ರಂಗು ರಂಗಿನ ಚುನಾವಣಾ ಪ್ರಚಾರ ಚಿತ್ರಗಳು

ಬೆಂಗಳೂರು, ಮೇ.20: ಲೋಕಸಭಾ ಚುನಾವಣೆ ಮಗಿದು, ಫಲಿತಾಂಶ ಬಂದರೂ ಅದರ ಕಾವು ಇನ್ನೂ ಮುಗಿದಿಲ್ಲ. ಮೋದಿ ಅಭಿಮಾನಿಗಳು ಬಿಜೆಪಿಯ ವಿಜಯದ ಬಗ್ಗೆ ಮಾತನಾಡುತ್ತಿದ್ದರೆ, ಕಾಂಗ್ರೆಸ್‌ ಕಾರ್ಯ‌ಕರ್ತರು ಸೋಲಿನ ಬಗ್ಗೆ ಆತ್ಮವಿಮರ್ಷೆ‌ ಮಾಡಿಕೊಳ್ಳುತ್ತಿದ್ದಾರೆ.

ಭಾರತದಲ್ಲಿ ಪ್ರಾದೇಶಿಕ ಪಕ್ಷಗಳ ನಡುವೆ ಸಂಸತ್ತಿನಲ್ಲಿ ಒಂದು ಪಕ್ಷಕ್ಕೆ ಬಹುಮತ ಸಿಗುವುದಿಲ್ಲ ಎಂದು ಇದುವರೆಗೆ ಹೇಳಲಾಗುತ್ತಿತ್ತು. ಆದರೆ ಈ ಬಾರಿ ಈ ಹೇಳಿಕೆ ಸುಳ್ಳಾಗಿದೆ. ಜನರು ಮನಸ್ಸು ಮಾಡಿದರೆ ಒಂದು ಪಕ್ಷವನ್ನು ಬಹುಮತದೊಂದಿಗೆ ಗೆಲ್ಲಿಸುತ್ತಾರೆ ಎಂದು ತೋರಿಸಿಕೊಟ್ಟ ಚುನಾವಣೆಯಿದು.

ಈ ಬಾರಿ ರಾಜಕೀಯ ಪಕ್ಷಗಳು ವಿವಿಧ ರೀತಿಯಲ್ಲಿ ತಮ್ಮ ಪ್ರಚಾರವನ್ನು ನಡೆಸಿದ್ದವು. ಬಿಜೆಪಿ ಬಹಿರಂಗ ಪ್ರಚಾರದ ಜೊತೆ ಸೋಶಿಯಲ್‌ ಮೀಡಿಯಾವನ್ನು ಯಶಸ್ವಿಯಾಗಿ ಬಳಸುವ ಮೂಲಕ ದೆಹಲಿ ಸಂಸತ್ತಿನ ಗದ್ದುಗೆಯನ್ನು ಏರಿದೆ.

ಉಳಿದ ಪಕ್ಷಗಳು ಬಹಿರಂಗ ಪ್ರಚಾರವನ್ನು ನಡೆಸಿದರೂ ಸೋಶಿಯಲ್‌ ಮೀಡಿಯಾ ಪ್ರಚಾರದಲ್ಲಿ ಹಿಂದೆ ಬಿದ್ದದ್ದೂ ಸೋಲಿಗೆ ಒಂದು ಕಾರಣವಾಗಿದೆ. ಹೀಗಾಗಿ ಈ ಬಾರಿಯ ಚುನಾವಣೆಯಲ್ಲಿ ಯಾವ ಪಕ್ಷಗಳು ಹೇಗೆ ಪ್ರಚಾರ ಮಾಡಿತ್ತು? ಯಾವೆಲ್ಲಾ ಸೆಲೆಬ್ರಿಟಿಗಳು ಯಾರ ಪರವಾಗಿ ಪ್ರಚಾರ ಮಾಡಿದರು? ಮತದಾನ ಹೇಗೆ ನಡೆಯಿತು.? ಇತ್ಯಾದಿ ವಿಚಾರಗಳನ್ನು ವಿವರಿಸುವ ಚಿತ್ರಗಳನ್ನು ಇಲ್ಲಿ ನೀಡಲಾಗಿದ್ದು ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

 ನಾನು ನೀನು ಒಂದಾದ ಮೇಲೆ..!

ನಾನು ನೀನು ಒಂದಾದ ಮೇಲೆ..!

ನಮ್ಮಲ್ಲಿ ಯಾವ ಭಿನ್ನಾಭಿಪ್ರಾಯವಿಲ್ಲವಪ್ಪ. ಭಿನ್ನಾಭಿಪ್ರಾಯ ಏನಿದ್ದರೂ ಮಾಧ್ಯಮಗಳ ಸೃಷ್ಠಿ. ಶಿವಮೊಗ್ಗದಲ್ಲಿ ಬಿಎಸ್‌ವೈ ಜತೆ ಅನಂತ್‌ ಕುಮಾರ್‌

 ಹೇಗಿದ್ದೀರಿ.. ಫುಲ್‌ ಬ್ಯೂಸಿ ಹೇಗೆ?

ಹೇಗಿದ್ದೀರಿ.. ಫುಲ್‌ ಬ್ಯೂಸಿ ಹೇಗೆ?

ಹೈದರಾಬಾದಿನ ಮಾಧಾಪುರದಲ್ಲಿ ಆಂಧ್ರಪ್ರದೇಶದ ಪತ್ರಕರ್ತರ ಜತೆ ಟಿಡಿಪಿ ಅಧ್ಯಕ್ಷ ಚಂದ್ರಬಾಬು ನಾಯ್ಡು ಸಂವಾದ

ಇಂಟರ್‌ನಲ್‌ ಮ್ಯಾಚ್‌ ವಿನ್ನರ್‌, ಫೈನಲ್‌ನಲ್ಲಿ ಲೂಸರ್‌:

ಇಂಟರ್‌ನಲ್‌ ಮ್ಯಾಚ್‌ ವಿನ್ನರ್‌, ಫೈನಲ್‌ನಲ್ಲಿ ಲೂಸರ್‌:

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಬಿಜೆಪಿಯ ಅನಂತ್‌ಕುಮಾರ್‌ ವಿರುದ್ಧ ಪರಾಭವಗೊಂಡ ನಂದನ್‌ ನಿಲೇಕಣಿ.

 ಬತ್ತದ ಉತ್ಸಾಹ

ಬತ್ತದ ಉತ್ಸಾಹ

ಒಂದು ಭಾಷಣ ಮುಗಿಸಿದೆ ಮುಂದೆ...

ಮಹಿಳಾ ಸಬಲಿಕರಣ ವರ್ಸಸ್‌ ಸ್ವಾವಲಂಬಿ ಮಹಿಳೆ

ಮಹಿಳಾ ಸಬಲಿಕರಣ ವರ್ಸಸ್‌ ಸ್ವಾವಲಂಬಿ ಮಹಿಳೆ

ರಾಹುಲ್‌ ಗಾಂಧಿಯ ಅಮೇಠಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ‌‌‌ ಸ್ಮೃತಿ ಇರಾನಿ ಪರ ನಿತಿನ್‌ ಗಡ್ಕರಿ ಪ್ರಚಾರ ನಡೆಸುತ್ತಿರುವುದು.

 ಕೈಫ್‌ ಕ್ಲೀನ್‌ ಬೌಲ್ಡ್‌:

ಕೈಫ್‌ ಕ್ಲೀನ್‌ ಬೌಲ್ಡ್‌:

ಉತ್ತರ ಪ್ರದೇಶದ ಫೂಲ್‌ಪುರ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಮಾಜಿ ಕ್ರಿಕೆಟಿಗ ಮಹಮದ್ ಕೈಫ್‌, ಬಿಜೆಪಿ ಅಭ್ಯರ್ಥಿ‌‌ ಎದುರು ಪರಾಭವಗೊಂಡಿದ್ದಾರೆ.

 ಮೋದಿ ಗೆಲ್ಲಿಸಿ

ಮೋದಿ ಗೆಲ್ಲಿಸಿ

ಮೋದಿ ಸಮಾವೇಶದಲ್ಲಿ ಭಾಗವಹಿಸಿದ ಯೋಗ ಗುರು ಬಾಬಾ ರಾಮದೇವ್‌

 ನಿಮಗೆ ಯಾವ ಟೀ ಶರ್ಟ್‌ ಬೇಕು?

ನಿಮಗೆ ಯಾವ ಟೀ ಶರ್ಟ್‌ ಬೇಕು?

ಪಕ್ಷದ ಕಾರ್ಯಕರ್ತರಿಗೆ ಅಂಗಡಿಯಲ್ಲಿ ಮಾರಾಟವಾಗುತ್ತಿದ್ದ ಟೀ ಶರ್ಟ್‌‌ ಗಳು

ನನ್ನ ಪತಿ ತುಂಬಾ ಒಳ್ಳೇಯವರು:

ನನ್ನ ಪತಿ ತುಂಬಾ ಒಳ್ಳೇಯವರು:

ಅನಂತ್‌ ಕುಮಾರ್‌ ಪರ ಪತ್ನಿ ತೇಜಸ್ವಿನಿ ಅನಂತ್‌ ಕುಮಾರ್‌ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಪ್ರಚಾರನಡೆಸುತ್ತಿರುವುದು.

 ಮೇಡಂ ನಮಸ್ತೇ:

ಮೇಡಂ ನಮಸ್ತೇ:

ಉತ್ತರ ಪ್ರದೇಶ ಚುನಾವಣಾ ಪ್ರಚಾರದಲ್ಲಿ ಸೋನಿಯಾ ಗಾಂಧಿಯವರಿಗೆ ಕಾಂಗ್ರೆಸ್‌ ನಾಯಕರು ವಂದಿಸುತ್ತಿರುವುದು.

 ರೋಡ್‌ ಶೋಗೆ ಜನ, ಆದರೆ ವೋಟ್‌ ಹಾಕಿಲ್ಲ!

ರೋಡ್‌ ಶೋಗೆ ಜನ, ಆದರೆ ವೋಟ್‌ ಹಾಕಿಲ್ಲ!

ದೆಹಲಿಯ ಚಾಂದಿನಿ ಚೌಕ್‌ನಲ್ಲಿ ಸ್ಪರ್ಧಿಸಿದ್ದ ಕಪಿಲ್‌ ಸಿಬಲ್‌ ಹರ್ಷವರ್ಧನ್‌ ಎದುರು ಸೋತಿದ್ದಾರೆ.

 ಮೋದಿ ಸುನಾಮಿ ವರ್ಸಸ್‌ ಗಿರೀಶ್‌ ಕಾರ್ನಾಡ್‌ ಪ್ರಚಾರ

ಮೋದಿ ಸುನಾಮಿ ವರ್ಸಸ್‌ ಗಿರೀಶ್‌ ಕಾರ್ನಾಡ್‌ ಪ್ರಚಾರ

ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ನಂದನ್‌ ನಿಲೇಕಣಿ ಪತ್ನಿ ರೋಹಿಣಿ ನಿಲೇಕಣಿ ಜೊತೆ ಜ್ಞಾನಪೀಠ ಸಾಹಿತಿ ಗಿರೀಶ್‌ ಕಾರ್ನಾಡ್‌ ಮನೆಮನೆ ಪ್ರಚಾರ ನಡೆಸುತ್ತಿರುವುದು.

 ಕಾಂಗ್ರೆಸ್‌ಗೆ ಕೈ ಕೊಡಿ ನಮ್ಮ ಕೈ ಹಿಡಿಯಿರಿ

ಕಾಂಗ್ರೆಸ್‌ಗೆ ಕೈ ಕೊಡಿ ನಮ್ಮ ಕೈ ಹಿಡಿಯಿರಿ

ಚುನಾವಣಾ ಸಮಾವೇಶದಲ್ಲಿ ಬಿಜೆಪಿ ಅಧ್ಯಕ್ಷ ರಾಜನಾಥ್‌‌ ಸಿಂಗ್‌ ಕಾರ್ಯ‌ಕರ್ತರತ್ತ ಕೈ ಬೀಸುತ್ತಿರುವುದು.

 ಸುಷ್ಮಾ ಸಮಾವೇಶ:

ಸುಷ್ಮಾ ಸಮಾವೇಶ:

ಮಧ್ಯಪ್ರದೇಶದ ವಿದಿಶಾ ಲೋಕಸಭಾ ಕ್ಷೇತ್ರದಿಂದ ಸುಷ್ಮಾ ಸ್ವರಾಜ್‌ ಎರಡನೇ ಬಾರಿಗೆ (ಒಟ್ಟು ಏಳು ಬಾರಿ) ಸಂಸತ್‌ಗೆ ಆಯ್ಕೆಯಾಗಿದ್ದಾರೆ.

 ಬಿಜೆಪಿ ಜಾ‌‌‌ದೂಗಾರ್‌!

ಬಿಜೆಪಿ ಜಾ‌‌‌ದೂಗಾರ್‌!

ವಿಶ್ವಖ್ಯಾತ ಜಾದೂಗಾರ ಪಿ.ಸಿ ಸರ್ಕಾರ್ ಅವರು ಪಶ್ಚಿಮ ಬಂಗಾಳದ ನಾರ್ಥ್ 24 ಪರಾಗಣ ಜಿಲ್ಲೆಯಲ್ಲಿ ಪ್ರಚಾರ ನಿರತರಾಗಿದ್ದು ಹೀಗೆ

 ಗಾಂಧಿನಗರದಲ್ಲಿ ಜಯ ಕಟ್ಟಿಟ್ಟ ಬುತ್ತಿ:

ಗಾಂಧಿನಗರದಲ್ಲಿ ಜಯ ಕಟ್ಟಿಟ್ಟ ಬುತ್ತಿ:

ಬಿಜೆಪಿಯ ಹಿರಿಯ ನಾಯಕ ಎಲ್‌.ಕೆ ಅಡ್ವಾಣಿ ಗುಜರಾತ್‌‌ನ ಗಾಂಧಿನಗರ ಲೋಕಸಭಾ ಕ್ಷೇತ್ರದಿಂದ ಆರನೇ ಬಾರಿಗೆ ಸಂಸತ್‌ಗೆ ಆಯ್ಕೆಯಾಗಿದ್ದಾರೆ.

ಉತ್ತರದಲ್ಲಿ ನಾನೇ ಕಿಂಗ್‌

ಉತ್ತರದಲ್ಲಿ ನಾನೇ ಕಿಂಗ್‌


ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಡಿವಿ ಸದಾನಂದ ಗೌಡ ಪ್ರಚಾರ ನಡೆಸುತ್ತಿರುವುದು.

 ಮಥುರಾದಲ್ಲಿ ಮೋದಿ ಅಲೆ ಇದೆಯಾ?

ಮಥುರಾದಲ್ಲಿ ಮೋದಿ ಅಲೆ ಇದೆಯಾ?

ಹೇಮಮಾಲಿನಿ ಜೊತೆ ನರೇಂದ್ರ ಮೋದಿ ಮಾತುಕತೆ

 ನಾವಿಬ್ಬರೂ ಒಂದಾದರೆ ನಮಗ್ಯಾರು ಸಾಟಿ ಇಲ್ಲ.

ನಾವಿಬ್ಬರೂ ಒಂದಾದರೆ ನಮಗ್ಯಾರು ಸಾಟಿ ಇಲ್ಲ.

ಮಹಾರಾಷ್ಟ್ರ ಚುನಾವಣಾ ಸಾಮವೇಶದಲ್ಲಿ ಶಿವ ಸೇನಾ ಮುಖ್ಯಸ್ಥ ಉದ್ದವ್‌ ಠಾಕ್ರೆ ಮತ್ತು ನರೇಂದ್ರ ಮೋದಿ

 ಮೋದಿ ಮೋದಿ ಮೋದಿ...

ಮೋದಿ ಮೋದಿ ಮೋದಿ...

ಬಿಜೆಪಿ ಸಮಾವೇಶದಲ್ಲಿ ಮೋದಿ ಅಭಿಮಾನಿಗಳು ಮೋದಿ ಮುಖವಾಡ ಧರಿಸಿರುವುದು.

 ಊ..ಲಾ...ಲಾ 'ಲಹರಿ'

ಊ..ಲಾ...ಲಾ 'ಲಹರಿ'

ಪಶ್ಚಿಮ ಬಂಗಾಳದ ಸೆರಾಂಪುರ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ ಬಪ್ಪಿ ಲಹರಿಗೆ ಸೋಲಾಗಿದೆ.

ಅಬ್‌ ಕೀ ಬಾರ್‌ ಮೋದಿ ಸರ್ಕಾರ್‌

ಅಬ್‌ ಕೀ ಬಾರ್‌ ಮೋದಿ ಸರ್ಕಾರ್‌

ಮೋದಿ ಮುಖವಾಡ ಧರಿಸಿದ ಮಕ್ಕಳು

 ರಾಯ್‌‌ಬರೇಲಿಯಲ್ಲಿ ನಾನೇ ಕ್ವೀನ್‌

ರಾಯ್‌‌ಬರೇಲಿಯಲ್ಲಿ ನಾನೇ ಕ್ವೀನ್‌

ಉತ್ತರ ಪ್ರದೇಶದ ರಾಯ್‌ಬರೇಲಿ ಲೋಕಸಭಾ ಕ್ಷೇತ್ರದಿಂದ ಸೋನಿಯಾ ಗಾಂಧಿ ಸತತ ಮೂರನೇ ಬಾರಿಗೆ ಸಂಸತ್‌ಗೆ ಆಯ್ಕೆಯಾಗಿದ್ದಾರೆ.

 ಈ ಬಾರಿ ವಿಕ್ಟರಿ ನಮಗೆ

ಈ ಬಾರಿ ವಿಕ್ಟರಿ ನಮಗೆ

ಚುನಾವಣಾ ಪ್ರಚಾರದಲ್ಲಿ ನರೇಂದ್ರ ಮೋದಿ ಅಭಿಮಾನಿಗಳತ್ತ ವಿಕ್ಟರಿ ಚಿಹ್ನೆ ಪ್ರದರ್ಶಿ‌ಸುತ್ತಿರುವುದು.

 ಮ್ಯಾನ್‌ ಆಫ್‌ ದಿ ಮ್ಯಾಚ್‌ ಅವಾರ್ಡ್ ವಿನ್ನರ್‌

ಮ್ಯಾನ್‌ ಆಫ್‌ ದಿ ಮ್ಯಾಚ್‌ ಅವಾರ್ಡ್ ವಿನ್ನರ್‌

ಉತ್ತರ ಪ್ರದೇಶ ಚುನಾವಣೆಯಲ್ಲಿ ಸಂಪೂರ್ಣ‌ ಜವಾಬ್ದಾರಿ ಹೊತ್ತು ಬಿಜೆಪಿಗೆ ಭರ್ಜರಿ ಜಯತಂದುಕೊಟ್ಟ ಮೋದಿ ಆಪ್ತ ಅಮಿತ್‌ ಷಾ.

 ರಾಜ್ಯ ಎರಡು ಹೋಳಾದ್ರೂ ನಾವಿಬ್ಬರು ಆಪ್ತರು:

ರಾಜ್ಯ ಎರಡು ಹೋಳಾದ್ರೂ ನಾವಿಬ್ಬರು ಆಪ್ತರು:

ಆಂಧ್ರಪ್ರದೇಶದ ಚುನಾವಣಾ ಪ್ರಚಾರದಲ್ಲಿ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಜೊತೆ ನರೇಂದ್ರ ಮೋದಿ

 ಸಚಿನ್‌ ಪೈಲಟ್‌ ಪ್ರಚಾರ:

ಸಚಿನ್‌ ಪೈಲಟ್‌ ಪ್ರಚಾರ:

ಅಜ್ಮೀರ್‌ನಲ್ಲಿ ಮಾಜಿ ಕ್ರಿಕೆಟಿಗ ಅಜರುದ್ದೀನ್‌ ಮತ್ತು ಸಚಿನ್‌ ಪೈಲಟ್‌ ಅಜ್ಮೀರ್‍ ಲೋಕಸಭಾ ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತಿರುವುದು. ಅಜ್ಮೀರ್‌‌ನಲ್ಲಿ ಬಿಜೆಪಿ ಅಭ್ಯರ್ಥಿ‌ ಎದುರು ಸಚಿನ್‌ ಪೈಲಟ್‌ ಸೋತಿದ್ದಾರೆ.

ಮೋದಿ ಅಲೆಗೆ ಅರಳಿತು ಕಮಲ

ಮೋದಿ ಅಲೆಗೆ ಅರಳಿತು ಕಮಲ

ನರೇಂದ್ರ ಮೋದಿಯವರಿಗೆ ಸಮಾವೇಶದಲ್ಲಿ ಕಮಲದ ಹಾರವನ್ನು ಹಾಕಿ ಗೌರವಿಸುತ್ತಿರುವ ಬಿಜೆಪಿ ನಾಯಕರು

ವಾರಣಾಸಿ ಸುನಾಮಿ

ವಾರಣಾಸಿ ಸುನಾಮಿ

ವಾರಣಾಸಿಯಲ್ಲಿ ಮೋದಿ ರೋಡ್‌ ಶೋ ಸೇರಿದ ಲಕ್ಷಾಂತರ ಮಂದಿ

 ರಿಜ್ವಾನ್‌ ಕೈ ಹಿಡಿಯದ ಜನ:

ರಿಜ್ವಾನ್‌ ಕೈ ಹಿಡಿಯದ ಜನ:

ಬೆಂಗಳೂರು ಸೆಂಟ್ರಲ್‌ನಲ್ಲಿ ಪಿ.ಸಿ. ಮೋಹನ್‌ ಎದುರು ರಿಜ್ವಾನ್‌ ಅರ್ಷದ್‌ ಸೋಲಾಗಿದೆ.

 ಮಗು ಜತೆ ನಗ್ಮಾ

ಮಗು ಜತೆ ನಗ್ಮಾ

ಪ್ರಚಾರದ ಸಂದರ್ಭದಲ್ಲಿ ಮುದ್ದಾದ ಮಗು ಜತೆ ಮೀರತ್ ನ ಕಾಂಗ್ರೆಸ್ ಅಭ್ಯರ್ಥಿ ನಗ್ಮಾ

 ಜಯಪ್ರದಾಗೆ ಜಯ ಒಲಿಯಲಿಲ್ಲ

ಜಯಪ್ರದಾಗೆ ಜಯ ಒಲಿಯಲಿಲ್ಲ

ಆರ್‌‌‌‌ಎಲ್‌ಡಿ ಪಕ್ಷದ ಅಭ್ಯರ್ಥಿ‌ಯಾಗಿ ಬಿಜ್ನೋರ್ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಜಯಪ್ರದಾ ಅವರಿಗೆ ಚುನಾವಣೆಯಲ್ಲಿ ಸೋಲಾಗಿದೆ.

 ಎ.ಕೆ. ಆಂಟನಿ ಪ್ರಚಾರ:

ಎ.ಕೆ. ಆಂಟನಿ ಪ್ರಚಾರ:

ಕೇರಳದಲ್ಲಿ ಎ.ಕೆ. ಆಂಟನಿ ಚುನಾವಣಾ ಪ್ರಚಾರದಲ್ಲಿ ತೊಡಗಿರುವುದು.

 ನಿಲೇಕಣಿ ಪರ ಅಂಬಿ ಪ್ರಚಾರ:

ನಿಲೇಕಣಿ ಪರ ಅಂಬಿ ಪ್ರಚಾರ:

ನಂದನ್‌ ನಿಲೇಕಣಿ ಪರ ರೆಬಲ್‌ ಸ್ಟಾರ್‌ ಅಂಬರೀಶ್‌ ಪ್ರಚಾರ ನಡೆಸುತ್ತಿರುವುದು.

 ಸುಲ್ತಾನ್‌ಪುರದ ಸುಲ್ತಾನ:

ಸುಲ್ತಾನ್‌ಪುರದ ಸುಲ್ತಾನ:

ಉತ್ತರ ಪ್ರದೇಶದ ಸುಲ್ತಾನ್‌ಪುರ ಲೋಕಸಭಾ ಕ್ಷೇತ್ರದಿಂದ ವರುಣ್‌ ಗಾಂಧಿ ಸಂಸತ್‌ಗೆ ಆಯ್ಕೆಯಾಗಿದ್ದಾರೆ.

