IMD Weather Forecast: ಚಂಡಮಾರುತ ಪ್ರಸರಣ, ಈ ಭಾಗಗಳಲ್ಲಿ ಆ.15 ರತನಕ ಮಳೆ ಆರ್ಭಟ
IMD Weather Forecast: ಜೂನ್ ಆರಂಭದಲ್ಲಿ ದಕ್ಷಿಣ ಭಾರತದಲ್ಲಿ ನಿರಂತರ ಮಳೆ ಸುರಿದು ವಾರಗಳ ತಡವಾಗಿ ಉತ್ತರ ಭಾರತ ಪ್ರವೇಶಿಸಿದ್ದ ಮುಂಗಾರು ಮಳೆ ಇವತ್ತಿಗೂ ಸಕ್ರಿಯವಾಗಿದ್ದು, ರಾಜ್ಯಗಳಾದ್ಯಂತ ಆರ್ಭಟಿಸುತ್ತಿದೆ. ಆರಂಭದಿಂದ ಈವರೆಗೆ ಅಸ್ಸಾಂ, ಹಿಮಾಚಲ ಪ್ರದೇಶ, ಮುಂಬೈ, ಮಹಾರಾಷ್ಟ್ರ, ದೆಹಲಿ ಸೇರಿದಂತೆ ವಿವಿಧ ಪ್ರದೇಶಗಳು ನಲುಗಿವೆ. ಮುಂದಿನ ಆಗಸ್ಟ್ 15ರವರೆಗೂ ವಿವಿಧ ರಾಜ್ಯಗಳಲ್ಲಿ ಇದೇ ರೀತಿ ಸಾಧಾರಣದಿಂದ ಧಾರಾಕಾರ, ಅತೀ ಭಾರೀ ಮಳೆ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ಕೊಟ್ಟಿದೆ.
ಜುಲೈ ಹೊತ್ತಿಗೆ ಉತ್ತರ ಭಾರತದ ಪ್ರವೇಶಿಸಿದ ಕೆಲವು ದಿನಗಳಲ್ಲಿ ಸಕ್ರಿಯಗೊಂಡ ಮುಂಗಾರು ಮಳೆ ದಿನೇ ದಿನೇ ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಂಡಿತು. ಪರಿಣಾಮ ದೆಹಲಿ, ಪಂಜಾಬ್, ಹರಿಯಾಣ, ಯುಪಿ ಹಾಗೂ ಅನೇಕ ರಾಜ್ಯಗಳಲ್ಲಿ ಭಾರೀ ಮಳೆ ಆಗಿ ಜನಜೀವನ ಅಸ್ತವ್ಯಸ್ತವಾಗಿದೆ. ಅಸ್ಸಾಂ, ಹಿಮಾಚಲ ಪ್ರದೇಶಗಳಲ್ಲಿ ಜನರು ಅಕ್ಷರಶಃ ಪ್ರವಾಹಕ್ಕೆ ನಲುಗಿದ್ದಾರೆ.

ಮುಂದಿನ ಐದು ಮಳೆ ಆರ್ಭಟ
ಗುಜರಾತ್ ಕರಾವಳಿ ಭಾಗದಲ್ಲಿ ಉಂಟಾದ ವಾಯು ಚಂಡಮಾರುತ ಪ್ರಸರಣ, ಭೂಮಿ ಮೇಲ್ಮೈನ ತೀವ್ರ ಸುಳಿಗಾಳಿ ಪರಿಣಾಮ ಮಳೆ ತೀವ್ರಗೊಂಡಿದೆ. ಇದರಿಂದಾಗಿ ರಾಜಸ್ಥಾನದ ಪೂರ್ವ, ಹಿಮಾಚಲ ಪ್ರದೇಶ, ಅಸ್ಸಾಂ, ಉತ್ತರಾಖಂಡ, ಜಮ್ಮು ಕಾಶ್ಮೀರ, ಮೇಘಾಲಯ, ಹರಿಯಾಣ, ಚಂಡೀಘಡ, ದೆಹಲಿ, ಪಂಜಾಬ್, ಉತ್ತರ ಪ್ರದೇಶದ ಕೆಲವು ಭಾಗಗಳಲ್ಲಿ ನಿರಂತರವಾಗಿ ಒಂದು ವಾರ ಕಲ ಬಿರುಗಾಳಿ ಸಹಿತ ಮಳೆ ಸುರಿಯಲಿದೆ. ಆಗಸ್ಟ್ 10ರಿಂದ 12ರವರೆಗೆ ಭಾರೀ ಮಳೆ ಆದರೆ, ನಂತರ ಎರಡು ಮೂರು ದಿನ ಮಳೆ ಮತ್ತಷ್ಟು ಜೋರಾಗಿ ಸುರಿಯುವ ನಿರೀಕ್ಷೆ ಇದೆ ಎಂದು ಹವಾಮಾನ ತಜ್ಞರು ವರದಿಯಲ್ಲಿ ತಿಳಿಸಿದ್ದಾರೆ.
