ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಮೀನಾಕ್ಷಿ ಚೌಧರಿಗೆ ಸೌಂದರ್ಯ ಸ್ಪರ್ಧೆಯಲ್ಲಿ ರನ್ನರ್ ಅಪ್ ಕಿರೀಟ

|
Google Oneindia Kannada News

ನವದೆಹಲಿ, ಅಕ್ಟೋಬರ್ 26: ಮಿಸ್‌ ಗ್ರ್ಯಾಂಡ್‌ ಇಂಟರ್‌ನ್ಯಾಷನಲ್‌ 2018 ಸ್ಪರ್ಧೆಯಲ್ಲಿ ಭಾರತದ ಮೀನಾಕ್ಷಿ ಚೌದರಿ ರನ್ನರ್ ಅಪ್ ಆಗಿದ್ದಾರೆ.

ಮಯನ್ಮಾರ್‌ನಲ್ಲಿ ನಡೆದ ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ ಪರುಗ್ವೆಯ ಕ್ಲಾರಾ ಸೊಸಾ ಗ್ರಾಂಡ್‌ ವಿಶ್ವ ಸುಂದರಿ ಕಿರೀಟ ಧರಿಸಿದರು. ಭಾರತದ ಸುಂದರಿ ಮೀನಾಕ್ಷಿ ಚೌಧರಿ ಪ್ರತಿಷ್ಠಿತ ಮಿಸ್‌ ಗ್ರಾಂಡ್‌ ಇಂಟರ್‌ನ್ಯಾಷನಲ್‌ ಸೌಂದರ್ಯ ಸ್ಪರ್ಧೆಯ ಮೊದಲ ರನ್ನರ್‌ ಅಪ್‌ ಆಗಿ ಹೊರ ಹೊಮ್ಮಿದ್ದಾರೆ.

ಹರ್ಯಾಣ ಸುಂದರಿಗೆ ಒಲಿದ ಮಿಸ್ ಇಂಡಿಯಾ ವರ್ಲ್ಡ್ ಪಟ್ಟಹರ್ಯಾಣ ಸುಂದರಿಗೆ ಒಲಿದ ಮಿಸ್ ಇಂಡಿಯಾ ವರ್ಲ್ಡ್ ಪಟ್ಟ

ಎಫ್‌ಬಿಬಿ ಕಲರ್ಸ್‌ ಫೆಮಿನಾ ಮಿಸ್‌ ಗ್ರ್ಯಾಂಡ್‌ ಇಂಡಿಯಾ ವಿಭಾಗದಲ್ಲಿ ಮೀನಾಕ್ಷಿ ಮೊದಲ ರನ್ನರ್ ಅಪ್‌ ಎನಿಸಿದರೆ, ನಾಡಿಯಾ ಪುರ್ವೊಕೊ ಮಿಸ್‌ ಗ್ರಾಂಡ್‌ ಇಂಡೊನೇಷ್ಯಾ ವಿಭಾಗದ ಎರಡನೇ ಸ್ಥಾನ ತುಂಬಿದರು. ಮೂರನೇ ಸ್ಥಾನ ಪೊರ್ಟೊರಿಕಾದ ನಿಕೋಲ್‌ ಕೊಲನ್‌ ಅವರಿಗೆ ದಕ್ಕಿತು.

Indian beauty Meenakshi Chaudhary crowned runner up in Miss Grand International

ಅವರು ಪ್ರಸ್ತುತ ಡೆಂಟಲ್ ಸರ್ಜರಿ ವಿದ್ಯಾರ್ಥಿನಿಯಾಗಿದ್ದಾರೆ. ಕಳೆದ ಜೂನ್ ತಿಂಗಳಲ್ಲಿ ನಡೆದ ಫೆಮಿನಾ ಮಿಸ್ ಇಂಡಿಯಾ 2018ರಲ್ಲಿ ಸಹ ಮೊದಲ ರನ್ನರ್ ಅಪ್ ಆಗಿದ್ದ ಹರಿಯಾಣ ಮೂಲದ ಚೆಲುವೆ, ಮಿಸ್‌ ಗ್ರಾಂಡ್‌ ಇಂಟರ್‌ನ್ಯಾಷನಲ್‌ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಅವಕಾಶ ತಮ್ಮದಾಗಿಸಿಕೊಂಡಿದ್ದರು.
ಈ ಸ್ಪರ್ಧೆಯಲ್ಲಿ ಆಗವಹಿಸಿದ್ದ 20 ಮಂದಿಯಲ್ಲಿ ಮೀನಾಕ್ಷಿ ಕೂಡ ಒಬ್ಬರಾಗಿದ್ದರು.ಕೊನೆಯ ರಾಂಪ್‌ನಲ್ಲಿ ಸ್ವಿಮ್ಮಿಂಗ್ ಸ್ಯೂಟ್‌ನಲ್ಲಿ ಮೀನಾಕ್ಷಿ ಕಾಣಿಸಿಕೊಂಡಿದ್ದರು. ಸೆಮಿ ಫೈನಲ್‌ಗೆ 10 ಮಂದಿ ಆಯ್ಕೆಯಾಗಿದ್ದರು.

English summary
Indian beauty Meenakshi Chaudhary has crowned first runner up in Miss Grand International-2018 which was held at Myanmar on Thursday night.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X