ನನಗೆ ಕೈ ಕೊಡಿ

ನನಗೆ ಕೈ ಕೊಡಿ

ಚುನಾವಣಾ ಪ್ರಚಾರದಲ್ಲಿ ರಾಹುಲ್‌ ಗಾಂಧಿ ಕಾಂಗ್ರೆಸ್‌ ಅಭಿಮಾನಿಗಳಿಗೆ ಹಸ್ತಲಾಘವ ಮಾಡುತ್ತಿರುವುದು.

 ಮತ ಹಾಕಿ ನಿಮ್ಮ ಹಕ್ಕು ಚಲಾಯಿಸಿ:

ಮತ ಹಾಕಿ ನಿಮ್ಮ ಹಕ್ಕು ಚಲಾಯಿಸಿ:

ಬಳ್ಳಾರಿಯಲ್ಲಿ ಮತದಾರರ ಜಾಗೃತಿಗಾಗಿ ಚುನಾವಣಾ ಆಯೋಗದ ವಿನೂತನ ಪ್ರಯೋಗ

 ಮತ ನೀಡಿ ಅಭಿವೃದ್ಧಿ ಮಾಡುತ್ತೇನೆ:

ಮತ ನೀಡಿ ಅಭಿವೃದ್ಧಿ ಮಾಡುತ್ತೇನೆ:

ಅಮೇಠಿ ಚುನಾವಣಾ ಪ್ರಚಾರದಲ್ಲಿ ರಾಹುಲ್‌ ಗಾಂಧಿ

ಡಿಕೆಸು ಪ್ರಚಾರ:

ಡಿಕೆಸು ಪ್ರಚಾರ:

.ಕೆ.ಸುರೇಶ್‌ ಎರಡನೇ ಬಾರಿ ಸಂಸತ್‌ಗೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ.

 ಚಿಕ್ಕಬಳ್ಳಾಪುರದಲ್ಲಿ ಎಚ್‌ಡಿಕೆ ಪ್ರಚಾರ:

ಚಿಕ್ಕಬಳ್ಳಾಪುರದಲ್ಲಿ ಎಚ್‌ಡಿಕೆ ಪ್ರಚಾರ:

ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್‌ ವೀರಪ್ಪ ಮೊಯಿಲಿ ಎದುರು ಎಚ್‌ಡಿ ಕುಮಾರಸ್ವಾಮಿ ಸೋಲಾಗಿದೆ.

 ಅಮ್ಮನ ಕ್ಷೇತ್ರದಲ್ಲಿ ಮಗಳ ಪ್ರಚಾರ:

ಅಮ್ಮನ ಕ್ಷೇತ್ರದಲ್ಲಿ ಮಗಳ ಪ್ರಚಾರ:

ರಾಯ್‌ಬರೇಲಿಯಲ್ಲಿ ಸೋನಿಯಾ ಪರ ಪ್ರಚಾರದಲ್ಲಿ ತೊಡಗಿದ ಪ್ರಿಯಾಂಕ ಗಾಂಧಿ

 ರಾಹುಲ್‌ ಗಾಂಧಿ ರೋಡ್‌ ಶೋ:

ರಾಹುಲ್‌ ಗಾಂಧಿ ರೋಡ್‌ ಶೋ:

ರಾಹುಲ್‌ ಗಾಂಧಿ ರೋಡ್‌ ಶೋಗೆ ಸೇರಿದ ಕಾಂಗ್ರೆಸ್‌ ಕಾರ್ಯ‌ಕರ್ತರು.

 ಬಸ್ಸಿನಲ್ಲಿ ನಿಲೇಕಣಿ ಪ್ರಚಾರ:

ಬಸ್ಸಿನಲ್ಲಿ ನಿಲೇಕಣಿ ಪ್ರಚಾರ:

ಬೆಂಗಳೂರು ದಕ್ಷಿಣ ಅಭ್ಯರ್ಥಿ‌ ಕಾಂಗ್ರೆಸ್‌ನ ನಂದನ್‌ ನಿಲೇಕಣಿ ಬಿಎಂಟಿಸಿ ಬಸ್‌ನಲ್ಲಿ ಪ್ರಚಾರ ನಡೆಸುತ್ತಿರುವುದು.

 ಉತ್ತರ ಪ್ರದೇಶದಲ್ಲಿ ಅಣ್ಣ ತಂಗಿ ಪ್ರಚಾರ:

ಉತ್ತರ ಪ್ರದೇಶದಲ್ಲಿ ಅಣ್ಣ ತಂಗಿ ಪ್ರಚಾರ:

ಉತ್ತರ ಪ್ರದೇಶದಲ್ಲಿ ರಾಹುಲ್‌ ಗಾಂಧಿ ಜತೆ ಪ್ರಿಯಾಂಕ ಗಾಂಧಿ ಪ್ರಚಾರದಲ್ಲಿ ತೊಡಗಿರುವುದು

 ಏನು ಚಿಂತೆ ಮಾಡಬೇಡಿ ನನಗೆ ಮತ ನೀಡಿ:

ಏನು ಚಿಂತೆ ಮಾಡಬೇಡಿ ನನಗೆ ಮತ ನೀಡಿ:

ಉತ್ತರ ಪ್ರದೇಶ ಚುನಾವಣೆಯಲ್ಲಿ ರಾಹುಲ್‌ ಗಾಂಧಿ ಮತದಾರರಲ್ಲಿ ಸಂವಾದ

 ರಾಜ್ಯದಲ್ಲಿ ರಾಹುಲ್‌ ಗಾಂಧಿ ಪ್ರಚಾರ:

ರಾಜ್ಯದಲ್ಲಿ ರಾಹುಲ್‌ ಗಾಂಧಿ ಪ್ರಚಾರ:

ಬೆಂಗಳೂರು ಚುನಾವಣಾ ಪ್ರಚಾರದಲ್ಲಿ ರಾಹುಲ್‌ ಗಾಂಧಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್‌ ಕಾರ್ಯ‌ಕರ್ತರತ್ತ ಕೈ ಬೀಸುತ್ತಿರುವುದು.