ಆಗಸ್ಟ್ 13ರವರೆಗೆ ಜಮ್ಮು-ಕಾಶ್ಮೀರ್, ಲದಾಕ್, ಮುಜಾಫರ್‍ಬಾದ್, ಹಿಮಾಚಲ ಪ್ರದೇಶ, ಮಧ್ಯ ಪ್ರದೇಶ, ವಿದರ್ಭ, ಛತ್ತೀಸ್‌ಗಢ, ಅಂಡಮಾನ್ ನಿಕೋಬಾರ್, ಪಶ್ಚಿಮ ಬಂಗಾಳದ ಕೆಲವು ಪ್ರದೇಶಗಳಲ್ಲಿ ಬಿರುಗಾಲಿ ಸಹಿತ ವ್ಯಾಪಕ ಮಳೆ ಸಾಧ್ಯತೆ ಇದೆ.
ದಕ್ಷಿಣ ಭಾರತದ ಸೇರಿ ವಿವಿಧೆಡೆ ಸಾಮಾನ್ಯ ಮಳೆ
ಇದೇ ಐದು ದಿನದ ಅವಧಿಯಲ್ಲಿ ಮಿಜೋರಾಂ, ಮಣಿಪುರ, ನಾಗಾಲ್ಯಾಂಡ್, ದೆಹಲಿ, ಗುಜರಾತ್, ಮಧ್ಯ ಪ್ರದೇಶ, ಮಹಾರಾಷ್ಟ್ರ, ತಮಿಳುನಾಡು, ಒಡಿಶಾ, ಕೇರಳ, ಕರ್ನಾಟಕದ ಒಳನಾಡು ಜಿಲ್ಲೆಗಳು ಹಲವು ಪ್ರದೇಶಗಳಲ್ಲಿ ಸಾಧಾರಣದ ಭಾರೀ ಮಳೆ ಆಗುವ ಮುನ್ಸೂಚನೆ ಇದೆ. ದಕ್ಷಿಣ ಭಾರತದಲ್ಲಿ ಅಷ್ಟಾಗಿ ಭೀಕರ ಮಳೆ ಸದ್ಯಕ್ಕೆ ಇಲ್ಲ. ಅಸ್ಸಾಂ, ಮೇಘಾಲಯ ಸುತ್ತಮುತ್ತಲಿನ ಭಾಗದಲ್ಲಿ ಮಳೆ ಆರ್ಭಟ ಮುಂದುವರಿಯಲಿದೆ.
ಕರ್ನಾಟಕ ಮಳೆ ಮುನ್ಸೂಚನೆ
ಇನ್ನೂ ಕರ್ನಾಟಕ ರಾಜ್ಯವನ್ನು ಪ್ರತ್ಯೇಕವಾಗಿ ನೋಡುವುದಾದರೆ, ಈವರೆಗೆ ಒಳನಾಡು ಹಾಗೂ ಮಲೆನಾಡು, ಕರಾವಳಿ ಜಿಲ್ಲೆಗಳ ಹಲವೆಡೆ ಜೋರು ಮಳೆ ಆಗುತ್ತಿತ್ತು. ಕಳೆದ 24 ಗಂಟೆಗಳಿಂದ ಇದೇ ಭಾಗದಲ್ಲಿ ಮಳೆ ತೀವ್ರ ಅಧಕರ್ಧ ಕಡಿಮೆ ಆಗಿದೆ. ಆರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಿದೆ. ಉಳಿದ ಜಿಲ್ಲೆಗಳಲ್ಲಿ ಬಿಸಿಲು, ಆಗಾಗ ಹಗುರ ಮಳೆ ಆಗಲಿದೆ ಎಂದು ಐಎಂಡಿ ತಿಳಿಸಿದೆ.


Click it and Unblock the Notifications
