Rain Alert: ಚಂಡಮಾರುತ ಪರಿಚಲನೆ, ಇಂದಿನಿಂದ ಈ ಭಾಗದಲ್ಲಿ ಧಾರಾಕಾರ ಮಳೆ! ಹವಾಮಾನ ವರದಿ

IMD Weather Forecast: ಭಾರತದ ದಕ್ಷಿಣ ಭಾಗದಲ್ಲಿ ಇಂದಿನಿಂದ 05 ದಿನಗಳವರೆಗೆ ಗುಡುಗು ಸಹಿತ ಜೋರು ಮಳೆ ಆರ್ಭಟ ಕಂಡು ಬರಲಿದೆ. ಇದೇ ವೇಳೆ ಉತ್ತರ ಭಾರತ ರಾಜ್ಯಗಳಲ್ಲಿ ಗರಿಷ್ಠ ತಾಪಮಾನ ಕಂಡು ಬರಲಿದೆ. ಸುಧೀರ್ಘ ಉಷ್ಣ ಅಲೆ ಎದುರಾಗುವ ಸಂಭವವಿದೆ. ಸದ್ಯ ಎರಡು ಕಡೆಗಳಲ್ಲಿ ಉಂಟಾಗಿರುವ ಚಂಡಮಾರುತದ ಪರಿಚಲನೆ ಕಾರಣದಿಂದಾಗಿ ತಮಿಳುನಾಡು, ಕೇರಳ, ಮಹಾರಾಷ್ಟ್ರ, ಕರ್ನಾಟಕ ಸೇರಿದಂತೆ ದಕ್ಷಿಣ ಭಾರತ ರಾಜ್ಯಗಳಿಗೆ ಪೂರ್ವ ಮುಂಗಾರು ಮಳೆ ಇನ್ನಿಲ್ಲದಂತೆ ಕಾಡಲಿದೆ.

ಕನ್ಯಾಕುಮಾರಿ ಮತ್ತು ತಮಿಳುನಾಡು ವ್ಯಾಪ್ತಿಯ ಸಮುದ್ರದಲ್ಲಿ ಭಾಗದಲ್ಲಿ ಭೂಮಿಗಿಂತ 3.5 ಕಿಲೋ ಮೀಟರ್ ಎತ್ತರದಲ್ಲಿ ಚಂಡಮಾರುತ ಪರಿಚಲನೆ ಉಂಟಾಗಿದೆ. ಮತ್ತೊಂದೆಡೆ ಲಕ್ಷದ್ವೀಪ ಪ್ರದೇಶದಲ್ಲಿ ಸಮುದ್ರ ಮಟ್ಟದಲ್ಲಿ ಸಹ ಕಡಿಮೆ ಒತ್ತಡ ಪ್ರದೇಶ ಉಂಟಾಗಿದೆ. ಈ ಎರಡು ವೈಪರಿತ್ಯಗಳು ಆರಂಭದಲ್ಲಿ ಅಷ್ಟಾಗಿ ತೀವ್ರವಾಗಿಲ್ಲದಿದ್ದರೂ, ಕಳೆದ 24 ಗಂಟೆಗಳಲ್ಲಿ ಪ್ರಬಲಗೊಂಡಿವೆ. ಹೀಗಾಗಿ ದಕ್ಷಿಣ ಭಾರತದ ಕರಾವಳಿ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಏಪ್ರಿಲ್ 3ರಿಂದ ಸುಮಾರು ಒಂದು ವಾರ ಕಾಲ ಧಾರಾಕಾರ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

India South Few Parts Will Witnessed Heavy Rain in Next 5 Days Due Cyclone effect

ಕರ್ನಾಟಕದ ಸುಮಾರು 21 ಜಿಲ್ಲೆಗಳು, ಚೆನ್ನೈ ಮಹಾನಗರ ಸೇರಿದಂತೆ ತಮಿಳುನಾಡಿನ ಪ್ರಮುಖ ಜಿಲ್ಲೆಗಳು, ತೆಲಂಗಾಣ, ಮಹಾರಾಷ್ಟ್ರ ದಲ್ಲೂ ಗುಡುಗು ಮಿಂಚು ಸಹಿತ ಭಾರೀ ಮಳೆ ಅಬ್ಬರಿಸಲಿದೆ. ಉಳಿದಂತೆ ಗುಜರಾತ್, ಒಡಿಶಾ ಭಾಗದಲ್ಲಿ ಅಲ್ಲಲ್ಲಿ ಸಾಧಾರಣೆ ಮಳೆ ಬರುವ ಮುನ್ಸೂಚನೆ ಇದೆ.

