ಇಂಡಿಯನ್ ಮುಜಾಹಿದ್ದೀನ್ ಒಡೆದು ಭಾಗವಾಗಿದ್ದೇಕೆ?
ಬೆಂಗಳೂರು, ಏಪ್ರಿಲ್ 28 : ಇಂಡಿಯನ್ ಮುಜಾಹಿದ್ದೀನ್ ಸಂಘಟನೆ ಒಡೆಯಲು ಸಿದ್ಧಾಂತ ಕಾರಣವಲ್ಲ ಹಣ ಕಾರಣ ಎಂಬುದು ಬಹಿರಂಗವಾಗಿದೆ. 2013ರಲ್ಲಿ ಮುಜಾಹಿದ್ದೀನ್ ಸಂಘಟನೆ ಒಡೆದು ಅನ್ಸರ್-ಉತ್-ತಾಹಿದ್ ಸಂಘಟನೆ ಸ್ಥಾಪನೆಯಾಗಿತ್ತು.
ಮಹಾರಾಷ್ಟ್ರದ ಭಯೋತ್ಪಾದಕ ನಿಗ್ರಹ ದಳ (ಎಟಿಎಸ್) ಸೌದಿ ಅರೇಬಿಯಾದಲ್ಲಿ ಬಂಧಿಸಿರುವ ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ಜೈನುಲ್ ಅಬೆದಿನ್ ಸಂಘಟನೆ ಒಡೆದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಹಣದ ವಿಚಾರಕ್ಕೆ ಸಂಘಟನೆ ಒಡೆಯಿತು ಎಂದು ಹೇಳಿದ್ದಾನೆ. [ಉಗ್ರರು ಕರ್ನಾಟಕದಲ್ಲಿ ಸ್ಫೋಟಕ ದಾಸ್ತಾನು ಮಾಡುತ್ತಿದ್ದರು]

ದೇಶದಲ್ಲಿ ಹಲವು ಸ್ಫೋಟಗಳನ್ನು ನಡೆಸಿದ ಬಳಿಕ ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ಮುಖ್ಯಸ್ಥ ಯಾಸಿನ್ ಭಟ್ಕಳ್ ಹೆಚ್ಚಿನ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ. ಆದರೆ, ಸಂಘಟನೆಗೆ ಹಣ ನೀಡುತ್ತಿದ್ದವರು ಹೆಚ್ಚಿನ ಹಣ ನೀಡಲು ನಿರಾಕರಿಸಿದರು. ಇದರಿಂದಾಗಿ ಸಂಘಟನೆಯಲ್ಲಿ ಅಸಮಾಧಾನ ಉಂಟಾಯಿತು. [ಭಟ್ಕಳ ಮೂಲದ ಶಫಿ ಅರ್ಮರ್ ಹತ್ಯೆ?]
ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯಿಂದ ಹೊರಬಂದ ಸುಲ್ತಾನ್ ಅರ್ಮರ್ ಅನ್ಸರ್-ಉತ್-ತಾಹಿದ್ ಸಂಘಟನೆ ಸ್ಥಾಪಿಸಿದ. ಮುಂದೆ ಈ ಸಂಘಟನೆ ಐಎಸ್‌ಐಎಸ್ ಉಗ್ರ ಸಂಘಟನೆಗೆ ಭಾರತದಲ್ಲಿ ಯುವಕರನ್ನು ನೇಮಕ ಮಾಡಿಕೊಳ್ಳಲು ಆರಂಭಿಸಿತು. [ಭಟ್ಕಳ ಮೂಲದ ಶಫಿ ಭಾರತದಲ್ಲಿ ISIS ಮುಖ್ಯಸ್ಥ]
ಈಗ ಜೈಲಿನಲ್ಲಿರುವ ಯಾಸಿನ್ ಭಟ್ಕಳ್ ಬೇರೆ ಸಂಘಟನೆ ಸ್ಥಾಪನೆ ಮಾಡದಂತೆ ಸುಲ್ತಾನ್ ಅರ್ಮರ್ ಮನವೊಲಿಸಲು ಮುಂದಾದ. ಆದರೆ, ರಿಯಾಜ್ ಭಟ್ಕಳ ಮತ್ತು ಅರ್ಮರ್ ಸಂಘಟನೆಯಿಂದ ಹೊರಬಂದರು. ಇಲ್ಲಿ ಸಿದ್ಧಾಂತಗಳ ವಿಚಾರದಲ್ಲಿ ಮನಸ್ತಾಪವಿರಲಿಲ್ಲ. ಆದರೆ, ಹಣದ ವಿಚಾರದಲ್ಲಿ ಅಸಮಾಧಾನವಿತ್ತು.
ಹಣಕಾಸಿನ ವಿಚಾರದ ಕುರಿತು ಹೈದರಾಬಾದ್‌ನ ದಿಲ್‌ಸುಖ್‌ನಗರ ಸ್ಫೋಟದ ಬಳಿಕ ರಿಯಾಜ್ ಭಟ್ಕಳ್ ಬಳಿ ಮುಖಾಮುಖಿ ಮಾತುಕತೆ ನಡೆಸಲು ಯಾಸಿನ್ ಭಟ್ಕಳ್ ನಿರ್ಧರಿಸಿದ್ದ. ಆದರೆ, ನೇಪಾಳ ಗಡಿಯಲ್ಲಿ ಆತ ಪೊಲೀಸರ ಕೈಗೆ ಸಿಕ್ಕಿಬಿದ್ದ.
ಯಾಸಿನ್ ಮತ್ತು ರಿಯಾಜ್ ಭಟ್ಕಳ್ ವರ್ತನೆಯಿಂದ ಅಸಮಾನಗೊಂಡ ಸುಲ್ತಾನ್ ಅರ್ಮರ್ ಅನ್ಸರ್-ಉತ್-ತಾಹಿದ್ ಸಂಘಟನೆ ಸ್ಥಾಪನೆ ಮಾಡಿದ ಮತ್ತು ಅಂತರಾಷ್ಟ್ರೀಯ ಮಟ್ಟದ ಸಂಘಟನೆ ಜೊತೆ ಕೈ ಜೋಡಿಸಲು ಮುಂದಾದ. ಅದರ ಭಾಗವಾಗಿಯೇ ಆತ ಐಎಸ್‌ಐಎಸ್ ಜೊತೆ ಕೈ ಜೋಡಿಸಿದ.
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications