ಪಾಕ್ ಜೈಲುಗಳಲ್ಲಿ ಎಷ್ಟು ಮಂದಿ ಭಾರತೀಯರು ಕೊಳೆಯುತ್ತಿದ್ದಾರೆ ಗೊತ್ತೇ?

Recommended Video

      Pulwama : ಪಾಕಿಸ್ತಾನದ ಜೈಲುಗಳಲ್ಲಿ ಎಷ್ಟು ಮಂದಿ ಭಾರತೀಯರು ಇದ್ದಾರೆ ಗೊತ್ತಾ?

      ನವದೆಹಲಿ, ಫೆಬ್ರವರಿ 20: ಬೇಹುಗಾರಿಕೆ ನಡೆಸಿದ ಆರೋಪದಲ್ಲಿ ಬಂಧಿತನಾಗಿ ಪಾಕಿಸ್ತಾನದಲ್ಲಿ ಗಲ್ಲುಶಿಕ್ಷೆಗೆ ಗುರಿಯಾಗಿರುವ ಕುಲಭೂಷಣ್ ಜಾಧವ್ ಅವರ ಬಿಡುಗಡೆಗೆ ಭಾರತ ಸರ್ವಪ್ರಯತ್ನ ನಡೆಸಿದೆ. ಜಾಧವ್ ಒಬ್ಬ ಅಮಾಯಕ. ಅವರನ್ನು ಅಪಹರಿಸಿ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಗಲ್ಲುಶಿಕ್ಷೆಗೆ ಗುರಿಪಡಿಸುವ ಪ್ರಯತ್ನ ನಡೆದಿದೆ ಎಂದು ಭಾರತ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಆರೋಪಿಸಿದೆ.

      ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಪಾಕಿಸ್ತಾನ ಜಾಧವ್ ವಿರುದ್ಧ ತನ್ನ ಬಳಿ ಸಾಕ್ಷ್ಯಗಳಿವೆ ಎಂದು ಪ್ರತಿಪಾದಿಸಿದೆ. ಉಭಯ ದೇಶಗಳ ವಾದ ಆಲಿಸಿದ ಬಳಿಕ ಅಂತಾರಾಷ್ಟ್ರೀಯ ನ್ಯಾಯಾಲಯ ತನ್ನ ತೀರ್ಪು ಪ್ರಕಟಿಸಲಿದೆ.

      ಎಲ್ಲರ ಗಮನ ಕುಲಭೂಷಣ್ ಅವರ ಭವಿಷ್ಯದ ಮೇಲೆ ನೆಟ್ಟಿದೆ. ಆದರೆ, ಗೂಢಚರ್ಯೆ ಆರೋಪದಲ್ಲಿ ಪಾಕಿಸ್ತಾನದ ಜೈಲಿನಲ್ಲಿ ಬಂಧಿಯಾಗಿರುವುದು ಕುಲಭೂಷಣ್ ಮಾತ್ರವಲ್ಲ.

      Indian civilians and pakistanis in jails on various charges in both nations

      ಮಿಷನ್ ಭಾರತೀಯಂ ಸಂಸ್ಥೆಯು ಭಾರತೀಯ ವಿದೇಶಾಂಗ ಸಚಿವಾಲಯದಿಂದ ಆರ್‌ಟಿಐ ಮೂಲಕ ಪಡೆದ ಮಾಹಿತಿ ಅನ್ವಯ ಕನಿಷ್ಠ 537 ಭಾರತೀಯರು ವಿವಿಧ ಆರೋಪಗಳ ಅಡಿಯಲ್ಲಿ ಪಾಕಿಸ್ತಾನದ ಜೈಲುಗಳಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ.

      ಇವರಲ್ಲಿ 54 ಮಂದಿ ನಾಗರಿಕರು ವಿವಿಧ ಆರೋಪಗಳಡಿ ಶಿಕ್ಷೆಗೆ ಒಳಗಾಗಿದ್ದರೆ, ಇನ್ನು 483 ಮಂದಿ ಪಾಕಿಸ್ತಾನದ ಅಂತಾರಾಷ್ಟ್ರೀಯ ಜಲ ಪ್ರದೇಶದೊಳಗೆ ಅಕ್ರಮವಾಗಿ ಪ್ರವೇಶಿಸಿದ ಕಾರಣಕ್ಕೆ ಬಂಧಿತರಾದ ಮೀನುಗಾರರಾಗಿದ್ದಾರೆ.

      ಹಾಗೆಯೇ, ಭಾರತದ ಜೈಲುಗಳಲ್ಲಿಯೂ ಪಾಕ್ ಪ್ರಜೆಗಳು ಶಿಕ್ಷೆ ಅನುಭವಿಸುತ್ತಿದ್ದಾರೆ. ಸರ್ಕಾರದ ಅಂಕಿ ಅಂಶಗಳ ಪ್ರಕಾರ ಕನಿಷ್ಠ 347 ಪಾಕಿಸ್ತಾನಿ ಪ್ರಜೆಗಳು ಭಾರತದ ಜೈಲಿನಲ್ಲಿದ್ದಾರೆ. ಅವರಲ್ಲಿ 249 ನಾಗರಿಕರು ಮತ್ತು 98 ಮಂದಿ ಮೀನುಗಾರರಾಗಿದ್ದಾರೆ. ಈ ಬಂಧಿತರಲ್ಲಿ ಹೆಚ್ಚಿನವರು ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆ ಸಂಬಂಧಿ ಚಟುವಟಿಕೆಗಳಲ್ಲಿ ಭಾಗಿಯಾದ ಆರೋಪ ಹೊತ್ತಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+