ಶನಿವಾರದ ಚಿತ್ರ ಸುದ್ದಿಗಳು ನಿಮಗಾಗಿ

ಬೆಂಗಳೂರು, ಜುಲೈ 04 : ದೇಶ ವಿದೇಶಗಳಲ್ಲಿ ಪ್ರತಿದಿನ ಸಾವಿರಾರು ಘಟನೆಗಳು ನಡೆಯುತ್ತವೆ. ಆದರೆ, ಎಲ್ಲಾ ಸುದ್ದಿಗಳನ್ನು ಪದಗಳಲ್ಲಿ ಕಟ್ಟಿಕೊಡಲು ಸಾಧ್ಯವಿಲ್ಲ. ಕೆಲವು ಘಟನೆಗಳನ್ನು ಚಿತ್ರವೇ ಹೇಳುತ್ತವೆ. ಇಂತಹ ವಿಶಿಷ್ಟ ಚಿತ್ರಗಳ ಬಗ್ಗೆ ಪುಟಗಟ್ಟಲೇ ಬರೆಯುವುದಕ್ಕಿಂತ ಅವುಗಳನ್ನು ನೋಡುವುದೇ ಖುಷಿ ಸಂತಸ ನೀಡುತ್ತದೆ.

ಶನಿವಾರದ ಕೆಲವು ಸುದ್ದಿಗಳಿಗೆ ಸಂಬಂಧ ಪಟ್ಟ ಚಿತ್ರಗಳು ಇಲ್ಲಿವೆ. ಇಲ್ಲಿ ಎಲ್ಲಾ ವಿಭಾಗಗಳಿಗೆ ಸೇರಿದ ಚಿತ್ರಗಳು ಇವುಗಳಲ್ಲಿ ಸೇರಿವೆ. ಈ ಚಿತ್ರಗಳ ಸಂಕ್ಷಿಪ್ತ ಮಾಹಿತಿಯನ್ನು ಮಾತ್ರ ನೀಡಲಾಗಿದೆ. ಸಾವಿರಾರು ಫೋಟೋಗಳ ಪೈಕಿ ನಮ್ಮ ಗಮನ ಸೆಳೆದ ಫೋಟೋಗಳನ್ನು ಮಾತ್ರ ನಾವು ಆಯ್ಕೆ ಮಾಡಿ ನೀಡಿದ್ದೇವೆ.

ಕರ್ನಾಟಕದಿಂದ ವಿದೇಶದ ತನಕ ವಿವಿಧ ಸುದ್ದಿಗಳ ಚಿತ್ರಗಳು ಇಲ್ಲಿವೆ. ದೆಹಲಿಯಲ್ಲಿ ಪ್ರಾಣಿಗಳಿಗೂ ಹೆಲ್ಮೆಟ್ ಕಡ್ಡಾಯವಾಗಿದೆ. ಮೈಸೂರಿನಲ್ಲಿ ಹುಲಿಯಿಂದ ಜಿಂಕೆಗಳು ಪಾರಾಗಿ ಓಡಿ ಹೋಗಿವೆ. ಚಂದ್ರ ಭೂಮಿಗೆ ಬಂದಿದ್ದಾನೆ ಹೀಗೆ ಕೆಲವೊಂದು ವಿಶಿಷ್ಟ ಚಿತ್ರಗಳು ಇಲ್ಲಿವೆ. ಇವುಗಳನ್ನು ನೋಡಿ ಸಂತೋಷ ಪಡಿ. [ಪಿಟಿಐ ಚಿತ್ರಗಳು]

ನಾಯಿಗಳಿಗೂ ಹೆಲ್ಮೆಟ್ ಕಡ್ಡಾಯ

ನಾಯಿಗಳಿಗೂ ಹೆಲ್ಮೆಟ್ ಕಡ್ಡಾಯ

ದೇಶದ ಅನೇಕ ರಾಜ್ಯಗಳಲ್ಲಿ ಬೈಕ್‌ನ ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯಗೊಳಿಸಲು ಚಿಂತನೆ ನಡೆದಿದೆ. ದೆಹಲಿಯಲ್ಲಿ ಅದು ಜಾರಿಗೆ ಬಂದಿದ್ದು ಕ್ಯಾಮರಾ ಕಣ್ಣಿಗೆ ಕಂಡು ಬಂದಿದ್ದು ಹೀಗೆ. ಆದರೆ, ಹಿಂಬದಿ ಕುಳಿತಿರುವುದು ನಾಯಿ.

ಅಬ್ಬಾ ಬದುಕಿದೆ ಬಡ ಜೀವವೇ...

ಅಬ್ಬಾ ಬದುಕಿದೆ ಬಡ ಜೀವವೇ...

