕ್ಸ್‌ಪ್ರೆಸ್ ರೈಲುಗಳನ್ನು ಅಕ್ಟೋಬರ್‌ ತಿಂಗಳಲ್ಲಿ ರದ್ದುಗೊಳಿಸಲು ಭಾರತೀಯ ರೈಲ್ವೆ ನಿರ್ಧರಿಸಿದೆ.

ವಿಶಾಖಪಟ್ಟಣಂ-ತಿರುಪತಿ ಡಬಲ್ ಡೆಕ್ಕರ್, ಭುವನೇಶ್ವರ್-ತಿರುಪತಿ ಸ್ಪೆಷಲ್‌ ರೈಲು, ವಿಶಾಖಪಟ್ಟಣಂ-ಚೆನ್ನೈ ಸೂಪರ್ ಫಾಸ್ಟ್ ರೈಲು, ಸಂಬಲ್ಪುರ-ಈರೋಡ್ ಸ್ಪೆಷಲ್‌ ರೈಲು ಮತ್ತು ವಿಶಾಖಪಟ್ಟಣಂ-ಬೆಂಗಳೂರು ಕಂಟೋನ್ಮೆಂಟ್ ಸ್ಪೆಷಲ್‌ ರೈಲುಗಳನ್ನು ರದ್ದುಗೊಳಿಸಲಾಗಿದೆ.

Indian Railways Cancels 12 Express Trains For October 2023, Check Full List

ಅಕ್ಟೋಬರ್ 2 ರಿಂದ 10 ರ ವರೆಗೆ, ಧನ್ಬಾದ್‌ನಿಂದ ಹೊರಡುವ ಧನ್ಬಾದ್-ಅಲೆಪ್ಪಿ ಎಕ್ಸ್‌ಪ್ರೆಸ್ ಅನ್ನು ನಿಡದವೋಲು, ಭೀಮಾವರಂ ಟೌನ್, ಗುಡಿವಾಡ ಮತ್ತು ವಿಜಯವಾಡ ಮೂಲಕ ಓಡಿಸಲು ತಿರುಗಿಸಲಾಗುವುದು ಎಂದು ಭಾರತೀಯ ರೈಲ್ವೆ ತಿಳಿಸಿದೆ. ತಾಡೆಪಲ್ಲಿಗುಡೆಂ ಮತ್ತು ಏಲೂರು ನಿಲ್ದಾಣಗಳಿಗೆ ಈ ರೈಲು ತೆರಳುವುದಿಲ್ಲವೆಂದು ರೈಲ್ವೆ ಇಲಾಖೆ ಹೇಳಿದೆ.

ಅಕ್ಟೋಬರ್ 1 ರ ವರೆಗೆ ರದ್ದುಗೊಂಡ ರೈಲುಗಳ ಪಟ್ಟಿ

ದಕ್ಷಿಣ ಮಧ್ಯ ರೈಲ್ವೆಯ ಬಾಪಟ್ಲಾ ನಿಲ್ದಾಣದಲ್ಲಿ 3 ನೇ ಮಾರ್ಗದ ಕಾರ್ಯಾರಂಭದ ಕಾರಣ ಅಕ್ಟೋಬರ್ 1 ರ ವರೆಗೆ ಹಲವಾರು ಎಕ್ಸ್‌ಪ್ರೆಸ್ ರೈಲುಗಳನ್ನು ರದ್ದುಗೊಳಿಸಲಾಗಿದೆ.

ತಿರುಪತಿ- ವಿಶಾಖಪಟ್ಟಣಂ ಡಬಲ್ ಡೆಕ್ಕರ್, ಭುವನೇಶ್ವರ-ತಿರುಪತಿ ಎಸಿ ಸೂಪರ್- ಫಾಸ್ಟ್ ಸ್ಪೆಷಲ್‌ ಎಕ್ಸ್‌ಪ್ರೆಸ್, ವಿಶಾಖಪಟ್ಟಣಂ- ಎಂಜಿಆರ್ ಚೆನ್ನೈ ಸೆಂಟ್ರಲ್ ಸೂಪರ್- ಫಾಸ್ಟ್ ಎಕ್ಸ್‌ಪ್ರೆಸ್ ರೈಲನ್ನು ರದ್ದುಗೊಳಿಸಲಾಗಿದೆ.

Indian Railways Cancels 12 Express Trains For October 2023, Check Full List

ಇದಲ್ಲದೆ, ಸಂಬಲ್‌ಪುರ- ಈರೋಡ್ ಸ್ಪೆಷಲ್‌ ಎಕ್ಸ್‌ಪ್ರೆಸ್ ಮತ್ತು ವಿಶಾಖಪಟ್ಟಣಂ ಬೆಂಗಳೂರು ಕಂಟೋನ್ಮೆಂಟ್‌ ಎಕ್ಸ್‌ಪ್ರೆಸ್ ರೈಲನ್ನು ಸಹ ರದ್ದುಗೊಳಿಸಲಾಗಿದೆ. ಧನ್ಬಾದ್-ಅಲೆಪ್ಪಿ ಬೊಕಾರೊ ಎಕ್ಸ್‌ಪ್ರೆಸ್ ಅನ್ನು ಬೇರೆ ಬೇರೆ ನಿಲ್ದಾಣಗಳ ಮೂಲಕ ಓಡಿಸಲು ತಿರುಗಿಸಲಾಗುವುದು ಎಂದು ರೈಲ್ವೆ ತಿಳಿಸಿದೆ.

