Indian Railways: ಇನ್ನು ಮುಂದೆ ರೈಲುಗಳಲ್ಲಿ ಸಾಕುಪ್ರಾಣಿಗಳಿಗೂ ಅವಕಾಶ- ಮಾರ್ಗಸೂಚಿ, ವಿವರ ಪರಿಶೀಲಿಸಿ

ಭಾರತೀಯ ರೈಲ್ವೆಯು ಪ್ರಾಣಿ ಪ್ರಿಯರಿಗೆ ಸಿಹಿ ಸುದ್ದಿಯೊಂದನ್ನು ನೀಡಿದೆ. ಇನ್ನು ಮುಂದೆ ರೈಲುಗಳಲ್ಲಿ ಸಾಕು ಪ್ರಾಣಿಗಳನ್ನೂ ಸಹ ಕೊಂಡೊಯ್ಯಬಹುದು.

ನವದೆಹಲಿ, ಮಾರ್ಚ್‌ 21: ಭಾರತೀಯ ರೈಲ್ವೆಯು ( Indian Railways ) ಪ್ರಾಣಿ ಪ್ರಿಯರಿಗೆ ಸಿಹಿ ಸುದ್ದಿಯೊಂದನ್ನು ನೀಡಿದೆ. ಇನ್ನು ಮುಂದೆ ರೈಲುಗಳಲ್ಲಿ ಸಾಕು ಪ್ರಾಣಿಗಳನ್ನೂ ಸಹ ಕೊಂಡೊಯ್ಯಬಹುದು. ಇದಕ್ಕಾಗಿ ಭಾರತೀಯ ರೈಲ್ವೆಯು ಹೊಸ ಮಾರ್ಗಸೂಚಿಗಳನ್ನು ನೀಡಿದೆ. ಮಾರ್ಗಸೂಚಿಗಳು ಹಾಗೂ ವಿವರಗಳನ್ನು ತಿಳಿಯಲು ಈ ವರದಿ ಓದಿ.

'ಪ್ರಯಾಣಿಕರು ತಮ್ಮ ಸಾಕು ಪ್ರಾಣಿಯನ್ನು ಫಸ್ಟ್‌ ಎಸಿ ಕಂಪಾರ್ಟ್‌ಮೆಂಟ್‌ನಲ್ಲಿ ಕೊಂಡೊಯ್ಯುವ ಆಯ್ಕೆಯನ್ನು ಹೊಂದಿರುತ್ತಾರೆ. ರೈಲಿನ ಟ್ರೈನ್ ಮ್ಯಾನೇಜರ್ (ಗಾರ್ಡ್) ಮೇಲ್ವಿಚಾರಣೆಯಲ್ಲಿ ಲಗೇಜ್- ಕಮ್- ಬ್ರೇಕ್ ವ್ಯಾನ್‌ನಲ್ಲಿ ಲಗೇಜ್ ಆಗಿ ಬುಕ್ ಮಾಡಬಹುದು' ಎಂದು ಪೂರ್ವ ರೈಲ್ವೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Indian Railways allows passengers to carry pets on trains: Check guidelines and other details

ಪ್ರಯಾಣಿಕರು 2 - ಬರ್ತ್ ಕೂಪೆ ಅಥವಾ 4 - ಬರ್ತ್ ಕ್ಯಾಬಿನ್‌ನಲ್ಲಿ ಪ್ರತ್ಯೇಕವಾಗಿ ಎಸಿ - ಫಸ್ಟ್ ಕ್ಲಾಸ್ ಅಥವಾ ಪ್ರಥಮ ದರ್ಜೆಯಲ್ಲಿ ಸೀಟನ್ನು ಕಾಯ್ದಿರಿಸಬೇಕು. ಈ ಮೂಲಕ ಪ್ರಯಾಣಿಕರು ಸಾಕು ನಾಯಿಯೊಂದಿಗೆ ಪ್ರಯಾಣಿಸಬಹುದು ಎಂದು ಅಧಿಕಾರಿ ತಿಳಿಸಿದರು. ಪ್ರತಿ PNR ( ಪ್ರಯಾಣಿಕರ ಹೆಸರು ದಾಖಲೆ ) ಗೆ ಒಂದು ಪ್ರಾಣಿಯನ್ನು ಮಾತ್ರ ಅನುಮತಿಸಲಾಗುವುದು ಎಂದು ಅಧಿಕಾರಿ ಸೂಚಿಸಿದರು.

ಮಾರ್ಗಸೂಚಿಗಳು

ಪ್ರಯಾಣಿಕರು PRS ಟಿಕೆಟ್ ಅಥವಾ IRCTC ಬುಕ್ ಮಾಡಿದ ಆನ್‌ಲೈನ್ ಟಿಕೆಟ್ ಅನ್ನು ಹೊಂದಿದ್ದರೂ, ಬುಕಿಂಗ್‌ಗಾಗಿ ರೈಲು ಹೊರಡುವ ಕನಿಷ್ಠ ಮೂರು ಗಂಟೆಗಳ ಮೊದಲು ಸಾಕು ಪ್ರಾಣಿಯನ್ನು ಲಗೇಜ್ ಕಚೇರಿಗೆ ತರಬೇಕು.

Indian Railways allows passengers to carry pets on trains: Check guidelines and other details

AC ಫಸ್ಟ್ ಕ್ಲಾಸ್ ಅಥವಾ ಫಸ್ಟ್ ಕ್ಲಾಸ್ ಕೂಪೆಯಲ್ಲಿ ಪ್ರಯಾಣಿಕನೊಂದಿಗೆ ಸಾಗಿಸುವ ಸಾಕು ಪ್ರಾಣಿಗಳು ಅನ್ವಯವಾಗುವ ಬ್ಯಾಗೇಜ್ ಶುಲ್ಕಕ್ಕೆ ಒಳಪಟ್ಟಿರುತ್ತವೆ.

