ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿನಿಂದ ಗ್ರೀಸ್ ಗೆ ವಿಮಾನಯಾನ ಸಾಧ್ಯವಾಗಿಸಿದ ಮೋದಿ

ಇನ್ಮುಂದೆ ಗ್ರೀಸ್ ವಿಮಾನಯಾನ ಸಂಸ್ಥೆಗಳು ಭಾರತದ ನವದೆಹಲಿ, ಮುಂಬೈ, ಬೆಂಗಳೂರು, ಕೋಲ್ಕತ್ತಾ, ಹೈದ್ರಾಬಾದ್ ಮತ್ತು ಚೆನ್ನೈನ 6 ಸ್ಥಳಗಳಿಗೆ ನೇರವಾಗಿ ಕಾರ್ಯಾಚರಣೆ ಮಾಡಬಹುದಾಗಿದೆ.

By Mahesh
|
Google Oneindia Kannada News

ನವದೆಹಲಿ, ಫೆಬ್ರವರಿ 22: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತ ಮತ್ತು ಗ್ರೀಸ್ ನಡುವೆ ವಾಯು ಸೇವೆಗಳ ಒಪ್ಪಂದ (ಎ.ಎಸ್.ಎ.)ಗೆ ಅಂಕಿತ ಹಾಕಲು ತನ್ನ ಅನುಮೋದನೆ ನೀಡಿದೆ.

ಈ ಒಪ್ಪಂದದ ಪರಿಣಾಮವಾಗಿ ಇನ್ಮುಂದೆ ಗ್ರೀಸ್ ವಿಮಾನಯಾನ ಸಂಸ್ಥೆಗಳು ಭಾರತದ ನವದೆಹಲಿ, ಮುಂಬೈ, ಬೆಂಗಳೂರು, ಕೋಲ್ಕತ್ತಾ, ಹೈದ್ರಾಬಾದ್ ಮತ್ತು ಚೆನ್ನೈನ 6 ಸ್ಥಳಗಳಿಗೆ ನೇರವಾಗಿ ಕಾರ್ಯಾಚರಣೆ ಮಾಡಬಹುದಾಗಿದೆ.

ಈ ಒಪ್ಪಂದವು ಎರಡೂ ರಾಷ್ಟ್ರಗಳ ನಡುವೆ ನಾಗರಿಕ ವಿಮಾನಯಾನ ವಲಯದಲ್ಲಿನ ಬೆಳವಣಿಗೆಗಳಿಗೆ ತಕ್ಕಂತೆ ವಾಣಿಜ್ಯ, ಹೂಡಿಕೆ, ಪ್ರವಾಸೋದ್ಯಮ ಮತ್ತು ಸಾಂಸ್ಕೃತಿಕ ವಿನಿಮಯ ಹೆಚ್ಚಳಕ್ಕೆ ಪ್ರೇರಣೆ ನೀಡುವ ಸಾಮರ್ಥ್ಯವನ್ನು ಹೊಂದಿದೆ. ಇದು ಹೆಚ್ಚಿನ ಮತ್ತು ತಡೆರಹಿತ ಸಂಪರ್ಕ ಒದಗಿಸುವ ವಾತಾವರಣಕ್ಕೆ ಅನುವು ಮಾಡುತ್ತದೆ ಜೊತೆಗೆ ಹೆಚ್ಚಿನ ಸುರಕ್ಷತೆ ಮತ್ತು ಭದ್ರತೆಯೊಂದಿಗೆ ಎರಡೂ ಕಡೆಯ ವಿಮಾನಯಾನ ಸಂಸ್ಥೆಗಳಿಗೆ ವಾಣಿಜ್ಯ ಅವಕಾಶಗಳನ್ನು ಒದಗಿಸುತ್ತದೆ.

India signs aviation agreements with Greece

ಎ.ಎಸ್.ಎ.ಯ ಪ್ರಮುಖ ಲಕ್ಷಣಗಳು ಈ ಕೆಳಗಿನಂತಿವೆ:

* ಎರಡೂ ರಾಷ್ಟ್ರಗಳು ಒಂದು ಅಥವಾ ಅದಕ್ಕಿಂತ ಹೆಚ್ಚಿನ ವಿಮಾನಯಾನ ಸಂಸ್ಥೆಯನ್ನು ನಿಯೋಜಿಸಲು ಅರ್ಹವಾಗಿರುತ್ತವೆ.

* ಉಭಯ ದೇಶಗಳ ನಿಯೋಜಿತ ವಿಮಾನಯಾನ ಸಂಸ್ಥೆಗಳು ಮತ್ತೊಂದು ದೇಶದಲ್ಲಿ ತಮ್ಮ ವಾಯುಯಾನ ಸೇವೆಗಳ ಮಾರಾಟದ ಉತ್ತೇಜನಕ್ಕಾಗಿ ಕಚೇರಿಯನ್ನು ತೆರೆಯಲು ಹಕ್ಕುಳ್ಳವಾಗಿರುತ್ತವೆ.

