ಶಾಂತಿ.. ಶಾಂತಿ... ಭಾರತದಿಂದ ಇಸ್ರೇಲ್ & ಇರಾನ್ ನಾಯಕರಿಗೆ ಮಹತ್ವದ ಸಲಹೆ... Israel And Iran

ಇಸ್ರೇಲ್ & ಇರಾನ್ ನಡುವೆ ಯುದ್ಧ ಶುರುವಾಗಿರುವ ಸಮಯದಲ್ಲೇ ಭಾರತ ಮಹತ್ವದ ಸಲಹೆ ನೀಡಿದೆ. ಭಾರತ ಈಗ ಇಸ್ರೇಲ್ & ಇರಾನ್ ಎರಡೂ ದೇಶಗಳ ನಡುವೆ ಉತ್ತಮ ಸಂಬಂಧ ಹೊಂದಿದೆ, ಇದೇ ಕಾರಣಕ್ಕೆ ಭಾರತ ಯಾರ ಪರ ನಿಲ್ಲುತ್ತದೆ? ಎಂಬ ಕುತೂಹಲ ಮೂಡಿತ್ತು. ಆದರೆ ಇದೀಗ ಭಾರತ ಇಬ್ಬರ ಪರವಾಗಿಯೂ ನಿಂತಿದ್ದು, ಸಂಘರ್ಷ ಭಾರಿ ಪ್ರಮಾಣದಲ್ಲಿ ಸ್ಫೋಟಗೊಂಡ ಸಮಯದಲ್ಲೇ ಶಾಂತಿ ಮಂತ್ರ ಜಪಿಸಿದ. ಶಾಂತಿ.. ಶಾಂತಿ... ಅಂತಾ ಈಗ ಭಾರತದಿಂದ ಇಸ್ರೇಲ್ & ಇರಾನ್ ನಾಯಕರಿಗೆ ಮಹತ್ವದ ಸಲಹೆ ನೀಡಲಾಗಿದೆ.

ಇಸ್ರೇಲ್ & ಇರಾನ್ ನಡುವ ಇದೀಗ ಭಾರಿ ದೊಡ್ಡ ಮಟ್ಟದಲ್ಲಿ ದಾಳಿ ಆರಂಭವಾಗಿ, ಭಯದ ವಾತಾವರಣ ಎದುರಾಗಿದೆ. ಅಷ್ಟಕ್ಕೂ ಇರಾನ್ ತನ್ನ ಪ್ರದೇಶದ ಕಡೆಗೆ ಸುಮಾರು 100 ಡ್ರೋನ್‌ಗಳನ್ನು ಹಾರಿಸಿದೆ ಅಂತಾ ಇಸ್ರೇಲ್ ಆರೋಪ ಮಾಡಿ ಸಂಚಲನ ಸೃಷ್ಟಿ ಮಾಡಿರುವ ಸಮಯದಲ್ಲೇ, ಇರಾನ್ ಸೇನೆಯಿಂದ ಕೂಡ ಮತ್ತೊಂದು ಸುತ್ತಿನ ದಾಳಿಗೆ ಸಿದ್ಧತೆ ಸಾಗಿದೆ ಎಂಬ ಸುದ್ದಿ ಇದೀಗ ಹರಿದಾಡುತ್ತಿದೆ. ಹೀಗಾಗಿ ಮಧ್ಯಪ್ರಾಚ್ಯ ಭಾಗದಲ್ಲಿ ಯಾವುದೇ ಕ್ಷಣದಲ್ಲಿ ಬೆಂಕಿ ಹೊತ್ತಿಕೊಂಡು ದೊಡ್ಡ ಗಲಾಟೆ ಶುರುವಾಗುವ ಸಾಧ್ಯತೆ ಇದೀಗ ದಟ್ಟವಾಗಿದೆ. ಹಾಗೇ ಈ ಯುದ್ಧ ಇನ್ನಷ್ಟು ಜೋರಾದರೆ ಮತ್ತೊಂದು ಮಹಾಯುದ್ಧ ಗ್ಯಾರಂಟಿ ಅನ್ನೋ ಭಯ ಕೂಡ ಆವರಿಸಿದೆ. ಇದೇ ಸಮಯದಲ್ಲಿ ಭಾರತ ಕೂಡ ಮಹತ್ವದ ಸಲಹೆ & ಸೂಚನೆ ನೀಡಿ ಶಾಂತಿಯಿಂದ ಇರಿ ಅಂತಾ ಇದೀಗ ಎರಡೂ ದೇಶಗಳಿಗೆ ಮನವಿ ಮಾಡಿದೆ.