 ರಾಮ್‌ ವಿಲಾಸ್‌ ಪಾಸ್ವನ್‌ ಪ್ರಚಾರ

ರಾಮ್‌ ವಿಲಾಸ್‌ ಪಾಸ್ವನ್‌ ಪ್ರಚಾರ

ಎಲ್‌ಜೆಪಿ ಮುಖ್ಯಸ್ಥ ರಾಮ್‌‌ವಿಲಾಸ್‌ ಪಾಸ್ವನ್‌‌ ಬಿಹಾರದಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿರುವುದು.

 ಮೋದಿ ಅಲೆಗೆ ಸೈಕಲ್‌‌ ಪಂಚರ್‌:

ಮೋದಿ ಅಲೆಗೆ ಸೈಕಲ್‌‌ ಪಂಚರ್‌:

ಉತ್ತರ ಪ್ರದೇಶದ 80 ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ 71 ಸ್ಥಾನವನ್ನು ಗೆದ್ದುಕೊಳ್ಳುವ ಮೂಲಕ ಸಮಾಜವಾದಿ ಪಕ್ಷವನ್ನು ಸೋಲಿಸಿದೆ.

 ಬಾಲಿವುಡ್‌ ನಟಿ ಅಮಿಷಾ ಪಾಟೇಲ್‌ ಪ್ರಚಾರ:

ಬಾಲಿವುಡ್‌ ನಟಿ ಅಮಿಷಾ ಪಾಟೇಲ್‌ ಪ್ರಚಾರ:

ಅಲಹಾಬಾದ್‌ನಲ್ಲಿ ಬಾಲಿವುಡ್‌ ನಟಿ ಅಮಿಷಾ ಪಾಟೇಲ್‌‌ ಮತ್ತು ಕಾಂಗ್ರೆಸ್‌ ಮುಖಂಡ ರಾಜೀವ್‌ ಶುಕ್ಲಾ ಕಾಂಗ್ರೆಸ್‌ ಅಭ್ಯರ್ಥಿ ಪರ ಚುನಾವಣಾ ಪ್ರಚಾರದಲ್ಲಿ ತೊಡಗಿರುವುದು.

ಮೋದಿ ಅಲೆಗೆ ಕೊಚ್ಚಿಕೊಂಡು ಹೋಯಿತು ಲಾಲು ದೀಪ:

ಮೋದಿ ಅಲೆಗೆ ಕೊಚ್ಚಿಕೊಂಡು ಹೋಯಿತು ಲಾಲು ದೀಪ:

ಬಿಹಾರ ಲೋಕಸಭಾ ಚುನಾವಣೆಯಲ್ಲಿ 22 ಸ್ಥಾನವನ್ನು ಬಿಜೆಪಿ ಗೆದ್ದರೆ ಲಾಲು ಪ್ರಸಾದ್‌ ಯಾದವ್‌ ನೇತೃತ್ವದ ಆರ್‌ಜೆಡಿ 4 ಸ್ಥಾನ ಗೆಲ್ಲಲ್ಲಷ್ಟೇ ಶಕ್ತವಾಗಿದೆ.

 ಹಿರಿ ವಯಸ್ಸಿನಲ್ಲೂ ಬತ್ತದ ಉತ್ಸಾಹ:

ಹಿರಿ ವಯಸ್ಸಿನಲ್ಲೂ ಬತ್ತದ ಉತ್ಸಾಹ:

ಉತ್ತರ ಪ್ರದೇಶ ಲೋಕಸಭಾ ಚುನಾವಣೆಯಲ್ಲಿ ಹಿರಿಯ ವಯಸ್ಸಿನ ಮಹಿಳೆಯೊಬ್ಬರ ಕೈಗೆ ಶಾಯಿ ಹಾಕುತ್ತಿರುವ ಅಧಿಕಾರಿ

 ಕಾಶಿಯಲ್ಲಿ ಕೇಜ್ರಿವಾಲ್‌:

ಕಾಶಿಯಲ್ಲಿ ಕೇಜ್ರಿವಾಲ್‌:

ಕಾಶಿ ವಿಶ್ವನಾಥನ ಸನ್ನಿಧಿಯಲ್ಲಿ ಅರವಿಂದ್‌ ಕೇಜ್ರಿವಾಲ್‌ ವಿಶೇಷ ಪೂಜೆ.

 ಹೇಮಮಾಲಿನಿಗೆ ಎರಡು ಕೋಡು

ಹೇಮಮಾಲಿನಿಗೆ ಎರಡು ಕೋಡು

ಎರಡನೇ ಬಾರಿಗೆ ಸಂಸತ್‌ಗೆ ಹೇಮಮಾಲಿನಿ ಆಯ್ಕೆ. ಈ ಹಿಂದೆ ರಾಜ್ಯಸಭೆಗೆ ನಾಮಕರಣಗೊಂಡಿದ್ದ ಹೇಮಮಾಲಿನಿ ಈ ಬಾರಿ ಉತ್ತರ ಪ್ರದೇಶದ ಮಥುರಾ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ.

 ಮಹಿಮಾ ಚೌದರಿ ಪ್ರಚಾರ:

ಮಹಿಮಾ ಚೌದರಿ ಪ್ರಚಾರ:

ಬಾಲಿವುಡ್‌ ನಟಿ ಮಹಿಮಾ ಚೌದರಿ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಪರ ಪ್ರಚಾರದಲ್ಲಿ ತೊಡಗಿರುವುದು.

 ಕಾಂಗ್ರೆಸ್‌ ಸಮಾವೇಶಕ್ಕೆ ಸಿದ್ದತೆ:

ಕಾಂಗ್ರೆಸ್‌ ಸಮಾವೇಶಕ್ಕೆ ಸಿದ್ದತೆ:

ಕಾಂಗ್ರೆಸ್‌ ಸಮಾವೇಶಕ್ಕೆ ಸಿದ್ದತೆ ನಡೆಸುತ್ತಿರುವ ಸಿಬ್ಬಂದಿ

 ಖಡ್ಗದೊಂದಿಗೆ ರಾಹುಲ್‌ ಗಾಂಧಿ

ಖಡ್ಗದೊಂದಿಗೆ ರಾಹುಲ್‌ ಗಾಂಧಿ

ಕಾಂಗ್ರೆಸ್‌ ಸಮಾವೇಶದಲ್ಲಿ ರಾಹುಲ್‌ ಗಾಂಧಿಗೆ ಖಡ್ಗವನ್ನು ಸಮರ್ಪಿಸುತ್ತಿರುವ ಕೈ ನಾಯಕರು.

