India-Pakistan Tensions: ಪರಿಸ್ಥಿತಿ ಉದ್ವಿಗ್ನಗೊಂಡ ಬೆನ್ನಲ್ಲೇ 138 ವಿಮಾನಗಳ ಹಾರಾಟ ರದ್ದು
India-Pakistan Tensions: ಭಾರತ-ಪಾಕಿಸ್ತಾದ ನಡುವೆ ಉದ್ವಿಗ್ನ ಪರಿಸ್ಥತಿ ನಿರ್ಮಾಣವಾಗಿದೆ. ಈ ಹಿನ್ನೆಲೆ ಭದ್ರತಾ ದೃಷ್ಟಿಯಿಂದ ದೇಶದ ಹಲವಡೆ ವಿಮಾನ ನಿಲ್ದಾಣಗಳನ್ನು ಬಂದ್ ಮಾಡಲಾಗಿದೆ. ಹಾಗೆಯೇ ಇದೀಗ ದೆಹಲಯಲ್ಲಿ ದೆಹಲಿಯಲ್ಲಿ 100ಕ್ಕೂ ಹೆಚ್ಚು ವಿಮಾನಗಳ ಹಾರಾಟವನ್ನು ರದ್ದುಪಡಿಸಲಾಗಿದೆ.
ಪೆಹಲ್ಗಾಮ್‌ನಲ್ಲಿ ಪಾಕ್ ಉಗ್ರರು ದಾಳಿ ನಡೆಸಿ ಅಪಾಯಕರ ಬಲಿ ಪಡೆದಿದ್ದರು. ಇದಕ್ಕೆ ಪ್ರತ್ಯುತ್ತರವಾಗಿ ಭಾರತೀಯ ಸೇನೆ ಪಾಕ್‌ಗೆ ನುಗ್ಗಿ ಉಗ್ರರ ನೆಲೆಗಳನ್ನು ಧ್ವಂಸ ಮಾಡಿತ್ತು. ಆದರೂ ಬುದ್ಧಿ ಕಲಿಯದ ನರಿಬುದ್ಧಿ ಪಾಕಿಸ್ತಾನ ತನ್ನ ಕೆಟ್ಟ ಚಾಳಿಯನ್ನೇ ಮುಂದುವರೆಸಿದ್ದು, ಇದಕ್ಕೆ ಮತ್ತೆ ಮತ್ತೆ ತಿರುಗೇಟು ನೀಡುವ ಕೆಲಸವನ್ನು ಭಾರತೀಯ ಸೇನೆ ಮಾಡುತ್ತಿದೆ.

ಗುರುವಾರ ರಾತ್ರಿ ಜಮ್ಮು, ಪಂಜಾಬ್ ಮತ್ತು ರಾಜಸ್ಥಾನದ ಅನೇಕ ಭಾಗಗಳಲ್ಲಿ ದಾಳಿ ನಡೆಸಲು ಯತ್ನಿಸಿತ್ತು. ಇದನ್ನು ತಡೆಯುವಲ್ಲಿ ಭಾರತೀಯ ಸೇನೆ ಯಶಸ್ವಿಯಾಗಿತ್ತು. S-400 ಮತ್ತು ಆಕಾಶ್ ವಾಯು ರಕ್ಷಣಾ ವ್ಯವಸ್ಥೆಗಳು ಪಾಕಿಸ್ತಾನದ ದಾಳಿಯನ್ನು ವಿಫಲಗೊಳಿಸಿದವು.
ನಂತರ ಭಾರತ ಪ್ರತ್ಯುತ್ತರವಾಗಿ ಇಸ್ಲಾಮಾಬಾದ್ ಮೇಲೂ ದಾಳಿ ನಡೆಸಿದೆ. ಸಿಯಾಲ್‌ಕೋಟ್ ಮತ್ತು ಲಾಹೋರ್‌ನಲ್ಲಿಯೂ ಡ್ರೋನ್‌ಗ ದಾಳಿ ನಡೆಸಲಾಗಿದ್ದು, ಭಾರತವು ಪಾಕಿಸ್ತಾನದ ಎರಡು JF-17 ಮತ್ತು F-16 ಜೆಟ್‌ಗಳನ್ನು ಕೂಡ ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿತ್ತು. ಇದರ ಬೆನ್ನಲ್ಲೇ ದೇಶದ ಹಲವೆಡೆ ಮುಂಜಾಗ್ರತಾ ಕ್ರಮವಾಗಿ ವಿಮಾನ ಹಾರಟವನ್ನು ರದ್ದುಗೊಳಿಸಲಾಗಿದೆ.