India Urges Israel and Iran to Avoid Escalatory Steps Amid Conflict

ಇಸ್ರೇಲ್ & ಇರಾನ್ ನಡುವೆ ಮಹಾಯುದ್ಧ?

ಭಾರತ ಜಾಗತಿಕ ಶಕ್ತಿಯಾಗಿ ಬೆಳೆಯಲು ಎಲ್ಲರ ಸ್ನೇಹವು ಅತ್ಯಗತ್ಯ, ಯಾವುದೇ ದೇಶದ ಜೊತೆಗೂ ಯುದ್ಧ ಮೊದಲು ಬೇಡ ಎಂಬ ನಿಲುವು ಭಾರತ ಪ್ರತಿಪಾದನೆ ಮಾಡುತ್ತಾ ಶಾಂತಿ ಮಂತ್ರ ಜಪಿಸುತ್ತಿದೆ. ಅದರಲ್ಲೂ ಉಕ್ರೇನ್ & ರಷ್ಯಾದ ನಡುವೆ ಯುದ್ಧ ಆರಂಭ ಆಗಿದ್ದಾಗ ಭಾರತ ಮೊದಲು ವಿರೋಧ ಮಾಡಿ, ಶಾಂತಿ ಕಾಪಾಡಲು ಮನವಿ ಮಾಡಿತ್ತು. ಈ ಹಾದಿಯಲ್ಲೇ ಗಾಜಾ ಪಟ್ಟಿಯಲ್ಲಿ ನಡೆಯುತ್ತಿರುವ ಯುದ್ಧದ ಬಗ್ಗೆ ಕೂಡ ಭಾರತ ಶಾಂತಿ ಸ್ಥಾಪನೆ ಆಗಬೇಕು ಎನ್ನುವ ನಿಲುವು ಹೊಂದಿದೆ. ಹೀಗಿದ್ದಾಗಲೇ ಇರಾನ್ & ಇಸ್ರೇಲ್ ನಡುವೆ ಕೂಡ ಯುದ್ಧ ಶುರುವಾಗಿದ್ದು, ಯಾವುದೇ ಕಾರಣಕ್ಕೂ ಎರಡೂ ದೇಶಗಳು ತೀಕ್ಷ್ಣ ಕ್ರಮ ಕೈಗೊಳ್ಳಬಾರದು ಎಂದು ಸಲಹೆ ನೀಡಿದೆ ಭಾರತ.

ಎರಡೂ ದೇಶಗಳು ಸೈಲೆಂಟ್ ಆಗುತ್ತವಾ?

ಒಟ್ನಲ್ಲಿ ಇಸ್ರೇಲ್ & ಇರಾನ್ ನಡುವೆ ಯುದ್ಧ ಶುರುವಾಗಿರುವ ಹಿನ್ನೆಲೆ ಭಾರತ ಕೂಡ ಅಲರ್ಟ್ ಆಗಿದ್ದು, ಭಾರತದ ಪ್ರಜೆಗಳನ್ನು ಸುರಕ್ಷಿತವಾಗಿ ಕರೆತರಲು ಚಿಂತಿಸುತ್ತಿದೆ. ಇಸ್ರೇಲ್ ದೇಶದಲ್ಲಿ & ಇರಾನ್ ನೆಲದಲ್ಲಿ ಕೂಡ ಭಾರತೀಯರು ಇದ್ದಾರೆ. ಈಗ ಅವರ ಸುರಕ್ಷತೆ ದೃಷ್ಟಿಯಿಂದ ಕ್ರಮ ಕೈಗೊಳ್ಳಲಾಗಿದ್ದು, ಇಸ್ರೇಲ್ & ಇರಾನ್ ನಾಯಕರಿಗೆ ಶಾಂತಿಯನ್ನ ಕಾಪಾಡಲು ಸಲಹೆ ನೀಡಲಾಗಿದೆ. ಆದರೆ ಈಗಿನ ಪರಿಸ್ಥಿತಿ ನೋಡಿದರೆ ಇಬ್ಬರ ಮಧ್ಯೆ ಇನ್ನಷ್ಟು ಘೋರ ಕಾಳಗ ನಡೆದು ಹೋಗುವ ಸಾಧ್ಯತೆ ದಟ್ಟವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+