ಕಾರ್ಯಾಚರಣೆಯ ಕಾರಣಗಳಿಗಾಗಿ ರೈಲುಗಳನ್ನು ತಿರುಗಿಸಲಾಗಿದೆ ಎಂದು ರೈಲ್ವೆ ಇಲಾಖೆ ಮಾಹಿತಿ ನೀಡಿದೆ.

ವಿವಿಧ ರೈಲ್ವೇ ವಿಭಾಗಗಳಲ್ಲಿ ಕಾರ್ಯಾಚರಣೆಯ ಕಾರಣಗಳು ಮತ್ತು ನಿರ್ವಹಣಾ ಕಾರ್ಯಗಳಿಂದಾಗಿ ಹಲವಾರು ರೈಲು ಸೇವೆಗಳನ್ನು ರದ್ದುಗೊಳಿಸಲಾಗಿದೆ ಅಥವಾ ಬೇರೆಡೆಗೆ ತಿರುಗಿಸಲಾಗಿದೆ ಎಂದು ಭಾರತೀಯ ರೈಲ್ವೆ ಹೇಳಿದೆ. ದಕ್ಷಿಣ ಮಧ್ಯ ರೈಲ್ವೆಯು ಈ ಕೆಳಗಿನ ರೈಲುಗಳನ್ನು ರದ್ದುಗೊಳಿಸಿದೆ ಎಂದು ಹೇಳಿದೆ.

Indian Railways Cancels 12 Express Trains For October 2023, Check Full List

ತಿರುಪತಿ-ಎಸ್‌ಎಸ್‌ಎಸ್ ಹುಬ್ಬಳ್ಳಿ ಡೈಲಿ ಪ್ಯಾಸೆಂಜರ್ ಸ್ಪೆಷಲ್‌, ಹುಬ್ಬಳ್ಳಿ-ತಿರುಪತಿ ಡೈಲಿ ಪ್ಯಾಸೆಂಜರ್ ಸ್ಪೆಷಲ್‌ ರದ್ದುಗೊಳಿಸಲಾಗಿದೆ.

ದಕ್ಷಿಣ ರೈಲ್ವೆಯು ಚೆನ್ನೈ ಬೀಚ್ ಮತ್ತು ತಾಂಬರಂ ನಡುವಿನ ಉಪನಗರ ರೈಲುಗಳನ್ನು ರದ್ದುಗೊಳಿಸಿದೆ. ಇದರಿಂದಾಗಿ ಜನದಟ್ಟಣೆ ಮತ್ತು ಅಡಚಣೆಗಳು ಉಂಟಾಗಲಿದೆ ಎಂದು ತಿಳಿದುಬಂದಿದೆ.

ಇದಲ್ಲದೆ, ಜೈಪುರ ಪ್ರದೇಶದಲ್ಲಿ ಭಾರೀ ಮಳೆಯಿಂದಾಗಿ ವಾಯುವ್ಯ ರೈಲ್ವೆ ನಾಲ್ಕು ರೈಲು ಸೇವೆಗಳನ್ನು ರದ್ದುಗೊಳಿಸಿದೆ ಮತ್ತು ರೈಲು ಸಂಚಾರವನ್ನು ಬದಲಿಸಿದೆ. ಮಳೆಯು ವಿಮಾನ ಹಾರಾಟದ ಮೇಲೂ ಪರಿಣಾಮ ಬೀರಿದೆ.

ಈ ಮಧ್ಯೆ, ಸಂಬಲ್‌ಪುರ- ವಾರಣಾಸಿ ಎಕ್ಸ್‌ಪ್ರೆಸ್ ಅನ್ನು ಒಡಿಶಾದ ಹಲವು ಜಿಲ್ಲೆಗಳ ಮೂಲಕ ವಿಶಾಖಪಟ್ಟಣಂ ವರೆಗೆ ವಿಸ್ತರಿಸಲು ರೈಲ್ವೆ ಇಲಾಖೆ ಅನುಮೋದನೆ ನೀಡಿದೆ. ರಾಜ್ಯದ ಪಶ್ಚಿಮ ಮತ್ತು ದಕ್ಷಿಣ ಪ್ರದೇಶಗಳಲ್ಲಿ ರೈಲು ಸೇವೆಗಳನ್ನು ಹೆಚ್ಚಿಸಲು ಇದನ್ನು ಮಾಡಲಾಗಿದೆ. ಇದರಿಂದ ಬಲಂಗಿರ್, ಬರ್ಗಢ್, ಕಲಹಂಡಿ ಮತ್ತು ರಾಯಗಡದಿಂದ ಪ್ರಯಾಣಿಕರು ಹೆಚ್ಚಿನ ಪ್ರಯೋಜನವನ್ನು ಪಡೆಯುತ್ತಾರೆ ಎಂದು ತಿಳಿದುಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+