• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಡಿಆರ್‌ಡಿಒನಿಂದ ವಿಕಿರಣ ನಿರೋಧಕ ಕ್ಷಿಪಣಿ 'ರುದ್ರಂ' ಯಶಸ್ವಿ ಪರೀಕ್ಷೆ

|

ನವದೆಹಲಿ, ಅಕ್ಟೋಬರ್ 09: ಡಿಆರ್‌ಡಿಒದ ವಿಕಿರಣ ನಿರೋಧಕ ಕ್ಷಿಪಣಿ ರುದ್ರಂ-1​ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿದೆ.

ಒಡಿಶಾ ಕರಾವಳಿ ತೀರದಲ್ಲಿ ಡಿಆರ್ ಡಿಒ ನಡೆಸಿದ ರುದ್ರಂ-1 ಕ್ಷಿಪಣಿ ಪರೀಕ್ಷೆ ಯಶಸ್ವಿಯಾಗಿದೆ. ಸುಖೋಯ್-30 ಯುದ್ಧ ವಿಮಾನಕ್ಕೆ ರುದ್ರಂ-1 ಆ್ಯಂಟಿ ರೇಡಿಯೇಷನ್ ಮಿಸೈಲ್​ ಅನ್ನು ಅಳವಡಿಸಿ ಪರೀಕ್ಷೆ ನಡೆಸಲಾಯಿತು. ಕ್ಷಿಪಣಿ ನಿಖರವಾದ ಸಮಯಕ್ಕೆ ಕರಾರುವಕ್ಕಾಗಿ ಗುರಿಯನ್ನು ಭೇಧಿಸಿದೆ.

ಅಣ್ವಸ್ತ್ರ ಸಾಮರ್ಥ್ಯದ ಶೌರ್ಯ ಕ್ಷಿಪಣಿ ಪ್ರಯೋಗ ಯಶಸ್ವಿ

ಶತ್ರು ರಾಷ್ಟ್ರಗಳ ದಾಳಿಯನ್ನ ನಿಗ್ರಹ ಮಾಡುವ ಉದ್ದೇಶದಿಂದ ಈ ರುದ್ರಂ-1 ಮಿಸೈಲ್​ ಅಭಿವೃದ್ಧಿ ಪಡಿಸಲಾಗಿದೆ. ಭಾರತೀಯ ವಾಯುಸೇನೆಯ ಶಸ್ತ್ರಾಗಾರದ ಮೊದಲ ಆರ್​ಎಆರ್​ಎಂ ಕ್ಷಿಪಣಿ ಇದಾಗಿದ್ದು, ಸಿಂಗಲ್​ ಸ್ಟೇಜ್​ ಮಿಸೈಲ್ ಆಗಿರುವ ರುದ್ರಂ 1 5.5 ಮೀಟರ್ ಉದ್ದವಿದೆ. 140 ಕೆಜಿ ಭಾರ ತೂಕ ಹೊಂದಿರುವ ಈ ಕ್ಷಿಪಣಿ, ಆ್ಯಂಟಿ ರೇಡಿಯೇಷನ್ ಮಿಸೈಲ್ ಆಗಿದೆ. ಈ ಕ್ಷಿಪಣಿಯನ್ನು ಡ್ಯುಯಲ್-ಪಲ್ಸ್ ರಾಕೆಟ್ ಮೋಟರ್‌ನಿಂದ ಉಡಾಯಿಸಲಾಗುತ್ತದೆ.

ಶತ್ರುಗಳ ಮೇಲೆ ಕಣ್ಗಾವಲು

ಶತ್ರುಗಳ ಮೇಲೆ ಕಣ್ಗಾವಲು

ಶತ್ರುಗಳ ಮೇಲೆ ಕಣ್ಗಾವಲು, ಟ್ರ್ಯಾಕಿಂಗ್ ಮಾಡಲು ಈ ಕ್ಷಿಪಣಿ ಸಹಾಯ ಮಾಡಲಿದೆ. ಜೊತೆಗೆ ಶತ್ರುಗಳ ಸಂವಹನ ವ್ಯವಸ್ಥೆಯನ್ನೂ ನಾಶ ಮಾಡುವ ಶಕ್ತಿ ಹೊಂದಿದೆ. ರುದ್ರಮ್-1 ಸ್ವದೇಶಿ ನಿರ್ಮಿತ ಕ್ಷಿಪಣಿಯಾಗಿದ್ದು, ದೇಶದಲ್ಲಿಯೇ ಅಭಿವೃದ್ಧಿಪಡಿಸಿದ ಅತ್ಯಾಧುನಿಕ ಹೈಸ್ಪೀಡ್ ಕ್ಷಿಪಣಿ ಇದಾಗಿದೆ. ಭಾರತೀಯ ವಾಯ ಪಡೆಗೆ ಆನೆ ಬಲ ನೀಡುವ ಗೇಮ್ ಚೇಂಜರ್ ಕ್ಷಿಪಣಿ ಎಂದೇ ಕರೆಯಲಾಗುತ್ತಿರುವ ಡಿಆರ್ ಡಿಒ ನಿರ್ಮಿತ ಬಹು ಕುತೂಹಲ ಕೆರಳಿಸಿದ್ದ ರುದ್ರಂ-1​ ಸ್ವದೇಶಿ ನಿರ್ಮಿತ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿದೆ.