ಎಸಿ2 ಶ್ರೇಣಿ, ಎಸಿ 3 ಶ್ರೇಣಿ, ಎಸಿ ಚೇರ್ ಕಾರ್, ಸ್ಲೀಪರ್ ಕ್ಲಾಸ್ ಮತ್ತು ಸೆಕೆಂಡ್ ಕ್ಲಾಸ್ ಕಂಪಾರ್ಟ್‌ ಮೆಂಟ್‌ಗಳಲ್ಲಿ ಪ್ರಾಣಿಗಳನ್ನು ಅನುಮತಿಸಲಾಗುವುದಿಲ್ಲ.

ಕಂಪಾರ್ಟ್‌ ಮೆಂಟ್‌ನಲ್ಲಿ ಉಳಿದಿರುವ ಪ್ರಾಣಿಯನ್ನು ಇತರ ಪ್ರಯಾಣಿಕರು ಆಕ್ಷೇಪಿಸಿದರೆ, ಹಣವನ್ನು ಹಿಂದಿರುಗಿಸದೆ ಕಾವಲುಗಾರರ ವ್ಯಾನ್‌ನಿಂದ ಪ್ರಾಣಿಯನ್ನು ಹೊರ ಹಾಕಲಾಗುತ್ತದೆ.

ಬುಕಿಂಗ್‌ಗೆ ಸಾಕು ನಾಯಿಯ ತಳಿ, ಬಣ್ಣ ಮತ್ತು ಲಿಂಗವನ್ನು ನಮೂದಿಸುವ ಪಶು ವೈದ್ಯರಿಂದ ಪ್ರಮಾಣ ಪತ್ರದ ಅಗತ್ಯವಾಗಿ ತರಬೇಕು.

ತಮ್ಮ ನಾಯಿಗಳನ್ನು ಸುರಕ್ಷಿತವಾಗಿ ಸಾಗಿಸುವ ಸಂಪೂರ್ಣ ಜವಾಬ್ದಾರಿ ಪ್ರಯಾಣಿಕರ ಮೇಲಿದೆ.

ಪ್ರಯಾಣದ ಸಮಯದಲ್ಲಿ, ಮಾಲೀಕರು ನಾಯಿಗೆ ನೀರು ಮತ್ತು ಆಹಾರವನ್ನು ಒದಗಿಸುವ ಜವಾಬ್ದಾರಿಯನ್ನು ಹೊಂದಿರುತ್ತಾರೆ.

ಎಲ್ಲಾ ಕಂಪಾರ್ಟ್‌ ಮೆಂಟ್‌ನಲ್ಲಿ ನಾಯಿ ಮರಿಗಳನ್ನು ಬುಟ್ಟಿಯಲ್ಲಿ ಒಯ್ಯಬಹುದು.

ರೈಲು ನಿರ್ವಾಹಕರ ( ಗಾರ್ಡ್ ) ಮೇಲ್ವಿಚಾರಣೆಯಲ್ಲಿ, ಪ್ರಯಾಣಿಕರು ಲಗೇಜ್- ಕಮ್- ಬ್ರೇಕ್ ವ್ಯಾನ್‌ನಲ್ಲಿ ಲಭ್ಯವಿರುವ ಡಾಗ್ - ಬಾಕ್ಸ್‌ನಲ್ಲಿ ತಮ್ಮ ಸಾಕು ನಾಯಿಗಳಿಗೆ ಜಾಗವನ್ನು ಕಾಯ್ದಿರಿಸಬಹುದು. ಪ್ರತಿ ನಾಯಿ ಪೆಟ್ಟಿಗೆಯಲ್ಲಿ ಒಂದು ನಾಯಿಗೆ ಮಾತ್ರ ಅನುಮತಿ ನೀಡಲಾಗುತ್ತಿದೆ.

ಪ್ರಯಾಣಿಕರು ದೃಢೀಕರಿಸಿದ, ಕಾಯ್ದಿರಿಸಿದ ಟಿಕೆಟ್ ( ರೈಲಿನಲ್ಲಿ ತನ್ನ ಸಾಕು ಪ್ರಾಣಿಗಳ ಪ್ರಯಾಣಕ್ಕಾಗಿ ) ಮತ್ತು ಗುರುತನ್ನು ಹೊಂದಿರಬೇಕು.

ರೈಲು ಹೊರಡುವ ಕನಿಷ್ಠ ಮೂರು ಗಂಟೆಗಳ ಮೊದಲು ನಾಯಿಯನ್ನು ಪ್ರಯಾಣಿಕರು ಲಗೇಜ್ ಕಚೇರಿಗೆ ತಲುಪಿಸಬೇಕು.

AC ಫಸ್ಟ್ ಕ್ಲಾಸ್ / ಫಸ್ಟ್ ಕ್ಲಾಸ್ ಕೂಪೆಯಲ್ಲಿ ಪ್ರಯಾಣಿಕನೊಂದಿಗೆ ಸಾಕು ನಾಯಿಗಳನ್ನು ಕೊಂಡೊಯ್ಯಲು ಲಗೇಜ್ ದರಗಳಲ್ಲಿ ನಿಗದಿತ ಶುಲ್ಕಗಳನ್ನು ಸಂಗ್ರಹಿಸಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+