Rain Alert: ವಿವಿಧ ಭಾಗಗಳಲ್ಲಿ ಜುಲೈ 5ರವರೆಗೆ ಭಾರೀ ಮಳೆ ಆರ್ಭಟ, ಮುನ್ಸೂಚನೆ
IMD Weather Forecast: ನೈಋತ್ಯ ಮುಂಗಾರು ಮಳೆ ಅಬ್ಬರ ಮುಂದುವರಿಸಿದೆ. ಕರ್ನಾಟಕ ಸೇರಿದಂತೆ ದಕ್ಷಿಣ ಭಾಗದ ರಾಜ್ಯಗಳಲ್ಲಿ ಮತ್ತೆ ಸಕ್ರಿಯವಾಗಿರುವ ಮಳೆ, ಉತ್ತರ ಹಾಗೂ ಮಧ್ಯ ಭಾರತದಲ್ಲಿ ಆರ್ಭಟಿಸುತ್ತಿದೆ. ಮುಂದಿನ ಜುಲೈ 05 ವರೆಗೆ ಮತ್ತಷ್ಟು ಮಳೆ ಅಬ್ಬರಿಸುವ ಮುನ್ಸೂಚನೆ ನೀಡಿದೆ. ವಿವಿಧ ಭಾಗಗಳಲ್ಲಿ ಸಾಧಾರಣದಿಂದ ಭಾರೀ ಮತ್ತು ಅತ್ಯಧಿಕ ಭಾರೀ ಮಳೆ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD Weather Forecast) ಮುನ್ಸೂಚನೆ ನೀಡಿದೆ.
ಮುಂಗಾರು ಮಳೆ ಪೂರ್ವ ಮತ್ತು ಮಧ್ಯ ಭಾರತದ ರಾಜ್ಯಗಳಲ್ಲಿ ಮತ್ತಷ್ಟು ಚುರುಕಾಗಲಿದೆ. ಮುಂದಿನ 24 ಗಂಟೆಗಳಲ್ಲಿ ಝಾರ್ಖಂಡ್, ಒಡಿಶಾ ರಾಜ್ಯದಲ್ಲಿ ಅತ್ಯಧಿಕ ಮಳೆ ಆಗಲಿದ್ದು, ರೆಡ್ ಅಲರ್ಟ್ ನೀಡಲಾಗಿದೆ. ಇದೇ ಝಾರ್ಖಂಡ್, ಒಡಿಶಾ, ಬಿಹಾರ, ಮಧ್ಯ ಪ್ರದೇಶ ಹಾಗೂ ಛತ್ತಿಸ್‌ಗಢ ಸೇರಿದಂತೆ ಮೊದಲಾದ ರಾಜ್ಯಗಳಲ್ಲಿ ಮುಂದಿನ ಜುಲೈ 05ರವರೆಗೆ ವ್ಯಾಪಕ ಮಳೆ ಆಗಲಿದೆ. ಕೆಲವೆಡೆ ಗುಡುಗು ಸಹಿತ ಸಾಧಾರಣದಿಂದ ಭಾರೀ ಮಳೆ ಅಬ್ಬರಿಸಲಿದೆ. ಯೆಲ್ಲೋ ಅಲರ್ಟ್ ನೀಡಲಾಗಿದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.

