ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತೀಯ ಸೇನೆಯಲ್ಲಿ ಮೊದಲ ಕೊರೊನಾ ಪ್ರಕರಣ ಪತ್ತೆ

|
Google Oneindia Kannada News

ನವದೆಹಲಿ, ಮಾರ್ಚ್ 18: ಭಾರತೀಯ ಸೇನೆಯಲ್ಲಿ ಮೊದಲ ಕೊರೊನಾ ವೈರಸ್ ಪ್ರಕರಣ ಪತ್ತೆಯಾಗಿದೆ.

ಯೋಧರೊಬ್ಬರು ಫೆಬ್ರವರಿ 25 ರಿಂದ ಮಾರ್ಚ್ 1ರವರೆಗೆ ರಜೆ ಮೇಲೆ ಊರಿಗೆ ತೆರಳಿದ್ದರು. ಅವರ ತಂದೆ ಇರಾನ್‌ನಲ್ಲಿ ಧಾರ್ಮಿಕ ಕ್ಷೇತ್ರಗಳನ್ನು ಸುತ್ತಾಡಿ ವಾಪಸಾಗಿದ್ದರು.

ಅವರಿಂದ ಮನೆಯಲ್ಲಿದ್ದ ಯೋಧರೊಬ್ಬರಿಗೂ ಕೊರೊನಾ ಸೋಂಕು ತಗುಲಿದೆ ಎನ್ನುವ ಮಾಹಿತಿಯನ್ನು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ನೀಡಿದೆ.

Army

ಅವರು ಇದೀಗ ಸ್ಟೇಜ್ 2ರಲ್ಲಿದ್ದಾರೆ, ಶೀಘ್ರವೇ ಗುಣಮುಖರಾಗಲಿದ್ದಾರೆ. ಸರ್ಕಾರದ 72 ಪ್ರಯೋಗಾಲಯಗಳಲ್ಲಿ ಪರೀಕ್ಷೆ ಮಾಡಿಸಿಕೊಳ್ಳಬಹುದಾಗಿದೆ. ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 137ಕ್ಕಿಂತಲೂ ಹೆಚ್ಚಿದೆ. ಈ ವೈರಸ್ ಹರಡದಂತೆ ಮುಂಜಾಗ್ರತೆ ವಹಿಸಬೇಕು ಎಂದು ಐಸಿಎಂಆರ್ ತಿಳಿಸಿದೆ.

ಒಂದೆಡೆ ಕೊರೊನಾ: ಇನ್ನೊಂದೆಡೆ ಕಲಬುರಗಿ ಪೆಟ್ರೋಲ್ ಬಂಕ್ ಎದುರು ಜನಸಾಗರಒಂದೆಡೆ ಕೊರೊನಾ: ಇನ್ನೊಂದೆಡೆ ಕಲಬುರಗಿ ಪೆಟ್ರೋಲ್ ಬಂಕ್ ಎದುರು ಜನಸಾಗರ

ಯೋಧ ಲೇಹ್‌ನ ಚುಹೊಟ್ ಪ್ರದೇಶದವರು ಎಂದು ತಿಳಿದುಬಂದಿದೆ. ಧಾರ್ಮಿಕ ಸ್ಥಳದಿಂದ ಹಿಂದಿರುಗಿದ್ದ ಯೋಧರ ತಂದೆಯನ್ನು ಫೆಬ್ರವರಿ 29ರವರೆಗೆ ಲಡಾಖ್‌ನ ಹಾರ್ಟ್‌ ಫೌಂಟೇಶನ್‌ನಲ್ಲಿ ಬಂಧನದಲ್ಲಿಡಲಾಗಿತ್ತು.

ಮಾರ್ಚ್ 2ಕ್ಕೆ ಕೆಲಸಕ್ಕೆ ಹಾಜರಾಗಿದ್ದರು. ಮಾರ್ಚ್ 6 ರಂದು ತಪಾಸಣೆ ಮಾಡಿದಾಗ ಕೊರೊನಾ ಇರುವುದು ದೃಢಪಟ್ಟಿತ್ತು. ಎನ್‌ಎನ್‌ಎಂ ಹಾರ್ಟ್ ಫೌಂಡೇಶನ್‌ನಲ್ಲಿ ಯೋಧನ ಪತ್ನಿ, ತಂಗಿ ಹಾಗೂ ಮಕ್ಕಳನ್ನು ಪರೀಕ್ಷೆ ಮಾಡಲಾಗುತ್ತಿದೆ.

English summary
In the first case of the coronavirus in the Indian Army, a 34-year-old soldier has tested positive for the infection in Leh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X