ಹಾಗೆಯೇ ಇದೀಗ ದೆಹಲಿ ವಿಮಾನ ನಿಲ್ದಾಣಕ್ಕೆ ಹೋಗುವ ಮತ್ತು ಬರುವ ಸುಮಾರು 138 ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಅಂತಾರಾಷ್ಟ್ರೀಯ ಆಗಮನ- 04, ಅಂತರರಾಷ್ಟ್ರೀಯ ನಿರ್ಗಮನಗಳು- 05, ದೇಶೀಯ ಆಗಮನಗಳು- 63 ದೇಶೀಯ, ನಿರ್ಗಮನಗಳು- 66 ವಿಮಾನಗಳನ್ನು ರದ್ದುಪಡಿಸಲಾಗಿದೆ ಎಂದು ತಿಳಿದುಬಂದಿದೆ.
ಡಾ.ಎಸ್.ಜೈಶಂಕರ್ ಹೇಳಿದ್ದೇನು?: ದೆಹಲಿಯಲ್ಲಿ ಮಾತನಾಡಿದ ವಿದೇಶಾಂಗ ಸಚಿವ ಡಾ.ಎಸ್.ಜೈಶಂಕರ್ ಅವರು, ಭಾರತವು ಭಯೋತ್ಪಾದನೆಯ ಗಂಭೀರ ಸವಾಲನ್ನು ಎದುರಿಸುತ್ತಿದೆ. ಈ ಭೀತಿಯು ಕೇವಲ ಭಾರತಕ್ಕೆ ಮಾತ್ರವಲ್ಲ, ಇಡೀ ಜಾಗತಿಕ ಸಮುದಾಯಕ್ಕೆ ಸಾಮಾನ್ಯ ಬೆದರಿಕೆಯಾಗಿದೆ ಎಂದು ಹೇಳಿದರು. ಅಲ್ಲದೆ, ಪ್ರಸ್ತುತ ನಡೆಯುತ್ತಿರುವ ದೃಢವಾದ ಕ್ರಮಗಳನ್ನು ಅರ್ಥಮಾಡಿಕೊಂಡವರಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ ಎಂದು ಡಾ.ಜೈಶಂಕರ್ ಹೇಳಿದರು.
ಭಾರತವು ಭಯೋತ್ಪಾದನೆಯ ವಿರುದ್ಧ ತನ್ನ ಕಠಿಣ ನಿಲುವನ್ನು ಮುಂದುವರೆಸಿದ್ದು, ಈ ಸಮಸ್ಯೆಯನ್ನು ಎದುರಿಸಲು ದೃಢವಾದ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.
ಭಾರತ-ಪಾಕ್ ನಡುವಿನ ಉದ್ವಿಗ್ನತೆ ಬಗ್ಗೆ ಮಾಹಿತಿ: ಭೂಸೇನೆ, ನೌಕಾಪಡೆ ಮತ್ತು ವಾಯುಪಡೆಯ ಮುಖ್ಯಸ್ಥರು ಪ್ರಧಾನಿ ನರೇಂದ್ರ ಮೋದಿಯವರನ್ನು ಅವರ ನಿವಾಸದಲ್ಲಿ ಭೇಟಿಯಾಗಿದ್ದಾರೆ. ಭಾರತ-ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ ಎಂದು ತಿಳಿದುಬಂದಿದೆ.
ಕಟ್ಟೆಚ್ಚರದ ವಾತಾವರಣ: ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಮೀನುಗಾರಿಕಾ ಬಂದರುಗಳಲ್ಲಿ ಸದ್ಯ ಕಟ್ಟೆಚ್ಚರದ ವಾತಾವರಣ ನಿರ್ಮಾಣವಾಗಿದೆ. ಆಳ ಸಮುದ್ರದಲ್ಲಿ ಮೀನುಗಾರಿಕೆಯಲ್ಲಿ ತೊಡಗಿರುವ ಮೀನುಗಾರರಿಗೆ ದೇಶದ ಭದ್ರತೆಗೆ ಸಂಬಂಧಿಸಿದಂತೆ ಪ್ರಮುಖ ಮಾಹಿತಿಯನ್ನು ಪೋಲಿಸ್ ಮತ್ತು ಮೀನುಗಾರಿಕಾ ಇಲಾಖೆ ಒದಗಿಸಿದೆ. ಈ ಸಂದರ್ಭದಲ್ಲಿ ಸೋಮವಾರ ನಡೆಯಲಿರುವ ಮಾಕ್ ಡ್ರಿಲ್ ಕುರಿತು ವಿವರವಾದ ಮಾಹಿತಿಯನ್ನು ಒದಗಿಸಲಾಗಿದೆ.












Click it and Unblock the Notifications