ರಷ್ಯಾ-ಉಕ್ರೇನ್ ಬಿಕ್ಕಟ್ಟು: ವಿಶ್ವಸಂಸ್ಥೆಯಲ್ಲಿ ಭಾರತದ ನಿಲುವು, ಹೈಲೆಟ್ಸ್
ನಿರೀಕ್ಷೆಯಂತೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಭೌಗೋಳಿಕವಾಗಿ ಪೂರ್ವ ಯುರೋಪಿನ ಎರಡನೇ ಅತಿದೊಡ್ಡ ದೇಶ ಉಕ್ರೇನ್ ಮೇಲೆ ಸೇನಾ ಕಾರ್ಯಾಚರಣೆ ಘೋಷಿಸಿದ್ದಾರೆ. ಹಲವು ತಿಂಗಳಿನಿಂದ ಇದ್ದ ಬಿಗುವಿನ ವಾತಾವರಣ ಈಗ ಯುದ್ದದ ಹಂತಕ್ಕೆ ಬಂದು ನಿಂತಿದೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ತುರ್ತು ಸಭೆಯಲ್ಲಿ ಉಕ್ರೇನ್-ರಷ್ಯಾ ದೇಶಗಳ ನಡುವಿನ ಬಿಗುವಿನ ವಾತಾವರಣ ತೀರಾ ಕಳವಳಿಕಾರಿ ಎಂದು ಭಾರತ ಹೇಳಿದೆ. ಪೂರ್ವ ಯುರೋಪ್‌ನಲ್ಲಿನ ಬಿಕ್ಕಟ್ಟನ್ನು ಶಮನಗೊಳಿಸುವುದು ತಕ್ಷಣದ ಆದ್ಯತೆಯಾಗಿದೆ ಎಂದು ಭಾರತ ಹೇಳಿದೆ.
ರಷ್ಯಾ ದೇಶವು ಡೊನೆಟ್ಸ್ಕ್ ಮತ್ತು ಲುಹಾನ್ಸ್ಕ್ ಎರಡು ಪ್ರತ್ಯೇಕ ಪ್ರದೇಶವೆಂದು ಗುರುತಿಸಿದೆ. ರಷ್ಯಾದ ನಿಲುವನ್ನು ಭಾರತ ಇದುವರೆಗೂ ಖಂಡಿಸಿಲ್ಲ. ಭಾರತ ತನ್ನ ನಿರ್ಧಾರವನ್ನು ತಟಸ್ಥ ನಿಲುವು ಎಂದು ಬಿಂಬಿಸಬಹುದು. ಆದರೆ, ಅಮೆರಿಕಾ ನೇತೃತ್ವದ ಇತರ ಪಾಶ್ಚಿಮಾತ್ಯ ಬಣವು ಭಾರತದ ನಿಲುವನ್ನು ಆ ಶೈಲಿಯಲ್ಲಿ ವೀಕ್ಷಿಸುವುದಿಲ್ಲ ಎನ್ನುವುದು ಜಾಗತಿಕ ವಿದ್ಯಮಾನದ ವಿಶ್ಲೇಷಕರು ಅಭಿಪ್ರಾಯ ಪಡುತ್ತಿದ್ದಾರೆ.
"ಉಕ್ರೇನ್ ಗಡಿಯಲ್ಲಿನ ಪರಿಸ್ಥಿತಿ ತೀರಾ ಕಳವಳಕಾರಿ, ಈ ಬೆಳವಣಿಗೆಗಳು ಆ ಪ್ರದೇಶದ ಶಾಂತಿ ಮತ್ತು ಭದ್ರತೆಯನ್ನು ದುರ್ಬಲಗೊಳಿಸುವ ಸಾಮರ್ಥ್ಯವನ್ನು ಹೊಂದಿವೆ. ಪರಿಸ್ಥಿತಿಯು ಮತ್ತಷ್ಟು ಬಿಗಡಾಯಿಸದಂತೇ ನೋಡಿಕೊಳ್ಳಲು ರಷ್ಯಾಕ್ಕೆ ಸಲಹೆ ನೀಡಲು ರಾಜತಾಂತ್ರಿಕರನ್ನು ಬಳಸಿಕೊಳ್ಳುವ ಅವಶ್ಯಕತೆಯಿದೆ" ಎಂದು ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ ಟಿ.ಎಸ್.ತಿರುಮೂರ್ತಿ ಯುಎನ್‌ಎಸ್‌ಸಿ ಸಭೆಯಲ್ಲಿ ಹೇಳಿದ್ದಾರೆ.