 ದೆಹಲಿಯಲ್ಲಿ ನಾನೇ ಕಿಂಗ್‌:

ದೆಹಲಿಯಲ್ಲಿ ನಾನೇ ಕಿಂಗ್‌:

ಚಾಂದಿನಿ ಚೌಕ್‌ ಲೋಕಸಭಾ ಕ್ಷೇತ್ರದಲ್ಲಿ ಕಪಿಲ್‌ ಸಿಬಲ್‌ರನ್ನು ಸೋಲಿಸಿ ಸಂಸತ್‌ಗೆ ಆಯ್ಕೆಯಾದ ಡಾ.ಹರ್ಷವರ್ಧನ್‌

 ಮತ ಹಾಕಿದ್ದೇನೆ ನೋಡಿ:

ಮತ ಹಾಕಿದ್ದೇನೆ ನೋಡಿ:

ಮತ ಹಾಕಿದ ಬಳಿಕ ಅಜ್ಜಿಯೊಬ್ಬರು ಕೈ ಬೆರಳನ್ನು ಎತ್ತಿ ತೋರಿಸುತ್ತಿರುವುದು

 ನಾವು ವೋಟ್‌ ಹಾಕುತ್ತಿದ್ದೇವೆ

ನಾವು ವೋಟ್‌ ಹಾಕುತ್ತಿದ್ದೇವೆ

ಹೋಮ್‌ ಗಾರ್ಡ್‌ ಸಿಬ್ಬದಿಗಳು ಅಂಚೆ ಮತದಾನದ ಪ್ರಕ್ರಿಯೆ ಭಾಗವಹಿಸುತ್ತಿರುವುದು.

 ಜಗನ್‌ ಮೋಹನ್ ರೆಡ್ಡಿ ಪ್ರಚಾರ:

ಜಗನ್‌ ಮೋಹನ್ ರೆಡ್ಡಿ ಪ್ರಚಾರ:

ಸೀಮಾಂಧ್ರದಲ್ಲಿ ವೈಎಸ್‌ಆರ್‌ ಕಾಂಗ್ರೆಸ್ ಮುಖಂಡ ಜಗನ್ ಮೋಹನ್ ರೆಡ್ಡಿ ಪ್ರಚಾರ ನಡೆಸುತ್ತಿರುವುದು.

 ಅಣ್ಣ ಪರ ತಂಗಿ ಪ್ರಚಾರ:

ಅಣ್ಣ ಪರ ತಂಗಿ ಪ್ರಚಾರ:

ಅಮೇಠಿಯಲ್ಲಿ ರಾಹುಲ್‌ ಗಾಂಧಿ ಪರ ಪ್ರಿಯಾಂಕ ಗಾಂಧಿ ಮತ ಪ್ರಚಾರ ಮಾಡುತ್ತಿರುವುದು.

 ಆರ್‌ಜೆಡಿ ಪರ ನಿತೀಶ್‌ ಕುಮಾರ್‌ ಪ್ರಚಾರ:

ಆರ್‌ಜೆಡಿ ಪರ ನಿತೀಶ್‌ ಕುಮಾರ್‌ ಪ್ರಚಾರ:

ಬಿಹಾರದ ಆರ್‌ಜೆಡಿ ಮುಖಂಡ ನಿತೀಶ್‌ ಕುಮಾರ್‌ ಪಕ್ಷ ಅಭ್ಯರ್ಥಿ‌ಗಳ ಪರ ಪ್ರಚಾರದಲ್ಲಿ ತೊಡಗಿರುವುದು.

 ಸ್ಪೈಲ್‌ ಪ್ಲೀಸ್‌:

ಸ್ಪೈಲ್‌ ಪ್ಲೀಸ್‌:

ಕಾಂಗ್ರೆಸ್‌ ಸಮಾವೇಶದಲ್ಲಿ ರಾಹುಲ್‌ ಗಾಂಧಿ ಫೋಟೋ ಕ್ಲಿಕ್ಕಿಸುತ್ತಿರುವ ಯುವತಿ

ಅಣ್ಣನ ಪರ ತಂಗಿ ಪ್ರಚಾರ:

ಅಣ್ಣನ ಪರ ತಂಗಿ ಪ್ರಚಾರ:

ಅಮೇಠಿಯಲ್ಲಿ ರಾಹುಲ್‌ ಗಾಂಧಿ ಪರ ಪ್ರಿಯಾಂಕ ಗಾಂಧಿ ಮತ ಪ್ರಚಾರ ಮಾಡುತ್ತಿರುವುದು.

 ಎಎಪಿಯಲ್ಲ ಇದು ರಾಷ್ಟ್ರೀಯ ಆಮ್ ಪಾರ್ಟಿ

ಎಎಪಿಯಲ್ಲ ಇದು ರಾಷ್ಟ್ರೀಯ ಆಮ್ ಪಾರ್ಟಿ

ಮುಂಬೈಯಲ್ಲಿ ತನ್ನ ಪಕ್ಷದ ಪರ ರಾಖಿ ಸಾವಂತ್‌ ಪ್ರಚಾರ ನಡೆಸುತ್ತಿರುವುದು. ಮುಂಬೈ ಉತ್ತರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಾಲಿವುಡ್ ನಟಿ ರಾಖಿ ಸಾವಂತ್‌ಗೆ ಸೋಲಾಗಿದೆ.

 ರಾಯ್‌ಬರೇಲಿಯಲ್ಲಿ ಸೋನಿಯಾ ಪ್ರಚಾರ:

ರಾಯ್‌ಬರೇಲಿಯಲ್ಲಿ ಸೋನಿಯಾ ಪ್ರಚಾರ:

ಉತ್ತರ ಪ್ರದೇಶದ ರಾಯ್‌ಬರೇಲಿಯಲ್ಲಿ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಪ್ರಚಾರ ನಡೆಸುತ್ತಿರುವುದು.

