Get Updates
Get notified of breaking news, exclusive insights, and must-see stories!

Vehicle Fitness Fee Hike: ಹಳೇ ವಾಹನಗಳ ಮಾಲೀಕರಿಗೆ ಕೇಂದ್ರ ಶಾಕ್! ಈ ಶುಲ್ಕ ಹೆಚ್ಚಳ ಯಾರಿಗೆ ಅನ್ವಯ?

ನವದೆಹಲಿ, ನವೆಂಬರ್ 20: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಹಳೆಯ ವಾಹನಗಳ ಮಾಲೀಕರಿಗೆ ಶಾಕಿಂಗ್ ಸುದ್ದಿ ನೀಡಿದೆ. 2025ರ ಕೇಂದ್ರ ಮೋಟಾರು ವಾಹನಗಳ ಐದನೇ ತಿದ್ದುಪಡಿ ನಿಯಮಗಳ ಅಡಿಯಲ್ಲಿ ವಾಹನಗಳ ಫಿಟ್ನೆಸ್ ಪರೀಕ್ಷೆಯ ಶುಲ್ಕ ಪರಿಷ್ಕರಣೆ ಮಾಡಿದೆ. ಈ ಪರಿಷ್ಕರಣೆ ಶುಲ್ಕ ಯಾರಿಗೆಲ್ಲ ಅನ್ವಯವಾಗುತ್ತದೆ. ಮೊದಲಿದ್ದ ಶುಲ್ಕವೆಷ್ಟು? ಈಗಿನದ್ದು ಎಷ್ಟು? ಯಾವೆಲ್ಲ ವಾಹನಗಳಿಗೆ ಇದು ಅನ್ವಯವಾಗುತ್ತೆ ಎಂಬ ವಿವರ ಇಲ್ಲಿದೆ.

ವಾಹನಗಳ ಫಿಟ್ನೆಸ್ ಪರೀಕ್ಷೆಯ ಶುಲ್ಕವನ್ನು ರಸ್ತೆ ಸಾರಿಗೆ ಸಚಿವಾಲಯವು ಪರಿಷ್ಕರಣೆ ಮಾಡಿದೆ. ವಾಹನಗಳ ವಯಸ್ಸಿನ ಆಧಾರದ ಮೇಲೆ ದ್ವಿಚಕ್ರ, ತ್ರಿಚಕ್ರ, ಎಲ್‌ಎಂವಿ ಮತ್ತು ವಾಣಿಜ್ಯ ವಾಹನಗಳಿಗೆ ವಿಭಿನ್ನ ಶುಲ್ಕ ನಿಗದಿಪಡಿಸಲಾಗಿದೆ. ಈ ನಿಯಮಗಳು ವಾಹನಗಳ ಸುರಕ್ಷತೆ ಹೆಚ್ಚಿಸಲು ಮತ್ತು ಹಳೆಯ ವಾಹನಗಳನ್ನು ರಸ್ತೆಯಿಂದ ತೆಗೆದುಹಾಕಲು ಉದ್ದೇಶಿಸಲಾಗಿದೆ ಎಂದು ಸಚಿವಾಲಯವು ತಿಳಿಸಿದೆ.

India Revises Vehicle Fitness Test Fees Higher Charges for Older Vehicles from 2025

ಯಾರಿಗೆ ಹೊಸ ಶುಲ್ಕ ಅನ್ವಯ?