ಭಾರತದ ಪ್ರತಿನಿಧಿ ವಿಶ್ವಸಂಸ್ಥೆಯ ಸಭೆಯಲ್ಲಿ ಅಭಿಪ್ರಾಯ ಪಟ್ಟಿದ್ದಾರೆ
"ಅಂತರಾಷ್ಟ್ರೀಯ ಮಟ್ಟದಲ್ಲಿ, ರಷ್ಯಾದ ಯುದ್ದೋನ್ಮಾದ ಪ್ರಾದೇಶಿಕ ಸಮಗ್ರತೆ ಮತ್ತು ಅಂತರಾಷ್ಟ್ರೀಯ ಕಾನೂನು ಮತ್ತು ಒಪ್ಪಂದಗಳ ಉಲ್ಲಂಘನೆಯಾಗಿ ಕಂಡು ಬರುತ್ತದೆ. ರಷ್ಯಾ ಬೆಂಬಲಿತ ಪ್ರತ್ಯೇಕತಾವಾದಿಗಳು ಈ ಹಿಂದೆ ಒಪ್ಪಂದಕ್ಕೆ ಸಹಿ ಹಾಕಿದ್ದವು. ಉಕ್ರೇನಿನ ಪ್ರಾದೇಶಿಕ ಸಮಗ್ರತೆ ಅಥವಾ ರಾಜಕೀಯ ಸ್ವಾತಂತ್ರ್ಯದ ಮೇಲೆ ಪರಿಣಾಮ ಬೀರುವ ಬೆಳವಣಿಗೆಗಳು ನಡೆಯುತ್ತಿರುವುದು ಕಳವಳಕಾರಿ" ಎಂದು ಭಾರತದ ಪ್ರತಿನಿಧಿ ವಿಶ್ವಸಂಸ್ಥೆಯ ಸಭೆಯಲ್ಲಿ ಅಭಿಪ್ರಾಯ ಪಟ್ಟಿದ್ದಾರೆ.

ಉಕ್ರೇನ್ ನಲ್ಲಿರುವ ಇಪ್ಪತ್ತು ಸಾವಿರಕ್ಕೂ ಹೆಚ್ಚು ಭಾರತೀಯರು
"ಉಕ್ರೇನ್ ನಲ್ಲಿರುವ ಇಪ್ಪತ್ತು ಸಾವಿರಕ್ಕೂ ಹೆಚ್ಚು ಭಾರತೀಯರು, ಅದರಲ್ಲೂ ಪ್ರಮುಖವಾಗಿ ವಿದ್ಯಾರ್ಥಿಗಳ ರಕ್ಷಣೆ ನಮ್ಮ ಪ್ರಮುಖ ಕಾಳಜಿಯಾಗಿದೆ. ಈ ವಿದ್ಯಾರ್ಥಿಗಳಲ್ಲಿ ಹೆಚ್ಚಿನವರು ಉಕ್ರೇನಿನ ವೈದ್ಯಕೀಯ ಕಾಲೇಜುಗಳಲ್ಲಿ ದಾಖಲಾಗಿದ್ದಾರೆ. ಭಾರತೀಯ ವಿದ್ಯಾರ್ಥಿಗಳು ಮತ್ತು ಪ್ರಜೆಗಳು ರಷ್ಯಾ ಗಡಿ ಪ್ರದೇಶಗಳನ್ನು ಒಳಗೊಂಡಂತೆ ಉಕ್ರೇನಿನ ವಿವಿಧ ಭಾಗಗಳಲ್ಲಿ ವಾಸಿಸುತ್ತಿದ್ದಾರೆ. ನಮ್ಮವರ ಯೋಗಕ್ಷೇಮ ನಮಗೆ ಆದ್ಯತೆಯಾಗಿದೆ". ಎಂದು ತಿರುಮೂರ್ತಿ ಹೇಳಿದ್ದಾರೆ.

