ಡಿಸೆಂಬರ್ ವೇಳೆಗೆ ಭಾರತಕ್ಕೆ ಬರಲಿದೆ 10 ಕೋಟಿ ಕೊರೊನಾ ಲಸಿಕೆ

ನವದೆಹಲಿ, ನವೆಂಬರ್ 14: ವಿಶ್ವದ ಅತಿ ದೊಡ್ಡ ಲಸಿಕೆ ತಯಾರಿಕಾ ಸಂಸ್ಥೆ ಅಸ್ಟ್ರಾಜೆನೆಕಾವು ಡಿಸೆಂಬರ್ ವೇಳೆಗೆ 100 ಮಿಲಿಯನ್(10 ಕೋಟಿ) ಅಷ್ಟು ಕೊರೊನಾ ಲಸಿಕೆಯನ್ನು ಭಾರತಕ್ಕೆ ನೀಡಲು ಮುಂದಾಗಿದೆ.

ಅಸ್ಟ್ರಾಜೆನೆಕಾ ಕೊವಿಡ್ 19 ಲಸಿಕೆಯ ಉತ್ಪಾದನೆಯನ್ನು ಹೆಚ್ಚಿಸುತ್ತಿದೆ. ಅದೇ ತಿಂಗಳಲ್ಲಿ ಭಾರತದಲ್ಲಿ ಆರಂಭವಾಗುವ ಇನಾಕ್ಯುಲೇಷನ್ ಡ್ರೈವ್‌ಗಾಗಿ ಡಿಸೆಂಬರ್ ವೇಳೆಗೆ 100 ಮಿಲಿಯನ್ ಡೋಸ್‌ಗಳನ್ನು ಸಿದ್ಧಪಡಿಸುವ ಗುರಿ ಹೊಂದಿದೆ.

ಅಂತಿಮ ಹಂತದ ಪ್ರಾಯೀಗಕ ದತ್ತಾಂಶವು ಈ ಲಸಿಕೆಯು ರೋಗಿಗೆ ವೈರಸ್‌ನಿಂದ ಪರಿಣಾಮಕಾರಿ ರಕ್ಷಣೆ ನೀಡುತ್ತದೆ ಎಂದು ತೋರಿಸಿದೆ.

India To Get 100 Million Oxford Vaccine Shots By December

ಕನಿಷ್ಠ ಒಂದು ಶತಕೋಟಿ ಪ್ರಮಾಣವನ್ನು ಉತ್ಪಾದಿಸಲು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ದೆಹಲಿಯಿಂದ ತುರ್ತು ಅನುಮತಿ ಪಡೆಯಲಿದೆ ಎಂದು ಆದರ್ ಪೂನಾವಾಲಾ ತಿಳಿಸಿದ್ದಾರೆ.

ಆರಂಭಿಕ ಹಂತದ ಲಸಿಕೆ ಭಾರತಕ್ಕೆ ಹೋಗಲಿದೆ. ಮುಂದಿನ ವರ್ಷಗಳಲ್ಲಿ ತಯಾರಿಸಿದ ಲಸಿಕೆಗಳು ದಕ್ಷಿಣ ಏಷ್ಯಾದ ರಾಷ್ಟ್ರ ಮತ್ತು ವಿಶ್ವ ಆರೋಗ್ಯ ಸಂಸ್ಥೆ ಬೆಂಬಲಿತ ರಾಷ್ಟ್ರಗಳನ್ನು ತಲುಪಲಿದೆ.

ಐದು ಲಸಿಕೆ ತಯಾರಕರ ಜತೆ ಸೀರಮ್ ಇನ್‌ಸ್ಟಿಟ್ಯೂಟ್ ಒಪ್ಪಂದ ಮಾಡಿಕೊಂಡಿದೆ.ಕಳೆದ ಎರಡು ತಿಂಗಳಲ್ಲಿ 40 ಮಿಲಿಯನ್ ಡೋಸ್ ಅಸ್ಟ್ರಾಜೆನೆಕಾ ಲಸಿಕೆಯನ್ನು ತಯಾರಿಸಿದೆ. ಶೀಘ್ರದಲ್ಲೇ ನೋವಾವ್ಯಾಕ್ಸ್ ನ್ನು ತಯಾರಿಸಲು ಆರಂಭಿಸಲಿದೆ.

ಕೊರೊನಾ ವೈರಸ್ ವಿಶ್ವದಾದ್ಯಂತ 1.2 ಮಿಲಿಯನ್ ಮಂದಿಯನ್ನು ಬಲಿತೆಗೆದುಕೊಂಡಿದೆ. ಹಲವು ಔಷಧ ತಯಾರಿಕಾ ಕಂಪನಿಗಳು ಅನುದಾನ ನೀಡಿವೆ, ಹಣ ಹೂಡಿಕೆ ಮಾಡಿವೆ. ಈ 40 ಮಿಲಿಯನ್ ಕೊವಿಡ್ ಲಸಿಕೆ ಇಡೀ ವಿಶ್ವಕ್ಕೋ ಅಥವಾ ಕೇವಲ ಭಾರತಕ್ಕೆ ಮಾತ್ರವೇ ಎನ್ನುವ ಪ್ರಶ್ನೆ ಕಾಡಿದೆ.

ನೋವಾವ್ಯಾಕ್ಸ್ ಲಸಿಕೆಯ ಪ್ರಯೋಗವನ್ನು ಯುಕೆಯಲ್ಲಿ ನಡೆಸಲಾಗಿತ್ತು. ಅಮೆರಿಕದಲ್ಲಿ ಕೂಡ ಲಸಿಕೆ ಪ್ರಯೋಗ ನಡೆಯಲಿದೆ. ಸೇರಂ ಇನ್‌ಸ್ಟಿಟ್ಯೂಟ್ ಪ್ರಯೋಗಕ್ಕಾಗಿ ಭಾರತದಲ್ಲಿ 1600 ಸ್ವಯಂ ಸೇವಕರನ್ನು ಸಿದ್ಧಪಡಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+