ಪ್ರಾಯೋಗಿಕ ಹಂತದಲ್ಲಿ ಸುಖೋಯ್ ಮೂಲಕ ಪರೀಕ್ಷೆ

ಪ್ರಾಯೋಗಿಕ ಹಂತದಲ್ಲಿ ಸುಖೋಯ್ ಮೂಲಕ ಪರೀಕ್ಷೆ

ಪ್ರಾಯೋಗಿಕ ಹಂತದಲ್ಲಿ ಯುದ್ಧವಿಮಾನವಾದ ಸುಖೋಯ್-30MKI ಮೂಲಕ ಪರೀಕ್ಷೆ ನಡೆಸಲಾಗಿದೆ. ಪರೀಕ್ಷೆ ಯಶಸ್ವಿಯಾಗಿರುವ ಕಾರಣ ಇದೀಗ ಮಿರಾಜ್ 2000, ಜಾಗ್ವಾರ್, HAL ತೇಜಸ್ ಹಾಗೂ HAL ಮಾರ್ಕ್ ಯುದ್ಧ ವಿಮಾನದಲ್ಲೂ ಅಳವಡಿಸಲಾಗುತ್ತದೆ ಎಂದು ಡಿಆರ್ ಡಿಒ ಮೂಲಗಳು ತಿಳಿಸಿವೆ.

ಗಾಳಿಯಿಂದ ನೆಲಕ್ಕೆ ದಾಳಿ ನಡೆಸುವ ಸಾಮರ್ಥ್ಯ

ಗಾಳಿಯಿಂದ ನೆಲಕ್ಕೆ ದಾಳಿ ನಡೆಸುವ ಸಾಮರ್ಥ್ಯ

ಸೂಪರ್‌ಸಾನಿಕ್, ಬ್ರಹ್ಮೋಸ್ ಬಳಿಕ ರಷ್ಯಾ ಜೊತೆ ಜಂಟಿಯಾಗಿ ಅಭಿವೃದ್ಧಿ ಪಡಿಸಿರುವ ಈ ಕ್ಷಿಪಣಿ ಫೈಟರ್ ವಿಮಾನದ ಮೂಲಕ ಗಾಳಿಯಿಂದ ನೆಲಕ್ಕೆ ದಾಳಿ ನಡೆಸುವ ಸಾಮರ್ಥ್ಯ ಹೊಂದಿದೆ. ಇದು ಡ್ಯುಯಲ್-ಪಲ್ಸ್ ಘನ ರಾಕೆಟ್ ಮೋಟಾರ್‌ನಿಂದ ನಿಯಂತ್ರಿಸಲ್ಪಡುತ್ತದೆ. ಗಡಿಯಲ್ಲಿ ಶತ್ರುಗಳ ಚಲನವಲನಗಳ ಮೇಲೆ ನಿಗಾ ಇಡಲಿದೆ. ಶತ್ರುಗಳ ರಾಡಾರ್ ಕಣ್ತಪ್ಪಿಸಿ ದಾಳಿ ನಡೆಸುವ ಸಾಮರ್ಥ್ಯ ಹೊಂದಿದೆ.

ರಾಜನಾಥ್‌ಸಿಂಗ್ ಅಭಿನಂದನೆ

ರಾಜನಾಥ್‌ಸಿಂಗ್ ಅಭಿನಂದನೆ

ಡಿಫೆನ್ಸ್ ರಿಸರ್ಚ್ ಅಂಡ್ ಡೆವಲಪ್ಮೆಂಟ್ ಆರ್ಗನೈಸೇಶನ್ (DRDO) ಅಭಿವೃದ್ಧಿ ಪಡಿಸಿದ ಈ ಕ್ಷಿಪಣಿ ಪ್ರಯೋಗ ಯಶಸ್ವಿಯಾದ ಬೆನ್ನಲ್ಲೇ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಭಿನಂದನೆ ತಿಳಿಸಿದ್ದಾರೆ.

ರುದ್ರಂ-1 ಮಿಸೈಲ್ ಭಾರತದ ಏರ್‌ಫೋರ್ಸ್‌ ಯುದ್ಧ ವಿಮಾನಗಳಿಗೆ ಅತ್ಯಾಧುನಿಕ ಹಾಗೂ ವಿಕಿರಣ ಭೇದಿಸುವ ಯುದ್ಧತಂತ್ರದ ಸಾಮರ್ಥ್ಯವನ್ನು ಒದಗಿಸಲಿದೆ. ಹಲವು ಹಂತ ಹಾಗೂ ಹಲವು ಭಾಗಗಳಲ್ಲಿ ರುದ್ರಂ-1 ಮಿಸೈಲ್ ಪರೀಕ್ಷೆ ನಡೆಸಲಾಗಿದ್ದು, ಯಶಸ್ವಿಯಾಗಿದೆ.

ರುದ್ರಂ-1 ಸಿಂಗಲ್ ಸ್ಟೇಜ್ ಮಿಸೈಲ್ ಆಗಿದ್ದು, 140 ಕೆಜಿ ತೂಕ ಹೊಂದಿದೆ. 100 ರಿಂದ 150 ಕಿಲೋಮೀಟರ್ ದೂರದ ಸಾಮರ್ಥ್ಯವನ್ನು ಹೊಂದಿರುವ ಈ ಕ್ಷಿಪಣಿ, ವಿಕಿರಣ ವಿರೋಧಿ ಕ್ಷಿಪಣಿಯಾಗಿದೆ.

English summary
India successfully test-fired the "Rudram" Anti-Radiation Missile, developed by Defence Research and Development Organisation (DRDO), from a Sukhoi-30 fighter aircraft off the east coast today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X