ಭಾರತೀಯರನ್ನು ನವದೆಹಲಿಗೆ ಕಳುಹಿಸಲು ಆದ್ಯತೆ
"ಕಳೆದ ವಾರ ವಿದ್ಯಾರ್ಥಿಗಳ ಪರವಾಗಿ ಎರಡು ಸಲಹೆಗಳನ್ನು ಭಾರತ ನೀಡಲಾಗಿದೆ. ತಾತ್ಕಾಲಿಕವಾಗಿ ಲಭ್ಯವಿರುವ ವಿಮಾನಗಳ ಮೂಲಕ ಭಾರತೀಯರನ್ನು ನವದೆಹಲಿಗೆ ಕಳುಹಿಸಲು ಆದ್ಯತೆ ನೀಡುವುದು. ಕಾಲೇಜುಗಳಲ್ಲಿ ಆನ್‌ಲೈನ್‌ನಲ್ಲಿ ತರಗತಿಗಳನ್ನು ಪ್ರಾರಂಭಿಸಲು ಭಾರತೀಯ ರಾಯಭಾರ ಕಚೇರಿಯ ಮೂಲಕ ಉಕ್ರೇನಿಯನ್ ಕಾಲೇಜು/ವಿಶ್ವವಿದ್ಯಾಲಗಳ ಮೇಲೆ ಒತ್ತಡ ಹೇರುವುದು" ಎಂದು ಭಾರತದ ಪ್ರತಿನಿಧಿ ಹೇಳಿದ್ದಾರೆ.
"ರಾಜತಾಂತ್ರಿಕ ವ್ಯವಸ್ಥೆಯನ್ನು ನಾವು ಬಲವಾಗಿ ನಂಬ ಬೇಕಾಗಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಉದ್ವೇಗಗಳನ್ನು ಶಮನಗೊಳಿಸಲು ಇತರ ದೇಶಗಳು ತೆಗೆದುಕೊಂಡ ಕ್ರಮಗಳನ್ನು ನಾವು ಅವಾಲೋಕಿಸಬೇಕಿದೆ. ಈ ಸಂಬಂಧ ನಡೆಯುತ್ತಿರುವ ಪ್ರಯತ್ನಗಳನ್ನು ಭಾರತ ಸ್ವಾಗತಿಸುತ್ತದೆ, ಆದಷ್ಟು ಬೇಗ ಸೌಹಾರ್ದಯುತ ಪರಿಹಾರ ಈ ಸಮಸ್ಯೆಗಳಿಗೆ ಸಿಗಬೇಕು ಎನ್ನುವುದನ್ನು ಭಾರತ ಬಯಸುತ್ತದೆ" ಎಂದು ತಿರುಮೂರ್ತಿ ಒತ್ತಿ ಹೇಳಿದ್ದಾರೆ.

ಚೀನಾದ ಜೊತೆಗೆ ಉದ್ವಿಗ್ನ ಗಡಿ ಬಿಕ್ಕಟ್ಟು ನಡೆಯುತ್ತಿರುವ ಸಮಯ
"ಪ್ರಸಕ್ತ ಅಶಾಂತಿ ಸನ್ನಿವೇಶಕ್ಕೆ ವಿಶ್ವದ ಹಲವು ರಾಷ್ಟ್ರಗಳು ರಷ್ಯಾದ ಅಧ್ಯಕ್ಷ ಪುಟಿನ್ ಅವರನ್ನು ದೂಷಿಸಿದೆ. ಆದರೆ, ರಷ್ಯಾದ ಅಧ್ಯಕ್ಷರು ನ್ಯಾಟೋ ಸೇನೆಯು ಪೂರ್ವ ಭಾಗದಲ್ಲಿ ವಿಸ್ತರಣೆಯಾಗುತ್ತಿರುವುದು ಉದ್ವಿಗ್ನತೆಗೆ ಕಾರಣವಾಗಿದೆ ಎಂದು ಹೇಳಿದ್ದಾರೆ. ಪರಸ್ಪರ ಸೌಹಾರ್ದಯುತ ಪರಿಹಾರವನ್ನು ಶೀಘ್ರವಾಗಿ ತಲುಪುವಂತೆ ಖಚಿತಪಡಿಸಿಕೊಳ್ಳಲು ಅತ್ಯಂತ ಸಂಯಮ ಮತ್ತು ರಾಜತಾಂತ್ರಿಕ ಪ್ರಯತ್ನಗಳನ್ನು ತೀವ್ರಗೊಳಿಸ ಬೇಕಿದೆ" ಎಂದು ತಿರುಮೂರ್ತಿ ಹೇಳಿದ್ದಾರೆ.