ಸುದೀರ್ಘ ಬೇಸಿಗೆ: ರಾಜ್ಯಗಳಿಗೆ ಉಷ್ಣ ಅಲೆ ಎಚ್ಚರಿಕೆ

ಇನ್ನೂ ಉತ್ತರ ಭಾರತದ ಝಾರ್ಖಂಡ್, ಉತ್ತರ ಪ್ರದೇಶ, ಅಸ್ಸಾಂ, ಮಣಿಪುರ, ಛತ್ತಿಸ್‌ಗಢ್, ಬಿಹಾರ, ಹರಿಯಾಣ, ದೆಹಲಿ ಸೇರಿದಂತೆ ವಿವಿಧೆಡೆ ಏಪ್ರಿಲ್‌ನಿಂದ ಜೂನ್ ವರೆಗೂ ಅಂದರೆ ಮುಂಗಾರು ಮಳೆ ಆಗಮಿಸುವವರೆಗೂ ಸುದೀರ್ಘ ಕಾಲದವರೆಗೆ ಬಿರು ಬೀಸಲು ಬೀಳಲಿದೆ. ಇಲ್ಲಿ ಮಳೆಯ ಮುನ್ನೆಚ್ಚರಿಕೆ ಇಲ್ಲ. ಬದಲಾಗಿ ಉಷ್ಣ ಅಲೆ ದಾಖಲಾಗಲಿದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.

Take a Poll

ದೇಶದ ಹಲವು ರಾಜ್ಯಗಳಲ್ಲಿ ಪೂರ್ವ ಮುಂಗಾರು ಮಳೆ ಸಕ್ರಿಯವಾಗಿದೆ. ಮುಂದಿನ ಐದು ದಿನ ಏಪ್ರಿಲ್ 8 ವರೆಗೆ ರಾಜ್ಯದಲ್ಲಿ ವರುಣ ತಂಪೆರೆಯಲಿದ್ದಾನೆ. ಒಂದು ವೇಳೆ ಈ ಚಂಡಮಾರುತ ಗಾಳಿಯು ಮತ್ತಷ್ಟು ತೀವ್ರಗೊಂಡರೆ ಮಧ್ಯ ಭಾರತದ ಪ್ರದೇಶಗಳಿಗೂ ಮಳೆ ವಿಸ್ತರಣೆ ಆಗುವ ನಿರೀಕ್ಷೆ ಇದೆ. ಕರಾವಳಿ ರಾಜ್ಯಗಳ ಭಾಗದಲ್ಲಿ ಈಗಾಗಲೇ ಗಾಳಿಯ ವೇಗದಲ್ಲಿ ಬದಲಾವಣೆ ಆಗಿದೆ.

ರಾಜಸ್ಥಾನ, ಉತ್ತರ ಪ್ರದೇಶ ಭಾಗದಲ್ಲಿ ಅತೀವ ಬೀಸಿಲಿದೆ. ಉಷ್ಣ ಅಲೆ ಮುಂದುವರಿಯಲಿದೆ. ಮುಂದಿನ ದಿನಗಳಲ್ಲಿ ದಕ್ಷಿಣ ಭಾರತದ ರಾಜ್ಯಗಳಲ್ಳೂ ಅತ್ಯಧಿಕ ಮಳೆ ಬರಲಿದೆ. ಈ ತಿಂಗಳಾಂತ್ಯಕ್ಕೆ ವಿವಿಧೆಡೆ ಮಳೆ ವಿಸ್ತರಣೆ ಆಗಲಿವೆ. ಕೆಲವು ರಾಜ್ಯಗಳಲ್ಲಿ ಅತ್ಯಧಿಕ ಮಳೆ ಸಂಭವ ಇದೆ ಎಂದು ಐಎಂಡಿ ವಿಜ್ಞಾನಿಗಳು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+