* ಎರಡೂ ರಾಷ್ಟ್ರಗಳನಿಯೋಜಿತ ವಿಮಾನಯಾನ ಸಂಸ್ಥೆಗಳು ನಿರ್ದಿಷ್ಟ ಮಾರ್ಗದಲ್ಲಿ ಒಪ್ಪಿತ ಸೇವೆಗಳ ಕಾರ್ಯಾಚರಣೆ ಮಾಡಲು ಸಮಾನ ಮತ್ತು ನ್ಯಾಯಸಮ್ಮತ ಅವಕಾಶವನ್ನು ಹೊಂದಿರುತ್ತವೆ.

* ಪ್ರತಿ ಪಕ್ಷಕಾರರನಿಯೋಜಿತ ವಿಮಾನಯಾನ ಸಂಸ್ಥೆಗಳಿಗೆ ಅದೇ ಪಕ್ಷಕಾರರ, ಮತ್ತೊಬ್ಬ ಪಕ್ಷಕಾರರ ಮತ್ತು ಮೂರನೇ ರಾಷ್ಟ್ರದ ಸಂಸ್ಥೆಗಳೊಂದಿಗೆ ಸಹಕಾರ ಮಾರುಕಟ್ಟೆ ಒಪ್ಪಂದ ಮಾಡಿಕೊಳ್ಳಬಹುದಾಗಿದೆ.

v. ಮಾರ್ಗದ ವೇಳಾಪಟ್ಟಿಯಂತೆ, ಭಾರತೀಯ ವಾಯುಯಾನ ಸಂಸ್ಥೆಗಳು ಭಾರತದ ಸ್ಥಳಗಳಿಂದ ಗ್ರೀಸ್ ನಂತರದಲ್ಲಿ ನಿರ್ದಿಷ್ಟಪಡಿಸುವ ಅಥೆನ್ಸ್, ಥೆಸ್ಸಾಲೊನಿಕಿ, ಹೆರಾಕಿಯಾನ್ ನ ಮೂರು ಸ್ಥಳಗಳಿಗೆ ಕಾರ್ಯಾಚರಣೆ ಮಾಡಬಹುದಾಗಿದ್ದರೆ, ಹೆಲ್ಲೆನಿಕ್ ಗಣರಾಜ್ಯದ ವಿಮಾನಯಾನ ಸಂಸ್ಥೆಗಳು ಭಾರತದ ನವದೆಹಲಿ, ಮುಂಬೈ, ಬೆಂಗಳೂರು, ಕೋಲ್ಕತ್ತಾ, ಹೈದ್ರಾಬಾದ್ ಮತ್ತು ಚೆನ್ನೈನ 6 ಸ್ಥಳಗಳಿಗೆ ನೇರವಾಗಿ ಕಾರ್ಯಾಚರಣೆ ಮಾಡಬಹುದಾಗಿದೆ.

ಭಾರತದ ನಿಯೋಜಿತ ವಿಮಾನಯಾನ ಸಂಸ್ಥೆಗಳಿಗೆ ಹಾಗೂ ಗ್ರೀಸ್ ನ ನಿಯೋಜಿತ ಸಂಸ್ಥೆಗಳಿಗೆ ಮಧ್ಯಂತರ ಮತ್ತು ಅದರಾಚೆಗಿನ ಸ್ಥಳವಾಗಿ ಯಾವುದೇ ಸ್ಥಳ ಲಭ್ಯವಾಗಲಿದೆ.

ಪ್ರಸ್ತುತ ಭಾರತ ಮತ್ತು ಗ್ರೀಸ್ ನಡುವೆ ಯಾವುದೇ ಎ.ಎಸ್.ಎ. ಇರುವುದಿಲ್ಲ. 2016ರ ಸೆಪ್ಟೆಂಬರ್ 6-7ರಂದು ನವದೆಹಲಿಯಲ್ಲಿ ಎರಡೂ ಕಡೆಯ ನಿಯೋಗ ಭೇಟಿ ಮಾಡಿತ್ತು ಮತ್ತು ಎ.ಎಸ್.ಎ.ಯ ಕರಡು ಆಖೈರುಗೊಳಿಸಿತ್ತು.

ಈ ಒಪ್ಪಂದವು ಎರಡೂ ರಾಷ್ಟ್ರಗಳ ನಡುವೆ ವಾಯು ಸಂಪರ್ಕ ಸುಧಾರಣೆ ಮಾಡುವ ಉದ್ದೇಶದೊಂದಿಗೆ ನಾಗರಿಕ ವಿಮಾನಯಾನ ವಲಯದ ಇತ್ತೀಚಿನ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡ ಇತ್ತೀಚೆಗಿನ ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆ (ಐ.ಸಿ.ಎ.ಓ.) ಮಾದರಿಗೆ ಅನುಗುಣವಾಗಿದೆ.

English summary
India and Greece would operate air services to six destinations in both the countries which includes Bengaluru and there is no restricting the number of carriers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X