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಮಾಹಿತಿ ಪ್ರಕಾರ, 10 ವರ್ಷಕ್ಕಿಂತ ಹಳೆಯ ವಾಹನಗಳಿಗೆ ಹೆಚ್ಚಿನ ಶುಲ್ಕ ಅನ್ವಯವಾಗಲಿದೆ. 2025 ರ ಕೇಂದ್ರ ಮೋಟಾರು ವಾಹನಗಳ ಐದನೇ ತಿದ್ದುಪಡಿ ನಿಯಮಗಳ ಅಡಿಯಲ್ಲಿ ಹೊಸ ವಯಸ್ಸಿನ ಆಧಾರಿತ ರಚನೆ ಪರಿಚಯಿಸಲಾಗಿದೆ. ವಾಹನಗಳ ಫಿಟ್ನೆಸ್ ಪರೀಕ್ಷೆಯ ಶುಲ್ಕವನ್ನು ಪರಿಷ್ಕರಿಸಿದೆ. ಈ ಮೊದಲು 15 ವರ್ಷಗಳ ನಂತರ ಹೆಚ್ಚುವರಿ ಶುಲ್ಕ ನಿಗದಿ ಮಾಡಲಾಗುತ್ತಿತ್ತು. ಇದೀಗ 10 ವರ್ಷ ಬಳಿಕವೇ ಪರಿಷ್ಕರಣೆ ಮಾಡಿ ಜಾರಿಗೆ ತರಲಾಗುತ್ತಿದೆ. ಇದರಿಂದಾಗಿ ಕೋಟ್ಯಾಂತರ ವಾಹನಗಳು ಹೊಸ ಪರಿಷ್ಕರಣೆ ಶುಲ್ಕ ವ್ಯಾಪ್ತಿಗೆ ಬರಲಿವೆ.

ವಾಹನಗಳ ವಯಸ್ಸಿನ ಆಧಾರದಲ್ಲಿ ಶುಲ್ಕ ಅನ್ವಯ, ಹೇಗೆ?

ವಾಹನಗಳ ಫಿಟ್ನೆಸ್ ಪರೀಕ್ಷೆಗಳ ಶುಲ್ಕ ಪರಿಕ್ಷರಣೆ ವೇಳೆ ಸಚಿವಾಲಯ ವಾಹನಗಳು ಎಷ್ಟು ಹಳೆಯದು ಅಂದರೆ ವಾಹನಗಳ ವಯಸ್ಸಿನ ಆಧಾರದಲ್ಲಿ ಮೂರು ಗುಂಪುಗಳನ್ನು ರಚಿಸಿದೆ. ಅದರಲ್ಲಿ 10ರಿಂದ15 ವರ್ಷ, 15 ರಿಂದ 20 ವರ್ಷ ಮತ್ತು 20 ವರ್ಷಕ್ಕಿಂತ ಮೇಲ್ಪಟ್ಟ ವಾಹನಗಳು ಎಂದು ವಿಭಾಗಿಸಿದೆ. ಅದರಲ್ಲಿ ಬೈಕ್ (ಎಲ್ಲ ವಿಧದ ದ್ವಿಚಕ್ರ ವಾಹನ), ತ್ರಿಚಕ್ರ ವಾಹನಗಳು, ಕ್ವಾಡ್ರಿಸೈಕಲ್‌ಗಳು, ಲಘು ಮೋಟಾರು ವೆಹಿಕಲ್ಸ್ ಹಾಗೂ ಮಧ್ಯಮ ಮತ್ತು ಭಾರೀ ವಾಣಿಜ್ಯ ವಾಹನಗಳು ಒಳಗೊಂಡಿದೆ. ಈ ಎಲ್ಲ ವಾಹನಗಳು ಪರಿಷ್ಕರಣೆ ಶುಲ್ಕದ ವ್ಯಾಪ್ತಿಗೆ ಬರುತ್ತವೆ. ವಾಹನಗಳು ಅತೀ ಹಳೆಯದಾದಷ್ಟು ಫಿಟ್ನೆಸ್ ಶುಲ್ಕ ಎಹಚ್ಚಾಗಿರುತ್ತದೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.


15 ವರ್ಷಗಳಷ್ಟು ಹಳೆಯ ವಾಹನಗಳ ಶುಲ್ಕ ವಿವರ

* ಫಿಟ್ನೆಸ್ ಪರೀಕ್ಷೆಯ ಶುಲ್ಕವು ದ್ವಿಚಕ್ರ ವಾಹನಗಳಿಗೆ : 400 ರೂಪಾಯಿ
* ತ್ರಿಚಕ್ರ ಮತ್ತು ಎಲ್‌ಎಂವಿಎಸ್ ವಾಹನಗಳ ಶುಲ್ಕ: 600 ರೂಪಾಯಿ
* ಮಧ್ಯಮ ಹಾಗೂ ಭಾರೀ ವಾಣಿಜ್ಯ ಇಲ್ಲವೇ ಪ್ರಯಾಣಿಕರ ವಾಹನಗಳಿಗೆ :1,000 ರೂಪಾಯಿ