ಗಾಳಿಯ ವೇಗ ಹೆಚ್ಚಳ ನಿರೀಕ್ಷೆ
ಮುಂದಿನ 05 ದಿನಗಳ ಕಾಲ ದೇಶದ ವಾಯುವ್ಯ ಭಾಗಗಳಾದ ಹಿಮಾಚಲ ಪ್ರದೇಶ, ಉತ್ತರಖಂಡ, ಉತ್ತರ ಪ್ರದೇಶ, ಪಂಜಾಬ್, ಹರಿಯಾಣ, ಚಂಡೀಗಢ ಹಾಗೂ ರಾಜಸ್ತಾನ್ ರಾಜ್ಯಗಳ ವಿವಿಧ ಕಡೆಗಳಲ್ಲಿ ಧಾರಾಕಾರ ಮಳೆ ಆಗುವ ನಿರೀಕ್ಷೆ ಇದೆ. ಈ ಮಳೆ ಬರುವ ರಾಜ್ಯಗಳಲ್ಲಿ ಗಾಳಿಯ ಪ್ರತಿ ಗಂಟೆ ವೇಗ ಕನಿಷ್ಠ 40 ಕಿಲೋ ಮೀಟರ್ ಇದರಲಿದೆ. ತಾಪಮಾನ ಇಳಿಕೆ ಆಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಅದೇ ರೀತಿ ಪೂರ್ವ ಭಾರತದ ಮಧ್ಯ ಪ್ರದೇಶ, ಗುಜರಾತ್, ಗೋವಾ-ಕೊಂಕಣ ರಾಜ್ಯಗಳ ಕೆಲವು ಭಾಗಗಳಲ್ಲಿ ಉತ್ತಮ ಮಳೆ ಲಕ್ಷಣಗಳು ಇವೆ. ಈಗಾಗಲೇ ಈ ಭಾಗದಲ್ಲಿ ಹಲವು ದಿನಗಳಿಂದ ಭಾರೀ ಮಳೆ ದಾಖಲಾಗಿದೆ. ಕೊಂಚ ಬಿಡುವು ನೀಡಿದ್ದ ಮುಂಗಾರು ಮುಂದಿನ ಐದು ದಿನ ಮತ್ತೆ ಅಬ್ಬರಿಸುವ ಸಂಭವವಿದೆ.
ಈಶಾನ್ಯ ರಾಜ್ಯಗಳಾದ ಅಸ್ಸಾಂ, ಮೇಘಾಲಯ, ಮಣಿಪುರ, ತ್ರಿಪುರಾ, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್ ಮಣಿಪುರ ಸೇರಿದಂತೆ ಈ ಭಾಗಗಳಲ್ಲಿ ಸಾಧಾರಣ ಇಲ್ಲವೇ ಭಾರೀ ಮಳೆ ಆಗಲಿದೆ. ಅಂದರೆ ಕನಿಷ್ಠ 60-100 ಮಿಲಿ ಮೀಟರ್ ವರೆಗೆ ಇಲ್ಲಿ ಮಳೆ ಸುರಿಯುವ ಲಕ್ಷಣಗಳಗಳು ಇವೆ. ಮುಂದಿನ ಮೂರರಿಂದ ಐದು ದಿನಗಳ ಕಾಲ ಈ ಮೇಲಿನ ಎಲ್ಲ ರಾಜ್ಯಗಳಲ್ಲಿ ಮುಂಗಾರು ಆರ್ಭಟ ಕಂಡು ಬರಲಿದೆ.
ಕರ್ನಾಟಕ ಮಳೆ: ಯೆಲ್ಲೋ ಅಲರ್ಟ್
ಇನ್ನು ಕರ್ನಾಟಕ ರಾಜ್ಯದಲ್ಲಿ ಕರವಳಿ ಹಾಗೂ ಮಲೆನಾಡಿನ ವಿವಿಧ ಜಿಲ್ಲೆಗಳಲ್ಲಿ ಜುಲೈ 03ರಿಂದ ನಾಲ್ಕು ದಿನ ಸಾಧಾರಣದಿಂದ ಜೋರು ಮಳೆ ಆಗಲಿದೆ. ಭಾರೀ ಮಳೆ ಪ್ರಯುಕ್ತ ಕರಾವಳಿಯ ಮೂರು ಸೇರಿ ಒಟ್ಟು ಆರು ಜಿಲ್ಲೆಗಳಿಗೆ ಯೆಲ್ಲೋ ಅಟರ್ಲ್ ನೀಡಲಾಗಿದೆ.












Click it and Unblock the Notifications