 ಪಶ್ಚಿಮ ಬಂಗಾಳದಲ್ಲಿ ನಾನೇ ಕ್ವೀನ್‌:

ಪಶ್ಚಿಮ ಬಂಗಾಳದಲ್ಲಿ ನಾನೇ ಕ್ವೀನ್‌:

ಟಿಎಂಸಿ ಕಾರ್ಯಕರ್ತರ ಪರ ಪ್ರಚಾರದಲ್ಲಿ ಪಶ್ಚಿಮ ಬಂಗಾಳ ಮುಖ್ಯ ಮಂತ್ರಿ ಮಮತಾ ಬ್ಯಾನರ್ಜಿ

ಚಂದೀಗಢದಲ್ಲಿ ನಟಿ ಕಿರಣ್ ಖೇರ್ ಪ್ರಚಾರ

ಚಂದೀಗಢದಲ್ಲಿ ನಟಿ ಕಿರಣ್ ಖೇರ್ ಪ್ರಚಾರ

ಚಂಡೀಗಢದಲ್ಲಿ ನಟಿ ಕಿರಣ್ ಖೇರ್ ಪ್ರಚಾರ ಚಂದೀಗಢದಲ್ಲಿ ಬಿಜೆಪಿ ಅಭ್ಯರ್ಥಿ ಕಿರಣ್ ಖೇರ್ ಅವರು ಪಕ್ಷದ ನಾಯಕರಾದ ಸಂಜಯ್ ಥಂಡನ್ ಮತ್ತು ಸತ್ಪಾಲ್ ಜೈನ್ ಜತೆ ಸುದ್ದಿಗೋಷ್ಠಿಯಲ್ಲಿ.

ಬಿಜೆಪಿ ಅಭ್ಯರ್ಥಿ ಶತ್ರುಘ್ನ ಸಿನ್ಹಾಗೆ ಸ್ವಾಗತ

ಬಿಜೆಪಿ ಅಭ್ಯರ್ಥಿ ಶತ್ರುಘ್ನ ಸಿನ್ಹಾಗೆ ಸ್ವಾಗತ

ಬಿಹಾರದ ಪಾಟ್ನದ ವಿಮಾನ ನಿಲ್ದಾಣದಲ್ಲಿ ಬಿಜೆಪಿ ಅಭ್ಯರ್ಥಿ ಶತ್ರುಘ್ನ ಸಿನ್ಹಾಗೆ ಅಭಿಮಾನಿಗಳಿಂದ ಸಿಕ್ಕ ಸ್ವಾಗತ

 ಆಮ್ ಆದ್ಮಿ ಗುಲ್ ಪನಾಗ್ ಸವಾರಿ

ಆಮ್ ಆದ್ಮಿ ಗುಲ್ ಪನಾಗ್ ಸವಾರಿ

ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಗುಲ್ ಪನಾಗ್ ಅವರು ಬೈಸಿಕಲ್ ಹತ್ತಿ ಅಭಿಮಾನಿಗಳ ಜತೆ ಪ್ರಚಾರ ನಡೆಸುತ್ತಿರುವುದು

 ಆರ್ ಎಲ್ ಡಿ ನಾಯಕಿ ಜಯಪ್ರದಾ ಪ್ರಚಾರ

ಆರ್ ಎಲ್ ಡಿ ನಾಯಕಿ ಜಯಪ್ರದಾ ಪ್ರಚಾರ

ಮುಜಾಫರ್ ನಗರದಲ್ಲಿ ಚುನಾವಣಾ ಪ್ರಚಾರ ನಿರತ ಆರ್ ಎಲ್ ಡಿ ನಾಯಕಿ ಜಯಪ್ರದಾ

 ಶಿವಮೊಗ್ಗದಲ್ಲಿ ಚಿತ್ರ ತಾರೆಯರ ಪ್ರಚಾರ

ಶಿವಮೊಗ್ಗದಲ್ಲಿ ಚಿತ್ರ ತಾರೆಯರ ಪ್ರಚಾರ

ಶಿವಮೊಗ್ಗದಲ್ಲಿ ಲೂಸ್ ಮಾದ ಯೋಗೀಶ್, ನಟಿ ಅಮೂಲ್ಯ ಗೀತಾ ಶಿವರಾಜ್‌ಕುಮಾರ್‌ ಪರ ಪ್ರಚಾರ ನಡೆಸುತ್ತಿರುವುದು.

 ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸಪ್ಪ

ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸಪ್ಪ

ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸುತ್ತಿರುವ ರಾಹುಲ್‌ ಗಾಂಧಿ

 ಶಾಜಿಯಾ ಪ್ರಚಾರ

ಶಾಜಿಯಾ ಪ್ರಚಾರ

ಆಮ್‌ ಆದ್ಮಿ ಪಕ್ಷದ ಶಾಜಿಯಾ ಇಲ್ಮಿ ಗವಾಹಟಿಯಲ್ಲಿ ರೋಡ್‌ ಶೋ ನಡೆಸುತ್ತಿರುವುದು.

 ರಾಹುಲ್‌, ರಾಹುಲ್‌...

ರಾಹುಲ್‌, ರಾಹುಲ್‌...

ಅಮೇಠಿಯಲ್ಲಿ ರಾಹುಲ್‌ ಗಾಂಧಿ ಅಭಿಮಾನಿಗಳು ರಾಹುಲ್‌ ಮುಖವಾಡವನ್ನು ಧರಿಸಿರುವುದು

 ಮೋದಿ ಕಟ್ಟಾ ಅಭಿಮಾನಿ

ಮೋದಿ ಕಟ್ಟಾ ಅಭಿಮಾನಿ

ವಡೋದರದಲ್ಲಿ ಮೋದಿ ಅಭಿಮಾನಿಯೊಬ್ಬ ದೇಹದಲ್ಲಿ ಮೋದಿ ಚಿತ್ರವನ್ನು ಹಾಕಿರುವುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+