15-20 ವರ್ಷ ಹಳೆಯ ವಾಹನಗಳ ಶುಲ್ಕ ಪಟ್ಟಿ

* ದ್ವಿಚಕ್ರ ವಾಹನಗಳು: 500 ರೂಪಾಯಿ
* ತ್ರಿಚಕ್ರ ಮತ್ತು ಎಲ್‌ಎಂವಿಎಸ್ ವಾಹನಗಳು: 1,000 ರೂಪಾಯಿ
* ಮಧ್ಯಮ ವಾಣಿಜ್ಯ ವಾಹನಗಳು: 1,300 ರೂಪಾಯಿ
* ಭಾರೀ ವಾಣಿಜ್ಯ ವಾಹನಗಳು: 1,500 ರೂಪಾಯಿ

20+ ಅಧಿಕ ವರ್ಷದ ಹಳೆಯ ವಾಹನಗಳ ಶುಲ್ಕ ಪಟ್ಟಿ

* ದ್ವಿಚಕ್ರ ವಾಹನಗಳ ಶುಲ್ಕ: 1,000 ರೂಪಾಯಿ
* ತ್ರಿಚಕ್ರ ಮತ್ತು ಎಲ್‌ಎಂವಿಎಸ್ ವಾಹನಗಳು: 2,000 ರೂಪಾಯಿ
* ಮಧ್ಯಮ ಸರಕು ಮತ್ತು ಪ್ರಯಾಣಿಕ ವಾಹನಗಳು: 2,600 ರೂಪಾಯಿ
* ಭಾರೀ ವಾಣಿಜ್ಯ ವಾಹನಗಳಿಗೆ 3,000 ರೂಪಾಯಿ

* 20 ವರ್ಷಕ್ಕಿಂತ ಹಳೆಯ ಭಾರೀ ಟ್ರಕ್‌ಗಳು ಮತ್ತು ಬಸ್‌ಗಳ ಶುಲ್ಕ: 25,000 ರೂಪಾಯಿ
* ಮಧ್ಯಮ ವಾಣಿಜ್ಯ ವಾಹನಗಳಿಗೆ 20,000 ರೂಪಾಯಿ
* 20 ವರ್ಷಕ್ಕಿಂತ ಮೇಲ್ಪಟ್ಟ ಲಘು ಮೋಟಾರು ವಾಹನಗಳಿಗೆ: 15,000 ರೂಪಾಯಿ
* ತ್ರಿಚಕ್ರ ವಾಹನಗಳಿಗೆ 7,000 ರೂಪಾಯಿ
* ದ್ವಿಚಕ್ರ ವಾಹನಗಳ ಶುಲ್ಕ: 600 ರೂ.ನಿಂದ 2,000 ರೂಪಾಯಿ

ಈ ಶುಲ್ಕ ಪರಿಷ್ಕರಣೆ ಯಾಕೆ?

ವಾಹನಗಳು ಹಳೆಯದಾದಷ್ಟು ಅವು ಹೊರಸೂಸುವ ಹೊಗೆಯಿಂದ ಪರಿಸರಕ್ಕೆ ಸಾಕಷ್ಟು ಹಾನಿ ಉಂಟಾಗುತ್ತದೆ. ಆದ್ದರಿಂದ ಅದನ್ನು ನಿಯಂತ್ರಿಸಲು, ಪರಿಸರದ ಮೇಲೆ ಪರಿಣಾಮ ಬೀರುವ ವಾಹನಗಳನ್ನು ರಸ್ತೆಯಿಂದ ಮುಕ್ತಿ ನೀಡುವ ಗುರಿಯಿಂದ ಈ ಫಿಟ್ನೆಸ್ ಶುಲ್ಕ ಪರಿಷ್ಕರಣೆ ಮಾಡಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+