ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತೀಯ ನೌಕಾಪಡೆಯ ಜಲಾಂತರ್ಗಾಮಿ ನೌಕೆ 'ವಾಗಿರ್'ಗೆ ಚಾಲನೆ

|
Google Oneindia Kannada News

ಮುಂಬೈ, ನವೆಂಬರ್ 12: ಭಾರತೀಯ ನೌಕಾಪಡೆಯ 5 ನೇ ಸ್ಕಾರ್ಪಿನ್ ಶ್ರೇಣಿಯ ಜಲಾಂತರ್ಗಾಮಿ ಐಎನ್ಎಸ್ 'ವಾಗೀರ್' ಗೆ ಇಂದು ಚಾಲನೆ ದೊರೆಯಿತು. ಮುಂಬೈ ನ ಮಜಾಗೋನ್ ಡಾಕ್ ನಲ್ಲಿ ಲೋಕಾರ್ಪಣೆ ಮಾಡಲಾಯಿತು, ರಕ್ಷಣಾ ಖಾತೆ ರಾಜ್ಯ ಸಚಿವ ಶ್ರೀಪಾದ್ ನಾಯ್ಕ್ ಅವರ ಪತ್ನಿ ವಿಜಯಾ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಜಲಾಂತರ್ಗಾಮಿಯನ್ನು ಲೋಕಾರ್ಪಣೆಗೊಳಿಸಿದ್ದಾರೆ.

ಭಾರತದಲ್ಲೇ ನಿರ್ಮಾಣವಾದ ಕಲ್ವಾರಿ ಶ್ರೇಣಿಯ 6 ನೇ ಜಲಾಂತರ್ಗಾಮಿ ಇದಾಗಿದ್ದು, ಇದನ್ನು ಫ್ರಾನ್ಸ್ ನ ನೌಕಾಪಡೆ ಹಾಗೂ ಇಂಧನ ಸಂಸ್ಥೆ ಡಿಸಿಎನ್ಎಸ್ ವಿನ್ಯಾಸಗೊಳಿಸಿದೆ.

ಹಿಂದೂ ಮಹಾಸಾಗರದ ಆಳಲ್ಲಿರುವ ಸ್ಯಾಂಡ್‌ಫಿಶ್‌ಗೆ ವಾಗಿರ್ ಎಂದು ಹೆಸರು.ರಷ್ಯಾದಿಂದ ಬಂದ ಜಲಾಂತರ್ಗಾಮಿ ನೌಕೆಯಾದ ವಾಗಿರ್‌ನ್ನು ಡಿಸೆಂಬರ್‌ನಲ್ಲಿ ಭಾರತೀಯ ನೌಕಾಪಡೆಗೆ ನಿಯೋಜಿಸಲಾಯಿತು. ಭಾರತೀಯ ನೌಕಾಪಡೆಯ ಯೋಜನೆಯಲ್ಲಿ ಐಎನ್‌ಎಸ್ ಕಲ್ವಾರಿ, ಖಂಡೇರಿ, ಕರಂಜ್, ವೇಲಾ ಹಾಗೂ ವಾಗಿರ್ ಪ್ರಮುಖವಾದವು.

6 ಸ್ಕಾರ್ಪಿನ್ ಶ್ರೇಣಿ ಕಲ್ವಾರಿ ಉದ್ಘಾಟನೆ ಯಾವಾಗ?

6 ಸ್ಕಾರ್ಪಿನ್ ಶ್ರೇಣಿ ಕಲ್ವಾರಿ ಉದ್ಘಾಟನೆ ಯಾವಾಗ?

6 ಸ್ಕಾರ್ಪಿನ್ ಶ್ರೇಣೀಯ ಜಲಾಂತರ್ಗಾಮಿಗಳ ಪೈಕಿ 2017 ರಲ್ಲಿ ಐಎನ್ಎಸ್ ಕಲ್ವಾರಿಯನ್ನು ಲೋಕಾರ್ಪಣೆಗೊಳಿಸಲಾಗಿತ್ತು.

ಸುಧಾರಿತ ಶಬ್ದ ಸಂವೇದಿತ ಗ್ರಹಿಕೆ

ಸುಧಾರಿತ ಶಬ್ದ ಸಂವೇದಿತ ಗ್ರಹಿಕೆ

ಸುಧಾರಿತ ಶಬ್ದ ಸಂವೇದಿತ ಗ್ರಹಿಕೆ ತಂತ್ರಜ್ಞಾನದಂತಹ ಉತ್ಕೃಷ್ಟರಹಸ್ಯ ತಂತ್ರಜ್ಞಾನಗಳನ್ನು ಒಳಗೊಂಡಿರುವ ಭಾರತೀಯ ನೌಕಾಪಡೆಯ ಐದನೇ ಸ್ಕಾರ್ಪಿನ್ ವರ್ಗಕ್ಕೆ ಸೇರಿದ ವಾಗಿರ್ ಜಲಾಂತರ್ಗಾಮಿಯನ್ನು ಗುರುವಾರ ದಕ್ಷಿಣ ಮುಂಬೈನ ಹಡಗುಕಟ್ಟಯಲ್ಲಿ ಯಶಸ್ವಿಯಾಗಿ ಉದ್ಘಾಟಿಸಲಾಯಿತು.

ದೇಶೀಯ ದರ್ಜೆಯ ಕಲ್ವಾರಿ

ದೇಶೀಯ ದರ್ಜೆಯ ಕಲ್ವಾರಿ

ವಾಗಿರ್ ಭಾರತದಲ್ಲೇ ನಿರ್ಮಿಸುತ್ತಿರುವ ಆರು ಕಲ್ವರಿ ದರ್ಜೆಯ ಜಲಾಂತರ್ಗಾಮಿ ನೌಕೆಯ ಭಾಗವಾಗಿದೆ. ಈ ಜಲಾಂತರ್ಗಾಮಿಗಳನ್ನು ಭಾರತೀಯ ನೌಕಾಪಡೆಗಳ ಯೋಜನೆ-75ರ ಭಾಗವಾಗಿ ಫ್ರಾನ್ಸ್ ನೌಕಾಪಡೆ ಮತ್ತು ಡಿಸಿಎನ್ಎಸ್ ಇಂಧನ ಕಂಪನಿ ನಿರ್ಮಾಣ ಮಾಡುತ್ತಿದೆ.

ಜಲಾಂತರ್ಗಾಮಿ ನೌಕೆಯ ಉಪಯೋಗಗಳು

ಜಲಾಂತರ್ಗಾಮಿ ನೌಕೆಯ ಉಪಯೋಗಗಳು

ಈ ಜಲಾಂತರ್ಗಾಮಿ ನೌಕೆಗಳು ಮೇಲ್ಮೈ ವಿರೋಧಿ ಯುದ್ಧ, ಜಲಾಂತರ್ಗಾಮಿ ವಿರೋಧಿ ಯುದ್ಧ , ಗುಪ್ತಚರ ಮಾಹಿತಿ ಸಂಗ್ರಹಣೆ., ಮೈನ್ ಲೇಯಿಂಗ್ , ಪ್ರದೇಶದ ಕಣ್ಗಾವಲು ಕಾರ್ಯಗಳನ್ನು ಕೈಗೊಳ್ಳಬಹುದು ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

English summary
In yet another boost for the Indian Navy, Minister of State for Defence Shripad Naik launched the fifth scorpene class submarine 'Vagir' of Project 75 in Arabian sea waters at Mazagaon Dock through video conferencing on Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X