ನಾಗರಹೊಳೆ ಅಭಯಾರಣ್ಯದಲ್ಲಿ ಕಂಡು ಬಂದ ದೃಶ್ಯವಿದು. ಹುಲಿ ಜಿಂಕೆಗಳನ್ನು ಹಿಡಿಯಲು ಪ್ರಯತ್ನ ನಡೆಸಿದ್ದು, ಜಿಂಕೆಗಳು ಜೀವ ಉಳಿಸಿಕೊಳ್ಳಲು ಅತ್ತಿತ್ತ ಓಡುತ್ತಿವೆ. ಬದುಕಿದೆ ಬಡ ಜೀವವೇ ಎಂದುಕೊಳ್ಳುತ್ತಿವೆ.

ಚಂದ್ರ ಕೈಗೆ ಸಿಕ್ಕದ ನೋಡಿ

ಚಂದ್ರ ಕೈಗೆ ಸಿಕ್ಕದ ನೋಡಿ

ಚಂದ್ರ ಕೈಗೆ ಸಿಗುವಷ್ಟು ಸಮೀಪಕ್ಕೆ ಬಂದಿದ್ದ. ರಷ್ಯಾದಲ್ಲಿ ಕಂಡಬಂದ ದೃಶ್ಯವಿದು. ಚಂದ್ರನನ್ನು ಹತ್ತಿರದಿಂದ ನೋಡಲು ಇದೊಂದು ಉತ್ತಮ ಅವಕಾಶ.

ಅಬ್ಬಾ ಏನು ಮಳೆ, ಗಾಳಿ

ಅಬ್ಬಾ ಏನು ಮಳೆ, ಗಾಳಿ

ಭುವನೇಶ್ವರದಲ್ಲಿ ಕಂಡು ದೃಶ್ಯವಿದು. ಭಾರೀ ಗಾಳಿ ಮತ್ತು ಮಳೆಯಿಂದ ರಕ್ಷಿಸಿಕೊಳ್ಳಲು ವ್ಯಕ್ತಿಯೊಬ್ಬ ಹರಸಾಹಸ ಮಾಡುತ್ತಿದ್ದಾನೆ.

ಮುಖ್ಯಮಂತ್ರಿಗಳ ಬಸ್ಸಿನ ಬೆಲೆ 5 ಕೋಟಿ

ಮುಖ್ಯಮಂತ್ರಿಗಳ ಬಸ್ಸಿನ ಬೆಲೆ 5 ಕೋಟಿ

ತೆಲಂಗಾಣಾ ರಾಜ್ಯದ ಮುಖ್ಯಮಂತ್ರಿ ಕೆ.ಚಂದ್ರಶೇಖರರಾವ್ ಓಡಾಟಕ್ಕೆಂದು ತಗೆದುಕೊಂಡಿರುವ ಬುಲೆಟ್ ಪ್ರೂಫ್ ಬಸ್ ಇದು. ಇದರ ಬೆಲೆ 5 ಕೋಟಿ ರೂ.ಗಳು. ಈ ಬಸ್ ಈಗ ಪ್ರತಿಪಕ್ಷಗಳ ಕೆಂಗಣ್ಣಿಗೂ ಗುರಿಯಾಗಿದೆ.

ಪ್ರಮಾಣ ವಚನ ಸ್ವೀಕರಿಸಿದ ಅಮ್ಮಾ

ಪ್ರಮಾಣ ವಚನ ಸ್ವೀಕರಿಸಿದ ಅಮ್ಮಾ

ಆರ್‌.ಕೆ.ನಗರ ಕ್ಷೇತ್ರದ ಉಪ ಚುನಾವಣೆಯಲ್ಲಿ ಜಯಗಳಿಸಿರುವ ತಮಿಳುನಾಡು ಮಖ್ಯಮಂತ್ರಿ ಜೆ.ಜಯಲಲಿತಾ ಅವರು ಶನಿವಾರ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಮನೆಗೆ ತೆರಳಿದ ಕನಸಿನ ಕನ್ಯೆ

ಮನೆಗೆ ತೆರಳಿದ ಕನಸಿನ ಕನ್ಯೆ

ರಸ್ತೆ ಅಪಘಾತದಲ್ಲಿ ಗಾಯಗೊಂಡು ಮನೆಗೆ ತೆರಳಿದ್ದ ನಟಿ ಮತ್ತು ಬಿಜೆಪಿ ಸಂಸದೆ ಹೇಮಾಮಾಲಿನಿ ಅವರು ಶನಿವಾರ ಜೈಪುರದ ಪೋರ್ಟಿಸ್ ಆಸ್ಪತ್ರೆಯಿಂದ ಮನೆಗೆ ಮುಂಬೈಗೆ ತೆರಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+