-
2025ರ ದ್ವಿತೀಯ PUC ಪರೀಕ್ಷೆಯಲ್ಲಿ ವಿಜ್ಞಾನ, ವಾಣಿಜ್ಯ, ಕಲಾ ವಿಭಾಗದಲ್ಲಿ ಮಿಂಚಿದ ಪ್ರತಿಭೆಗಳು; ಇಲ್ಲಿದೆ ಟಾಪರ್ಗಳ ಪಟ್ಟಿ -
Ankita Jayaram: ನಟನೆಯ ನಡುವೆಯೂ ದ್ವಿತೀಯ ಪಿಯುಸಿಯಲ್ಲಿ ಕರ್ಣ ಧಾರಾವಾಹಿ ಖ್ಯಾತಿಯ ನಟಿ ಅಂಕಿತಾ ಜಯರಾಮ್ ಅಮೋಘ ಸಾಧನೆ -
Gold Rate April 9: ಚಿನ್ನ - ಬೆಳ್ಳಿ ಬೆಲೆಯಲ್ಲಿ ಭರ್ಜರಿ ಇಳಿಕೆ: ಬಂಗಾರ ಖರೀದಿದಾರರಿಗೆ ಸಂತೋಷದ ಸುದ್ದಿ -
ರಾಜ್ಯದ ಕಳೆದ 3 ವರ್ಷಗಳ ದ್ವಿತೀಯ PUC ಫಲಿತಾಂಶದ ಹೈಲೈಟ್ಸ್; ಮೇಲುಗೈ ಸಾಧಿಸಿದ ಜಿಲ್ಲೆಗಳು ಯಾವುವು? ಇಲ್ಲಿದೆ ಮಾಹಿತಿ -
Karnataka Weather: ಕರ್ನಾಟಕದ 4 ಜಿಲ್ಲೆಗಳಲ್ಲಿ ಮಳೆ - ವಿವಿಧ ಭಾಗಗಳಲ್ಲಿ ಭಾರೀ ಬಿಸಿಲು, ಕರ್ನಾಟಕದ ಹವಾಮಾನ ವರದಿ -
Ragi Price Today: ಕರ್ನಾಟಕದ ಮಾರುಕಟ್ಟೆಗಳಲ್ಲಿ ಇಂದಿನ "ರಾಗಿ' ಬೆಲೆ ಎಷ್ಟಿದೆ? ಲೇಟೆಸ್ಟ್ ಅಪ್ಡೇಟ್ -
April 9 Horoscope: 12 ರಾಶಿಗಳಿಗೆ ಇಂದು ಸಂತೋಷ, ಸವಾಲು ಮತ್ತು ಅವಕಾಶಗಳ ಮಿಶ್ರ ಫಲ -
Viral: ಬೆಂಗಳೂರಿಗೆ ಕಾಲಿಟ್ಟಿತೇ ಡೇಂಜರಸ್ 'ಜಾಂಬಿ ಡ್ರಗ್'?: ಯುವಕನ ವಿಡಿಯೋ ನೋಡಿ ಬೆಚ್ಚಿಬಿದ್ದ ಸಿಲಿಕಾನ್ ಸಿಟಿ ಜನ -
April 10 Horoscope: 12 ರಾಶಿಗಳಿಗೆ ಇಂದು ಆರೋಗ್ಯ, ಹಣಕಾಸು ಮತ್ತು ಪ್ರೇಮದಲ್ಲಿ ಮಿಶ್ರ ಫಲ -
ಬೆಂಗಳೂರು ನಾಯಂಡಳ್ಳಿಯಲ್ಲಿ ಮನೆಯ ಮೊದಲ ಮಹಡಿಯಿಂದ ಬಿದ್ದ ಒಂದೂವರೆ ವರ್ಷದ ಕಂದಮ್ಮ -
SSLC Hindi: ಅಂಕ ಬದಲು ಗ್ರೇಡಿಂಗ್ ವಿರೋಧಿಸಿ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ 1 ಲಕ್ಷ ರೂ. ದಂಡ: ಕರವೇ ಹೇಳಿದ್ದೇನು -
PUC Results: 2026ರ ದ್ವಿತೀಯ PUC ಪರೀಕ್ಷೆ ಫಲಿತಾಂಶ ಪ್ರಕಟ, ಇವರೇ ನೋಡಿ ಟಾಪರ್












Click it and Unblock the Notifications